ಅಧ್ಯಾಯ 6 Having ಮತ್ತು Being ನ ಇನ್ನಿತರ ಅಂಶಗಳು: To have or to be #48

ಮೂಲ: ಎರಿಕ್ ಫ್ರಾಮ್; ಕನ್ನಡಕ್ಕೆ: ಚಿದಂಬರ ನರೇಂದ್ರ.
ಹಿಂದಿನ ಭಾಗ ಇಲ್ಲಿ ಓದಿ: https://aralimara.com/2023/08/12/fromm-44/

ಸುರಕ್ಷತೆ – ಅಸುರಕ್ಷತೆ

ಮುಂದೆ ಸಾಗದೇ ಇರುವುದು, ಇದ್ದಲ್ಲಿಯೇ ಇರುವುದು, ಹಿಂತಿರುಗಿ ನೋಡುವುದು; ಬೇರೆ ಮಾತುಗಳಲ್ಲಿ ಹೇಳುವುದಾದರೆ, ನಾವು ಹೊಂದಿರುವುದರ ಮೇಲೆಯೇ ನಿರ್ಭರವಾಗುವುದು ತುಂಬ ಆಕರ್ಷಕವಾದ ಪ್ರಲೋಭನೆ ಏಕೆಂದರೆ, ನಮ್ಮ ಬಳಿ ಏನು ಇದೆ ಎನ್ನುವುದರ ಮಾಹಿತಿ ನಮಗೆ ಇದೆ; ನಾವು ಅದಕ್ಕೆ ಜೋತು ಬೀಳಬಹುದು, ಹೀಗೆ ಮಾಡುವುದರಲ್ಲಿ ನಮಗೆ ಸುರಕ್ಷಯತೆ ಭಾವ ಇದೆ. ಅಪರಚಿತದಲ್ಲಿ ಹೆಜ್ಜೆ ಇಡುವುದೆಂದರೆ ನಮಗೆ ಭಯ ಹಾಗಾಗಿ ನಾವು ಅದನ್ನು ಅವೊಯಿಡ್ ಮಾಡುತ್ತೇವೆ ಏಕೆಂದರೆ, ನಮಗೆ ಅನಿಶ್ಚಿತತೆ ಕಾಡುತ್ತದೆ. ಒಮ್ಮೆ ಮುಂದಿನ ಹೆಜ್ಜೆ ಇಟ್ಟಾದ ಮೇಲೆ ನಮಗೆ ಇದು ರಿಸ್ಕ ಏನಲ್ಲ ಅನಿಸಬಹುದಾದರೂ, ಮುಂದಿನ ಹೆಜ್ಜೆ ಇಡುವ ಮೊದಲು ನಮಗೆ ಮುಂದೆ ಎದುರಾಗಬಹುದಾದ ರಿಸ್ಕಗಳ ಬಗ್ಗೆ ಆತಂಕ. ಕೇವಲ ಹಳೆಯ ಮತ್ತು ಈಗಾಗಲೇ ಟ್ರೈ ಮಾಡಿದ ಸಂಗತಿಗಳು ಸುರಕ್ಷಿತ ಅಥವಾ ನಮಗೆ ಹಾಗೆಂದು ಅನಿಸುತ್ತದೆ. ಪ್ರತೀ ಹೊಸ ಹೆಜ್ಜೆಯಲ್ಲಿ ಸೋಲಿನ ಅಪಾಯ ಕಾಣಿಸುತ್ತದೆಯಾದ್ದರಿಂದ ಜನರಿಗೆ ಸ್ವಾತಂತ್ರ್ಯದ ಬಗ್ಗೆ ಭಯ, ಆತಂಕ.

