ಇಲ್ಲದ್ದನ್ನು ಕಳೆದುಕೊಳ್ಳುವ ಭಯ: ಓಶೋ ವ್ಯಾಖ್ಯಾನ

ಸಾವು ಎನ್ನುವುದು ಯಾವುದೂ ಇಲ್ಲ, ಏಕೆಂದರೆ ಅದು ಬಹಳ ಕಂಫರ್ಟೆಬಲ್, ಕನ್ವಿನಿಯೆಂಟ್ ಆದ ಅಸ್ತಿತ್ವದ ಸ್ಥಿತಿ. ಗೋರಿಯಲ್ಲಿ ಯಾವ ತೊಂದರೆಯೂ ಸಾಧ್ಯವಿಲ್ಲ. ಆದ್ದರಿಂದ ಬದುಕಿನಲ್ಲಿ ಎದುರಾಗುವ ತೊಂದರೆಗಳನ್ನ ಸಾವಿಗೆ ತಳುಕುಹಾಕಿ ಪ್ರಯೋಜನವಿಲ್ಲ. ಅವು ನಮ್ಮ ಬೆಳವಣಿಗೆಯನ್ನ ಪೋಷಿಸುವ ಸಂಗತಿಗಳು… ~ ಓಶೋ; ಕನ್ನಡಕ್ಕೆ: ಚಿದಂಬರ ನರೇಂದ್ರ


ಒಮ್ಮೆ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಒಬ್ಬ ವ್ಯಕ್ತಿ, ವಿಚಿತ್ರವಾಗಿ ವರ್ತಿಸುತ್ತಿದ್ದ ತನ್ನ ಕಂಪಾರ್ಟಮೆಂಟನಲ್ಲಿದ್ದ ಇನ್ನೊಬ್ಬ ವ್ಯಕ್ತಿಯನ್ನು ಗಮನಿಸಿದ. ಆ ವ್ಯಕ್ತಿ ಸ್ವಲ್ಪ ಹೊತ್ತು ಮುಗುಳ್ನಗುತ್ತಿದ್ದ, ಆಮೇಲೆ ಸ್ವಲ್ಪ ಗಹಗಹಿಸಿ ನಗುತ್ತಿದ್ದ, ಸ್ವಲ್ಪ ಹೊತ್ತು ಅತ್ಯಂತ ದುಃಖಿತನಂತೆ ಮುಖ ಕೆಳಗೆ ಹಾಕಿಕೊಂಡು ಕುಳಿತುಬಿಡುತ್ತಿದ್ದ ಮತ್ತು ಸ್ವಲ್ಪ ಹೊತ್ತಿಗೆ ಮತ್ತೆ ನಗಲು ಶುರು ಮಾಡುತ್ತಿದ್ದ.

ಕೂತೂಹಲ ತಡೆದುಕೊಳ್ಳಲಾಗದೇ ಮೊದಲ ವ್ಯಕ್ತಿ, ವಿಚಿತ್ರವಾಗಿ ವರ್ತಿಸುತ್ತಿದ್ದ ಆ ಇನ್ನೊಬ್ಬ ವ್ಯಕ್ತಿಯನ್ನು ಪ್ರಶ್ನೆ ಮಾಡಿದ, “ ದಯವಿಟ್ಟು ಕ್ಷಮಿಸಿ, ನೀವು ಯಾಕೆ ನಗುತ್ತಿದ್ದೀರಿ ಮತ್ತು ಏಕಾಏಕಿ ದುಃಖಿತರಾಗುತ್ತಿದ್ದೀರಿ? ಏನನ್ನಾದರೂ ನೆನಪು ಮಾಡಿಕೊಳ್ಳುತ್ತಿದ್ದೀರಾ?”

