ಚಿಂತಕರ ಕಣ್ಣಲ್ಲಿ ಕ್ರಿಯಾತ್ಮಕತೆ ಮತ್ತು ನಿಷ್ಕ್ರಿಯಾತ್ಮಕತೆ : To have or to be #41

(ಮುಂದುವರೆದ ಭಾಗ ೧) |ಮೂಲ: ಎರಿಕ್ ಫ್ರಾಮ್; ಕನ್ನಡಕ್ಕೆ: ಚಿದಂಬರ ನರೇಂದ್ರಹಿಂದಿನ ಭಾಗ ಇಲ್ಲಿ ಓದಿ: https://aralimara.com/2023/07/16/fromm-37/

ತನ್ನ Ethics ನಲ್ಲಿ Spinoza ಕ್ರಿಯಾತ್ಮಕತೆ ಮತ್ತು ನಿಷ್ಕ್ಕಿಯಾತ್ಮಕತೆಗಳ (to act & to suffer) ನಡುವೆ ಭೇಧ ಮಾಡುತ್ತ ಅವುಗಳನ್ನ ಮೈಂಡ್ ನ ಕಾರ್ಯಾಚರಣೆಯ ಎರಡು ಮೂಲಭೂತ ಅಂಶಗಳು ಎಂದು ಗುರುತಿಸುತ್ತಾನೆ. Acting ಕುರಿತಾಗಿ ಇರುವ ಮೊದಲ ಮಾನದಂಡ ಏನೆಂದರೆ ಕ್ರಿಯೆ (action) ಮನುಷ್ಯ ಸ್ವಭಾವವನ್ನು ಹಿಂಬಾಲಿಸುತ್ತದೆ : “ ಏನಾದರೂ ಆಗಿದೆ ಎಂದಾಗ ಮಾತ್ರ, ನಾವು act ಮಾಡಿದ್ದೇವೆ ಎಂದು ನಾನು ಹೇಳುತ್ತೇನೆ, ಆಗಿರುವುದು ನಮ್ಮೊಳಗೆ ಇರಬಹುದು ಅಥವಾ ನಮ್ಮ ಹೊರತಾಗಿ ಇರಬಹುದು, ಆದರೆ ನಾವು ಈ ಆಗಿರುವುದಕ್ಕೆ ಅವಶ್ಯಕ ಕಾರಣವಾಗಿರಬೇಕು. ಹಾಗೆಂದರೆ, ಯಾವಾಗ ನಮ್ಮ ಸ್ವಭಾವದ ಕಾರಣವಾಗಿ ಏನಾದರೂ ಸಂಭವಿಸುತ್ತದೆಯಾದರೆ, ಅದು ನಮ್ಮೊಳಗೆ ಇರಬಹುದು ಅಥವಾ ನಮ್ಮ ಹೊರತಾಗಿ ಇರಬಹುದು, ಅದನ್ನ ಕೇವಲ ನಮ್ಮ ಸ್ವಭಾವ ಕಾರಣವಾಗಿ ಸ್ಪಷ್ಟವಾಗಿ , ವಿಶಿಷ್ಟವಾಗಿ ತಿಳಿದುಕೊಳ್ಳುಬಹುದಾಗಿರಬೇಕು. ಇನ್ನೊಂದು ಬದಿಯಲ್ಲಿ ನಾವು suffer ( i.e in Spinoza’s sense, are passive) ಆಗುತ್ತಿದ್ದೇವೆ ಎಂದು ನಾನು ಹೇಳುತ್ತಿದ್ದೇನಾದರೆ, ಏನೋ ಒಂದು ಆಗಿದೆ, ಅದು ನಮ್ಮೊಳಗಿರಬಹುದು ಅಥವಾ ನಮ್ಮ ಹೊರತಾಗಿ ನಮ್ಮ ಸ್ವಭಾವದ ಕಾರಣವಾಗಿ, ಪೂರ್ಣ ಅಲ್ಲವಾದರೂ ಭಾಗಶಃ ಕಾರಣವಾಗಿ”( Ethics, 3, def.2).