ಸ್ವಾಭಾವಿಕವಾಗಿ ಬದುಕಿನ ಪ್ರತೀ ಘಟ್ಟದಲ್ಲಿಯೂ, ಮೊದಲಿನ ಮತ್ತು ರೂಢಿಯಾಗುವ ಸಂಗತಿಗಳು ಬೇರೆ ಬೇರೆ. ಶಿಶುವಾಗಿದ್ದಾಗ ನಮ್ಮ ಬಳಿ ಇರುವುದು ಕೇವಲ ನಮ್ಮ ದೇಹ ಮತ್ತು ನಮ್ಮ ತಾಯಿಯ ಮೊಲೆಗಳು (originally still undifferentiated). ಆಮೇಲೆ ನಾವು ಜಗತ್ತಿಗೆ ಹೊಂದಿಕೊಳ್ಳಲು ಶುರು ಮಾಡುತ್ತೇವೆ, ಈ ಜಗತ್ತಿನಲ್ಲಿ ನಮ್ಮ ಜಾಗ ಹುಡುಕಿಕೊಳ್ಳಲು ಆರಂಭಿಸುತ್ತೇವೆ. ನಮ್ಮ ಬದುಕಿಗೆ ಬೇಕಾದ ಸಂಗತಿಗಳನ್ನು ಹೊಂದಲು ಮುಂದಾಗುತ್ತೇವೆ : ಈಗ ನಮ್ಮ ಬಳಿ ನಮ್ಮ ತಾಯಿ, ತಂದೆ, ಸಹೋದರ ಸಹೋದರಿಯರು, ಆಟಿಗೆಗಳು ಇವೆ; ಮುಂದೆ ನಾವು ತಿಳುವಳಿಕೆ, ಜಾಬ್, ಸಾಮಾಜಿಕ ಸ್ಥಾನ ಮಾನ, ಸಂಗಾತಿ (spouse), ಮಕ್ಕಳನ್ನ ಹೊಂದುತ್ತೇವೆ ಹಾಗು ಮುಂದೆ ಇನ್ಶುರೆನ್ಸ್ ಪಾಲಿಸಿ ತೆಗೆದುಕೊಂಡಾಗ, ವಿಲ್ ಬರೆಯಿಸಿದಾಗ, ನಮ್ಮ ಗೋರಿಗಾಗಿ ಜಾಗ ಬುಕ್ ಮಾಡಿದಾಗ ಆಗಲೇ ನಾವು ಆಫ್ಟರ್ ಲೈಫ್ ಗಾಗಿ ಸಂಗತಿಗಳನ್ನು ಒಟ್ಟು ಮಾಡುತ್ತಿದ್ದೇವೆ.

ಆದರೆ having ಎಲ್ಲ ಸುರಕ್ಷತಾ ಭಾವವನ್ನು ಕೊಡುತ್ತಿರುವಾಗಲೂ ಜನ, ಹೊಸ ಕನಸು ಕಾಣುವವರನ್ನ, ಹಳೆ ದಾರಿ ಬಿಟ್ಟು ಹೊಸ ದಾರಿ ತುಳಿಯುವವರನ್ನ, ಮುಂದೆ ಮುನ್ನುಗ್ಗುವ ಧೈರ್ಯ ಹೊಂದಿದವರನ್ನ ಅಭಿಮಾನದಿಂದ ನೋಡುತ್ತಾರೆ, ಗೌರವಿಸುತ್ತಾರೆ. ಪುರಾಣಗಳಲ್ಲಿ ಅಸ್ತಿತ್ವದ ಇಂಥ ವಿಧಾನವನ್ನು ಹೀರೋಗಳ ರೂಪದಲ್ಲಿ ಸಂಕೇತಿಕರಿಸಲಾಗುತ್ತದೆ. ಹೀರೋಗಳು ಯಾರು ಎಂದರೆ, ತಮ್ಮ ಬಳಿ ಇರುವುದನ್ನೆಲ್ಲ, ತಮ್ಮ ಹೊಲ-ಮನೆ, ಸಂಸಾರ, ಆಸ್ತಿ ಎಲ್ಲವನ್ನೂ ಬಿಟ್ಟು ಧೈರ್ಯದಿಂದ ಹೊರಡುವವರು. ಅವರಿಗೆ ಭಯ ಇಲ್ಲವೆಂದೇನಲ್ಲ ಆದರೆ ಅವರು ಈ ಭಯಕ್ಕೆ ಶರಣಾಗಿಲ್ಲ. ಬೌದ್ಧ ಸಂಪ್ರದಾಯದಲ್ಲಿ ಸ್ವತಃ ಬುದ್ಧನೇ ಒಬ್ಬ ದೊಡ್ಡ ಹೀರೋ, ಆತ ತಾನು ಹೊಂದಿದ ಎಲ್ಲವನ್ನೂ ತ್ಯಜಿಸಿ, ಯಾವುದಕ್ಕೂ ಅಂಟಿಕೊಳ್ಳದೆ ನಿರ್ವಾಣದತ್ತ ಧೈರ್ಯದಿಂದ ಹೆಜ್ಜೆ ಹಾಕಿದವನು. ಯಹೂದಿ ಸಂಪ್ರದಾಯದಲ್ಲಿ ಅಬ್ರಹಾಂ ಮತ್ತು ಮೋಸಸ್ ಹೀರೋಗಳು. ಜೀಸಸ್ ಕ್ರಿಶ್ಚಿಯನ್ ಹೀರೋ, ಅವನು ಜಗತ್ತಿನ ದೃಷ್ಟಿಯಲ್ಲಿ ಏನೂ ಹೊಂದಿರಲಿಲ್ಲವಾದರೂ, ಸಮಸ್ತ ಮಾನವ ಜನಾಂಗದ ಮೇಲೆ ತನ್ನ ಪ್ರೀತಿಯ ಹೊಳೆಯನ್ನು ಹರಿಸಿದ. ಗ್ರೀಕರ ಹೀರೋಗಳು ಸೆಕ್ಯುಲರ್, ಹರ್ಕ್ಯುಲಸ್ ಮತ್ತು ಓಡಿಸಿಸ್ ತಮ್ಮ ಮುಂದಿದ್ದ ಅಪಾಯ ಮತ್ತು ರಿಸ್ಕ್ ಗಳನ್ನು ಕಡೆಗಣಿಸಿ ಮುಂದೆ ಮುನ್ನುಗ್ಗಿದರು. ಫೇರಿ ಟೇಲ್ ಹೀರೋಗಳದ್ದೂ ಇದೇ ರೀತಿ, ಇರುವುದನ್ನೆಲ್ಲ ಬಿಟ್ಟು , ಅನಿಶ್ಚಿತತೆಗೆ ಹೆದರದೇ ಹೊಸ ಹಾದಿಯನ್ನು ತುಳಿಯುವ ಧೈರ್ಯ ಮಾಡುವುದು.

