ಇಂದಿನ ಪಂಚಾಂಗ : ಜನವರಿ 16

ಹೇಮಂತ ಋತು ಪುಷ್ಯ ಮಾಸ ಶುದ್ಧ ಚತುರ್ದಶಿ

ಇಂದಿನ ವಿಶೇಷಗಳು:

ಕುಮಾರವ್ಯಾಸ ಜಯಂತಿ : ಕುಮಾರವ್ಯಾಸ (ಕ್ರಿ.ಶ. ೧೩೫೦-೧೪೦೦) ಕನ್ನಡದ ಅತ್ಯುನ್ನತ ಕವಿಗಳಲ್ಲಿ ಒಬ್ಬ. ಕನ್ನಡ ಸಾಹಿತ್ಯದ ದಿಗ್ಗಜರಲ್ಲಿ ಒಬ್ಬ ಎಂದರೆ ತಪ್ಪಾಗಲಾರದು. ಕುಮಾರವ್ಯಾಸನ ಮೂಲ ಹೆಸರು ನಾರಾಯಣಪ್ಪ. “ಗದುಗಿನ ನಾರಾಯಣಪ್ಪ” ಎಂದು ಸಾಮಾನ್ಯವಾಗಿ ಕುಮಾರವ್ಯಾಸನನ್ನು ಗುರುತಿಸಲಾಗುತ್ತದೆ. ಈತನ ಕಾವ್ಯ ನಾಮ ಕುಮಾರವ್ಯಾಸ. ವ್ಯಾಸ ಮಹಾಕವಿಯ ಸಂಸ್ಕೃತ ಮಹಾಭಾರತದ ಅತ್ಯದ್ಭುತ ಕನ್ನಡ ರೂಪವನ್ನು ರಚಿಸಿದ್ದರಿಂದ, ವ್ಯಾಸ ಮಹಾಕವಿಯ ಮಾನಸಪುತ್ರ ತಾನೆನ್ನುವ ವಿನೀತ ಭಾವದಿಂದ ನಾರಣಪ್ಪ ಕುಮಾರ ವ್ಯಾಸನಾಗಿದ್ದಾನೆ. ಈ ಹೆಸರು ಕುಮಾರವ್ಯಾಸನಿಗೆ ಅನ್ವರ್ಥವಾಗಿದೆ. ಕುಮಾರವ್ಯಾಸ ಗದುಗಿನ ವೀರನಾರಾಯಣ ದೇಗುಲದಲ್ಲಿನ ಕಂಬದ ಅಡಿಯಲ್ಲೇ ಗದುಗಿನ ಭಾರತವನ್ನು ರಚಿಸಿ ಓದುತ್ತಿದ್ದ ಎಂಬ ಪ್ರತೀತಿ ಸಹ ಇದೆ. (ಕೃಪೆ: ವಿಕಿಪೀಡಿಯಾ)

ಉಡುಪಿ ಚೂರ್ಣೋತ್ಸವ,

ಬಿಳಿಗಿರಿ ರಂಗನಾಥ ರಥ,

ಮೇಲ್ಕೋಟೆ ಅಂಗಮಣಿ ಉತ್ಸವ,

ಕನೂಹಬ್ಬ,

ದೇಂತಡ್ಕ ವನದುರ್ಗ ಧ್ವಜ,

ಸಾಲಿಗ್ರಾಮ ರಥ,

ಕುಂಬಾಶಿ ರಥ,

ಶೃಂಗೇರಿ ಆರಿದ್ರೋತ್ಸವ,

ಶಾಕಂಬರೀ ವ್ರತ,

ಹುಲಿಯೂರು ದುರ್ಗ ರಥ,

ಸಖರಾಯಪಟ್ಟಣ ಶಕುನ ರಂಗನಾಥ ರಥ,

ಚುಂಚನಕಟ್ಟೆ ರಾಮಸ್ವಾಮಿ ರಥ,

ಕೆ.ಆರ್.ಪೇಟೆ ಗವಿರಂಗನಾಥ ರಥ,

ಶಂಕರನಾರಾಯಣ ರಥ,

ಶಿವನಸಮುದ್ರ, ಶಿವಮೊಗ್ಗ ರಥ,

ಬಾದಾಮಿ ಬನಶಂಕರಿದೇವಿ ಪಲ್ಲೇ ಹಬ್ಬ,

ಕೋಳಿವಾಡ ಕುಮಾರವ್ಯಾಸ ಜಯಂತಿ

Leave a Reply