Being ವಿಧಾನವನ್ನು ಬದುಕಿನ ಉದ್ದೇಶ ಎಂದು ಘೋಷಿಸುವ ಧಾರ್ಮಿಕ ಮತ್ತು ಫಿಲಾಸೊಫಿಕಲ್ ವ್ಯವಸ್ಥೆಗಳಲ್ಲಿ, ಆನಂದ ಎನ್ನುವುದು ಕೇಂದ್ರ ಪಾತ್ರ ವಹಿಸಬೇಕು. ಸುಖದ ಅನುಭವಗಳನ್ನು (pleasure) ತಿರಸ್ಕರಿಸುವ ಬೌದ್ಧ ಧರ್ಮ, ನಿರ್ವಾಣವನ್ನು ಆನಂದದ ಸ್ಥಿತಿ ಎಂದು ತಿಳಿಯುತ್ತದೆ, ಇದು ಬುದ್ಧನ ಸಾವಿನ ಕುರಿತಾದ ಚಿತ್ರಗಳಲ್ಲಿ ಮತ್ತು ವರದಿಗಳಲ್ಲಿ ನಮಗೆ ವೇದ್ಯವಾಗುತ್ತದೆ. (ಮುಂದೆ ಓದಿ…) | ಮೂಲ: ಎರಿಕ್ ಫ್ರಾಮ್; ಕನ್ನಡಕ್ಕೆ: ಚಿದಂಬರ ನರೇಂದ್ರ.
ಹಿಂದಿನ ಭಾಗ ಇಲ್ಲಿ ಓದಿ: https://aralimara.com/2023/08/26/fromm-48/
ಹಳೆಯ ಒಡಂಬಡಿಕೆ ಮತ್ತು ನಂತರದ ಯಹೂದಿ ಸಂಪ್ರದಾಯಗಳು ಅತಿಯಾಸೆಯ (cupidity) ತೃಪ್ತಿಯಿಂದ ಹುಟ್ಟಿಕೊಳ್ಳುವ ಸುಖದ ಕುರಿತಾಗಿ ಎಚ್ಚರಿಕೆ ನೀಡುತ್ತಲೇ, ನೈಜ ಆನಂದದಲ್ಲಿ being ವಿಧಾನದ ಕಾರಣವಾಗಿ ಹುಟ್ಟಿಕೊಂಡಿರುವ ಮನಸ್ಥಿತಿಯನ್ನ (mood) ಗುರುತಿಸುತ್ತವೆ. Biblical Book of Psalms ನ ಕೊನೆಯಲ್ಲಿ ಬರುವ ಕ್ರಿಶ್ಚಿಯನ್ ಅಥವಾ ಯಹೂದಿ ಪೂಜಾವಿಧಾನಗಳಲ್ಲಿ ಬಳಸಲಾಗುವ 15 ಪವಿತ್ರ ಹಾಡುಗಳು (psalms) ಅತ್ಯಂತ ಶ್ರೇಷ್ಠ ಆನಂದದ ಸ್ತೋತ್ರಗಳು ಮತ್ತು ಈ ಕ್ರಿಯಾತ್ಮಕ ಸ್ತೋತ್ರಗಳು (dynamic psalms) ಭಯ ಮತ್ತು ದುಗುಡ ಭಾವದಿಂದ ಶುರುವಾಗಿ, ಆನಂದ ಮತ್ತು ಉಲ್ಲಾಸದಲ್ಲಿ ಕೊನೆಗೊಳ್ಳುತ್ತವೆ (ಈ ಸ್ತೋತ್ರಗಳನ್ನ ನಾನು You shall be as God ನಲ್ಲಿ ವಿಶ್ಲೇಷಿಸಿದ್ದೇನೆ). ಯಹೂದಿಗಳು ಶುಕ್ರವಾರ ಸಂಜೆಯಿಂದ ಶನಿವಾರ ಸಂಜೆಯವರೆಗೆ ಮತ್ತು ಕ್ರಿಶ್ಚಿಯನ್ನರು ಬಹುತೇಕ ರವಿವಾರ ಆಚರಿಸುವ ಸಬ್ಬತ್ (Sabbath) ಆನಂದದ ದಿನ, ಮತ್ತು ಮೆಸ್ಸಿಯಾನಿಕ್ ಕಾಲಮಾನದಲ್ಲಿ (the future period of time on Earth in which the messiah will reign and bring universal peace and brotherhood, without any evil) ಆನಂದ ಎನ್ನುವುದು ಚಾಲ್ತಿಯಲ್ಲಿರುವ ಮನಸ್ಥಿತಿ. ಪ್ರಾಫೆಟಿಕ್ ಸಾಹಿತ್ಯದ ಈ ಕೆಲವು ಭಾಗಗಳಲ್ಲಿ ಆನಂದದ ಸ್ಥಿತಿಯ ಅಭಿವ್ಯಕ್ತಿ ಹೇರಳವಾಗಿದೆ : “Then there will the virgins rejoice in the dance, both young men and old together : for I will turn their mourning in to joy” (Jeremiah 31:13) and “With joy you will draw water” (Isaiah 12:3). ದೇವರು ಜೇರುಸಲೇಂ ನ “city of joy” ಎಂದು ಕರೆಯುತ್ತಾನೆ (Jeremiah 49:25).
