ದೇಶಪ್ರೇಮ ಮತ್ತು ರಾಷ್ಟ್ರೀಯತೆ

ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ

ದೇಶಪ್ರೇಮ (patriotism) ಸಕಾರಾತ್ಮಕ ಕ್ವಾಲಿಟಿಯಾದರೆ ರಾಷ್ಟ್ರೀಯತೆ (nationalism) ನಕಾರಾತ್ಮಕ ಗುಣಧರ್ಮ. ದೇಶಪ್ರೇಮಿ ತನ್ನ ದೇಶದ ಕುರಿತಾದ ಎಲ್ಲವನ್ನೂ ಪ್ರೀತಿಸುತ್ತಾನೆ ಆದರೆ ಅವನು, ತನ್ನ ದೇಶದ ಸರ್ಕಾರದ ಕೆಲಸಗಳನ್ನು ಒಪ್ಪಬೇಕಿಲ್ಲ. ಒಬ್ಬ ಒಳ್ಳೆಯ ದೇಶಪ್ರೇಮಿ, ಒಬ್ಬ ಒಳ್ಳೆಯ ನಾಗರೀಕ ತನ್ನ ದೇಶದ ಸರ್ಕಾರದ ಕಾರ್ಯಕ್ರಮಗಳನ್ನ, ನೀತಿಗಳನ್ನ ದೇಶಹಿತದ ದೃಷ್ಟಿಯಿಂದ ಪ್ರಶ್ನೆ ಮಾಡುತ್ತಾನೆ, ಕೆಲವನ್ನು ವಿರೋಧ ಕೂಡ ಮಾಡುತ್ತಾನೆ. ಹಾಗೆ ಮಾಡಲು ತನಗೆ ಪೂರ್ಣ ಅಧಿಕಾರ ಇದೆ ಎಂದು ಅವನು ನಂಬಿರುತ್ತಾನೆ. ಸರ್ಕಾರ ದಾರಿ ತಪ್ಪಿದಾಗ ಅವನು ಸಿಟ್ಟಿಗೇಳುತ್ತಾನೆ.

ಆದರೆ ರಾಷ್ಟ್ರೀಯತೆಯಲ್ಲಿ ದೇಶವನ್ನು ಪ್ರೀತಿಸುವುದೆಂದರೆ ಸರ್ಕಾರದ ಎಲ್ಲ ನೀತಿಗಳನ್ನು ಪೂರ್ಣವಾಗಿ ಬೆಂಬಲಿಸುವುದು ಎಂದು ನಂಬಲಾಗುತ್ತದೆ. ಯಾರು ಸರ್ಕಾರದ ನೀತಿಗಳನ್ನು ಪ್ರಶ್ನಿಸುತ್ತಾರೋ ಅವರನ್ನು ದೇಶವಿರೋಧಿಗಳೆಂದು ಬಿಂಬಿಸಲಾಗುತ್ತದೆ. ರಾಷ್ಟ್ರೀಯತೆಗೆ ಉತ್ತಮ ಉದಾಹರಣೆಗಳೆಂದರೆ ಹಿಟ್ಲರ್ ನ ನಾಝಿ ಜರ್ಮನಿ ಮತ್ತು ಈಗಿನ ಉತ್ತರ ಕೋರಿಯಾ. ಇಲ್ಲಿ ಸರ್ಕಾರದ ಮತ್ತು ಸರ್ಕಾರದ ಮುಖ್ಯಸ್ಥನ ಎಲ್ಲ ನೀತಿಗಳನ್ನು ಪ್ರಶ್ನೆ ಮಾಡದೇ ಒಪ್ಪಿಕೊಳ್ಳಲಾಗುತ್ತದೆ. ಆದ್ದರಿಂದ ರಾಷ್ಟ್ರೀಯತೆ ಎನ್ನುವುದು ಋಣಾತ್ಮಕ ಕ್ವಾಲಿಟಿ ಏಕೆಂದರೆ ಅದು ಜನರ ನಡುವೆ ದ್ವೇಷವನ್ನು ಹುಟ್ಟು ಹಾಕುತ್ತದೆ ಮತ್ತು ಜನರ ಆಲೋಚನಾ ಶಕ್ತಿಯನ್ನು ಮಟ್ಟ ಹಾಕುತ್ತದೆ. ಆದ್ದರಿಂದ ಇದು ಕೇವಲ ಒಂದು ಧರ್ಮ, ಒಂದು ಜನಾಂಗ, ಒಂದು ಸಮುದಾಯ ಮತ್ತು ಒಂದು ಸಿದ್ಧಾಂತಕ್ಕೆ ಅನುಕೂಲಕರ.


ಆಕರ : You Tube podcast

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.