ನಾವು ಈ ಹೀರೋಗಳನ್ನು ಅಭಿಮಾನದಿಂದ ನೋಡುವ ಕಾರಣ, ಅವರು ತುಳಿಯುತ್ತಿರುವ ಹಾದಿ, ಸಾಧ್ಯವಾಗಿದ್ದರೆ ನಾವು ತುಳಿಯಬೇಕಾಗಿದ್ದ ಹಾದಿ ಎಂದು ನಮಗೆ ಅನಿಸಿರುವುದು. ಆದರೆ ಧೈರ್ಯಗುಂದಿರುವ ನಾವು ಆ ದಾರಿ ನಮಗಲ್ಲ ಕೇವಲ ಹೀರೋಗಳಿಗೆ ಮಾತ್ರ ಎಂದು ನಂಬುತ್ತೇವೆ. ಈ ಹೀರೋಗಳು ನಮ್ಮ ಆದರ್ಶವಾಗುತ್ತಾರೆ, ಮತ್ತು ನಾವು ನಮ್ಮ ಸಮಸ್ತ ಸಾಮರ್ಥ್ಯವನ್ನು ಅವರಿಗೆ ಧಾರೆ ಎರೆಯುತ್ತ ನಾವು ಮಾತ್ರ ಇರುವಲ್ಲಿಯೇ ಉಳಿದು ಬಿಡುತ್ತೇವೆ “ಏಕೆಂದರೆ ನಾವು ಹೀರೋಗಳಲ್ಲ”.

