ಪದಗಳ ಮೂಲ :  To have or To be #11

“having” ರೀತಿಯ ಜೀವನ ವಿಧಾನದಲ್ಲಿ, ಜಗತ್ತಿನೊಡನೆಯ ನನ್ನ ಸಂಬಂಧ, ಸ್ವಾಧೀನಗೊಳಿಸಿಕೊಳ್ಳುವಿಕೆಯ ಮತ್ತು ಒಡೆತನದ, ಹಾಗು ಎಲ್ಲರನ್ನೂ, ಎಲ್ಲವನ್ನೂ (ನನ್ನನ್ನೂ ಒಳಗೊಂಡಂತೆ) ನನ್ನ ಆಸ್ತಿ ಮಾಡಿಕೊಳ್ಳುವ ರೀತಿಯದು. being ಜೀವನ ವಿಧಾನದಲ್ಲಿ, ನಾವು being ನ ಎರಡು ರೂಪಗಳನ್ನು ಖಂಡಿತ ಗುರುತಿಸಿಕೊಳ್ಳಬೇಕು… | ಮೂಲ: ಎರಿಕ್ ಫ್ರಾಮ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಹಿಂದಿನ ಭಾಗ ಇಲ್ಲಿ ಓದಿ: https://aralimara.com/2023/03/19/fromm-7/

“ ಹೊಂದುವುದು” (To Have), ಈ ಪದ ಸ್ವಲ್ಪ ದಾರಿತಪ್ಪಿಸುವ ಸರಳ ಅಭಿವ್ಯಕ್ತಿ. ಪ್ರತೀ ಮನುಷ್ಯರೂ ಒಂದಲ್ಲ ಒಂದು ಸಂಗತಿಯನ್ನ ಹೊಂದಿರುತ್ತಾರೆ : ದೇಹ*, ಬಟ್ಟೆಗಳು, ಮನೆ ಇತ್ಯಾದಿ; ಮುಂದುವರೆದು ಆಧುನಿಕ ಗಂಡಸರು ಅಥವಾ ಹೆಂಗಸರು ಕಾರು, ಟೆಲಿವಿಜನ್, ವಾಷಿಂಗ್ ಮಷೀನ್ ನಂತ ಆಧುನಿಕ ಯಂತ್ರಗಳನ್ನು ಹೊಂದಿದ್ದಾರೆ. ಯಾವುದನ್ನೂ ಹೊಂದದೇ ಬದುಕುವುದು ವಾಸ್ತವದಲ್ಲಿ ಅಸಾಧ್ಯದ ವಿಷಯ. ಹಾಗಾದರೆ “ಹೊಂದುವುದು” ನಮಗೆ ಯಾಕೆ ಸಮಸ್ಯೆಯಾಗಬೇಕು? ಆದರೆ “having” ಪದದ ಭಾಷಾಶಾಸ್ತ್ರದ ಇತಿಹಾಸ ಈ ಪದ ತುಂಬ ಸಮಸ್ಯಾತ್ಮಕವಾದದ್ದು ಎಂದು ಸೂಚಿಸುತ್ತದೆ. “Having” ಮನುಷ್ಯರ ಅಸ್ತಿತ್ವಕ್ಕೆ ಅತ್ಯಂತ ಸಹಜವಾದದ್ದು ಎಂದು ನಂಬುವ ಜನರಿಗೆ, ಹಲವಾರು ಭಾಷೆಗಳಲ್ಲಿ ಇಂಥದೊಂದು ಪದ ಇಲ್ಲವೇ ಇಲ್ಲ ಎಂದರೆ ಆಶ್ಚರ್ಯವಾಗಬಹುದು. ಉದಾಹರಣೆಗೆ ಹೀಬ್ರೂ ಭಾಷೆಯಲ್ಲಿ “ having” ಎನ್ನುವ ಪದಕ್ಕೆ ಸಮಾನಾಂತರ ಪದ ಬಳಸಬೇಕೆಂದರೆ, jesh li ( it is to me – ಇದು ನನಗಾಗಿ ) ಎಂದು ಹೇಳಬೇಕು. ವಾಸ್ತವದಲ್ಲಿ “ having” ಎನ್ನುವ ಪದಕ್ಕೆ ಬದಲಾಗಿ, ಸ್ವಾಧೀನಪಡಿಸಿಕೊಳ್ಳುವಿಕೆಯನ್ನ ಈ ರೀತಿ ಅಭಿವ್ಯಕ್ತಿಸುವ ಭಾಷೆಗಳೇ ಹೆಚ್ಚಿನ ಸಂಖ್ಯೆಯಲ್ಲಿವೆ. ಹಲವಾರು ಭಾಷೆಗಳ ಬೆಳವಣಿಗೆಯಲ್ಲಿ ನಾವು ಗಮನಿಸಬಹುದಾದ ಕುತೂಹಲಕರ ಸಂಗತಿಯೆಂದರೆ, “it is to me” ಎನ್ನುವ ರಚನೆ ಮುಂದೆ ಬದಲಾಗುತ್ತ “ I have” ಎನ್ನುವ ರಚನೆಯ ರೂಪ ಪಡೆದುಕೊಂಡಿದೆ. ಆದರೆ Emile Benveniste ಸೂಚಿಸುವ ಹಾಗೆ ಭಾಷೆಯ ವಿಕಾಸ ರಿವರ್ಸ್ ಡೈರೆಕ್ಷನ್ ಲ್ಲಿ ಆಗುವುದಿಲ್ಲ. ಈ ಸಂಗತಿ ಸ್ಪಷ್ಟಪಡಿಸುವುದೇನೆಂದರೆ, ಖಾಸಗಿ ಆಸ್ತಿಯ ಪದ್ಧತಿ ಬೆಳೆದುಬಂದಂತೆಲ್ಲ, “having” ಎನ್ನುವ ಪದಕ್ಕೆ ಸರಿ ಹೊಂದುವ ಪದಗಳ ಸೃಷ್ಟಿಯಾಗುತ್ತ ಹೋಯಿತು, ಮತ್ತು ಇದು ಬಳಕೆಗಾಗಿ ಸ್ವಾಧೀನತೆ (possession for use) ಎನ್ನುವ ಸಮಾಜಗಳಲ್ಲಿ ಗೈರುಹಾಜರಾಗಿರುವುದನ್ನೂ ಗಮನಿಸಬೇಕು. ಮುಂದೆ ಬರಲಿರುವ ಸಾಮಾಜಿಕ ಭಾಷಾಶಾಸ್ತ್ರದ (sociolinguistic) ಅಧ್ಯಯನ, ಈ ತಿಳುವಳಿಕೆ ಎಷ್ಟರಮಟ್ಟಿಗೆ ಸರಿ ಎನ್ನುವುದನ್ನ ತಿಳಿಸಿ ಹೇಳಬೇಕಾಗಿದೆ.

