ಮೂಲ: ಎರಿಕ್ ಫ್ರಾಮ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಹಿಂದಿನ ಭಾಗ ಇಲ್ಲಿ ಓದಿ: https://aralimara.com/2023/03/25/fromm-8/
Philosophical concepts of Being.
ಸಾವಿರಾರು ಫಿಲಾಸೊಫಿಕಲ್ ಪುಸ್ತಕಗಳ ಕೇಂದ್ರ ವಿಷಯವಾಗಿರುವುದರಿಂದ ಮತ್ತು, “What is Being?” ಎನ್ನುವುದು ಪಾಶ್ಚಿಮಾತ್ಯ ತತ್ವಜ್ಞಾನದ ಮಹತ್ವದ ಪ್ರಶ್ನೆಯಾಗಿರುವುದರಿಂದ, Being ನ ಪರಿಕಲ್ಪನೆಯ ಕುರಿತಾದ ಚರ್ಚೆ, ಹೆಚ್ಚುವರಿಯಾಗಿ ಸಂಕೀರ್ಣವಾಗಿದೆ. ಈ ಪುಸ್ತಕದಲ್ಲಿ, Being ನ ಪರಿಕಲ್ಪನೆಯನ್ನ ಮಾನವ ಶಾಸ್ತ್ರ ಮತ್ತು ಮನಶಾಸ್ತ್ರದ ದೃಷ್ಟಿಕೋನದಿಂದ ನಿಭಾಯಿಸುವ ಪ್ರಯತ್ನ ಮಾಡಲಾಗುತ್ತದೆಯಾದರೂ, ಈ ಕುರಿತಾದ ತತ್ವಶಾಸ್ತ್ರೀಯ ಚರ್ಚೆ, ಮಾನವಶಾಸ್ತ್ರದ ಸಮಸ್ಯೆಗಳಿಗೆ ಹೊರತಾದ್ದೇನಲ್ಲ. ಆದರೆ ಸಾಕ್ರೆಟಿಸ್ ಪೂರ್ವ ಕಾಲದಿಂದ ಆಧುನಿಕ ತತ್ವಶಾಸ್ತ್ರದವರೆಗಿನ ಇತಿಹಾಸದಲ್ಲಿಯ Being ನ ಪರಿಕಲ್ಪನೆಯ ಬೆಳವಣಿಗೆ ಕುರಿತಾದ, ಪುಟ್ಟ ಪ್ರಸ್ತುತಿಯ ಪ್ರಯತ್ನ ಕೂಡ ಈ ಪುಸ್ತಕದ ಮಿತಿಗಳಾಚೆ ಹರಡಿಕೊಳ್ಳುವುದು. ಆದ್ದರಿಂದ ಇಲ್ಲಿ ನಾನು ಕೇವಲ ಒಂದು ಮಹತ್ವದ ಸಂಗತಿಯನ್ನು ಮಾತ್ರ ಹೇಳಬಯಸುತ್ತೇನೆ : Being ನ ಅಂಶವಾಗಿ, ಪ್ರಕ್ರಿಯೆ, ಚಟುವಟಿಕೆ ಮತ್ತು ಚಲನೆಯ (process, activity & movement) ಪರಿಕಲ್ಪನೆ. George Simmel ಸೂಚಿಸಿದಂತೆ, being ನ ಐಡಿಯಾ ಬದಲಾವಣೆಯೊಂದಿಗೆ ಹೊಂದಿಕೊಳ್ಳುತ್ತದೆ. ಹಾಗೆಂದರೆ being ಎಂದರೆ becoming ಎನ್ನುವ ಐಡಿಯಾ, ತನ್ನ ಎಂದೂ ರಾಜಿಯಾಗದ ಅಸ್ತಿತ್ವವನ್ನ ತತ್ವಶಾಸ್ತ್ರದ ಶುರುವಾತಿನಲ್ಲಿ ಹೆರಾಕ್ಲಿಟಸ್ ನಲ್ಲಿ ಮತ್ತು ಪಾಶ್ಚಿಮಾತ್ಯ ತತ್ವಶಾಸ್ತ್ರದ ತುತ್ತ ತುದಿಯಲ್ಲಿ ಹೇಗಲ್ ನಲ್ಲಿ ಕಂಡುಕೊಂಡಿತು.
