ಈ ಕ್ಷಣದಲ್ಲಿ ಮಾತ್ರ… : ಓಶೋ ವ್ಯಾಖ್ಯಾನ

ಸತ್ಯ ಇರುವುದು ಇಷ್ಟೇ, ನೀನು ಇರುವುದು “ಈಗ” ಈ ಕ್ಷಣದಲ್ಲಿ ಮಾತ್ರ. ಆ ಕ್ಷಣದ ಬದುಕು ಮಾತ್ರ ಸತ್ಯ. Your existence ನಿನ್ನೆಯದಲ್ಲ, ನಾಳೆಯದಲ್ಲ, ಈಗಿನದು, ಈ ಕ್ಷಣದ್ದು, now here. ನೀನು ಇರುವುದು ಜಗತ್ತಿನಲ್ಲಿ, ಜಗತ್ತು ಇರುವುದು ನಿನ್ನಲ್ಲಿ… ~ ಓಶೋ | ಕನ್ನಡ ನಿರೂಪಣೆ: ಚಿದಂಬರ ನರೇಂದ್ರ

ಈ ಜಗತ್ತಿನಲ್ಲಿ
ನಮ್ಮ ವಿಕಾಸಕ್ಕೆ ಕಾರಣವಾಗಿರುವುದು
ನಮ್ಮ ನಡುವೆ ಇರುವ ಸಮಾನತೆಗಳಲ್ಲ,
ಸಮಾನ ಹೋಲಿಕೆಗಳಲ್ಲ,
ಬದಲಾಗಿ
ನಮ್ಮನ್ನು ಕೈ ಹಿಡಿದು ಮುನ್ನಡೆಸುತ್ತಿರುವುದು
ನಮ್ಮ ನಡುವಿನ ವೈರುಧ್ಯಗಳು.

ಬ್ರಹ್ಮಾಂಡದ ಎಲ್ಲ ವೈರುಧ್ಯಗಳು
ಪ್ರತಿಯೊಬ್ಬರಲ್ಲೂ ಜಾಗ ಮಾಡಿಕೊಂಡಿವೆ.
ಪ್ರತೀ ಆಸ್ತಿಕನೂ ತನ್ನೊಳಗಿರುವ
ನಾಸ್ತಿಕನನ್ನು ಭೇಟಿ ಮಾಡಬೇಕು
ಮತ್ತು, ಪ್ರತೀ ನಾಸ್ತಿಕನೂ
ತನ್ನೂಳಗಿನ ಮೂಕ ಆಸ್ತಿಕನನ್ನು ಮುಟ್ಟಿ ಮಾತನಾಡಿಸಬೇಕು.

ಮನುಷ್ಯ
ತನ್ನ ಪರಿಪೂರ್ಣ ಸ್ಥಿತಿ ಮುಟ್ಟುವ ತನಕ
ನಂಬಿಕೆ ಕೇವಲ
ತನ್ನ ಬದ್ಧವೈರಿಯಂತೆ ಕಾಣಿಸುವ
ಅಪನಂಬಿಕೆಯನ್ನು ಉದ್ದೀಪಿಸುವ
ನಿಧಾನ ಪ್ರಕ್ರಿಯೆ ಮಾತ್ರ.

~ ಶಮ್ಸ್ ತಬ್ರೀಝಿ


ಸ್ವಾಮಿ ರಾಮತೀರ್ಥರು ಒಂದು ದೃಷ್ಟಾಂತ ಕಥೆ ಹೇಳುತ್ತಿದ್ದರು……

ಒಂದು ಊರಿನಲ್ಲಿ ಒಬ್ಬ ಮಹಾ ನಾಸ್ತಿಕನಿದ್ದ. ಅವನು ತನ ಮನೆಯ ಪಡಸಾಲೆಯಲ್ಲಿ ಒಂದು ದೊಡ್ಡ ಬೋರ್ಡ್ ಬರೆಯಿಸಿ ತೂಗು ಹಾಕಿದ್ದ, “ God is nowhere “.

ಒಂದು ದಿನ ನಾಸ್ತಿಕ ಪೇಪರ್ ಓದುತ್ತ ಕುಳಿತಿದ್ದಾಗ ಅವನ ಐದು ವರ್ಷದ ಪುಟ್ಟ ಮಗು ಬೋರ್ಡ್ ಮೇಲೆ ಬರೆಯಲಾಗಿದ್ದ God is nowhere ವಾಕ್ಯವನ್ನು ಓದುವ ಪ್ರಯತ್ನ ಮಾಡುತ್ತಿತ್ತು. ಮಗುವಿಗೆ Nowhere ಎನ್ನುವ ಪದ ತುಂಬ ದೊಡ್ಡದು ಅನ್ನಿಸಿ, ಅದು ಆ ಪದ ತುಂಡು ಮಾಡಿ ಓದಲು ಶುರು ಮಾಡಿತು. ಕೊನೆಗೆ ಮಗು ಆ ಬೋರ್ಡ ಬರಹವನ್ನ ಓದಿದ್ದು God is now here ಎಂದು.