“ ಇಲ್ಲ ಅಲ್ಲ ಅಂಥ ನೆನಪುಗಳೇನೂ ಇಲ್ಲ, ನನಗೆ ನಾನೇ ತಮಾಷೆಯ ಕಥೆಗಳನ್ನು ಹೇಳಿಕೊಳ್ಳುತ್ತಿದ್ದೇನೆ. ಅದಕ್ಕೆ ಈ ನಗು.” ಆ ವ್ಯಕ್ತಿ ಉತ್ತರಿಸಿದ. “ಮತ್ತು ನೀವು ದುಃಖಿತರಾಗುವ ಕಾರಣ? “ ಆ ವ್ಯಕ್ತಿ ಮತ್ತೆ ಪ್ರಶ್ನೆ ಮಾಡಿದ. “ ಏನಿಲ್ಲ, ಅದು ಮೊದಲು ಕೇಳಿದ್ದ ಕಥೆಯನ್ನೇ ಮತ್ತೆ ನಾನು ಮತ್ತೆ ಹೇಳಿಕೊಂಡಾಗ ನನಗೆ ಬೇಸರವಾಗುತ್ತದೆ.” ವಿಚಿತ್ರ ವರ್ತನೆಯ ವ್ಯಕ್ತಿಯ ಕಡೆಯಿಂದ ಉತ್ತರ ಬಂತು.

ಹೀಗಿದೆ ವಿಷಯ, ನಿಮಗೆ ನೀವೇ ಕತೆ ಹೇಳಿಕೊಳ್ಳುತ್ತಿರುವಿರಾದರೆ, ಹೊಸ ಕತೆ ಹೇಳಿಕೊಳ್ಳುವುದು ಹೇಗೆ ಸಾಧ್ಯ? ಎಲ್ಲ ಕತೆಗಳೂ ನಿಮಗೆ ಗೊತ್ತಿರುವಂಥವೆ. ನೀವು ಮತ್ತೆ ಮತ್ತೆ ಅವೇ ಕತೆಗಳನ್ನು ಹೇಳಿಕೊಳ್ಳುತ್ತಿದ್ದೀರಿ. ಪರಿಸ್ಥಿತಿ ಹೀಗಿರುವಾಗ ನಿಮ್ಮ ಬದುಕಿನಲ್ಲಿ ತಾಜಾತನ, ಹೊಸತನ, ಹೊಸ ಮುಂಜಾವು, ಹೊಸ ಬೆಳಗು ಹೇಗೆ ಸಾಧ್ಯ? ಆಗ ನಿಮ್ಮ ಬದುಕು ಹಳತಾಗುತ್ತಿರುತ್ತದೆ, ಮತ್ತೆ ಮತ್ತೆ ಅದೇ ಸಂಗತಿಗಳು ಪುನರಾವರ್ತಿತವಾಗುತ್ತಿರುತ್ತವೆ; ಹೆಚ್ಚೆಂದರೆ ನಿಮ್ಮ ಬದುಕು ಕೊಂಚ ಎಫಿಷಿಯೆಂಟ್ ಎಂದು ನಿಮಗೆ ಅನಿಸಬಹುದು ಆದರೆ ಅಲ್ಲಿ ಯಾವ ಪ್ರಜ್ಞೆಯ ಹಾಜರಾತಿಯನ್ನೂ ಕಾಣಲಾಗುವುದಿಲ್ಲ. ನೀವು ಒಂದು ರೂಟೀನ್ ಗೆ ಕಂಡಿಷನ್ ಆಗಿಬಿಟ್ಟಿರುವಿರಿ. ಆದ್ದರಿಂದ ಯಾವಾಗ ನೀವು ನಿಮಗೆ ಪರಿಚಯವಿರದ ಹೊಸ ದಾರಿಯಲ್ಲಿ ಪ್ರಯಾಣ ಶುರು ಮಾಡುತ್ತೀರೋ, ದಿವ್ಯದ ತೀರ್ಥಯಾತ್ರೆಗೆ ಸಜ್ಜಾಗುತ್ತೀರೋ ಆಗ ನಿಮ್ಮನ್ನು ಭಯ ಆವರಿಸಿಕೊಳ್ಳುತ್ತದೆ. ಯಾವ ಈ ಬದುಕು ಇನ್ನೂ ನಿಮ್ಮದಾಗಿಲ್ಲವೋ ಆ ಬದುಕನ್ನು ಕಳೆದುಕೊಳ್ಳುವ ಭಯ. ಇದು ಒಂದು ಮೆಕ್ಯಾನಿಕಲ್ ಭಯ, ನಿಮ್ಮ ಹತ್ತಿರ ಇರದಿರುವುದನ್ನ ಕಳೆದುಕೊಳ್ಳುವ ಭಯ. ನಿಮ್ಮ ರೂಟೀನ್ ನ್ನ ಮತ್ತು ಪನರಾವರ್ತನೆಗೊಳ್ಳುತ್ತಿರುವ ಅದರ ಎಫಿಷಿಯೆನ್ಸಿಯನ್ನ ಕಳೆದುಕೊಳ್ಳುವ ಭಯ. ಕೆಲವರಿಗೆ ಇದು ಕಂಫರ್ಟೆಬಲ್ ಅನಿಸಬಹುದು ಆದರೆ ಇದು ಬದುಕಿನ ಜೀವಂತಿಕೆ ಅಲ್ಲ.

