ಮಾಸ್ಟರ್ ರಿಂಝೈನ ಝೆನ್ ಗರ್ಜನೆ : ಓಶೋ ವ್ಯಾಖ್ಯಾನ

This is it. ಈ ಕ್ಷಣ… ಈ ಮೌನದ ಘಳಿಗೆ… ಯಾವ ಥಾಟ್ ಗಳಿಂದಲೂ ಭ್ರಷ್ಟವಾಗಿರದ ಈ ಒಂದು ಕ್ಷಣ, ನಮ್ಮನ್ನ ಅವರಿಸಿಕೊಂಡಿರುವ ಬೆರಗು… ಈ ಒಂದು ಮೌನ … ಸಾವಿನ ಎದುರು ಗರ್ಜಿಸಿದ ಚೈತನ್ಯ ; This is it! ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಝೆನ್ ಮಾಸ್ಟರ್ ರಿಂಝೈ ಸಾವಿನ ಹಾಸಿಗೆಯಲ್ಲಿದ್ದ, ಸಾವು ಈಗಲೋ ಆಗಲೋ ಅವನನ್ನು ಅಪ್ಪಿಕೊಳ್ಳುವುದರಲ್ಲಿತ್ತು. ಆಗಲೇ ಅವನ ಶಿಷ್ಯನೊಬ್ಬ ಮಾಸ್ಟರ್ ನ ಪ್ರಶ್ನೆ ಮಾಡಿದ,

“ ಮಾಸ್ಟರ್, ನಿನ್ನ ಬದುಕಿನುದ್ದಕ್ಕೂ ನೀನು ನಮಗೆ ಹಲವಾರು ವಿಷಯಗಳನ್ನ ಕಲಿಸಿದ್ದೀಯಾ, ನೀನು ತೀರಿ ಹೋದ ಮೇಲೆ ಜನ ನಮ್ಮನ್ನ, ನಿನ್ನ ಅತ್ಯಂತ ಪ್ರಮುಖ ಟೀಚಿಂಗ್ಸ್ ಬಗ್ಗೆ ಕೇಳಬಹುದು. ನಾವು ಅವರಿಗೆ ಏನು ಉತ್ತರ ಹೇಳಬೇಕು? ನೀನು ನಮಗೆ ಕಲಿಸಿರುವುದನ್ನೆಲ್ಲ ಒಟ್ಟು ಮಾಡಿ ಒಂದೋ ಎರಡೋ ವಿಷಯಗಳನ್ನ ನಿನ್ನ ಪ್ರಮುಖ ಟೀಚಿಂಗ್ಸ್ ಎಂದು ಹೇಳುವುದು ನಮಗೆ ಸಾಧ್ಯವಿಲ್ಲ. ನೀನೇ ಹೇಳು ನಾವು ಏನೆಂದು ಉತ್ತರ ಕೊಡಬೇಕು ಜನರಿಗೆ? ನಿನ್ನ ಅತ್ಯಂತ ಪ್ರಮುಖ ಟೀಚಿಂಗ್ ಎಂದು ನೀನು ಯಾವುದನ್ನ ಗುರುತಿಸುತ್ತೀಯ? ಒಂದೆರಡು ಸಾಲುಗಳಲ್ಲಿ ನಿನ್ನ ಕಲಿಕೆಯನ್ನ ಸಮಗ್ರವಾಗಿ ಹೇಗೆ ಹೇಳಬಹುದೆಂದು ನೀನೇ ಹೇಳು. ನೀನು ತೀರಿ ಹೋದ ಮೇಲೆ ನಿನ್ನ ಬಗ್ಗೆ ಗೊತ್ತಿಲ್ಲದ ಜನರಿಗೆ ತಿಳಿಸಿ ಹೇಳಲು ನಮಗೆ ಸಹಾಯವಾಗುತ್ತದೆ.

ಯಾವ ಕ್ಷಣದಲ್ಲಿಯಾದರೂ ಸಾವನ್ನು ಎದುರು ನೋಡುತ್ತಿದ್ದ ಮಾಸ್ಟರ್ ರಿಂಝೈ ನಿಧಾನವಾಗಿ ಕಣ್ಣುತೆರೆದು ಭಯಂಕರವಾಗಿ ಸಿಂಹದಂತೆ ಗರ್ಜಿಸಿದ ( ಇದನ್ನ zen shout ಎನ್ನುತ್ತಾರೆ). ಮಾಸ್ಟರ್ ನ ಈ ರುದ್ರ ದನಿ ಕೇಳಿ ಸುತ್ತಲಿನ ಜನರೆಲ್ಲ ಶಾಕ್ ಆದರು. ಸಾವಿನ ಹತ್ತಿರದಲ್ಲಿದ್ದ ಈ ಹಣ್ಣು ಹಣ್ಣು ಮುದುಕನೊಳಗಿಂದ ಇಂಥ ಭಯಂಕರ ಸಿಂಹ ಗರ್ಜನೆ ಬರುವುದು ಸಾಧ್ಯವೆ ಎಂದು ಅವರಿಗೆ ಗಾಬರಿಯಾಯಿತು, ಇಂಥ ಉತ್ತರವನ್ನ ಅವರು ಮಾಸ್ಟರ್ ನಿಂದ ನಿರೀಕ್ಷಿಸಿರಲಿಲ್ಲ.