Talmud ( the body of Jewish civil and ceremonial law and legend comprising the Mishnah and the Gemara) ನಲ್ಲಿ ಕೂಡ ಆನಂದದ ಸ್ಥಿತಿಗೆ ಇದೇ ಮಹತ್ವ ಕೊಟ್ಟಿರುವುದನ್ನ ನಾವು ಗಮನಿಸಬಹುದು : “ಧಾರ್ಮಿಕ ಕರ್ತವ್ಯಗಳನ್ನು ನಿಭಾಯಿಸಿದಾಗ (mitzvah) ದೊರಕುವ ಆನಂದವೊಂದೇ ಪವಿತ್ರ ಆತ್ಮವನ್ನು (Holy Spirit) ತಲುಪುವ ಏಕೈಕ ಮಾರ್ಗ” (Berakoth 31,a). ಆನಂದ ಎಷ್ಟು ಮೂಲಭೂತ ಸ್ಥಿತಿ ಎಂದರೆ Talmudic ಕಾನೂನಿನ ಪ್ರಕಾರ, ಒಂದು ವಾರದ ಒಳಗೆ ಸಂಭವಿಸಿದ ಹತ್ತಿರದ ಸಂಬಂಧಿಯ ಸಾವಿನ ಶೋಕಾಚರಣೆಗೆ ಸಬ್ಬತ್ ನ ಆನಂದ ತಡೆಯೊಡ್ಡಬೇಕು.
ಯಹೂದಿ ಧಾರ್ಮಿಕ ಗುಂಪುಗಳ Hasidic movement ನ ಘೋಷ ವಾಕ್ಯ “serve god with joy” ನ psalms ನ ಸ್ತೋತ್ರಗಳಿಂದ ಆಯ್ದುಕೊಳ್ಳಲಾಗಿದೆ ಮತ್ತು ಇದು, ಆನಂದವೇ ಪ್ರಧಾನ ಅಂಶವಾದ ಜೀವನ ಪದ್ಧತಿಯೊಂದನ್ನ ನಿರ್ಮಿಸಿತು. ಇಲ್ಲಿ ದುಗುಡ ಮತ್ತು ಖಿನ್ನತೆಗಳನ್ನ ಪಾಪ ಎಂದು ಖಡಾ ಖಂಡಿತವಾಗಿ ಗುರುತಿಸಿಲ್ಲವಾದರೂ, ತಪ್ಪು ಅಧ್ಯಾತ್ಮಿಕತೆಯ ಸೂಚನೆಗಳು ಎಂದು ಸೂಚಿಸಲಾಯಿತು.
