ಗುಹೆಗೆ ಹೋದ ಮಾತ್ರಕ್ಕೆ ಸೂರ್ಯನಿಗೆ ಕತ್ತಲು ಕಾಣುವುದೇ!? – ಒಂದು ಸೂಫಿ ಕತೆ… । ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ
ಒಂದು ದಿನ ಸೂರ್ಯ, ಗುಹೆಯೊಡನೆ ಮಾತನಾಡುತ್ತಿದ್ದ. ಸೂರ್ಯನಿಗೆ ಕತ್ತಲು ಎಂದರೇನು ಮತ್ತು ಅದು ಹೇಗಿರುತ್ತದೆ ಎನ್ನುವುದು ಗೊತ್ತಾಗುತ್ತಿರಲಿಲ್ಲ ಮತ್ತು ಗುಹೆಗೆ, ಬೆಳಕು ಎನ್ನುವುದು ಹೇಗಿರುತ್ತದೆ ಎನ್ನುವುದು ಗೊತ್ತೇ ಇರಲಿಲ್ಲ.
ಹಾಗಾಗಿ ಸೂರ್ಯ ಮತ್ತು ಗುಹೆ ಇಬ್ಬರೂ ಪರಸ್ಪರರ ಮನೆಗೆ ಭೇಟಿ ನೀಡಿ ತಮಗೆ ಗೊತ್ತಿಲ್ಲದ ವಿಷಯಗಳ ಬಗ್ಗೆ ತಿಳಿದುಕೊಳ್ಳಲು ನಿರ್ಧರಿಸಿದರು.
ಮೊದಲು ಗುಹೆ ಸೂರ್ಯನ ಮನೆಗೆ ಭೇಟಿ ನೀಡಿತು. ಅಲ್ಲಿದ್ದ ಅಪಾರ ಬೆಳಕು ನೋಡಿ ಗುಹೆಗೆ ಪರಮಾಶ್ಚರ್ಯವಾಯಿತು. “ ಓಹ್ ಎಂಥ ಅದ್ಭುತ ಇದು” ಗುಹೆ ಉದ್ಗಾರ ಮಾಡಿತು.
“ನನ್ನ ಮನೆಗೆ ಬಾ ಕತ್ತಲು ಹೇಗಿರುತ್ತದೆ ನೋಡು” ಎಂದು ಗುಹೆ, ಸೂರ್ಯನಿಗೆ ಆಹ್ವಾನ ನೀಡಿತು.
ಮರುದಿನ ಸೂರ್ಯ, ಗುಹೆಗೆ ಬಂದ. ಗುಹೆ ಸೂರ್ಯನಿಗೆ ಸಕಲೋಪಚಾರ ನೀಡಿ ಸ್ವಾಗತ ಮಾಡಿತು, ಹೇಗಿದೆ ಕತ್ತಲು? ಎಂದು ಪ್ರಶ್ನೆ ಮಾಡಿತು.
“ನನಗೇನೂ ವ್ಯತ್ಯಾಸ ಕಾಣುತ್ತಿಲ್ಲ” ಸೂರ್ಯ ಉತ್ತರಿಸಿದ.