ಸಹವಾಸಕ್ಕೆ ತಕ್ಕಂತೆ ವ್ಯಕ್ತಿತ್ವ : ಇಂದಿನ ಸುಭಾಷಿತ

ಇಂದಿನ ಸುಭಾಷಿತ, ಭರ್ತೃಹರಿಯ ನೀತಿ ಶತಕದಿಂದ…

ಸಂತಪ್ತಯಸಿ ಸಂಸ್ಥಿ ತಸ್ಯ ಪಯಸೋ ನಾಮಾಪಿ ನ ಜ್ಞಾಯತೇ |
ಮುಕ್ತಾಕಾರತಯಾ ತದೇವ ನಳಿನೀಪತ್ರಸ್ಥಿತಂ ರಾಜತೇ ||
ಸ್ವಾತ್ಯಾಂ ಸಾಗರಶುಕ್ತಿಸಂಪುಟಗತಂ ತನ್ಮೌಕ್ತಿಕಂ ಜಾಯತೇ |
ಪ್ರಾಯೇಣಾಧಮಮಧ್ಯಮೋತ್ತಮಗುಣಃ ಸಂಸರ್ಗತೋ ಜಾಯತೇ || ನೀತಿಶತಕ||

ತಾತ್ಪರ್ಯ: ಚೆನ್ನಾಗಿ ಕಾದ ಕಬ್ಬಿಣದ ಮೇಲೆ ಬಿದ್ದ ನೀರಿನ ಹನಿಯು ಕುರುಹೂ ಇಲ್ಲದಂತೆ ನಾಶವಾಗುತ್ತದೆ. ಅದೇ ಹನಿ ಕಮಲದ ಎಲೆಯ ಮೇಲೆ ಬಿದ್ದಾಗ ಮುತ್ತಿನಂತೆ ಹೊಳೆಯುತ್ತದೆ. ಅದು ಸ್ವಾತಿಮಳೆಯಲ್ಲಿ ಸಮುದ್ರದಲ್ಲಿನ ಕಪ್ಪೆ ಚಿಪ್ಪಿನ ಮೇಲೆ ಬಿದ್ದಿದ್ದೇ ಆದರೆ ಮುತ್ತೇ ಆಗಿಬಿಡುತ್ತದೆ. ಆದ್ದರಿಂದ ಬಹುತೇಕ ನಮ್ಮ ಅಧಮ,ಮಧ್ಯಮ, ಉತ್ತಮ ಗುಣಗಳು ಸಹವಾಸದಿಂದ ಉಂಟಾಗುತ್ತವೆ. ಸಹವಾಸ ಮಾಡುವಾಗ ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ಳಬೇಕು.

Leave a Reply