ಚಿಂತಕರ ಕಣ್ಣಲ್ಲಿ ಕ್ರಿಯಾತ್ಮಕತೆ ಮತ್ತು ನಿಷ್ಕ್ರಿಯಾತ್ಮಕತೆ #2 : To have or to be #42

(ಮುಂದುವರೆದ ಭಾಗ ೨ ) |ಮೂಲ: ಎರಿಕ್ ಫ್ರಾಮ್; ಕನ್ನಡಕ್ಕೆ: ಚಿದಂಬರ ನರೇಂದ್ರಹಿಂದಿನ ಭಾಗ ಇಲ್ಲಿ ಓದಿ: https://aralimara.com/2023/07/22/fromm-38/

ಕ್ರಿಯಾತ್ಮಕತೆ ಮತ್ತು ನಿಷ್ಕ್ರಿಯಾತ್ಮಕತೆಯ ಕುರಿತಾದ ಸ್ಪಿನೊಜ್ ನ ಪರಿಕಲ್ಪನೆಗಳು, ಅವನು ಕೈಗಾರಿಕಾ ಸಮಾಜದ ಮೇಲೆ ಮಾಡಿದ ಕ್ರಾಂತಿಕಾರಕ ಟೀಕೆಗಳು. ಇಂದಿನ ನಂಬಿಕೆಗಳಿಗೆ ವಿರುದ್ಧವಾಗಿ, ಹಣದ ದುರಾಸೆ, ಸ್ವಾಧಿನತೆಯ ಹಪಹಪಿ, ಅಥವಾ ಪ್ರಸಿದ್ಧಿಯ ಬಯಕೆ ಮುಂತಾದವುಗಳಿಂದ ಪ್ರೇರಿತರಾಗುವ ಜನರನ್ನ, ಯಾರನ್ನ ನಾವು ನಾರ್ಮಲ್ ಮತ್ತು well adjusted ಎಂದು ಗುರುತಿಸುತ್ತೇವೆಯೋ ಅಂಥವರನ್ನು ಅವನು ತೀವ್ರ ನಿಷ್ಕ್ರೀಯರು ಮತ್ತು ಮೂಲಭೂತವಾಗಿ ಕಾಯಿಲೆಯ ಜನ ಎಂದು ಹೇಳುತ್ತಾನೆ. ಸ್ಪಿನೋಜ್ ನ ಪ್ರಕಾರದ ಕ್ರಿಯಾಶೀಲ ಜನ (ಯಾವುದನ್ನ ಅವನು ತನ್ನ ಬದುಕಿನಲ್ಲಿ ಬದುಕಿ ತೋರಿಸಿದನೋ) ಈಗ ಅಪವಾದವಾಗಿದ್ದಾರೆ ಮತ್ತು ಜನ ಇಂಥವರನ್ನು ಒಂದು ಬಗೆಯ ಮಾನಸಿಕ ರೋಗಿಗಳು (neurotic) ಎಂದು ಗುರುತಿಸುತ್ತಾರೆ ಏಕೆಂದರೆ, ಅವರು ನಾವು ಯಾವುದನ್ನ ನಾರ್ಮಲ್ ಆ್ಯಕ್ಟಿವಿಟಿ ಎನ್ನುತೇವೆಯೋ ಅಂಥವುಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಹೆಣಗಾಡುತ್ತಿರುತ್ತಾರೆ.