ಮಾಸ್ಟರ್ ರಿಂಝೈ ಯಾವಾಗಲೂ ಹೀಗೆಯೇ, ever unpredictable. ಇದು ಶಿಷ್ಯರಿಗೆ ಗೊತ್ತಿದ್ದರೂ ಅವರು ಸಾಯುತ್ತಿರುವ ಮನುಷ್ಯನಿಂದ ಇಂಥ ವರ್ತನೆ ನಿರೀಕ್ಷಿಸಿರಲಿಲ್ಲ. ಅವರಿಗೆ ಶಾಕ್ ಆದಾಗ ಅವರ ಆಲೋಚನೆಗಳೆಲ್ಲ ಸ್ಥಬ್ದವಾದವು. ಅವರು ಒಂದು ಕ್ಷಣ ಅವಾಕ್ ಆದರು, ಮಾಸ್ಟರ್ ರಿಂಝೈ “ This is it” ಎಂದು ತನ್ನ ಕೊನೆಯ ಮಾತು ಹೇಳಿ ಸಾವಿಗೆ ಶರಣಾದ.

This is it. ಈ ಕ್ಷಣ… ಈ ಮೌನದ ಘಳಿಗೆ… ಯಾವ ಥಾಟ್ ಗಳಿಂದಲೂ ಭ್ರಷ್ಟವಾಗಿರದ ಈ ಒಂದು ಕ್ಷಣ, ನಮ್ಮನ್ನ ಅವರಿಸಿಕೊಂಡಿರುವ ಬೆರಗು… ಈ ಒಂದು ಮೌನ … ಸಾವಿನ ಎದುರು ಗರ್ಜಿಸಿದ ಚೈತನ್ಯ ; This is it.

ಒಮ್ಮೆ ಹೀಗಾಯಿತು…..

ಒಂದು ದಿನ ಪ್ರಾಂತದ ದೊರೆ ತನ್ನ ಯಾತ್ರಾ ಮಾರ್ಗವಾಗಿ ಪ್ರಯಾಣ ಮಾಡುತ್ತ, ಲಾವೋ ತ್ಸು ನ ಆಶ್ರಮಕ್ಕೆ ಬಂದ.

ಲಾವೋ ತ್ಸು ನನ್ನು ಭೇಟಿ ಮಾಡಿ ಅವನಿಗೆ ತನ್ನ ವಂದನೆ ಸಲ್ಲಿಸಿ ಅವನಿಂದ ಜ್ಞಾನಮಾರ್ಗದ ಬಗ್ಗೆ ತಿಳಿದುಕೊಳ್ಳುವ ಆಸೆ ರಾಜನಿಗೆ.

“ರಾಜ್ಯವನ್ನು ನೋಡಿಕೊಳ್ಳುವಲ್ಲಿ ನನ್ನ ಪೂರ್ತಿ ಸಮಯ ಹೋಗಿಬಿಡುತ್ತದೆ. ಸತ್ಸಂಗ ಮುಂತಾದವುಗಳಿಗೆ ಸಮಯವೇ ಸಿಕ್ಕುವುದಿಲ್ಲ.”

“ ನನ್ನಂಥ ಬಿಡುವಿಲ್ಲದ ಮನುಷ್ಯನಿಗೆ ಧರ್ಮದ ಸಾರವನ್ನು ಒಂದು ಅಥವಾ ಎರಡು ಶಬ್ದಗಳಲ್ಲಿ ಹೇಳಿ ಕೊಡುವುದು ಸಾಧ್ಯವೇ?

ರಾಜ, ಲಾವೋ ತ್ಸು ಹತ್ತಿರ ತನ್ನ ಸಮಸ್ಯೆ ಹೇಳಿಕೊಂಡ.

ಆಗಬಹುದು ರಾಜ. ಒಂದು ಶಬ್ದ ಸಾಕು.

ಹೌದಾ? ಯಾವುದು ಆ ಶಬ್ದ?

“ ಮೌನ “

ಮೌನ ನಮ್ಮನ್ನು ಎಲ್ಲಿಗೆ ಕರೆದೊಯ್ಯುತ್ತದೆ ?

“ ಧ್ಯಾನ “

ಮತ್ತೆ ಧ್ಯಾನ ನಮ್ಮನ್ನು ಎಲ್ಲಿ ಮುಟ್ಟಿಸುತ್ತದೆ?

“ ಮೌನ “

(Source: Osho, The Beloved | Vol 1, Ch #6: Direction a non-ending process)

Leave a Reply