ಇಂದಿನ ಪಂಚಾಂಗ : ಜನವರಿ 15

ಹೇಮಂತ ಋತು ಪುಷ್ಯ ಮಾಸ ಶುದ್ಧ ತ್ರಯೋದಶಿ

ಇಂದಿನ ವಿಶೇಷಗಳು:

ಮಕರ ಸಂಕ್ರಾಂತಿ ಸೂರ್ಯ ಗ್ರಹವು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶ ಮಾಡುವ ದಿನವನ್ನು ಸಂಕ್ರಾಂತಿ ಎಂದು ಕರೆಯುತ್ತಾರೆ. ಸೂರ್ಯ ಗ್ರಹವು ಒಂದು ರಾಶಿಯಲ್ಲಿ ಒಂದು ತಿಂಗಳ ಕಾಲ ಇರುತ್ತಾನೆ. ಸೂರ್ಯ, ಧನಸ್ಸು ರಾಶಿಯಿಂದ ಮಕರ ರಾಶಿಗೆ ಸೇರುವ ಸಮಯವನ್ನು ಮಕರ ಸಂಕ್ರಾಂತಿ ಎನ್ನುತ್ತಾರೆ.ಪ್ರತಿ ವರ್ಷ ಜನವರಿ 14 ಅಥವಾ 15 ರಂದು ಮಕರ ರಾಶಿಗೆ ಪ್ರವೇಶ ಮಾಡುತ್ತಾನೆ ಹಾಗೂ ಆನಂತರ ಆತನ ಪಥವು ಉತ್ತರಾಭಿಮುಖವಾಗಿ ಚಲಿಸಲು ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ಬೆಳಕು ಹೆಚ್ಚು ಇರುತ್ತದೆ.6 ತಿಂಗಳು ಕಾಲ ಉತ್ತರಾಯಣ ನಂತರ ಅಂದರೆ ಜೂನ್ 15ರ ನಂತರ ದಕ್ಷಿಣಾಯನ ಪ್ರಾರಂಭ ಆಗುತ್ತದೆ.

ಸೇನಾ ದಿನ

ಉತ್ತರಾಯಣ ಪುಣ್ಯಕಾಲ,

ಶ್ರೀರಂಗಪಟ್ಟಣ ರಂಗನಾಥ ಲಕ್ಷದೀಪ,

ಪದ್ಯಾಣ ಮಹಾಲಿಂಗೇಶ್ವರ ಉತ್ಸವ,

ಹುಲುಗನಮರಡಿ ರಥ,

ಶಿವಗಂಗೋತ್ಪತ್ತಿ,

ಹಾಸನ ಕಬ್ಬತ್ತಿ ರಂಗನಾಥ ರಥ,

ತೀರ್ಥಹಳ್ಳಿ ಅಯ್ಯಪ್ಪಸ್ವಾಮಿ ಅಭಿಷೇಕ,

ಯೆಳನಾಡು ಸಿದ್ಧರಾಮೇಶ್ವರ ಜಯಂತಿ,

ಬಾಳೆಹೊಳೆ ಚನ್ನಕೇಶವ ರಥ,

ಪಾಪನಾಶಿ ಕಲ್ಲೇಶ್ವರ ರಥ,

ದೇವನಹಳ್ಳಿ ವೇಣುಗೋಪಾಲ ರಥ,

ಚೆಂಡೂರು ರಥ,

ಗುಂಡ್ಲುಪೇಟೆ ರಥ,

ವೆಂಕಟರಮಣಸ್ವಾಮಿ ರಥ,

ನರಗುಂದ /ಚಿಕ್ಕನರಗುಂದ ರೇವಣಸಿದ್ಧೇಶ್ವರ ರಥ,

ಪಾಂಗಳ ರಥ,

ಎಕ್ಕಾರು ಜಾತ್ರೆ,

ಕುಂಬಳೆ ಉತ್ಸವ,

ತಂಗ್ಯಾ ಉತ್ಸವ,

ಮೈಸೂರು ದೇವಾಂಗಮಠ ಹೋಮ,

ಗಂಗಾವತಿ ಚನ್ನಬಸವಸ್ವಾಮಿ ರಥ

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.