ಮನುಷ್ಯ ಸ್ವಭಾವ (human nature) ಎನ್ನುವ ಪದ, ಪ್ರದರ್ಶಿಸಬಹುದಾದ ಪ್ರಾಯೋಗಿಕ ಸಾಕ್ಷಿಗಳಿಗೆ ( demonstrable empirical data) ಸರಿ ಹೊಂದುವುದಿಲ್ಲ ಎನ್ನುವ ವಿಚಾರದಿಂದ ಪ್ರಭಾವಿತರಾಗಿರುವ ಆಧುನಿಕ ಓದುಗರಿಗೆ ಮೇಲಿನ Spinoza ನ ವಾಕ್ಯಗಳು ಕಠಿಣ ಅನಿಸುತ್ತವೆ. ಆದರೆ ಸ್ಪಿನೋಜ ಮತ್ತು ಆರಿಸ್ಟಾಟಲ್ ನಂಥವರಿಗೆ ಹಾಗಲ್ಲ; ಕೆಲವು ಸಮಾಕಾಲೀನ ನ್ಯೂರೋ ಫಿಸಿಯಾಲೊಜಿಸ್ಟ್ ಗಳಿಗೆ, ಜೀವಶಾಸ್ತ್ರಜ್ಞರಿಗೆ, ಮನಶಾಸ್ತ್ರಜ್ಞರಿಗೆ ಕೂಡ. ಹೇಗೆ ಕುದುರೆಯ ಸ್ವಭಾವ ಕುದುರೆಯ ವಿಶಿಷ್ಟತೆಯೋ ಹಾಗೆಯೇ ಮನುಷ್ಯ ಸ್ವಭಾವ, ಮಾನವ ಜನಾಂಗದ ಗುಣಲಕ್ಷಣ ಎಂದು ಸ್ಪಿನೊಜ ನಂಬುತ್ತಾನೆ, ಮುಂದುವರೆದು…… ಒಳ್ಳೆಯತನ ಅಥವಾ ಕೆಟ್ಟತನ, ವಿಫಲತೆ ಅಥವಾ ಸಫಲತೆ, ಆರೋಗ್ಯ ಪೂರ್ಣತೆ (well-being) ಅಥವಾ ನೋವು, ಕ್ರಿಯಾತ್ಮಕತೆ ಅಥವಾ ನಿಷ್ಕ್ರಿಯಾತ್ಮಕತೆ ಮುಂತಾದವು ಮನುಷ್ಯರು ತಮ್ಮ ತಮ್ಮ ಸ್ವಭಾವದ ಪರಿಪೂರ್ಣ ಬೆಳವಣಿಗೆಯಲ್ಲಿ ಸಾಧಿಸಿದ ಸಫಲತೆಯ ಮಟ್ಟವನ್ನು ಅವಲಂಬಿಸಿವೆ. ತಮ್ಮ ತಮ್ಮ ಜಾತಿಯ ಸ್ವಭಾವದ ( invade of people, human nature) ಪರಿಪೂರ್ಣತೆಯನ್ನ ಸಾಧಿಸಿಕೊಳ್ಳುವುದು ಬದುಕಿನ ಉದ್ದೇಶ; ನಾವು ಈ ಆದರ್ಶ ಮಾನವ ಸ್ವಭಾವಕ್ಕೆ ಎಷ್ಟು ಹತ್ತಿರ ಬರುತ್ತೇವೆಯೋ ಅಷ್ಟು ಹೆಚ್ಚು ಆರೋಗ್ಯಪೂರ್ಣ ಬದುಕನ್ನ, ಹೆಚ್ಚು ಸ್ವಾತಂತ್ರ್ಯವನ್ನ ಸಾಧಿಸಿಕೊಳ್ಳುತ್ತೇವೆ.