ಈ ಚರ್ಚೆಯಿಂದ, ಹೀರೋ ಆಗುವುದೇನೋ ಅಪೇಕ್ಷಣೀಯ ಸಂಗತಿ ಆದರೆ ವ್ಯಕ್ತಿಯ ವೈಯಕ್ತಿಕ ಆಸಕ್ತಿಯ (personal interest) ದಿಕ್ಕಿನಿಂದ ನೋಡಿದರೆ ಇದು ಮೂರ್ಖತನದ ವಿಷಯ ಅನಿಸಬಹುದು ಆದರೆ ಖಂಡಿತ ಹಾಗಲ್ಲ. ಎಚ್ಚರಿಕೆಯ having ಮನುಷ್ಯರು ಸುರಕ್ಷತೆಯ ಭಾವವನ್ನು ಅನುಭವಿಸುತ್ತಾನೇನೋ ಹೌದು ಆದರೆ, having ವಿಧಾನವೇ ಅವರನ್ನು ಅವಶ್ಯಕವಾಗಿ ಅಸುರಕ್ಷಿತರನ್ನಾಗಿಸುತ್ತದೆ. ಅವರು ತಾವು ಹೊಂದಿರುವುದರ ಮೇಲೆ ಅವಲಂಬಿತರಾಗಿದ್ದಾರೆ : ಹಣ, ಪ್ರತಿಷ್ಠೆ, ಸ್ವಂತದ ಅಹಂ – ಹಾಗೆಂದರೆ, ಅವರು ತಮ್ಮ ಹೊರಗೆ ಇರುವುದರ ಮೇಲೆ ಅವಲಂಬಿತರಾಗಿದ್ದಾರೆ. ತಮ್ಮ ಬಳಿ ಇರುವುದನ್ನ ಕಳೆದುಕೊಂಡಾಗ ಅವರಿಗೆ ಏನಾಗುತ್ತದೆ? ಹೌದು ತಮ್ಮ ಬಳಿ ಇರುವುದನ್ನ ಖಂಡಿತವಾಗಿ ಅವರು ಕಳೆದುಕೊಳ್ಳುವ ಸಾಧ್ಯತೆ ಇದೆ. ಬಹುತೇಕ ಅವರು ತಮ್ಮ ಆಸ್ತಿಯನ್ನ ಕಳೆದುಕೊಳ್ಳಬಹುದು ಮತ್ತು ಈ ಕಾರಣವಾಗಿ ತಮ್ಮ ಪ್ರತಿಷ್ಠೆಯನ್ನೂ, ಗೆಳೆಯರನ್ನೂ – ಮತ್ತು ಇದು ಮುಂದುವರೆದರೆ ಇದೇ ಕಾರಣಕ್ಕಾಗಿ ತಮ್ಮ ಜೀವವನ್ನೂ.

