ಪ್ರಾಣ ಉಳಿಸಿದ ಕೆಲಸಗಾರನ ಸೌಜನ್ಯ

ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ

ಈ ಕಥೆ ಪೂರ್ತಿ ಅಟೋಮ್ಯಾಟಿಕ್ ಫ್ರೀಝರ್ ಪ್ಲಾಂಟ್ ಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಕೆಲಸಗಾರನದು. ಪ್ಲಾಂಟ್ ನಲ್ಲಿ ನೂರಾರು ಜನ ಕೆಲಸಗಾರರಿದ್ದರು. ಪ್ಲಾಂಟ್ ನ ಬಾಗಿಲುಗಳು ಸರಿಯಾದ ಸಮಯಕ್ಕೆ ಮುಂಜಾನೆ ತೆರೆದುಕೊಳ್ಳುತ್ತಿದ್ದವು ಮತ್ತು ಸಂಜೆ ಮುಚ್ಚಿಕೊಳ್ಳುತ್ತಿದ್ದವು.

ಒಂದು ದಿನ ಸಂಜೆ ಎಲ್ಲ ಕೆಲಸಗಾರರು ತಮ್ಮ ತಮ್ಮ ಮನೆಗಳಿಗೆ ಹೊರಡಲು ಸಿದ್ಧರಾಗುತ್ತಿದರೆ, ಒಬ್ಬ ಕೆಲಸಗಾರ ಮಾತ್ರ ಏನೋ ಒಂದು ತಾಂತ್ರಿಕ ತೊಂದರೆ ಕಂಡುಬಂದಿತೆಂದು ಹಿಂದೆ ಉಳಿದುಕೊಂಡು ಆ ಕೆಲಸದಲ್ಲಿ ಮಗ್ನನಾಗಿಬಿಟ್ಟ. ಅವನಿಗೆ ಆ ತಾಂತ್ರಿಕ ತೊಂದರೆಯನ್ನು ಪರಿಹರಿಸುವಲ್ಲಿ ಸಮಯ ಮೀರಿ ಹೋಗಿದ್ದು ಗೊತ್ತಾಗಲೇ ಇಲ್ಲ. ಸರಿಯಾದ ಸಮಯಕ್ಕೆ ಫ್ರೀಝರ್ ಪ್ಲಾಂಟ್ ನ ಬಾಗಿಲುಗಳು ಮುಚ್ಚಿಕೊಂಡು ಬಿಟ್ಟವು. ಆ ಮನುಷ್ಯನಿಗೆ ಗಾಬರಿಯಾಯಿತು. ಇನ್ನು ನಾಳೆ ಮುಂಜಾನೆಯವರೆಗೆ ತಾನು ಫ್ರೀಝರ್ ನ ದಟ್ಟ ಚಳಿಯಲ್ಲಿ ಹೇಗೆ ಇರುವುದು ಎಂದು ಅವನು ಗಾಬರಿಯಾದ. ಬಾಗಿಲು ತೆರೆಯುವ ಎಲ್ಲ ಪ್ರಯತ್ನ ಮಾಡಿ ವಿಫಲನಾಗಿ ಹತಾಶನಾದ. ಅವನ ಪ್ರಾಣಕ್ಕೆ ಸಂಚಕಾರ ಬಂದಿತ್ತು. ಆಗಲೇ ಒಂದು ಪವಾಡ ನಡೆದುಹೋಯಿತು.

ಪ್ಲಾಂಟ್ ನ ಸೆಕ್ಯುರಿಟಿ ಗಾರ್ಡ ಪ್ಲಾಂಟ್ ನ ಬಾಗಿಲು ಓಪನ್ ಮಾಡಿ ಈ ವ್ಯಕ್ತಿಯನ್ನು ಹುಡುಕಾಡುತ್ತ ಒಳಗೆ ಬಂದ. “ ನಿನಗೆ ಹೇಗೆ ಗೊತ್ತಾಯಿತು ನಾನು ಒಳಗೆ ಇರುವೆನೆಂದು? ಯಾರು ಹೇಳಿದರು ನಿನಗೆ?” ಆ ವ್ಯಕ್ತಿ ಆಶ್ಚರ್ಯಚಕಿತನಾಗಿ ಸೆಕ್ಯುರಿಟಿ ಗಾರ್ಡ್ ನ ಪ್ರಶ್ನೆ ಮಾಡಿದ.

“ ಯಾರೂ ಹೇಳಲಿಲ್ಲ. ಪ್ಲಾಂಟ್ ಗೆ ಬರುವ ನೂರಾರು ಜನರಲ್ಲಿ ನೀನು ಮಾತ್ರ ನನಗೆ ಮುಂಜಾನೆ Hi ಹೇಳುತ್ತಿದ್ದೆ ಮತ್ತು ಸಂಜೆ ವಾಪಸ್ ಹೋಗುವಾಗ Bye. ಇವತ್ತು ಮುಂಜಾನೆ ನೀನು Hi ಹೇಳಿದ್ದು ನನಗೆ ನೆನಪಿತ್ತು ಆದರೆ ಸಂಜೆ ಸ್ವಲ್ಪ ಹೊತ್ತಿನವರೆಗೆ ನನಗೆ ಏನೋ ಒಂದು ಮಿಸ್ ಮಾಡಿಕೊಂಡ ಹಾಗೆ ಅನಿಸುತ್ತಿತ್ತು. ಆಮೇಲೆ ಸ್ವಲ್ಪ ಆಳವಾಗಿ ಯೋಚಿಸಿದಾಗ ನೆನಪಾಯಿತು, ಸಂಜೆಯ ನಿನ್ನ Bye ನನಗೆ ಮಿಸ್ ಆಗಿದೆಯೆಂದು. ಆಗಲೇ ನನಗೆ ಸಂಶಯ ಬಂದು ನಿನ್ನ ಹುಡುಕುತ್ತ ಪ್ಲಾಂಟ್ ಒಳಗೆ ಬಂದೆ.” ಸೆಕ್ಯೂರಿಟಿ ಗಾರ್ಡ್ ತನಗೆ ಪ್ಲಾಂಟ್ ಬಾಗಿಲು ಓಪನ್ ಮಾಡಲು ಒತ್ತಾಯಿಸಿದ ಕಾರಣದ ಬಗ್ಗೆ ಹೇಳಿದ.

ಆ ಕೆಲಸಗಾರನಿಗೆ ತನ್ನ ಒಂದು ಸಣ್ಣ gesture ತನ್ನ ಪ್ರಾಣ ಉಳಿಸಿದ್ದಕ್ಕಾಗಿ ಆಶ್ಚರ್ಯವಾಗಿತ್ತು.

ಯಾರನ್ನಾದರೂ ಭೇಟಿಯಾದಾಗ ಗ್ರೀಟ್ ಮಾಡಿ ಹೌದು ತುಂಬು ನಗೆಯೊಂದಿಗೆ ಅವರನ್ನು ಎದುರುಗೊಳ್ಳಿ. ಯಾರಿಗೆ ಗೊತ್ತು ಈ ನಿಮ್ಮ ಸಣ್ಣ gesture ನಿಮ್ಮ ಬದುಕಿನಲ್ಲಿ ಒಂದು ಪವಾಡವನ್ನು ಸಾಧ್ಯಮಾಡಬಹುದು.

Leave a Reply