ಕ್ರಿಶ್ಚಿಯಾನಿಟಿಯ ಬೆಳವಣಿಗೆಯಲ್ಲಿ, ಜೀಸಸ್ ನ ಮಾತುಗಳ ಮತ್ತು ಬದುಕಿನ ವಿವರ ದಾಖಲಿಸುವ (gospel) ಪುಸ್ತಕಗಳ ಹೆಸರು – Glad Tidings ಕೂಡ ಆನಂದ ಮತ್ತು ಉಲ್ಲಾಸಗಳ ಮಹತ್ವವನ್ನು ಎತ್ತಿಹಿಡಿಯುತ್ತದೆ. ಹೊಸ ಒಡಂಬಡಿಕೆಯಲ್ಲಿ, ಆನಂದ ಎನ್ನುವುದು having ವಿಧಾನವನ್ನು ತ್ಯಜಿಸಿದ್ದಕ್ಕಾಗಿ ಸಿಕ್ಕ ಫಲವಾದರೆ, ದುಗುಡ ಎನ್ನುವುದು ಹೊಂದುವಿಕೆಗೆ (possessions) ಜೋತು ಬಿದ್ದ ಕಾರಣವಾಗಿ ಹುಟ್ಟಿಕೊಂಡ ಮನಸ್ಥಿತಿ (See, for instance, Matthew 13:44 and 19:22). ಜೀಸಸ್ ನ ಹಲವಾರು ಹೇಳಿಕೆಗಳನ್ನು ಗಮನಿಸುವುದಾದರೆ, ಆನಂದ ಎನ್ನುವುದು being ಜೀವನ ವಿಧಾನವನ್ನು ಅಳವಡಿಸಿಕೊಂಡಿರುವುದರ ಪರಿಣಾಮ. “ನಾನು ನಿಮಗೆ ಹೇಳಿರುವ ಈ ಸಂಗತಿಗಳು, ನನ್ನ ಆನಂದ ನಿಮ್ಮೊಳಗಿರಲಿ ಮತ್ತು, ನಿಮ್ಮ ಆನಂದ ಪರಿಪೂರ್ಣವಾಗಿರಲಿ” (John 15:11) ಎನ್ನುವುದು, ಜೀಸಸ್ ತನ್ನ ಪ್ರಧಾನ ಶಿಷ್ಯರಿಗೆ ನೀಡಿದ ಕೊನೆಯ ಉಪದೇಶದಲ್ಲಿ, ಆನಂದವನ್ನು ಅದರ ಕೊನೆಯ ರೂಪದಲ್ಲಿ ಸಾಂಧ್ರೀಕರಿಸಿ ಹೇಳಿದ ಮಾತು.
ಈ ಮೊದಲೇ ಸೂಚಿಸಿದಂತೆ ಮಾಸ್ಟರ್ ಎಕ್ಹಾರ್ಟ್ ನ ವಿಚಾರಗಳಲ್ಲಿಯೂ ಆನಂದ ಎನ್ನುವುದು ಪ್ರಧಾನ ಪಾತ್ರ ವಹಿಸುತ್ತದೆ. ನಗು ಮತ್ತು ಆನಂದದ ಸೃಜನಾತ್ಮಕ ಸಾಮರ್ಥ್ಯದ ಕುರಿತಾದ ಅತ್ಯಂತ ಸುಂದರ ಮತ್ತು ಕಾವ್ಯಾತ್ಮಕ ಅಭಿವ್ಯಕ್ತಿಯೊಂದು ಅವನ ಮಾತುಗಳಲ್ಲಿ ಹೀಗೆ ವ್ಯಕ್ತವಾಗಿದೆ : “ಯಾವಾಗ ದೇವರು ಆತ್ಮವನ್ನು ನೋಡಿ ಮುಗುಳ್ನಗುತ್ತಾನೋ ಆಗ ಆತ್ಮವೂ ದೇವರಿಗೆ ತನ್ನ ಮುಗುಳ್ನಗುವನ್ನು ಸಲ್ಲಿಸುತ್ತದೆ, persons of trinity (ಕ್ರಿಶ್ಚಿಯನ್ ಸಿದ್ಧಾಂತದ ಪ್ರಕಾರ unity of father, son & Holy Spirit) ಜನ್ಮ ತಾಳುತ್ತಾರೆ. ಅತಿಶಯೋಕ್ತಿಯಾಗಿ ಹೇಳುವುದಾದರೆ, ಯಾವಾಗ ತಂದೆ ಮಗನನ್ನು ನೋಡಿ ನಗುತ್ತಾನೋ ಮತ್ತು ಮಗ ಪ್ರತಿಯಾಗಿ ತಂದೆಯನ್ನು ನೋಡಿ ನಗುತ್ತಾನೋ, ಆ ನಗುವಿನಲ್ಲೊಂದು ಸುಖವಿದೆ, ಆ ಸುಖ ಕಾರಣವಾಗಿ ಆನಂದ, ಆನಂದ ಕಾರಣವಾಗಿ ಪ್ರೀತಿ ಮತ್ತು ಪ್ರೀತಿ ಕಾರಣವಾಗಿ persons of trinity ಯ ಜನ್ಮ ಸಾಧ್ಯವಾಗುತ್ತದೆ, ಈ trinity ಯಲ್ಲಿ ಹೋಲೀ ಸ್ಪಿರಿಟ್ ಕೂಡ ಒಂದು.” (Blankey, p.245 )
ತನ್ನ ಮಾನವ ಶಾಸ್ತ್ರೀಯ ನೈತಿಕ ವ್ಯವಸ್ಥೆಯಲ್ಲಿ ಸ್ಪಿನೋಜ, ಆನಂದಕ್ಕೆ ಪರಮೊಚ್ಚ ಸ್ಥಾನವನ್ನು ಕಲ್ಪಿಸಿದ್ದಾನೆ. ಅವನ ಪ್ರಕಾರ, “ಆನಂದ ಎನ್ನುವುದು ಮನುಷ್ಯ, ಕಡಿಮೆ ಪರಿಪೂರ್ಣತೆಯಿಂದ ಪೂರ್ಣ ಪರಿಪೂರ್ಣತೆಯತ್ತ ಸಾಗುವ ದಾರಿ. ದುಃಖ ಎನ್ನುವುದು, ಪೂರ್ಣ ಪರಿಪೂರ್ಣತೆಯಿಂದ ಕಡಿಮೆ ಪರಿಪೂರ್ಣತೆಯತ್ತದ ದಾರಿ”. (Ethics, 3, devs. 2.3).