If I am what I have and if what I have is lost, who then am I? ಆಗ ನಾನು ಯಾರೂ ಅಲ್ಲ, Nobody, ಒಬ್ಬ ಸೋತ, ಕುಗ್ಗಿದ, ತಪ್ಪು ದಾರಿಯಲ್ಲಿ ಬದುಕಿದ ಒಂದು ರೋಗಪೂರಿತ ಉದಾರಣೆ. ಏಕೆಂದರೆ ನನ್ನ ಬಳಿ ಇರುವುದನ್ನ ನಾನು ಕಳೆದುಕೊಳ್ಳಬಹುದು, ಹಾಗಾಗಿ ಅವಶ್ಯಕವಾಗಿ ನಿರಂತರ ಈ ಕುರಿತಾಗಿಯೇ ಚಿಂತೆ ಮಾಡುತ್ತಿರುತ್ತೇನೆ. ನನಗೆ ಕಳ್ಳರ ಕುರಿತು, ಆರ್ಥಿಕ ಬದಲಾವಣೆಗಳ ಕುರಿತು, ದಂಗೆಗಳ ಕುರಿತು, ಕ್ರಾಂತಿಗಳ ಕುರಿತು, ಕಾಯಿಲೆಯ ಕುರಿತು, ಸಾವಿನ ಬಗ್ಗೆ ಭಯ ಮತ್ತು ನನಗೆ, ಪ್ರೀತಿಯ ಕುರಿತು, ಸ್ವಾತಂತ್ರ್ಯದ ಕುರಿತು, ಬೆಳವಣಿಗೆಯ ಕುರಿತು, ಬದಲಾವಣೆಗಳ ಕುರಿತು, ಅಜ್ಞಾತದ ಕುರಿತು ಭಯ. ಹೀಗೆ ನಾನು ನಿರಂತರವಾಗಿ ಚಿಂತೆ ಮಾಡುತ್ತಿದ್ದೇನೆ ಮತ್ತು chronic hypochondriasis (ತೀವ್ರ ಭ್ರಮಾರೋಗ) ದಿಂದ ಸಂಕಟ ಅನುಭವಿಸುತ್ತಿದ್ದೇನೆ, ಆರೋಗ್ಯ ಕಳೆದುಕೊಳ್ಳುತ್ತಿರುವ ಭಯದಿಂದಷ್ಟೇ ಅಲ್ಲ, ನನ್ನ ಬಳಿ ಇರುವ ಯಾವುದಾದರೊಂದನ್ನು ಕಳೆದುಕೊಳ್ಳುವ ಭಯ ನನ್ನನ್ನು ಸದಾ ಕಾಡುತ್ತಲೇ ಇರುತ್ತದೆ. ಈ ಕಾರಣವಾಗಿಯೇ ನಾನು ಡಿಫೆನ್ಸಿವ್ ಆಗಿದ್ದೇನೆ, ಕಠಿಣವಾಗಿದ್ದೇನೆ, ಸಂಶಯಭರಿತನಾಗಿದ್ದೇನೆ, ಒಂಟಿಯಾಗಿದ್ದೇನೆ ಮತ್ತು ಹೆಚ್ಚು ರಕ್ಷಣೆಯನ್ನು ಹೊಂದುವ ಸಲುವಾಗಿ ಹೆಚ್ಚು ಸಂಗತಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಹೊಂದಲು ಬಯಸುತ್ತಿದ್ದೇನೆ. Ibsen ತನ್ನ Peer Gynt ಲ್ಲಿ ಈ ಬಗೆಯ ಸ್ವ-ಕೇಂದ್ರಿತ ಮನುಷ್ಯನ ಸುಂದರ ವಿವರಣೆ ಕೊಡುತ್ತಾನೆ. ಇಲ್ಲಿ ಹೀರೋ ತನ್ನೊಳಗೆ ಕೇವಲ ತನ್ನನ್ನು ಮಾತ್ರ ತುಂಬಿಕೊಂಡಿದ್ದಾನೆ, ತನ್ನ ತೀವ್ರ ಅಹಂ ಭಾವದಲ್ಲಿ ಅವನು, ತಾನು ತಾನಾಗಿರುವುದು, ತಾನು ಬಯಕೆಗಳ ಮೂಟೆಯಾಗಿರುವುದರಿಂದ (bundle of desires) ಎಂದು ನಂಬಿಕೊಂಡಿದ್ದಾನೆ. ಆದರೆ ತನ್ನ ಬದುಕಿನ ಕೊನೆಗಾಲದಲ್ಲಿ ಅವನಿಗೆ ಗೊತ್ತಾಗುತ್ತದೆ, ತನ್ನ ಆಸ್ತಿಯ ರಾಚನಿಕ ಅಸ್ತಿತ್ವದ ಕಾರಣವಾಗಿ ( his property – structured existence) ತಾನು ತಾನಾಗಿರಲು ಸಾಧ್ಯವಾಗದೇ ಸೋತು ಹೋಗಿದ್ದೇನೆಂದು, ತಾನು ಸಿಪ್ಪೆ ಸುಲಿಯುತ್ತ ಹೋಗಿ ಕೊನೆಗೆ ಏನು ಉಳಿಯದ ಈರುಳ್ಳಿಯ ಹಾಗೆ ಎಂದು, ತಾನು ಎಂದೂ ತಾನಾಗಿರದವ ಎಂದು.