ಮಗು ಆ ಬೋರ್ಡ್ ಮೇಲಿನ ಬರಹವನ್ನ God is now here ಎಂದು ಓದಿದ್ದನ್ನು ಕೇಳಿ ನಾಸ್ತಿಕ ತಂದೆಗೆ ಶಾಕ್ ಆಯಿತು. ಅವನು ಎಂದೂ ಆ ಬರಹವನ್ನು ಹಾಗೆ ಓದಿರಲಿಲ್ಲ. ಮಗುವಿನ ಓದು ಅಪ್ಪನ ಇಡೀ ಪರಿಕಲ್ಪನೆಯನ್ನೇ ಬದಲಾಯಿಸಿತು. ಅವನು ತಿಳಿದುಕೊಂಡಿದ್ದು ಮತ್ತು ಬರೆಯಿಸಿದ್ದು, “ God is nowhere” ಆದರೆ ಪೂರ್ವಾಗ್ರಹ ಇಲ್ಲದ ಆ ಮಗು ಓದಿದ್ದು “ God is now here”.

Nowhere ಮತ್ತು Now here ಗಳ ನಡುವೆ ಇರುವುದು ಸಾಮಾನ್ಯ ವ್ಯತ್ಯಾಸ ಅಲ್ಲ, ಅದು ಒಂದು ಮಹಾ ವ್ಯತ್ಯಾಸ. ಮುಂದೆ ಅಪ್ಪನಿಗೆ ಆ ಬರಹವನ್ನು God is nowhere ಎಂದು ಓದುವುದು ಸಾಧ್ಯವಾಗಲೇ ಇಲ್ಲ. ಮಗುವಿನ ಮುಗ್ಧತೆ ಅಪ್ಪನ ನಾಸ್ತಿಕತೆಗೆ ಒಂದು ಸುಂದರ ತಿರುವುಕೊಟ್ಟಿತ್ತು. God is now here ಎನ್ನುವ ಸತ್ಯ ಅಪ್ಪನ ಮನಸ್ಸಿನಲ್ಲಿ ಅಚ್ಚಾಗಿಬಿಟ್ಟಿತ್ತು.

ಸತ್ಯ ಇರುವುದು ಇಷ್ಟೇ, ನೀನು ಇರುವುದು “ಈಗ” ಈ ಕ್ಷಣದಲ್ಲಿ ಮಾತ್ರ. ಆ ಕ್ಷಣದ ಬದುಕು ಮಾತ್ರ ಸತ್ಯ. Your existence ನಿನ್ನೆಯದಲ್ಲ, ನಾಳೆಯದಲ್ಲ, ಈಗಿನದು, ಈ ಕ್ಷಣದ್ದು, now here. ನೀನು ಇರುವುದು ಜಗತ್ತಿನಲ್ಲಿ, ಜಗತ್ತು ಇರುವುದು ನಿನ್ನಲ್ಲಿ.

ಆದ್ದರಿಂದಲೇ ಬೋಧಿಧರ್ಮ ಹೇಳುತ್ತಾನೆ, The Tathagata IS ONE WHO KNOWS THAT HE COMES FROM NOWHERE AND GOES NOWHERE.

ಒಮ್ಮೆ ಒಬ್ಬ ಹುಡುಗ ದೀಪ ಹಿಡಿದುಕೊಂಡು ಬರುತ್ತಿರುವುದನ್ನು ನೋಡಿ ಹಸನ್ ಬಸ್ರಿ ಆ ಹುಡುಗನನ್ನು ಪ್ರಶ್ನೆ ಮಾಡಿದ. “ಈ ದೀಪ ಎಲ್ಲಿಂದ ತಂದೆ? “ ಹುಡುಗ ಕೂಡಲೇ ದೀಪ ಆರಿಸಿ ಉತ್ತರಿಸಿದ. “ ಹಸನ್, ಮೊದಲು ದೀಪ ಎಲ್ಲಿ ಹೋಯಿತು ಹೇಳು, ಆಮೇಲೆ ನಾನು ಹೇಳುತ್ತೇನೆ, ದೀಪ ಎಲ್ಲಿಂದ ಬಂತು ಅಂತ “

1 Comment

  1. ಈ ಸತ್ವಭರಿತ ಲೇಖನಗಳನ್ನು ಒದಗಿಸುತ್ತಿರುವ ನಿಮಗೆ ಹಾಗು ಅರಳಿಮರ ತಂಡಕ್ಕೆ ಧನ್ಯವಾದಗಳು

Leave a Reply