ಸ್ಪಿನೋಜನ ಹೇಳಿಕೆ ನಮಗೆ ಪೂರ್ಣವಾಗಿ ಅರ್ಥ ಆಗೋದು, ನಾವು ಅವನ ಈ ಹೇಳಿಕೆಯನ್ನ, ಅವನ ಇಡಿ ಆಲೋಚನಾ ವ್ಯವಸ್ಥೆಯ ಸಂದರ್ಭದಲ್ಲಿ ಇಟ್ಟು ನೋಡಿದಾಗ. ನಾವು ನಶಿಸಿ ಹೋಗದಿರಲು “ಮಾದರಿ ಮನುಷ್ಯ ಸ್ವಭಾವ” ದತ್ತ ಹೆಜ್ಜೆ ಹಾಕುವ ಪ್ರಯತ್ನ ಮಾಡಬೇಕು, ಹಾಗೆಂದರೆ ಪೂರ್ಣವಾಗಿ ಸ್ವತಂತ್ರರಾಗುವುದು, ತಾರ್ಕಿಕ ವಿಚಾರಶಕ್ತಿಯನ್ನು (rational) ಬೆಳೆಸಿಕೊಳ್ಳುವುದು, ಕ್ರಿಯಾಶೀಲರಾಗುವುದು. ನಮಗಿರುವ ಸಾಧ್ಯತೆಯನ್ನ ಪೂರ್ತಿಯಾಗಿ ಸಾಧಿಸಿಕೊಳ್ಳುವುದು. ಇದು ಸಂಭವನೀಯವಾಗಿ ನಮ್ಮ ಸ್ವಭಾವದಲ್ಲಿ ಇರುವ Good ಎನ್ನುವುದನ್ನ ನಾವು ಅರ್ಥ ಮಾಡಿಕೊಳ್ಳಬೇಕು. ಸ್ಪಿನೋಜ ಯಾವುದನ್ನ good ಎಂದು ಹೇಳುತ್ತಾನೆಂದರೆ, ನಮ್ಮ ಎದುರು ನಾವು ಕಟ್ಟಿಕೊಂಡಿರುವ ನಮ್ಮ ಮಾದರಿ ಸ್ವಭಾವಕ್ಕೆ ಹತ್ತಿರವಾಗಲು ಸಹಾಯಕವಾಗುವ ಎಲ್ಲ ಸಂಗತಿಗಳನ್ನ. ಅವನ ಪ್ರಕಾರ evil (ಕೇಡು) ಎಂದರೆ, ನಮ್ಮ ಮಾದರಿ ಸ್ವಭಾವಕ್ಕೆ ಹತ್ತಿರವಾಗಲು ನಮಗೆ ಎದುರಾಗುವ ಎಲ್ಲ ಅಡತಡೆಗಳು (Ethics 4, Preface). ಆನಂದ ಎನ್ನುವುದು good; ದುಃಖ (tristitia, better translated as “sadness”, “gloom”) ಎನ್ನುವುದು bad. ಆನಂದ ಎನ್ನುವುದು ಒಂದು ಸದ್ಗುಣ (virtue); ದುಃಖ ಎನ್ನುವುದು ಪಾಪ (sin).
ಆನಂದ ಎನ್ನುವುದು, ನಾವು ನಮ್ಮಂತಾಗಬೇಕೆನ್ನುವ ನಮ್ಮ ಗುರಿಗೆ ಹತ್ತಿರವಾಗಲು ಪ್ರಯತ್ನಿಸುತ್ತಿರುವಾಗ ನಮಗಾಗುವ ಅನುಭವ.
*****************************