ದೇಹ ತಂಪಾಗಿಸುವ 3 ಪ್ರಾಣಾಯಾಮಗಳು : ಅರಳಿಮರ video

ಬೇಸಗೆಯಲ್ಲಿ ದೇಹವನ್ನು ಕ್ರಮಬದ್ಧ ಉಸಿರಾಟದ ಮೂಲಕ ತಂಪಾಗಿಟ್ಟುಕೊಳ್ಳಬಹುದು. ಈ ನಿಟ್ಟಿನಲ್ಲಿ ಶೀತಲೀ, ಸಿತ್ಕಾರಿ, ಸದಂತ ಪ್ರಾಣಯಾಮಗಳು, ಚಂದ್ರನೋಲೋಮ ಪ್ರಾಣಯಾಮ ಹಾಗೂ ನಾಡಿಶುದ್ಧಿ ಪ್ರಾಣಾಯಾಮಗಳನ್ನು ಅಭ್ಯಾಸ ಮಾಡುವುದು ಸೂಕ್ತ. ಇವುಗಳಲ್ಲಿ 3 ಬಗೆಯ ಪ್ರಾಣಾಯಾಮಗಳನ್ನು ಮಾಡುವ ವಿಧಾನ ಹಾಗೂ ಪ್ರಯೋಜನಗಳನ್ನು ಇಲ್ಲಿ ನೀಡಲಾಗಿದೆ. 

ಕೆಳಗಿನ ವಿಧಾನಗಳನ್ನು ಪ್ರಯತ್ನಿಸುವ ಮೊದಲು, ಯಾವುದಾದರೂ ಒಂದು ಭಂಗಿಯಲ್ಲಿ ತುಂಬಾ ಹೊತ್ತು ನೋವಿಲ್ಲದೆ (ಸುಖಾಸನ/ಪದ್ಮಸನ ಇತ್ಯಾದಿ) ಕುಳಿತುಕೊಳ್ಳುವ ಅಭ್ಯಾಸ ಮಾಡಿಕೊಳ್ಳಿ. ಇಲ್ಲವಾದರೆ ನಿಮ್ಮ ಗಮನವೆಲ್ಲ ಆಸನದ ಕಡೆಗೇ ಹೋಗುತ್ತಾ ಏಕಾಗ್ರತೆ ಕೆಡಿಸುತ್ತದೆ. ಕೊನೆಯಲ್ಲಿ ಶವಾಸನ ಮತ್ತು ಧ್ಯಾನ ದೇಹದ ಜೊತೆ ಮನಸ್ಸನ್ನೂ ತಂಪಾಗಿಡಲು ಸಹಕಾರಿ.

ಸದಂತ ಪ್ರಾಣಾಯಾಮ

ಮಾಡುವುದು ಹೇಗೆ?
1 ಆರಾಮದಾಯಕ ಭಂಗಿಯಲ್ಲಿ ಕುಳಿತುಕೊಂಡು, ಬಾಯಿಯನ್ನು ತುಸು ಅಗಲಿಸಿ ಮೇಲಿನ ಹಾಗೂ ಕೆಳಗಿನ ಹಲ್ಲುಗಳನ್ನು ಜೋಡಿಸಿ.
2 ನಂತರ ಹಲ್ಲು ಸಂದಿಗಳ ಮೂಲಕ ‘ಹಿಸ್’ ಶಬ್ದ ಹೊರಡಿಸುತ್ತಾ ಗಾಳಿಯನ್ನು ಒಳಕ್ಕೆ ಎಳೆದುಕೊಂಡು ತುಸು ಹೊತ್ತು ಹಾಗೇ ಹಿಡಿದಿಡಿ.
3 ಮೂಗಿನ ಮೂಲಕ ಉಸಿರನ್ನು ನಿಧಾನವಾಗಿ ಹಿಂದಕ್ಕೆ ಬಿಡಿ.
4 ಈ ರೀತಿ 3, 6, ಅಥವಾ 9 ಬಾರಿ ಪುನರಾವರ್ತಿಸಿ

