ಅಭ್ಯಾಸಗಳು, ಅಭಾಸಗಳು! : ಅತಿಥಿ ಅಂಕಣ

ಕೆಲವೊಮ್ಮೆ ಮರೆವು, ಮೈಮರೆವು ಮನಸಿಗೆ ಎಷ್ಟು ಸುಖಕರ ಮತ್ತು ಆರೋಗ್ಯಕರ! ಈ ನಿಟ್ಟಿನಲ್ಲಿ ಕೆಲಕಾಲದ ಮಟ್ಟಿಗೆ ಯಾವುದೋ ಅಥವಾ ನಮ್ಮದೇ ಲೋಕದಲ್ಲಿ ಮುಳುಗಿ ಹೋಗುವುದೂ ಬಹಳ ಅವಶ್ಯ ಎನಿಸುತ್ತದೆ… । ರೇಖಾ ಗೌಡ

ಸಂಸಾರದ ಯಾನದಲ್ಲಿ, ಜೀವನ ಪ್ರಯಾಣದಲ್ಲಿ ಮೋಸ ಹೋದವರು, ಬಿದ್ದವರು, ತುಳಿತಕ್ಕೊಳಗಾದವರು ಬಹಳ ಜಾಗರೂಕರಾಗಿರಬೇಕಾದ ಪಾಠ ಕಲಿಯುತ್ತಾರೆ.
ಆಗ ಕೆಲವರು ಕಣ್ಣು, ಕಿವಿಗಳ ಚುರುಕಾಗಿಸುತ್ತಾರೆ, ಅವಶ್ಯವಿರದ ಮಟ್ಟಕ್ಕೆ ಅದನ್ನೇ ಅಭ್ಯಾಸ ಮಾಡಿಕೊಂಡು ಬಿಡುತ್ತಾರೆ.
ಹಾಗಾಗೇ ಅತಿ ಎಚ್ಚರಿಕೆಯ ಕಾರಣ ಯಾರನ್ನೂ ನಂಬದ, ಎಲ್ಲವನ್ನೂ ಅನುಮಾನದಿಂದ ನೋಡುವ ರೂಢಿಯೊಂದನ್ನು ಮೈಗೂಡಿಸಿಕೊಂಡು ಬಿಡುತ್ತಾರೆ. ಅದೇ ಕಾರಣವಾಗಿ ಅಶಾಂತಿ, ಒತ್ತಡಗಳು ಶುರುವಾಗಿ ಮನಸು ಅಲ್ಲೋಲ ಕಲ್ಲೋಲವಾಗಿ ನಿದ್ರೆ, ನೆಮ್ಮದಿಯೂ ದೂರ ಸರಿಯುತ್ತವೆ.

ಇವನ್ನೆಲ್ಲಾ ಯೋಚಿಸುವಾಗ ಅನ್ನಿಸೋದು
ಕೆಲವೊಮ್ಮೆ ಮರೆವು, ಮೈಮರೆವು ಮನಸಿಗೆ ಎಷ್ಟು ಸುಖಕರ ಮತ್ತು ಆರೋಗ್ಯಕರ! ಈ ನಿಟ್ಟಿನಲ್ಲಿ ಕೆಲಕಾಲದ ಮಟ್ಟಿಗೆ ಯಾವುದೋ ಅಥವಾ ನಮ್ಮದೇ ಲೋಕದಲ್ಲಿ ಮುಳುಗಿ ಹೋಗುವುದೂ ಬಹಳ ಅವಶ್ಯ ಎನಿಸುತ್ತದೆ.
ಯಾವಾಗ ಮುಳುಗುವುದು, ತೇಲುವುದು, ಎಚ್ಚರದಲ್ಲಿ ಈಜುವುದು ಹಾಗೂ ಯಾವಾಗ ದಡದಲ್ಲಿ ವಿರಮಿಸಿ ಶಾಂತಿ ಶಕ್ತಿಗಳ ತುಂಬಿ ಕೊಳ್ಳುವುದು ಎಂಬ ವಿವೇಕ ಶಾಂತಿ, ನೆಮ್ಮದಿಗೆ ಮೂಲವಾಗುತ್ತದೆ. ನಮ್ಮವು ಅಭ್ಯಾಸಗಳು ಎಂದು ನಮ್ಮರಿವಿಗೆ ಬಂದ ಕ್ಷಣ ಅವುಗಳಿಂದ ಬಿಡಿಸಿಕೊಳ್ಳುವ ದಾರಿಯೂ ಸ್ಪಷ್ಟವಾಗುತ್ತದೆ, ಸುಗಮವಾಗುತ್ತದೆ.

Leave a Reply