[ * ದೇಹದ ಜೊತೆ “being” ನ ಅಭಿವ್ಯಕ್ತಿಯೂ ಹೊಂದಿಕೊಂಡಿದೆ ಎನ್ನುವುದನ್ನ ಈ ಸಮಯದಲ್ಲಿ ನಾವು ನೆನಪಿಟ್ಟುಕೊಳ್ಳಬೇಕು. ದೇಹವನ್ನ ಜೀವಂತವಾಗಿ ಅನುಭವಿಸುವುದು ಸಾಧ್ಯವಿರುವುದರಿಂದ, I have my body ಎನ್ನುವುದಕ್ಕೆ ಬದಲಾಗಿ I am my body ಎಂದು ಹೇಳುವುದೂ ಸಾಧ್ಯ ; ದೈಹಿಕ ಸಂವೇದನಾಶೀಲತೆಯ ಅರಿವಿನ (sensory awareness) ಎಲ್ಲ ಆಚರಣೆಗಳು, ದೇಹದ ಈ being ನ ಅನುಭವಕ್ಕಾಗಿ ಪ್ರಯತ್ನಿಸುತ್ತಿರುತ್ತಿರುತ್ತವೆ. ]

ಹೋಲಿಸಿ ನೋಡಿದರೆ “having” ತುಂಬ ಸರಳ ಅನಿಸುತ್ತದೆಯಾದರೂ ಅದು, “being” ಅಥವಾ to be ಅಷ್ಟೇ ಸಂಕೀರ್ಣ, ಅಷ್ಟೇ ಕಠಿಣ. “Being” ನ್ನು ಹಲವಾರು ವಿಧಾನಗಳಲ್ಲಿ ಬಳಸಲಾಗುತ್ತದೆ :