ಹೊಂದಿರುವುದನ್ನ ಕಳೆದುಕೊಳ್ಳುವ ಭಯ ಮತ್ತು ಆತಂಕ, being ವಿಧಾನದಲ್ಲಿ ಗೈರುಹಾಜರಾಗಿದೆ. I am, who I am & not I have ಆದ್ದರಿಂದ ಬೇರೆ ಯಾರೂ ನನ್ನ ಅಸ್ತಿತ್ವವನ್ನ (identity), ನನ್ನ ಸುರಕ್ಷತೆಯನ್ನ ನನ್ನಿಂದ ಕಸಿದುಕೊಳ್ಳುವ ಬೆದರಿಕೆ ಒಡ್ಡಲಾರರು. ನನ್ನ ಕೇಂದ್ರ ನನ್ನೊಳಗೆಯೇ ಸ್ಥಿರವಾಗಿದೆ, being ವಿಧಾನವನ್ನು ಪಾಲಿಸುವ ಮತ್ತು ನನ್ನ ಅವಶ್ಯಕ ಸಾಮರ್ಥ್ಯಗಳನ್ನು ಅಭಿವ್ಯಕ್ತಿಸುವ ನನ್ನ ಕ್ಷಮತೆ, ನನ್ನ ಸ್ವಭಾವದ ಸಂರಚನೆಯ ಭಾಗ ಮತ್ತು ಅದು ನನ್ನ ಮೇಲೆಯೇ ಅವಲಂಬಿತವಾಗಿದೆ. ಇದು ಸಾಮಾನ್ಯ ಬದುಕಿನ ಪ್ರಕ್ರಿಯೆಗೆ ಅನ್ವಯಿಸುತ್ತದೆಯೇ ಹೊರತು ಗುಣಪಡಿಸಲಾಗದ ಕಾಯಿಲೆ, ಚಿತ್ರಹಿಂಸೆ ಅಥವಾ ಇನ್ನಿತರ ಬಾಹ್ಯ ಒತ್ತಡದ ಸಂದರ್ಭಗಳಿಗೆ ಅಲ್ಲ.

ಬಳಕೆ ಮಾಡಿದಂತೆ ಕಡಿಮೆಯಾಗುವ ಸಂಗತಿಗಳ ಮೇಲೆ having ನಿರ್ಭರವಾಗಿದ್ದರೆ, ಪ್ರ್ಯಾಕ್ಟೀಸ್ ಮಾಡಿದಂತೆಲ್ಲ ಹೆಚ್ಚಾಗುವ ಸಂಗತಿಗಳಿಂದ being ನಿರ್ಮಿತವಾಗಿದೆ (The “Burning bush” that is not consumed is the biblical symbol for this paradox). ತರ್ಕ, ಪ್ರೀತಿ, ಕಲಾತ್ಮಕ ಮತ್ತು ಬೌದ್ಧಿಕ ಸೃಷ್ಟಿಯ ಅವಶ್ಯಕ ಸಾಮರ್ಥ್ಯಗಳು ಅದನ್ನ ಅಭಿವ್ಯಕ್ತಿಸುವ ಪ್ರಕ್ರಿಯೆಯೊಡನೆಯೇ ಬೆಳವಣಿಗೆಯನ್ನು ಕಾಣುತ್ತವೆ. ಯಾವುದನ್ನ ಖರ್ಚು ಮಾಡಲಾಗಿದೆಯೋ ಅದು ತೀರಿ ಹೋಗಿಲ್ಲ ಬದಲಾಗಿ ಯಾವುದನ್ನ ಬಳಸಲಾಗಿಲ್ಲವೋ ಅದು ಕಳೆದು ಹೋಗಿದೆ. Being ವಿಧಾನದಲ್ಲಿ ನನ್ನ ಸುರಕ್ಷತೆಗೆ ಇರುವ ಏಕೈಕ ಬೆದರಿಕೆ ನನ್ನೊಳಗೆಯೇ ಇದೆ : ಬದುಕಿನಲ್ಲಿ ನಂಬಿಕೆ ಕಳೆದುಕೊಳ್ಳುವಲ್ಲಿ ಮತ್ತು ನನ್ನ ಸೃಜನಾತ್ಮಕ ಸಾಮರ್ಥ್ಯಗಳಲ್ಲಿ; ಪ್ರತಿಗಾಮಿ ಪ್ರವೃತ್ತಿಗಳಲ್ಲಿ: ಒಳಗಿನ ಆಲಸ್ಯದಲ್ಲಿ ಮತ್ತು ಇನ್ನೊಬ್ಬರಿಗೆ ನನ್ನ ಬದುಕನ್ನ ಓವರ್ ಟೇಕ್ ಮಾಡಲು ಬಿಟ್ಟುಕೊಡುವ ಇಚ್ಛಾಶಕ್ತಿಯಲ್ಲಿ. ಆದರೆ ಹೇಗೆ ಕಳೆದುಕೊಳ್ಳುವ ಅಪಾಯಗಳು having ನಲ್ಲಿ ಅಂತರ್ಗತವಾಗಿವೆಯೋ ಹಾಗೆ ಈ ಅಪಾಯಗಳು being ನಲ್ಲಿ ಅಂತರ್ಗತವಾಗಿಲ್ಲ.

1 Comment

Leave a Reply