ಆನಂದ – ಸುಖ: To have or to be #51

ಮೂಲ: ಎರಿಕ್ ಫ್ರಾಮ್; ಕನ್ನಡಕ್ಕೆ: ಚಿದಂಬರ ನರೇಂದ್ರ.
ಹಿಂದಿನ ಭಾಗ ಇಲ್ಲಿ ಓದಿ: https://aralimara.com/2023/08/20/fromm-47/

ಮಾಸ್ಟರ್ ಎಕ್ಹಾರ್ಟ್ ನ ಪ್ರಕಾರ ಜೀವಂತಿಕೆ, ಆನಂದಕ್ಕೆ ದಾರಿ. ಆಧುನಿಕ ಓದುಗರಿಗೆ “ಆನಂದ” (joy) ಎನ್ನುವ ಪದವನ್ನು ಸೂಕ್ಷ್ಮವಾಗಿ ಗಮನಿಸುವುದು ಸಾಧ್ಯವಾಗದೇ ಹೋಗಬಹುದು ಮತ್ತು ಅವರು ಎಕ್ಹಾರ್ಟ್, “ಸುಖ” ದ (pleasure) ಬಗ್ಗೆಯೇ ಹೇಳುತ್ತಿದ್ದಾನೆ ಎಂದೇ ತಿಳುಯಬಹುದು. ಆದರೂ ನಾವು ಆನಂದ ಮತ್ತು ಸುಖ ಗಳ ನಡುವಿನ ವ್ಯತ್ಯಾಸವನ್ನು ಗುರುತಿಸುವುದು ತಂಬಾ ಮುಖ್ಯ, ವಿಶೇಷವಾಗಿ having ಮತ್ತು being ವಿಧಾನಗಳ ನಡುವಿನ ವ್ಯತ್ಯಾಸಗಳನ್ನು ಅರ್ಥ ಮಾಡಿಕೊಳ್ಳುವುದರಲ್ಲಿ. ಸುಖ ಮತ್ತು ಆನಂದಗಳ ನಡುವಿನ ವ್ಯತ್ಯಾಸವನ್ನು ಗುರುತಿಸಿ ಒಪ್ಪಿಕೊಳ್ಳುವುದು ಸುಲಭ ಅಲ್ಲ ಏಕೆಂದರೆ ನಾವು “ಆನಂದರಹಿತ ಸುಖ” ದ ಜಗತ್ತಿನಲ್ಲಿ ಬದುಕುತ್ತಿದ್ದೇವೆ.

ಸುಖ ಎಂದರೇನು? ಈ ಪದವನ್ನ ಹಲವಾರು ರೀತಿಗಳಲ್ಲಿ ಬಳಸಲಾಗುತ್ತದೆಯಾದರೂ, ಇದರ ಅತ್ಯಂತ ಜನಪ್ರಿಯ ಬಳಕೆಯನ್ನು “ ಬಯಕೆಯ ತೃಪ್ತಿ ಎಂದೂ ಮತ್ತು ಈ ತೃಪ್ತಿಯನ್ನು ಸಾಧ್ಯಮಾಡುವುದಕ್ಕೆ ಯಾವ ಆ್ಯಕ್ಟಿವಿಟಿಯನ್ನೂ (ಜೀವಂತಿಕೆ ಎನ್ನುವ ಅರ್ಥದಲ್ಲಿ) ತೃಪ್ತಿಗೊಳಿಸಬೇಕಾದ ಅವಶ್ಯಕತೆಯಿಲ್ಲ” ಎಂದೂ ವ್ಯಾಖ್ಯಾನಿಸಬಹುದು. ಇಂಥ ಸುಖ ಅತ್ಯಂತ ಇಂಟೆನ್ಸ್ ಆದದ್ದು : ಸಾಮಾಜಿಕ ಯಶಸ್ಸಿನ ಸುಖ, ಹೆಚ್ಚು ಹಣ ಗಳಿಸುವುದು, ಲಾಟರಿ ಗೆಲ್ಲುವುದು; ಸಾಂಪ್ರದಾಯಿಕ ಲೈಂಗಿಕ ಸುಖ, ಮನಸ್ಸಿಗೆ ತೃಪ್ತಿಯಾಗುವಷ್ಟು ತಿನ್ನುವುದು, ರೇಸ್ ನಲ್ಲಿ ಗೆಲುವು ಸಾಧಿಸುವುದು, ಕುಡಿತದಿಂದ ಸಾಧ್ಯವಾಗುವು ನಶೆಯ ಸ್ಥಿತಿ ( state of elation), ಭಾವಪರವಶತೆ (trance), ಡ್ರಗ್ಸ್, ಸೇಡಿಸಂ ನ ತೃಪ್ತಿಯಲ್ಲಿ ಕಾಣುವ ಸುಖ ಅಥವಾ ಇನ್ನೊಬ್ಬರನ್ನು ಕೊಲ್ಲುವ ಉತ್ಕಟ ಭಾವ ಅಥವಾ ಜೀವಂತ ಇರುವುದನ್ನ ಛಿದ್ರಗೊಳಿಸುವುದು.