(1) ಸಂಯೋಜಕ ಪದದ ರೀತಿ (copula) – I am tall, I am white, I am poor ಇತ್ಯಾದಿ ; ಗುರುತಿಸುವಿಕೆಯ ವ್ಯಾಕರಣಬದ್ಧ ರೀತಿ ( ಹಲವಾರು ಭಾಷೆಗಳಲ್ಲಿ, to be ಗೆ, ಈ ಅರ್ಥದಲ್ಲಿ ಸರಿ ಹೊಂದುವ ಪದಗಳಿಲ್ಲ. ಸ್ಪ್ಯಾನಿಷ್ ಭಾಷೆಯಲ್ಲಿ, ಶಾಶ್ವತ ಗುಣಲಕ್ಷಣಗಳು, ser, (ಸಂಗತಿಯ ತಿರುಳಿಗೆ ಸಂಬಂಧಿಸಿದ) ಮತ್ತು, ಅನಿಷ್ಚಿತ (contingent) ಗುಣಲಕ್ಷಣಗಳನ್ನು , estar (ಸಂಗತಿಯ ತಿರುಳಿಗೆ ಸಂಬಂಧಿಸಿರದ) ಬೇರೆ ಬೇರೆ ಮಾಡಿ ನೋಡಲಾಗುತ್ತದೆ.

(2) ಕರ್ಮಣಿ ಪ್ರಯೋಗದ ರೀತಿ (As a passive), ಕ್ರಿಯಾಪದದಿಂದ ಆಕ್ರಮಣಕ್ಕೊಳಗಾದ ರೀತಿ ; ಉದಾಹರಣೆಗೆ, I am beaten, ಹಾಗೆಂದರೆ ನಾನು ಇನ್ನೊಬ್ಬರ ಆ್ಯಕ್ಟಿವಿಟಿಗೆ ಒಳಗಾಗಿರುವ ವ್ಯಕ್ತಿ ಅಥವಾ ಸಂಗತಿ, I beat ನಲ್ಲಿಯಂತೆ ನಾನು ನನ್ನ ಆ್ಯಕ್ಟಿವಿಟಿಗೆ ಕಾರಣನಾದ ವ್ಯಕ್ತಿ ಅಥವಾ ಸಂಗತಿ ಅಲ್ಲ.

(3) ಇರುವ ಅರ್ಥದ ರೀತಿ (as meaning to exist), Benveniste ತೋರಿಸಿಕೊಟ್ಟಂತೆ, to be ಪದ ಅಸ್ತಿತ್ವದ ಸಂದರ್ಭದಲ್ಲಿ ಬಳಕೆಯಾಗುವುದು ಮತ್ತು , ಗುರುತಿಸುವಿಕೆಯ ಪ್ರಕ್ರಿಯೆಯಲ್ಲಿ ಸಂಯೋಜಕ ಪದವಾಗಿ ಬಳಕೆಯಾಗುವುದು ಎರಡೂ ಬೇರೆ ಬೇರೆ. ಈ ಎರಡೂ ಪದಗಳು ಜೊತೆ ಜೊತೆಯಾಗಿಯೇ ಬಳಕೆಗೊಳ್ಳುತ್ತಿವೆ ಮತ್ತು ಮುಂದೂ ಬಳಕೆಗೊಳ್ಳಬಹುದು, ಆದರೆ ಅವು ಎರಡೂ ಸಂಪೂರ್ಣ ಬೇರೆ ಬೇರೆ.