Being ಎನ್ನುವುದು ಶಾಶ್ವತ, ಕಾಲಾತೀತ, ಮತ್ತು ಬದಲಾಯಿಸಲಾಗದ ಸಂಗತಿ, ಹಾಗು ಅದು Becoming ಗೆ ವಿರುದ್ಧವಾದದ್ದು ಎನ್ನುವ Parmenides, ಪ್ಲೇಟೋ ಮತ್ತು ಅಕಾಡಮಿಕ್ “ನೈಜವಾದಿಗಳು” (scholastic “realists”) ಮುಂತಾದವರ ಧೋರಣೆ, ವಿಚಾರ (ಐಡಿಯಾ) ಎನ್ನುವುದು ಪರಮ ಸತ್ಯ ಎನ್ನುವ ಆದರ್ಶವಾದಿ ಕಲ್ಪನೆಯಲ್ಲಿ ಮಾತ್ರ ಅರ್ಥ ಹೊಮ್ಮಿಸುತ್ತದೆ. ಪ್ರೀತಿಯ ಕುರಿತಾದ ಐಡಿಯಾ (ಪ್ಲೇಟೋನ ಪ್ರಕಾರ) ಪ್ರೀತಿಯ ಅನುಭವಕ್ಕಿಂತ ಹೆಚ್ಚು ನೈಜ ಎನ್ನುವುದಾದರೆ, ಪ್ರೀತಿಯನ್ನ ಒಂದು ಶಾಶ್ವತ ಮತ್ತು ಎಂದೂ ಬದಲಾಗದ ಐಡಿಯಾ ಎಂದು ಒಪ್ಪಿಕೊಳ್ಳಬಹುದು. ಆದರೆ ನಾವು ಈಗ ಇರುವ ಮನುಷ್ಯ ಜನಾಂಗದ ವಾಸ್ತವಗಳಾದ ಪ್ರೀತಿಸುವುದು, ದ್ವೇಷಿಸುವುದು, ಯಾತನೆ ಅನುಭವಿಸುವುದು ಮುಂತಾದವುಗಳೊಂದಿಗೆ ಶುರು ಮಾಡುವುದಾದರೆ, ಏಕ ಕಾಲದಲ್ಲಿ becoming ಮತ್ತು changing ಅಲ್ಲದ ಯಾವ being ಕೂಡ ಇಲ್ಲ. ಜೀವಂತ ರಚನೆಗಳು, ಅವು ಹಾಗಿರುವುದು ಕೇವಲ ಅವುಗಳ becoming ಸಾಮರ್ಥ್ಯದ ಕಾರಣವಾಗಿ, ಅವುಗಳ ಬದಲಾವಣೆ ಹೊಂದುವ ಗುಣಲಕ್ಷಣಗಳ ಕಾರಣವಾಗಿ. ಬದಲಾವಣೆ ಮತ್ತು ಬೆಳವಣಿಗೆ ಜೈವಿಕ ಪ್ರಕ್ರಿಯೆಯ ಅಂತರ್ಗತ ಗುಣಲಕ್ಷಣಗಳು.
ಬದುಕು ವಸ್ತು (substation) ಅಲ್ಲ, ಒಂದು ಪ್ರಕ್ರಿಯೆ (process), ಎನ್ನುವ ಹೆರಾಕ್ಲಿಟಸ್ ಮತ್ತು ಹೇಗಲ್ ರ ತಾರ್ಕಿಕ ಪರಿಕಲ್ಪನೆಗೆ, ಸಮಾನ ಆಶಯಗಳನ್ನು ನಾವು ಪೌರ್ವಾತ್ಯ ಜಗತ್ತಿನ ತತ್ವಶಾಸ್ತ್ರದಲ್ಲಿ, ವಿಶೇಷವಾಗಿ ಬುದ್ಧನ ವಿಚಾರಗಳಲ್ಲಿ ಕಾಣಬಹುದು. ಬೌದ್ಧರ ವಿಚಾರಗಳಲ್ಲಿಯಂತೂ, ಯಾವುದೆ ಬಹುಕಾಲ ಬಾಳುವ ಶಾಶ್ವತ ಸಂಗತಿಗಳಿಗೆ ಜಾಗವೇ ಇಲ್ಲ, ಅದು ವ್ಯಕ್ತಿಯಾಗಿರಬಹುದು (self) ಅಥವಾ ವಸ್ತುವಾಗಿರಬಹುದು. ಯಾವುದೂ ನಿಜವಲ್ಲ, ಎಲ್ಲವೂ process ನ ಭಾಗ.* ಈ “Process thinking” ನ ತತ್ವಶಾಸ್ತ್ರೀಯ ಪರಿಕಲ್ಪನೆಗಳನ್ನು ಸಮಕಾಲೀನ ವೈಜ್ಞಾನಿಕ ವಿಚಾರಗಳು, ಸಂಶೋಧನೆಯ ಮೂಲಕ ಹಾಗು ಈ ಪರಿಕಲ್ಪನೆಯನ್ನ natural science ಗೆ ಅನ್ವಯಿಸುವ ಮೂಲಕ ಪುನರುಜ್ಜೀವನಗೊಳಿಸಿದವು.
