ಮುಂಚಿತವಾಗಿ ಹೊಸ ವರ್ಷದ ಶುಭಾಶಯ: ಅರಳಿಮರ ಮಂಡಲ ಕ್ಯಾಲೆಂಡರ್

ಅರಳಿಬಳಗ ತನ್ನ ಎಲ್ಲ ಓದುಗರಿಗೂ ಬರಹಗಾರರಿಗೂ ಹೊಸ ವರ್ಷದ ಶುಭಾಶಯಗಳನ್ನು ಮುಂಚಿತವಾಗಿ ತಿಳಿಸುತ್ತದೆ. ಜೊತೆಗೇ ಸರಳವಾದ ‘ಮಂಡಲ ಕ್ಯಾಲೆಂಡರ್’ ನಿಮಗಾಗಿಯೇ ರೂಪಿಸಿದ್ದು, ಇವನ್ನು ನೀವು ಡೌನ್`ಲೋಡ್ ಮಾಡಿಕೊಳ್ಳಬಹುದು, ನಿಮ್ಮ ಬಳಗದಲ್ಲಿ ಹಂಚಿಕೊಳ್ಳಬಹುದು.

ದೈನಂದಿನ ಜೀವನಕ್ಕೆ ಯಾವ ಕಾಲಗಣನೆಯನ್ನು, ದಿನಾಂಕ ಲೆಕ್ಕಾಚಾರವನ್ನು ಬಳಸುತ್ತೇವೆಯೋ ಅದೇ ನಮ್ಮ ಪಾಲಿಗೆ ವರ್ಷ, ತಿಂಗಳುಗಳ ಮಾಪನ. ಹಾಗೆ ನೋಡಿದರೆ ಭಾರತದ ಹಲವೆಡೆ ಹಲವು ಬೇರೆ ಬೇರೆ ಸಂದರ್ಭದಲ್ಲಿ ಪಂಚಾಂಗದ ಪ್ರಕಾರ ಹೊಸವರ್ಷ ಆಚರಿಸುತ್ತಾರೆ. ಕನ್ನಡಿಗರಿಗೆ ಯುಗಾದಿ, ಆಂಧ್ರ ಮತ್ತು ತಮಿಳುನಾಡಿನಲ್ಲಿ ಪೊಂಗಲ್, ಮಹಾರಾಷ್ಟ್ರದಲ್ಲಿ ಗುಡಿ ಪಾವ್ದಾ, ಉತ್ತರಭಾರತದಲ್ಲಿ ದೀಪಾವಳಿ ಮರುದಿನ, ಬಂಗಾಳಪ್ರಾಂತ್ಯದಲ್ಲಿ ದಸರೆಯ ನಂತರ ಹೊಸವರ್ಷವನ್ನು ಎದುರುಗೊಳ್ಳುತ್ತಾರೆ. ಆದರೆ, ಸಮಗ್ರವಾಗಿ ಇಡಿಯ ಭಾರತದಲ್ಲಿ ಮಾತ್ರವಲ್ಲ, ಜಗತ್ತು ತನ್ನ ದೈನಂದಿನ ವ್ಯವಹಾರಕ್ಕೆ ಅನುಸರಿಸುತ್ತಿರುವುದು ಸದ್ಯಕ್ಕೆ ಚಾಲ್ತಿಯಲ್ಲಿರುವ ‘ಗ್ರೆಗೊರಿಯನ್ ಕ್ಯಾಲೆಂಡರ್’ ಅನ್ನು. ಆದ್ದರಿಂದ ನಾವು 365/366 ದಿನಗಳ ಸುತ್ತನ್ನೇ ವರ್ಷವೆಂದು ಪರಿಗಣಿಸಿ, ಡಿಸೆಂಬರ್ ಮುಗಿದ ನಂತರದ ಮೊದಲ ದಿನವನ್ನು, ಅಂದರೆ ಜನವರಿ ಒಂದನ್ನು ಹೊಸ ವರ್ಷ ಅನ್ನಬೇಕಾಗುತ್ತದೆ.

ಆದ್ದರಿಂದ, ಅರಳಿಮರ ಜಾಲತಾಣದ ಎಲ್ಲ ಓದುಗರಿಗೆ ಮತ್ತು ಹಿತೈಶಿಗಳಿಗೆ ಹಾಗೂ ಬರಹಗಾರರಿಗೆ ಅರಳಿಬಳಗದ ವತಿಯಿಂದ ಹೊಸ ವರ್ಷದ ಶುಭಾಶಯಗಳು. ನಿಮಗಾಗಿ ಸಿದ್ಧಪಡಿಸಿದ ಸರಳವಾದ ‘ಮಂಡಲ ಕ್ಯಾಲೆಂಡರ್’ ನಿಮಗೆ ಇಷ್ಟವಾಗಬಹುದು.

(ಮಂಡಲ ಚಿತ್ರಗಳು ಮತ್ತು ವಿನ್ಯಾಸ: ಚೇತನಾ ತೀರ್ಥಹಳ್ಳಿ)

****

ಜನವರಿ

ಫೆಬ್ರವರಿ

ಮಾರ್ಚ್

ಏಪ್ರಿಲ್

ಮೇ

ಜೂನ್

ಜುಲೈ

ಆಗಸ್ಟ್

ಸೆಪ್ಟೆಂಬರ್

ಅಕ್ಟೋಬರ್

ನವೆಂಬರ್

ಡಿಸೆಂಬರ್

Leave a Reply