ಮಾರ್ಕ್ಸ್ ತನ್ನ The Economic & Philosophical Manuscripts ನಲ್ಲಿ ಬರೆದಿರುವ ಪ್ರಕಾರ, “ಮುಕ್ತ ಪ್ರಜ್ಞಾಪೂರ್ವಕ ಕ್ರಿಯಾತ್ಮಕತೆ” ಮನುಷ್ಯನ ಜಾತಿ ಗುಣಲಕ್ಷಣ. ಮಾರ್ಕ್ಸ್ ಗೆ ಶ್ರಮ, ಮನುಷ್ಯ ಕ್ರಿಯಾತ್ಮಕತೆಯನ್ನು ಸೂಚಿಸುತ್ತದೆ ಮತ್ತು ಮನುಷ್ಯ ಕ್ರಿಯಾತ್ಮಕತೆ ಎಂದರೆ ಬದುಕು. ಬಂಡವಾಳ ಎನ್ನುವುದು ಮಾರ್ಕ್ಸ್ ಗೆ ಕ್ರೂಢೀಕೃತ, ಹಿಂದಿನದು ( a past), ಮತ್ತು ಕೊನೆಯದಾಗಿ ಒಂದು ನಿರ್ಜೀವ ಸಂಗತಿ (Grundrisse). ಬಂಡವಾಳ ಮತ್ತು ಶ್ರಮದ ನಡುವಿನ ಸಂಘರ್ಷ ಮಾರ್ಕ್ಸ್ ನ ಮೇಲೆ ಉಂಟುಮಾಡಿದ ಪರಿಣಾಮವನ್ನು ಪೂರ್ಣವಾಗಿ ತಿಳಿದುಕೊಳ್ಳುವುದು ನಿಮಗೆ ಸಾಧ್ಯವಿಲ್ಲ ಒಂದು ವೇಳೆ ನಿಮಗೆ ಮಾರ್ಕ್ಸ್ ನ ತಿಳುವಳಿಕೆಯಲ್ಲಿ ಈ ಸಂಘರ್ಷ, ಜೀವ ಮತ್ತು ನಿರ್ಜೀವ, ಭೂತ ಮತ್ತು ವರ್ತಮಾನ, ಜನ ಮತ್ತು ವಸ್ತುಗಳು , being ಮತ್ತು having ಗಳ ನಡುವಿನ ಸಂಘರ್ಷ ಎನ್ನುವುದು ಗೊತ್ತಿರದಿದ್ದರೆ. ಮಾರ್ಕ್ ನ ಪ್ರಶ್ನೆ ಏನೆಂದರೆ, ಯಾರು ಯಾರನ್ನು ಆಳಬೇಕು ಎನ್ನುವುದು ; ಜೀವಂತಿಕೆ ಸತ್ತ ಸಂಗತಿಯನ್ನು ಆಳಬೇಕಾ ಅಥವಾ ಸತ್ತ ಸಂಗತಿ ಜೀವಂತಿಕೆಯನ್ನ ಆಳಬೇಕಾ ಎನ್ನುವುದು. ಅವನ ಪ್ರಕಾರ ಸಮಾಜವಾದ ಎನ್ನುವುದು ಜೀವಂತಿಕೆ ಮೃತ ಸಂಗತಿಯ ಮೇಲೆ ಸಾಧಿಸಿದ ವಿಜಯವನ್ನು ಸೂಚಿಸುವಂಥದು.

ಬಂಡವಾಳಶಾಹಿಯ ಕುರಿತಾದ ಮಾರ್ಕ್ ನ ಸಂಪೂರ್ಣ ಟೀಕೆ ಮತ್ತು ಸಮಾಜವಾದದ ಕುರಿತಾದ ಅವನ ದರ್ಶನದ ಮೂಲ ಇರುವುದು, ಮನುಷ್ಯನ ಸ್ವಯಂ- ಕ್ರಿಯಾತ್ಮಕತೆಯನ್ನ ಬಂಡವಾಳಶಾಹಿ ವ್ಯವಸ್ಥೆ ನಿಷ್ಕ್ರೀಯಗೊಳಿಸುತ್ತದೆ (paralysed) ಮತ್ತು ನಮ್ಮ ಉದ್ದೇಶ ಬದುಕಿನ ಎಲ್ಲ ಆಯಾಮಗಳಲ್ಲಿ ಕ್ರಿಯಾತ್ಮಕತೆಯನ್ನು ಮತ್ತೆ ಜೀವಂತಗೊಳಿಸುತ್ತ ಸಂಪೂರ್ಣ ಮಾನವತೆಯನ್ನು ಪುನರ್ಸ್ಥಾಪಿಸುವುದು ಎನ್ನುವ ಪರಿಕಲ್ಪನೆಯಲ್ಲಿ.