ಪ್ರಯೋಜನಗಳು : ದೇಹ ತಂಪಾಗುವುದು, ಹಲ್ಲಿಗೆ ಸಂಬಂಧಪಟ್ಟ ಸಮಸ್ಯೆ ನಿಯಂತ್ರಣ, ಹಲ್ಲು ನೋವಿನ ಉಪಶಮನ, ಬಾಯಿ ಹುಣ್ಣಿನ ಸಮಸ್ಯೆ ನಿವಾರಣೆ, ನಿದ್ರಾಹೀನತೆ, ಪಿತ್ತವಿಕಾರ ಸಮಸ್ಯೆಗಳಿಂದಬಳಲುತ್ತಿರುವವರಿಗೆ ಹಾಗೂ ವಸಡಿನ ತೊಂದರೆಯಿಂದ ಬಳಲುವವರಿಗೂ ಇದು ಸಹಕಾರಿಯಾಗಿದೆ.

ಸೀತ್ಕಾರೀ ಪ್ರಾಣಾಯಾಮ

ಈ ಪ್ರಾಣಾಯಾಮದ ಮೂಲಕ ದೇಹದ ಉಷ್ಣತೆಯನ್ನು ನಿಯಂತ್ರಣದಲ್ಲಿ ಇರಬಹುದು.
ಇದು ಶೀತಲೀ ಪ್ರಾಣಾಯಾಮದ ಇನ್ನೊಂದು ವಿಧವಾಗಿದೆ.

(ಶೀತಲೀ ಪ್ರಾಣಾಯಾಮ ವಿಧಾನ ಮತ್ತು ಪ್ರಯೋಜನಗಳನ್ನು ಈ ವಿಡಿಯೋದಲ್ಲಿ ನೋಡಿ… 

ಮಾಡುವುದು ಹೇಗೆ?
1 ಯಾವುದಾದರೊಂದು ಸುಖಕರವಾದ ಆಸನದಲ್ಲಿ ಬೆನ್ನು, ಕುತ್ತಿಗೆ ನೇರಮಾಡಿ ನೆಟ್ಟಗೆ ಕುಳಿತುಕೊಳ್ಳಿ. ಕೈಗಳು ಚಿನ್ಮುದ್ರೆಯಲ್ಲಿರಲಿ. 
2 ನಾಲಗೆಯನ್ನು ಹಿಂದಕ್ಕೆ ಮಡಿಚಿ ಬಾಯಿಯೊಳಗೆ ಇಟ್ಟುಕೊಂಡು ನಿಧಾನವಾಗಿ ಗಾಳಿಯನ್ನು ಬಾಯಿಯ ಮೂಲಕ ಒಳಕ್ಕೆ “ಹಿಸ್ಸ್” ಶಬ್ದ ಮಾಡುತ್ತಾ ಒಳಗೆ ತೆಗೆದುಕೊಳ್ಳಿ.
3 ಸ್ವಲ್ಪ ಹೊತ್ತು ಗಾಳಿಯನ್ನು ಒಳಕ್ಕೆ ಹಿಡಿದಿಡಿ. ಆಮೇಲೆ ಮೂಗಿನ ಮೂಲಕ ಉಸಿರನ್ನು ನಿಧಾನವಾಗಿ ಹೊರಗೆ ಬಿಡಿ.
4 ಈ ರೀತಿ 3, 6, ಅಥವಾ 9 ಬಾರಿ ಪುನರಾವರ್ತಿಸಿ

ಪ್ರಯೋಜನಗಳು: ದೇಹದ ಉಷ್ಣತೆ ಕಡಿಮೆ ಮಾಡುವುದು, ಶ್ವಾಸಕೋಶಕ್ಕೆ ಸಂಬಂಧಪಟ್ಟ ಸಮಸ್ಯೆಗಳ ನಿಯಂತ್ರಣ ಹಾಗೂ ಹಲ್ಲು ಮತ್ತು ವಸಡುಗಳ ಆರೋಗ್ಯ ರಕ್ಷಣೆ. ಜೊತೆಗೆ, ಪಿತ್ತವಿಕಾರ ಕಡಿಮೆಯಾಗಲು ಈ ಪ್ರಾಣಾಯಾಮ ಸಹಕಾರಿಯಾಗಿದೆ.
ಈ ಪ್ರಾಣಾಯಾಮಗಳನ್ನು ಮಾಡಿದ ನಂತರ ಕಡ್ಡಾಯವಾಗಿ ಶವಾಸನ ಮಾಡಬೇಕು.

Leave a Reply