ಸ್ಪಿನೋಜ್ ನ ಮಾದರಿಯ ಮನುಷ್ಯ ಜೀವಿಗಳಲ್ಲಿ ಕ್ರಿಯಾತ್ಮಕತೆಯ ಗುಣಲಕ್ಷಣ ಇನ್ನೊಂದರಿಂದ ಬೇರ್ಪಡಿಸಲಾರದಂಥದು. ಎಲ್ಲಿಯವರೆಗೆ ನಾವು ನಮ್ಮ ಅಸ್ತಿತ್ವದ ಸ್ಥಿತಿಗಳಿಗೆ ಬದ್ಧರಾಗಿ ಕಾರ್ಯನಿರ್ವಹಿಸುತ್ತೇವೆಯೋ , ಮತ್ತು ಈ ಪರಿಸ್ಥಿತಿಗಳು ವಾಸ್ತವಿಕ ಮತ್ತು ಅವಶ್ಯಕವಾದವು ಎನ್ನುವ ಅರಿವನ್ನು ಹೊಂದಿರುತ್ತೇವೆಯೋ ಅಲ್ಲಿಯವರೆಗೆ ನಮಗೆ ನಮ್ಮ ಸತ್ಯ ಗೊತ್ತಿರುತ್ತದೆ. “ ನಮ್ಮ ಮೈಂಡ್ ಕೆಲ ಕಾಲ ಕ್ರಿಯಾಶೀಲವಾಗಿದ್ದರೆ ಕೆಲವು ಕಾಲ ಸಫರ್ ಮಾಡುತ್ತದೆ : ಎಲ್ಲಿಯವರೆಗೆ ಅದರ ಬಳಿ ಐಡಿಯಾಗಳಿವೆಯೋ ಅಲ್ಲಿಯವರೆಗೆ ಅದು ಕ್ರಿಯೆಯಲ್ಲಿ ತೊಡಗಿಸಿಕೊಂಡಿರುತ್ತದೆ ಮತ್ತು ಯಾವಾಗ ಅದು ಐಡಿಯಾಗಳ ಕೊರತೆಯನ್ನು ಅನುಭವಿಸುತ್ತದೆಯೋ ಆಗ ಸಫರ್ ಮಾಡುತ್ತದೆ.” (Ethics, 3 prop. 1).

ಬಯಕೆಗಳನ್ನ ಕ್ರಿಯಾತ್ಮಕ ಮತ್ತು ನಿಷ್ಕ್ರಿಯಾತ್ಮಕ ಎಂದು ಭಾಗ ಮಾಡಲಾಗಿದೆ. ಕ್ರಿಯಾತ್ಮಕ ಬಯಕೆಗಳ ಮೂಲ ಇರುವುದು ನಮ್ಮ ಅಸ್ತಿತ್ವದಲ್ಲಿ ( ಇದು ಸಹಜ ಮತ್ತು ರೋಗ ಕಾರಣವಾಗಿ ವಿರೂಪಗೊಂಡದ್ದಲ್ಲ), ಮತ್ತು ನಿಷ್ಕ್ರಿಯಾತ್ಮಕ ಬಯಕೆಗಳು ಸೃಷ್ಟಿಯಾಗಿರುವುದು ಒಳಗಿನ ಮತ್ತು ಹೊರಗಿನ ವಿರೂಪಗೊಂಡ ಪರಿಸ್ಥಿತಿಗಳಿಂದಾಗಿ. ಕ್ರಿಯಾತ್ಮಕ ಬಯಕೆಗಳು ನಾವು ಸ್ವತಂತ್ರರಾಗಿರುವುದರವರೆಗೆ ಮಾತ್ರ ಸಾಧ್ಯ, ನಿಷ್ಕ್ರಿಯಾತ್ಮಕ ಬಯಕೆಗಳು ಉದ್ಭವವಾಗಿರುವುದು ಒಳಗಿನ ಮತ್ತು ಹೊರಗಿನ ಒತ್ತಡಗಳ ಕಾರಣವಾಗಿ. ಎಲ್ಲ “ಕ್ರಿಯಾತ್ಮಕ ಪರಿಣಾಮಗಳು” ಅವಶ್ಯಕವಾಗಿ ಒಳ್ಳೆಯವು : “ಉತ್ಕಟತೆಗಳು” (passions) ಒಳ್ಳೆಯವೂ ಆಗಿರಬಹುದು ಅಥವಾ ಕೆಟ್ಟವು ಕೂಡ. ಸ್ಪಿನೋಜನ ಪ್ರಕಾರ, ಕ್ರಿಯಾತ್ಮಕತೆ, ವಿವೇಕ, ಸ್ವಾತಂತ್ರ್ಯ, ಸೌಖ್ಯ, ಖುಶಿ ಮತ್ತು ಸ್ವಯಂ ಪರಿಪೂರ್ಣತೆ ಮುಂತಾದವು ಒಂದರಿಂದ ಇನ್ನೊಂದನ್ನು ಬೇರ್ಪಡಿಸಲಾಗದಂತೆ ಕನೆಕ್ಟ್ ಆಗಿರುವಂಥವು ಥೇಟ್ ನಿಷ್ಕ್ರಿಯಾತ್ಮಕತೆ , ತರ್ಕರಹಿತತೆ, ದಾಸ್ಯ, ದುಗುಡ, ಸಾಮರ್ಥ್ಯಹೀನತೆ, ಮತ್ತು ಹೆಣಗಾಟ ಒಂದಕ್ಕೊಂದು ಕನೆಕ್ಟ್ ಆಗಿರುವಂತೆ ( Ethics, 4, app. 2,3,5; props. 40, 42).