ಸಾವು ಎನ್ನುವುದು ಯಾವುದೂ ಇಲ್ಲ, ಏಕೆಂದರೆ ಅದು ಬಹಳ ಕಂಫರ್ಟೆಬಲ್, ಕನ್ವಿನಿಯೆಂಟ್ ಆದ ಅಸ್ತಿತ್ವದ ಸ್ಥಿತಿ. ಗೋರಿಯಲ್ಲಿ ಯಾವ ತೊಂದರೆಯೂ ಸಾಧ್ಯವಿಲ್ಲ. ಆದ್ದರಿಂದ ಬದುಕಿನಲ್ಲಿ ಎದುರಾಗುವ ತೊಂದರೆಗಳನ್ನ ಸಾವಿಗೆ ತಳುಕುಹಾಕಿ ಪ್ರಯೋಜನವಿಲ್ಲ. ಅವು ನಮ್ಮ ಬೆಳವಣಿಗೆಯನ್ನ ಪೋಷಿಸುವ ಸಂಗತಿಗಳು.

ಒಂದು ರಾತ್ರಿ ಮುಲ್ಲಾ ನಸ್ರುದ್ದೀನ್ ಮನೆಯಿಂದ ಹೊರ ಬಂದು ಜೋರಾಗಿ “ಕಳ್ಳ ಕಳ್ಳ “ ಎಂದು
ಕೂಗುತ್ತ ರಸ್ತೆಯಲ್ಲಿ ಓಡತೊಡಗಿದ.

ನಸ್ರುದ್ದೀನ್ ನ ಗಾಬರಿ ನೋಡಿ ರಸ್ತೆಯಲ್ಲಿ ಓಡಾಡುತ್ತಿದ್ದ ಜನ ಒಂದುಗೂಡಿದರು, ನಸ್ರುದ್ದೀನ್ ನನ್ನು ತಡೆದು ನಿಲ್ಲಿಸಿ ಪ್ರಶ್ನೆ ಮಾಡಿದರು.

ಎಲ್ಲಿ ಕಳ್ಳ ?

ನನ್ನ ಮನೆಯಲ್ಲಿ.

ನೀನು ನೋಡಿದಿಯಾ ಕಳ್ಳನ್ನ ?

ಇಲ್ಲ.

ಮನೆಯಲ್ಲಿ ಏನಾದರೂ ಕಳ್ಳತನವಾಗಿದೆಯಾ?

ಇಲ್ಲ.

ಹಾಗಾದರೆ ಕಳ್ಳ ಬಂದಿದ್ದ ಎಂದು ಹೇಗೆ ಹೇಳುತ್ತಿರುವೆ?

ನಾನು ಮನೆಯಲ್ಲಿ ಮಲಗಿದ್ದಾಗ, ಹಿಂದೊಮ್ಮೆ ಕಳ್ಳರು ಸದ್ದು ಮಾಡದೆ ಮನೆಯನ್ನ ಪ್ರವೇಶಿಸಿ, ಯಾರಿಗೂ ಗೊತ್ತಾಗದಂತೆ ಕಳ್ಳತನ ಮಾಡಿದ್ದು ನೆನಪಾಯಿತು. ಇವತ್ತು ಕೂಡ ನನಗೆ ಯಾವ ಸದ್ದೂ ಕೇಳಿಸಲಿಲ್ಲ ಆದ್ದರಿಂದ ಖಂಡಿತ ನನ್ನ ಮನೆಗೆ ಕಳ್ಳರು ಬಂದಿದ್ದರು.

ಮುಲ್ಲಾ ನಸ್ರುದ್ದೀನ್ ಉತ್ತರಿಸಿದ.

Leave a Reply