ಹೌದು, ಶ್ರೀಮಂತರಾಗಲು ಅಥವಾ ಪ್ರಸಿದ್ಧರಾಗಲು ಜನ ಆ್ಯಕ್ಟಿವ್ ಆಗಿರಲೇಬೇಕಾಗುತ್ತದೆ ಎನ್ನುವುದು ನಿಜವಾದರೂ, ಅವರ ಆ್ಯಕ್ಟಿವ್ ನೆಸ್ ಅವಿಶ್ರಾಂತತೆಯ (busyness) ರೂಪದಲ್ಲಿರುತ್ತದೆಯೇ ಹೊರತು “ಒಳ ಹುಟ್ಟನ್ನ” (birth within) ಸಾಧ್ಯ ಮಾಡುವಂಥದು ಆಗಿರುವುದಿಲ್ಲ. ಅವರು ತಮ್ಮ ಗುರಿಯನ್ನ ಮುಟ್ಟಿದಾಗ ಥ್ರಿಲ್ ಗೆ ಒಳಗಾಗುತ್ತಾರೆ, ತೀವ್ರ ತೃಪ್ತಿಯನ್ನೂ, ಸಾಧನೆಯ ಶಿಖರವನ್ನು ಮುಟ್ಟಿದ ಭಾವವನ್ನು ಅನುಭವಿಸುತ್ತಾರೆ. ಆದರೆ ಯಾವುದು ಈ ಶಿಖರ? ಬಹುಶಃ ಅವರ ಎಕ್ಸೈಟ್ ಮೆಂಟ್ ನ ಶಿಖರ, ಅವರ ತೃಪ್ತಿಯ ಶಿಖರ, ಒಂದು ಬಗೆಯ ಟ್ರಾನ್ಸ್ ನಂಥ ಅಥವಾ ಉನ್ಮತತ್ತೆಯಂಥ (orgiastic) ಸ್ಥಿತಿ. ಅವರು ತಮ್ಮ ಉತ್ಕಟತೆಯ ಕಾರಣವಾಗಿ ಈ ಸ್ಥಿತಿಯನ್ನ ಮುಟ್ಟಿರಬಹುದು, ಇದು ಮಾನವೀಯವಾದರೂ(human) ರೋಗಗ್ರಸ್ಥ ಸ್ಥಿತಿ, ಮತ್ತು ಮನುಷ್ಯ ಸಮಸ್ಯೆಗಳಿಗೆ ಅವಶ್ಯಕ ಆಂತರಿಕ ಪರಿಹಾರಗಳನ್ನು ಸೂಚಿಸುವುದಿಲ್ಲ. ಇಂಥ ಉತ್ಕಟತೆಗಳು ಮನುಷ್ಯರ ಮಹಾ ಬೆಳವಣಿಗೆಗಳಿಗೆ, ಸಾಮರ್ಥ್ಯಗಳಿಗೆ ದಾರಿಯಾಗುವುದಿಲ್ಲ ಬದಲಾಗಿ, ಮನುಷ್ಯರನ್ನು ಕುಗ್ಗಿಸುತ್ತವೆ, ಸಾಮರ್ಥ್ಯಹೀನರನ್ನಾಗಿಸುತ್ತವೆ. Radical ಭೋಗವಾದಿಗಳ ಸುಖ, ಹೊಸ ಹೊಸ ಲಾಲಸೆಗಳ ತೃಪ್ತಿ, ಸಮಕಾಲೀನ ಸಮಾಜದ ಭೋಗಗಳು, ಬೇರೆ ಬೇರೆ ಮಟ್ಟದ ಎಕ್ಸೈಟ್ ಮೆಂಟ್ ಗಳನ್ನ ಹುಟ್ಟುಹಾಕುತ್ತವೆ. ಆದರೆ ಈ ಎಕ್ಸೈಟ್ ಮೆಂಟ್ ಗಳು ನಿಜವಾದ ಆನಂದಕ್ಕೆ ದಾರಿಯಲ್ಲ. ಈ ನೈಜ ಆನಂದದ ಕೊರತೆ ಮನುಷ್ಯನನ್ನು, ಹೊಸ ಹೊಸ ಎಕ್ಸೈಟ್ ಮೆಂಟ್ ಗಳ, ಹೆಚ್ಚು ಹೆಚ್ಚು ಸುಖಗಳ ಬೆನ್ನು ಹತ್ತುವಂತೆ ಮಾಡಿದೆ.