Benveniste ನ ಅಧ್ಯಯನ, “to be” ಎನ್ನುವ ಪದ ಸಂಯೋಜಕ ಪದವಾಗಿ ಬಳಕೆಯಾಗುವುದಕ್ಕಿಂತ, ಕ್ರಿಯಾಪದವಾಗಿ ಬಳಕೆಯಾಗುವುದರ ಮೇಲೆ ಹೊಸ ಬೆಳಕು ಚೆಲ್ಲುತ್ತದೆ. ಇಂಡೋ- ಯುರೋಪಿಯನ್ ಭಾಷೆಗಳಲ್ಲಿ, “to be” ಯನ್ನ ಮೂಲ (root es) ಎನ್ನುವಂತೆ ಅಭಿವ್ಯಕ್ತಿಸಲಾಗುತ್ತದೆ. ಮತ್ತು ಇದರ ಅರ್ಥ, “ಅಸ್ತಿತ್ವದಲ್ಲಿ ಇರುವ (to have existence), ವಾಸ್ತವದಲ್ಲಿ ಕಾಣಸಿಗುವ (to be found in reality)”. ( ಸಂಸ್ಕೃತದಲ್ಲಿ ಬಳಕೆಯಾಗುವ “ಸಂತ” ಎನ್ನುವ ಪದದ ಅರ್ಥ, ವಾಸ್ತವ – existent, ನೈಜ ಒಳಿತು, ಸತ್ಯ ; ಮತ್ತು ಉತ್ಪ್ರೇಕ್ಷೆ “ಸತ್ತಮ “ಎನ್ನುವುದರ ಅರ್ಥ ಅತ್ಯುತ್ತಮ.) “ Etymology ಯ (ಶಬ್ದ ವ್ಯುತ್ಪತ್ತಿ ಶಾಸ್ತ್ರ – ಶಬ್ದಗಳ ವ್ಯುತ್ಪತ್ತಿ ಮತ್ತು ಇತಿಹಾಸವನ್ನು ಅಧ್ಯಯನ ಮಾಡುವ ಶಾಸ್ತ್ರ) ಮೂಲದ ಪ್ರಕಾರ “Being” ಕೇವಲ ವಿಷಯ ಮತ್ತು ವೈಶಿಷ್ಟ್ಯತೆ ( subject and attributes) ಗಳನ್ನು ಗುರುತಿಸುವ ಹೇಳಿಕೆಗಿಂತ ಹೆಚ್ಚಿನದನ್ನೇನೋ ಹೇಳುತ್ತಿದೆ, ಅದು ವಿದ್ಯಮಾನದ ವಿವರಣಾತ್ಮಕತೆಗಿಂತ ವ್ಯಾಪಕವಾದದ್ದನ್ನ ಸೂಚಿಸುತ್ತಿದೆ. ಅದು ಹೇಳುತ್ತಿರುವುದು ಅದು ಯಾರು ಅಥವಾ ಅದು ಏನು ಎನ್ನುವುದರ ಅಸ್ತಿತ್ವದ ವಾಸ್ತವಿಕತೆಯನ್ನ , ಅದು ಹೇಳುತ್ತಿರುವುದು ಅವನ, ಅವಳ ಅಥವಾ ಅದರ ಅಸಲೀಯತೆಯನ್ನ ಮತ್ತು ಸತ್ಯವನ್ನ. ಯಾರ ಬಗ್ಗೆಯಾದರೂ ಅಥವಾ ಯಾವುದರ ಬಗ್ಗೆಯಾದರೂ ನೀಡುವ ಹೇಳಿಕೆಯೆಂದರೆ, ಆ ವ್ಯಕ್ತಿಯ ಅಥವಾ ಆ ಸಂಗತಿಯ ತಿರುಳಿನ ಬಗ್ಗೆ ಹೇಳುವುದು, ಅವನ, ಅವಳ, ಅಥವಾ ಅದರ ಹೊರ ರೂಪದ (appearance) ಬಗ್ಗೆ ಅಲ್ಲ.

having ಮತ್ತು being ಗಳ ಕುರಿತಾಗಿ ಮಾಡಿದ ಪ್ರಾಥಮಿಕ ಸಮೀಕ್ಷೆ , ನಮ್ಮನ್ನು ಕೆಳಗಿನ ಈ ಕೆಲವು ಕಂಡಿಷನ್ ಗಳತ್ತ ಕರೆದೊಯ್ಯುತ್ತದೆ.