*[ Z. Fiser, ಹೆಚ್ಚು ಪರಿಚಿತನಲ್ಲದಿದ್ದರೂ, ಅತ್ಯಂತ ಮಹತ್ವದ ಚೆಕ್ ತತ್ವಶಾಸ್ತ್ರಜ್ಞ , ಅವನು “ಪ್ರಕ್ರಿಯೆ” ಯ ಕುರಿತಾದ ಬೌದ್ಧ ಪರಿಕಲ್ಪನೆಯನ್ನ, ನೈಜ ಮಾರ್ಕ್ಸಿಯನ್ (Marxian) ಫಿಲಾಸೊಫಿಗೆ ಹೋಲಿಕೆ ಮಾಡುತ್ತಾನೆ. ದುರದೃಷ್ಟವಶಾತ್, ಅವನ ವಿಚಾರಗಳನ್ನ ಕೇವಲ ಚೆಕ್ ಭಾಷೆಯಲ್ಲಿ ಪ್ರಕಟವಾಗಿವೆ ಮತ್ತು ಹಾಗಾಗಿ, ಬಹುತೇಕ ಪಾಶ್ಚಿಮಾತ್ಯ ಓದುಗರಿಗೆ ಅಲಭ್ಯವಾಗಿವೆ. ನನಗೆ ಇದು ಗೊತ್ತಾಗಿದ್ದು, ಒಂದು ಖಾಸಗೀ ಅನುವಾದದ ಮೂಲಕ. ]
ಹೊಂದುವಿಕೆ ಮತ್ತು ಬಳಸುವಿಕೆ ( Having & Consuming)
ಅಸ್ತಿತ್ವದ ಎರಡು ಮಹತ್ವದ ಜೀವನ ವಿಧಾನಗಳಾದ Having ಮತ್ತು Being ನ ಕುರಿತಾದ ಕೆಲವು ಸರಳ ಉದಾಹರಣೆಗಳನ್ನು ಚರ್ಚಿಸುವುದಕ್ಕಿಂತ ಮುಂಚೆ, Having ನ ಇನ್ನೊಂದು ಅಭಿವ್ಯಕ್ತಿಯಾದ “ಒಳಗೊಳ್ಳುವಿಕೆಯನ್ನ” (incorporating) ಇಲ್ಲಿ ಪ್ರಸ್ತಾಪಿಸಬೇಕಿದೆ. ಒಂದು ಸಂಗತಿಯನ್ನ ಒಳಗೊಳ್ಳುವುದು, ಉದಾಹರಣೆಗೆ ತಿನ್ನುವುದು ಅಥವಾ ಕುಡಿಯುವುದರ ಮೂಲಕ. ಇದು ಒಂದು ಪುರಾತನ ಸಂಸ್ಕರಣೆಯ ವಿಧಾನ. ತನ್ನ ಬೆಳವಣಿಗೆಯ ಒಂದು ಹಂತದಲ್ಲಿ ಶಿಶು, ತನಗೆ ಬೇಕಾದ ವಸ್ತುವನ್ನ ತನ್ನ ಬಾಯಿಯಲ್ಲಿ ಹಾಕಿಕೊಳ್ಳುವ ಪ್ರಯತ್ನ ಮಾಡುತ್ತದೆ. ಎಲ್ಲಿಯವರೆಗೆ ಶಿಶುವಿನ ದೈಹಿಕ ಬೆಳವಣಿಗೆ, ಅದಕ್ಕೆ ಸಂಗತಿಗಳನ್ನ ಸ್ವಾಧೀನ ಮಾಡಿಕೊಳ್ಳುವ ಬೇರೆ ಬೇರೆ ರೀತಿಗಳನ್ನ ಬಳಸುವುದಕ್ಕೆ ಅವಕಾಶ ನೀಡುವುದಿಲ್ಲವೋ ಅಲ್ಲಿಯವರೆಗೆ ಇದು ಶಿಶುವಿನ, ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳುವ ವಿಧಾನ. “ಒಳಗೊಳ್ಳುವಿಕೆ” ಮತ್ತು “ಸ್ವಾಧೀನಪಡಿಸಿಕೊಳ್ಳುವಿಕೆ” ಗಳ ನಡುವೆ ಇದೇ ರೀತಿಯ ಕನೆಕ್ಷನ್ ನ್ನ ನಾವು ಹಲವಾರು ರೀತಿಯ ನರಭಕ್ಷಕತೆಗಳಲ್ಲಿ ಕಾಣಬಹುದು. ಉದಾಹರಣೆಗೆ, ಮನುಷ್ಯರನ್ನು ತಿನ್ನುವ ಮೂಲಕ, ನಾನು ಆ ಮನುಷ್ಯನ ಸಾಮರ್ಥ್ಯಗಳನ್ನು ಹೊಂದುತ್ತೇನೆ (ಹೀಗೆ ನರಭಕ್ಷಕತೆ, ಗುಲಾಮರನ್ನು ಹೊಂದುವುದರ ಮಾಂತ್ರಿಕ ಸಮಾನಾಂತರವಾಗಬಹುದು) ; ಧೈರ್ಯಶಾಲಿ ವ್ಯಕ್ತಿಗಳ ಹೃದಯವನ್ನು ತಿನ್ನುವುದರಿಂದ, ನಾನು ಅವರ ಧೈರ್ಯವನ್ನ ಹೊಂದುತ್ತೇನೆ ; ಕುಲ ಲಾಂಛನದಲ್ಲಿರುವ ಪ್ರಾಣಿಯನ್ನ ತಿನ್ನುವುದರಿಂದ, ಆ ಪ್ರಾಣಿ ಸಂಕೇತಿಕರಿಸುತ್ತಿರುವ ದಿವ್ಯ ಶಕ್ತಿಗಳನ್ನು ನಾನು ಹೊಂದುತ್ತೇನೆ, ಇತ್ಯಾದಿ.
ಹೌದು, ಬಹುತೇಕ ವಸ್ತುಗಳನ್ನ ಭೌತಿಕವಾಗಿ ಒಳಗೊಳ್ಳಲಿಕ್ಕಾಗುವುದಿಲ್ಲ. (ಒಳಗೊಂಡಷ್ಟವು ಕೂಡ ಹೊರಹಾಕುವಿಕೆಯ ಪ್ರಕ್ರಿಯೆಯಲ್ಲಿ ಮತ್ತೆ ಕಳೆದುಹೋಗಿಬಿಡುತ್ತವೆ.) ಆದರೆ ಸಾಂಕೇತಿಕ, ಮಾಂತ್ರಿಕ ಒಳಗೊಳ್ಳುವಿಕೆ ಸಾಧ್ಯ. ನಾನು ದೇವರ, ತಂದೆಯ, ಅಥವಾ ಪ್ರಾಣಿಯೊಂದರ ಇಮೇಜ್ ನ ಒಳಗೊಂಡಿದ್ದೇನೆ ಎಂದು ನಂಬುವೆನಾದರೆ, ಅದನ್ನ ಕಸಿದುಕೊಳ್ಳುವುದು, ಹೊರಗೆ ಹಾಕುವುದು ಎರಡೂ ಸಾಧ್ಯವಿಲ್ಲ. ನಾನು ಒಂದು ವಸ್ತುವನ್ನ ಸಾಂಕೇತಿಕವಾಗಿ ನುಂಗುತ್ತೇನೆ ಮತ್ತು ನನ್ನೊಳಗೆ ಅದರ ಸಾಂಕೇತಿಕ ಹಾಜರಾತಿಯನ್ನ ನಂಬುತ್ತೇನೆ. ಇದು, ಉದಾಹರಣೆಗೆ, ಫ್ರಾಯ್ಡ್ ತನ್ನ super ego ಪರಿಕಲ್ಪನೆಯನ್ನ ವಿವರಿಸಿದ ರೀತಿ : Super ego ಎಂದರೆ, ಅಪ್ರಜ್ಞಾಪೂರ್ವಕವಾಗಿ ಆವಾಹಿಸಿಕೊಂಡ ತಂದೆಯ ಆಜ್ಞೆಗಳ, ನಿರ್ಬಂಧಗಳ ಒಟ್ಟು ಮೊತ್ತ. ಅಧಿಪತ್ಯ, ವ್ಯವಸ್ಥೆ (institution) , ಐಡಿಯಾ, ಇಮೇಜ್ ಯಾವುದನ್ನಾದರೂ, ಅವು ನಮ್ಮ ಕರುಳಿಗೆ ಶಾಶ್ವತವಾಗಿ ಸಂಬಂಧಿಸಿದಂತೆ ಇದೇ ರೀತಿ ಆವಾಹಿಸಿಕೊಳ್ಳಬಹುದು. ( “ ಆವಾಹನೆ” (introjection) ಮತ್ತು “ಗುರುತಿಸುವಿಕೆ” (identification) ಎರಡನ್ನೂ ಬಹುತೇಕ ಒಂದೇ ಎಂಬಂತೆ ಬಳಸಲಾಗುತ್ತದೆ ಆದರೆ, ಅವು ನಿಜವಾಗಿಯೂ ಒಂದೇ ಪ್ರಕ್ರಿಯೆ ಎಂದು ನಿರ್ಣಯಿಸುವುದು ಕಠಿಣ. ಏನೇ ಆದರೂ, ಅನುಕರಣೆ (imitation) ಮತ್ತು ಅಧೀನತೆಯನ್ನ (subordination) ಕುರಿತು ಮಾತನಾಡುವಾಗ “ಗುರುತಿಸುವಿಕೆಯನ್ನ” ಹಗುರವಾಗಿ ಬಳಕೆ ಮಾಡಬಾರದು.
ದೈಹಿಕ ಬೇಕುಗಳಿಗೆ ಸಂಬಂಧಿಸದ ಇನ್ನೂ ಹಲವಾರು ರೀತಿಯ ಒಳಗೊಳ್ಳುವಿಕೆಗಳಿವೆ ಆದ್ದರಿಂದ ಅವುಗಳ ಸಂಖ್ಯೆಗೆ ಮಿತಿಯಿಲ್ಲ. ಭೋಗ, ಬಳಕೆ(consumerism) ಯಲ್ಲಿರುವ ಅಂತರ್ಗತ ಮನೋವೃತ್ತಿ, ಮನುಷ್ಯರ ಇಡಿ ಜಗತ್ತನ್ನು ನುಂಗಬಯಸುವ ಬಯಕೆ. ಗ್ರಾಹಕ, ಬಾಟಲಿಯನ್ನು ಹೀರಲು ಸದಾ ಚಡಪಡಿಸುತ್ತಲೇ ಇರುವ ಶಿಶು ಕಂದನ ಹಾಗೆ. ಇದು ಖಂಡಿತವಾಗಿ ಮದ್ಯಪಾನ ಮತ್ತು ಮಾದಕ ದೃವ್ಯಗಳ ವ್ಯಸನದಂಥ ರೋಗಕಾರಕ (pathological) ವಿದ್ಯಮಾನ. ಇವುಗಳ ಪರಿಣಾಮಗಳು, ವ್ಯಸನಿ ವ್ಯಕ್ತಿಯ ಸಾಮಾಜಿಕ ನಿಬಂಧನೆಗಳ ಜೊತೆ ಹಸ್ತಕ್ಷೇಪ ಮಾಡುವುದರಿಂದ ನಾವು, ಈ ಎರಡನ್ನೂ ಪ್ರತ್ಯೇಕಗೊಳಿಸಿ ನೋಡುತ್ತೇವೆ. ನಾವು ತೀವ್ರ ಸ್ಮೋಕಿಂಗ್ ವ್ಯಸನವನ್ನ ಹೀಗೆ ಪ್ರತ್ಯೇಕ ಮಾಡುವುದಿಲ್ಲ ಏಕೆಂದರೆ, ಅದು ಅವರ ಸಾಮಾಜಿಕ ಕ್ರಿಯೆಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ, ಅವರ ಆರೋಗ್ಯ ಮತ್ತು ಆಯುಷ್ಯಕ್ಕೆ ಹಾನಿ ಉಂಟುಮಾಡುತ್ತದೆ ಎನ್ನುವುದು ನಿಜವಾದರೂ.