ಸ್ಪಿನೊಜ್ ನ ಕೊನೆಯ ಮತ್ತು ಅತ್ಯಂತ ಆಧುನಿಕ ವಿಚಾರ, ತರ್ಕರಹಿತ ಉತ್ಕಟತೆಗಳಿಂದ ಉದ್ದೀಪನಗೊಳ್ಳುವುದೆಂದರೆ ಮಾನಸಿಕವಾಗಿ ರೋಗಿಯಾಗುವಂತೆ ಎನ್ನುವುದನ್ನ ಅರ್ಥ ಮಾಡಿಕೊಂಡರೆ ಮಾತ್ರ, ಅವನ ಉತ್ಕಟತೆ ಮತ್ತು ನಿಷ್ಕ್ರಿಯಾತ್ಮಕತೆಯ ಐಡಿಯಾಗಳನ್ನು ನಾವು ಅರ್ಥಮಾಡಿಕೊಳ್ಳಬಹುದು. ಎಷ್ಟು ಪರಿಪೂರ್ಣ ಬೆಳವಣಿಗೆಯ ಮಟ್ಟವನ್ನು ಸಾಧಿಸುತ್ತೇವೆಯೋ ಅಷ್ಟರಮಟ್ಚಿಗೆ ನಾವು ಸ್ವತಂತ್ರರು, ಸಾಮರ್ಥ್ಯಶಾಲಿಗಳು, ತರ್ಕಬದ್ಧರು, ಖುಶಿಯ ಮನುಷ್ಯರು ಹಾಗು ಮಾನಸಿಕವಾಗಿ ಆರೋಗ್ಯಪೂರ್ಣರು. ಈ ಪರಿಪೂರ್ಣ ಬೆಳವಣಿಗೆ ಮಟ್ಟವನ್ನು ಮುಟ್ಟಲು ಎಷ್ಟು ವಿಫಲರಾಗುತ್ತೇವೆಯೋ ಅಷ್ಟು ನಾವು ಬಂಧಿತರು, ಅಸಮರ್ಥರು, ತರ್ಕರಹಿತರು ಮತ್ತು ಖಿನ್ನತೆಗೆ ಒಳಗಾದವರು.ನನ್ನ ಪ್ರಕಾರ, ಮಾನಸಿಕ ಆರೋಗ್ಯ ಮತ್ತು ಕಾಯಿಲೆ ನಮ್ಮ ಸರಿಯಾದ ಅಥವಾ ತಪ್ಪು ಬದುಕಿನ ಬದುಕಿನ ಪರಿಣಾಮಗಳು ಎಂದು ಮೊದಲ ಬಾರಿ ಪ್ರತಿಪಾದಿಸಿದ ಆಧುನಿಕ ಚಿಂತಕ ಸ್ಪಿನೊಜ.