(1) Being ಮತ್ತು Having ಎಂದು ಹೇಳುವಾಗಲೆಲ್ಲ, I have a car, or I am white or I am happy ಮುಂತಾದ ಹೇಳಿಕೆಗಳಲ್ಲಿ ವಿವರಿಸಿದಂತೆ, ನಾನು ಒಂದು ವಿಷಯದ ಬೇರೆ ಬೇರೆ ಕ್ವಾಲಿಟಿಗಳ ಬಗ್ಗೆ ಹೇಳುತ್ತಿಲ್ಲ. ನಾನು ಅಸ್ತಿತ್ವದ ಎರಡು ಮೂಲಭೂತ ಜೀವನ ವಿಧಾನಗಳ ಬಗ್ಗೆ ರೆಫರ್ ಮಾಡುತ್ತಿದ್ದೇನೆ, ಸ್ವಂತದ ಮತ್ತು ಜಗತ್ತಿನ ಕುರಿತಾದ ಎರಡು ವಿಭಿನ್ನ ಧೋರಣೆಗಳ ಬಗ್ಗೆ ಹೇಳುತ್ತಿದ್ದೇನೆ, ಎರಡು ವಿಭಿನ್ನ ಸ್ವಭಾವ ರಚನೆಗಳ (character structure) ಬಗ್ಗೆ ಮತ್ತು ಅವುಗಳಲ್ಲಿ ಯಾವುದು ಪ್ರಧಾನವಾಗಿರುತ್ತದೋ ಅದು, ವ್ಯಕ್ತಿಯ ತಿಳುವಳಿಕೆಯ, ಭಾವನೆಗಳ ಮತ್ತು ಕ್ರಿಯಾತ್ಮಕತೆಯ ಪರಿಪೂರ್ಣತೆಯನ್ನು ನಿರ್ಧರಿಸುತ್ತದೆ ಎಂದು ಸೂಚಿಸುತ್ತಿದ್ದೇನೆ.

(2) “having” ರೀತಿಯ ಜೀವನ ವಿಧಾನದಲ್ಲಿ, ಜಗತ್ತಿನೊಡನೆಯ ನನ್ನ ಸಂಬಂಧ, ಸ್ವಾಧೀನಗೊಳಿಸಿಕೊಳ್ಳುವಿಕೆಯ ಮತ್ತು ಒಡೆತನದ, ಹಾಗು ಎಲ್ಲರನ್ನೂ, ಎಲ್ಲವನ್ನೂ (ನನ್ನನ್ನೂ ಒಳಗೊಂಡಂತೆ) ನನ್ನ ಆಸ್ತಿ ಮಾಡಿಕೊಳ್ಳುವ ರೀತಿಯದು.

(3) being ಜೀವನ ವಿಧಾನದಲ್ಲಿ, ನಾವು being ನ ಎರಡು ರೂಪಗಳನ್ನು ಖಂಡಿತ ಗುರುತಿಸಿಕೊಳ್ಳಬೇಕು. ಮೊದಲನೇಯದು, Du Marais ತನ್ನ ಸ್ಟೇಟಮೆಂಟ್ ನಲ್ಲಿ ಉದಾಹರಿಸಿರುವಂತೆ, having ನ ರೀತಿಗೆ ವಿರುದ್ಧವಾದದ್ದು ಮತ್ತು ಜಗತ್ತಿನೊಡನೆ, ಜೀವಂತಿಕೆಯ ಹಾಗು ಅಸಲಿ ಸಂಬಂಧ ಸಾಧಿಸುವುದು. ಎರಡನೇಯ ರೀತಿಯ being, ಕಾಣಿಸಿಕೊಳ್ಳುವಿಕೆಗೆ (appearing) ವಿರುದ್ಧವಾದದ್ದು, ಮತ್ತು being ನ Etymology ಯಲ್ಲಿ ವಿವರಿಸಿರುವಂತೆ ಆ ಪದದ ಮೋಸಗೊಳಿಸುವ ರೂಪದ ವಿರೋಧದಲ್ಲಿ ಮನುಷ್ಯರ ಅಥವಾ ಸಂಗತಿಯ ನೈಜ ಸ್ವಭಾವವನ್ನು ( true nature), ನೈಜ ವಾಸ್ತವೀಕತೆಯನ್ನ (true reality), ಎತ್ತಿ ಹಿಡಿಯುವಂಥದು.

(ಮುಂದುವರೆಯುತ್ತದೆ)


1 Comment

Leave a Reply