ಈ ಬಗೆಯಲ್ಲಿ ನೋಡಿದರೆ, ನಮ್ಮ ಆಧುನಿಕ ಸಮಾಜ, ಮೂರು ಸಾವಿರ ವರ್ಷಗಳ ಹಿಂದೆ ಇದ್ದ ಹೀಬ್ರೂ ಸಮಾಜದ ಸ್ಥಿತಿಯಲ್ಲಿದೆ. ಇಸ್ರೇಲಿನ ಜನರ ಅವರ ಒಂದು ಮಹಾ ಪಾಪವನ್ನು ಉದ್ದೇಶಿಸಿ ಮೋಸೇಸ್ ಹೇಳುತ್ತಾನೆ, “ನಿಮ್ಮ ಯಜಮಾನ, ದೇವರನ್ನು ಪರಿಪೂರ್ಣತೆ ಸಾಧನೆಯ ಸಂದರ್ಭದಲ್ಲಿ ನೀವು ಆನಂದಿಂದ ಮತ್ತು, ಹೃದಯತುಂಬಿ ಹಾರ್ದಿಕವಾಗಿ ಆರಾಧಿಸಲಿಲ್ಲ” (Deuteronomy 28:47). ಆನಂದ ಎನ್ನುವುದು, ಸೃಜನಶೀಲ ಆ್ಯಕ್ಟಿವಿಟಿಯ ಸ್ವಾಭಾವಿಕ ಸಹಯೋಗಿಯೇ ಹೊರತು, ಹಟಾತ್ ನೇ ತುದಿಗೇರಿ ಕೊನೆಗೊಳ್ಳುವ “ಅನುಭವದ ಶಿಖರ” ಅಲ್ಲ, ಬದಲಾಗಿ ಆನಂದ ಎನ್ನುವುದು ಒಂದು ಎತ್ತರದ ಪ್ರಸ್ಥಭೂಮಿ, ಮನುಷ್ಯರ ಅವಶ್ಯಕ ಸಾಮರ್ಥ್ಯಗಳ ಸೃಜನಶೀಲ ಅಭಿವ್ಯಕ್ತಿಯ ಜೊತೆಗೂಡಿ ನಡೆಯುವ ನಿರಂತರ ಭಾವ. ಆನಂದ ಎನ್ನುವುದು ಕ್ಷಣಿಕ ಭಾವಪರವಶತೆಯ ಜ್ವಾಲೆ ಅಲ್ಲ, ಆನಂದ ಎನ್ನುವುದು being ನ ಜೊತೆ ನಿರಂತರವಾಗಿ ಪಯಣಿಸುವ ಬೆಳಕು.