ತನ್ನ ವಿಶ್ಲೇಷಣೆಯಲ್ಲಿ ಕೊನೆಯದಾಗಿ ಸ್ಪಿನೊಜ್ ಪ್ರತಿಪಾದಿಸಿದ್ದು ಏನೆಂದರೆ ಆರೋಗ್ಯಪೂರ್ಣ ಮಾನಸಿಕತೆ, ಸರಿಯಾಗಿ ಬದುಕಿದ ಬದುಕಿನ ಅಭಿವ್ಯಕ್ತಿಯಾದರೆ, ಮಾನಸಿಕ ಕಾಯಿಲೆ ಮಾನವ ಪ್ರಕೃತಿಯ ಅವಶ್ಯಕತೆಗಳಿಗೆ ಅನುಗುಣವಾಗಿ ನಡೆಯಲು ವಿಫಲವಾದ ಜನರ ಪ್ರಮುಖ ಲಕ್ಷಣ. “ಆದರೆ ದುರಾಸೆಯ ಮನುಷ್ಯರು ಕೇವಲ ಹಣ ಮತ್ತು ಸ್ವಾಧೀನಪಡಿಸಿಕೊಳ್ಳುವಿಕೆಯ ಬಗ್ಗೆ ಯೋಚಿಸಿತ್ತಾರೆಂದರೆ ಹಾಗು ಮಹತ್ವಾಕಾಂಕ್ಷೆಯ ಜನರು ಕೇವಲ ತಮ್ಮ ಪ್ರಸಿದ್ಧಿಯ ಬಗ್ಗೆ ಯೋಚಿಸುತ್ತಾರೆಂದರೆ ಅವರನ್ನ ಹುಚ್ಚರು ಎಂದು ಗುರುತಿಸಲಾಗುವುದಿಲ್ಲ ಬದಲಾಗಿ ಅವರನ್ನ ಕಿರಿಕಿರಿಯ ಜನರು ಎಂದು ಗುರುತಿಸಬಹುದು ; ಸಾಮಾನ್ಯವಾಗಿ ಇಂಥವರ ಬಗ್ಗೆ ಜನರಲ್ಲಿ ತಿರಸ್ಕಾರ ಭಾವ ಇರುತ್ತದೆ. ಆದರೆ ವಾಸ್ತವದಲ್ಲಿ ದುರಾಸೆ, ಮಹಾತ್ವಾಕಾಂಕ್ಷೆ ಮುಂತಾದವು ಹುಚ್ಚುತನದ ಬೇರೆ ಬೇರೆ ರೂಪಗಳು, ಆದರೂ ಜನ ಇವನ್ನೆಲ್ಲ ರೋಗ ಲಕ್ಷಣಗಳು ಎಂದು ಗುರುತಿಸುವುದಿಲ್ಲ ( Ethics, 4, prop. 44). ಈ ಹೇಳಿಕೆಯಲ್ಲಿ ಸ್ಪಿನೊಜ ನಮ್ಮ ಕಾಲದ ಆಲೋಚನೆಗಳಿಗೆ ಎಷ್ಟು ಅನ್ಯನಾಗಿದ್ದಾನೆ ಎಂದರೆ ಸ್ಪಿನೋಜ, ಮನುಷ್ಯ ಪ್ರಕೃತಿಯ ಅವಶ್ಯಕತೆಗಳ ಜೊತೆ ತಾಳೆ ಆಗದ ಉತ್ಕಟತೆಗಳನ್ನ ರೋಗ ರೋಗಕಾರಕಗಳು (pathological) ಎಂದು ಗುರುತಿಸುತ್ತಾನೆ ; ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಇಂಥವನ್ನೆಲ್ಲ ಅವನು ಹುಚ್ಚುತನ ಎಂದು ಹೇಳುತ್ತಾನೆ.

1 Comment

Leave a Reply