ಮುಂದಿನ ಅಧ್ಯಾಯಗಳಲ್ಲಿ ದಿನನಿತ್ಯದ ಕಂಸ್ಯೂಮರಿಸಂ ನ ಬೇರೆ ಬೇರೆ ರೂಪಗಳ ಬಗ್ಗೆ ಗಮನ ನೀಡಲಾಗಿದೆ. ಇಲ್ಲಿ ನಾನು ಇಷ್ಟು ಮಾತ್ರ ಹೇಳಬಯಸುತ್ತೇನೆ, ಪುರಸೊತ್ತಿನ ಸಮಯಕ್ಕೆ ಸಂಬಂಧಿಸಿದಂತೆ, ಅಟೋಮೊಬೈಲ್ ಗಳು, ಟೆಲಿವಿಜನ್, ಪ್ರಯಾಣ, ಮತ್ತು ಸೆಕ್ಸ್ ಇವು ಈ ಹೊತ್ತಿನ ದಿನನಿತ್ಯದ ಕಂಸ್ಯೂಮರಿಸಂ ನ ಆಬ್ಜೆಕ್ಟ್ ಗಳು. ಇವನ್ನು ಪುರಸೊತ್ತಿನ ಕ್ರಿಯೆಗಳು ಎಂದು ನಾವು ವಿವರಿಸುತ್ತಿದ್ದೇವೆಯಾದರೂ, ಇವನ್ನು ಪುರಸೊತ್ತಿನ ನಿಷ್ಕ್ರಿಯತೆಗಳು ಎಂದು ಕರೆದರೆ ಒಳ್ಳೆಯದು.
ಕೊನೆಗೆ ಈ ಎಲ್ಲವನ್ನೂ ಸಂಕ್ಷೇಪಿಸುವುದಾದರೆ, ಬಳಸುವುದು ಎಂದರೆ ಒಂದು ಬಗೆಯ ಹೊಂದುವುದು, ಬಹುಶಃ, ಇವತ್ತಿನ ಶ್ರೀಮಂತ ಕೈಗಾರಿಕಾ ಸಮಾಜಕ್ಕೆ ಬಹಳ ಮುಖ್ಯವಾದದ್ದು. ಬಳಸುವುದು ಎನ್ನುವುದಕ್ಕೆ ಹಲವು ಅಸ್ಪಷ್ಟ ಗುಣ ಲಕ್ಷಣಗಳಿವೆ : ಇದು ಆತಂಕವನ್ನು ನಿವಾರಿಸುತ್ತದೆ ಎನ್ನುವುದು, ಏಕೆಂದರೆ ಹೊಂದಿರುವುದನ್ನ ಕಸಿದುಕೊಳ್ಳಲಾಗದು ಎನ್ನುವ ತಿಳುವಳಿಕೆ; ಆದರೆ, ಇದು ಮತ್ತೆ ಮತ್ತೆ ಬಳಕೆಯನ್ನು ಅಪೇಕ್ಷಿಸುತ್ತದೆ ಏಕೆಂದರೆ, ಹಿಂದೆ ಬಳಸಿರುವುದು ಬಹು ಬೇಗ ತನ್ನ ತೃಪ್ತ ಭಾವವನ್ನ ಕಳೆದುಕೊಳ್ಳುತ್ತದೆ. ಆಧುನಿಕ ಗ್ರಾಹಕರು ತಮ್ಮನ್ನು ತಾವು ಈ ಫಾರ್ಮುಲಾದ ಜೊತೆ ಗುರುತಿಸಿಕೊಳ್ಳಬಹುದು : ನಾನು = ನಾನು ಹೊಂದಿರುವುದು ಮತ್ತು ನಾನು ಬಳಕೆ ಮಾಡುವುದು ( I am = What I have & what I consume).
*********** ಮುಂದುವರೆಯುತ್ತದೆ************
1 Comment