ಶಾಸ್ತ್ರೀಯ ಅರ್ಥಶಾಸ್ತ್ರಜ್ಞರಿಂದ ಪ್ರಭಾವಿತವಾದ ಸೂತ್ರಗಳ ಹೊರತಾಗಿಯೂ , ಮಾರ್ಕ್ಸ ಒಬ್ಬ ಡಿಟರ್ಮಿಮಿನಿಸ್ಟ್ ( a follower of the doctrine of determinism, which holds that all events, including human action, are ultimately determined by causes external to the will) ಎನ್ನುವ ಕ್ಲೀಷೆ, ಮತ್ತು ಅವನು ಮನುಷ್ಯ ಜೀವಿಯನ್ನ ಇತಿಹಾಸದ ನಿಷ್ಕ್ರೀಯ ಸಂಗತಿಯನ್ನಾಗಿಸಿ ಅವನನ್ನ ಅವನ ಕ್ರಿಯಾತ್ಮಕತೆಯಿಂದ ದೊರಾಗಿಸುತ್ತಾನೆ ಎನ್ನುವ ಆಪಾದನೆ ಸತ್ಯಕ್ಕೆ ದೂರವಾದದ್ದು ಮತ್ತು ಅವನ ವಿಚಾರಗಳಿಗೆ ವಿರುದ್ಧವಾದದ್ದು. ಮಾರ್ಕ್ಸ್ ನ ಕೆಲವು isolated ಹೇಳಿಕೆಗಳನ್ನು out of context ಅರ್ಥ ಮಾಡಿಕೊಳ್ಳುವುದರ ಬದಲಾಗಿ, ಅವನ ಬಗ್ಗೆ ಪೂರ್ಣವಾಗಿ ಓದಿದವರಿಗೆ ಈ ವಿಷಯ ಖಂಡಿತವಾಗಿ ಮನದಟ್ಟಾಗಿರುತ್ತದೆ.

ಮಾರ್ಕ್ಸ್ ನ ದೃಷ್ಟಿಕೋನವನ್ನ ಅವನ ಈ ಸ್ವಂತ ಹೇಳಿಕೆಯೇ ಸ್ಪಷ್ಟವಾಗಿ ಅಭಿವ್ಯಕ್ತಿಸುತ್ತದೆ, “ಇತಿಹಾಸ ಏನೂ ಮಾಡುವುದಿಲ್ಲ; ಅದರ ಬಳಿ ಯಾವ ಬೃಹತ್ ಶ್ರೀಮಂತಿಕೆಯೂ ಇಲ್ಲ, it fights no fight’. ಬದಲಾಗಿ ಮನುಷ್ಯ, ವಾಸ್ತವದ ಜೀವಂತ ಮನುಷ್ಯ – ಪ್ರತಿಯೊಂದನ್ನೂ ಆ್ಯಕ್ಟ್ ಮಾಡುತ್ತಾನೆ, ಹೊಂದುತ್ತಾನೆ, ಫೈಟ್ ಮಾಡುತ್ತಾನೆ. ಇತಿಹಾಸ ಎನ್ನುವುದು ಮನುಷ್ಯನನ್ನು ತನ್ನ ಉದ್ದೇಶ ಪೂರ್ತಿಗಾಗಿ ಬಳಕೆ ಮಾಡುವ ಇನ್ನೊಬ್ಬ ಮನುಷ್ಯನ ರೀತಿ ಅಲ್ಲ ಬದಲಾಗಿ, ಇತಿಹಾಸ ಎನ್ನುವುದು ಮನುಷ್ಯನ ತನ್ನ ಉದ್ದೇಶಪೂರ್ತಿಗಾಗಿ ಬಳಸುವ ಕ್ರಿಯಾತ್ಮಕತೆ.” ( Marks & Engels, The holy family).

ಹತ್ತಿರದ ಸಮಕಾಲೀನರಲ್ಲಿ Albert Schweitzer ನಷ್ಟು ಪರಿಣಾಮಕಾರಿಯಾಗಿ ಆಧುನಿಕ ಕ್ರಿಯಾತ್ಮಕತೆಯ ನಿಷ್ಕ್ರೀಯ ಸ್ವಭಾವವನ್ನು ಬೇರೆ ಯಾರೂ ವಿವರಿಸಿಲ್ಲ. Albert Schweitzer , The decay and restoration of civilisation ಕುರಿತಾದ ತನ್ನ ಅಧ್ಯಯನದಲ್ಲಿ, ಆಧುನಿಕ ಮನುಷ್ಯನನ್ನು ಸ್ವಾತಂತ್ರ್ಯರಹಿತ (unfree), ಅಪೂರ್ಣ, ಏಕಾಗ್ರತೆರಹಿತ, ಅವಲಂಬಿತ ರೋಗಿ ಮತ್ತು ಸಂಪೂರ್ಣವಾಗಿ ನಿಷ್ಕ್ರೀಯ ಎಂದು ಗಮನಿಸುತ್ತಾನೆ.

1 Comment

Leave a Reply