ಸುಖ ಮತ್ತು ಥ್ರಿಲ್ ಗಳು ತಮ್ಮ ಸೋ ಕಾಲ್ಡ್ ಶಿಖರ ತಲುಪಿಯಾದ ಮೇಲೆ ದುಗುಡಕ್ಕೆ ದಾರಿ ಮಾಡಿಕೊಡುತ್ತವೆ. ಈ ಥ್ರಿಲ್, ಯಾವ ಅವಶ್ಯಕ ಬೆಳವಣಿಗೆಯನ್ನೂ ಸಾಧ್ಯ ಮಾಡುವುದಿಲ್ಲ. ಈ ಕಾರಣವಾಗಿ ಮನುಷ್ಯರ ಆಂತರಿಕ ಸಾಮರ್ಥ್ಯಗಳು ವಿಕಸನಗೊಳ್ಳುವುದಿಲ್ಲ. ಇಲ್ಲಿ ಮನುಷ್ಯರು ತಮ್ಮ ಅನುತ್ಪಾದಕ ಆ್ಯಕ್ಟಿವಿಟಿಗಳ ಬೋರ್ ಡಂ ನ ಮುರಿದು ಕ್ಷಣ ಮಾತ್ರದ ಮಟ್ಟಿಗೆ ತಮ್ಮ ಎಲ್ಲ ಸಾಮರ್ಥ್ಯಗಳನ್ನು ಒಂದಾಗಿಸಿಕೊಳ್ಳುತ್ತಾರೇನೋ ಹೌದು ಆದರೆ, ವಿವೇಕ ಮತ್ತು ಪ್ರೀತಿಯನ್ನು ಮಾತ್ರ ಹೊರತುಪಡಿಸಿ. ಮನುಷ್ಯ, ಮೊದಲು ಪೂರ್ಣ ಮನುಷ್ಯನಾಗದೇ ಮಹಾ ಮನುಷ್ಯನಾಗುವ (super human) ಪ್ರಯತ್ನ ಮಾಡುತ್ತಿದ್ದಾನೆ. ಮನುಷ್ಯ, ವಿಜಯೋತ್ಸವದ ಕ್ಷಣ ತಲುಪುವ ಯಶಸ್ಸು ಸಾಧಿಸಿದ್ದಾನೆ ಆದರೆ ಕ್ಷಣಮಾತ್ರದ ವಿಜಯೋತ್ಸವವನ್ನು ಆಳ ದುಗುಡ ಹಿಂಬಾಲಿಸುತ್ತಿದೆ ಏಕೆಂದರೆ, ಆಂತರಿಕವಾಗಿ ಯಾವ ಬದಲಾವಣೆಯೂ ಸಾಧ್ಯವಾಗಿಲ್ಲ. “ಸಂಭೋಗದ ನಂತರ ಪ್ರಾಣಿ ದುಃಖಿತವಾಗಿರುತ್ತದೆ (After intercourse the animal is sad)” ಎನ್ನುವ ಹೇಳಿಕೆ ಪ್ರೀತಿ ಇಲ್ಲದ ಇಂಥದೇ ಒಂದು ವಿದ್ಯಮಾನವನ್ನ ಅಭಿವ್ಯಕ್ತಿಸುತ್ತದೆ. ಇಂಥ ಒಂದು ಸಂಭೋಗ, ತೀವ್ರ ಪ್ರಚೋದನೆಯ ಶಿಖರದಂಥ ಅನುಭವವನ್ನು ಸಾಧ್ಯ ಮಾಡುತ್ತದೆಯಾದ್ದರಿಂದ, ಥ್ರಿಲ್ಲಿಂಗ್ ಅನಿಸುತ್ತದೆ, ಸುಖದ ಅನುಭವ ಕೊಡುತ್ತದೆ ಆದರೆ ಬೇಗ ಮುಗಿದು ಹೋಗುತ್ತದೆಯಾದ್ದರಿಂದ ಕೊನೆಗೆ, ತೀವ್ರ ನಿರಾಶೆ ಮಾತ್ರ ಉಳಿದುಕೊಳ್ಳುತ್ತದೆ. ಸೆಕ್ಸ್ ನಲ್ಲಿ ಆನಂದ ಸಾಧ್ಯ ಆಗುವುದು, ದೈಹಿಕ ಇಂಟಿಮಸಿಯ (ಆಪ್ತತೆ) ಜೊತೆ ಜೊತೆಯೇ ಪ್ರೀತಿಯ ಇಂಟಿಮಸಿ ಇದ್ದಾಗ ಮಾತ್ರ.

ನಿರೀಕ್ಷೆಯಂತೆ, being ವಿಧಾನವನ್ನು ಬದುಕಿನ ಉದ್ದೇಶ ಎಂದು ಘೋಷಿಸುವ ಧಾರ್ಮಿಕ ಮತ್ತು ಫಿಲಾಸೊಫಿಕಲ್ ವ್ಯವಸ್ಥೆಗಳಲ್ಲಿ, ಆನಂದ ಎನ್ನುವುದು ಕೇಂದ್ರ ಪಾತ್ರ ವಹಿಸಬೇಕು. ಸುಖದ ಅನುಭವಗಳನ್ನು (pleasure) ತಿರಸ್ಕರಿಸುವ ಬೌದ್ಧ ಧರ್ಮ, ನಿರ್ವಾಣವನ್ನು ಆನಂದದ ಸ್ಥಿತಿ ಎಂದು ತಿಳಿಯುತ್ತದೆ, ಇದು ಬುದ್ಧನ ಸಾವಿನ ಕುರಿತಾದ ಚಿತ್ರಗಳಲ್ಲಿ ಮತ್ತು ವರದಿಗಳಲ್ಲಿ ನಮಗೆ ವೇದ್ಯವಾಗುತ್ತದೆ (ಬುದ್ಧನ ಸಾವಿನ ಕುರಿತಾದ ಚಿತ್ರ ತೋರಿಸಿ ವಿವರಿಸಿದ್ದಕ್ಕಾಗಿ ನಾನು ಡಾ. ಸುಝುಕಿ ಅವರಿಗೆ ಕೃತಜ್ಞನಾಗಿದ್ದೇನೆ).

*******************************

1 Comment

Leave a Reply