ರಾಜಕಾರಣದಲ್ಲಿ ಭಾಗವಹಿಸದಿರುವುದೆಂದರೆ…

ರಾಜಕಾರಣದಲ್ಲಿ ಭಾಗವಹಿಸದಿರುವುದರ ಹಿಂದಿನ ಕಾರಣ ನೀವು ದೊಡ್ಡ ಜ್ಞಾನಿಗಳಾಗಿರುವುದಲ್ಲ, ಇದರ ಕಾರಣ ನೀವು ಪ್ರಿವಿಲೇಜ್ಡ್ ( ಅಪಾರ ಸವಲತ್ತುಗಳನ್ನ ಹೊಂದಿರುವವರು) ಆಗಿರುವುದು. ಒಮ್ಮೆ ಈ ವ್ಯವಸ್ಥೆಯ ಹಿಂದಿನ ಲಾಜಿಕ್ ಗಮನಿಸಿ, ನೀವು ರಾಜಕೀಯವನ್ನು ಯಾಕೆ ಕೇರ್ ಮಾಡುವುದಿಲ್ಲ ಎಂದರೆ, ರಾಜಕೀಯ ಸಧ್ಯಕ್ಕೆ ನಿಮಗೆ ವೈಯಕ್ತಿಕವಾಗಿ ಯಾವ ಹಾನಿಯನ್ನೂ ಮಾಡುತ್ತಿಲ್ಲ… । ಸಂಗ್ರಹಾನುವಾದ : ಚಿದಂಬರ ನರೇಂದ್ರ

ನಮ್ಮ ಬಹಳಷ್ಟು ಸುಶಿಕ್ಷಿತ ಜನರು, ತಮಗೆ ರಾಜಕೀಯದಿಂದ ಯಾವ ವ್ಯತ್ಯಾಸವೂ ಆಗುವುದಿಲ್ಲ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ರಾಜಕೀಯ ಬಹಳ ಹೊಲಸು ಜಾಗ ಆದ್ದರಿಂದ ತಾವು ರಾಜಕೀಯದಿಂದ ಬಹಳ ದೂರ ಎಂದು ಘೋಷಿಸುತ್ತಾರೆ. ಹೀಗೆ ಹೇಳುವ ಮೂಲಕ ತಾವು ಬಹಳ ಪ್ರಶಾಂತಮಯ, ಬೌದ್ಧಿಕವಾಗಿ ಸುಪೀರಿಯರ್ ಎಂದು ತಿಳಿದುಕೊಂಡಿರುತ್ತಾರೆ. ಆದರೆ ತತ್ವಶಾಸ್ತ್ರಜ್ಞರು ಮತ್ತು ಸಮಾಜಶಾಸ್ತ್ರಜ್ಞರು ಅವರ ನಿಲುವನ್ನೇನಾದರೂ ಗಮನಿಸಿದರೆ ಅವರೆದುರು ಕಹಿ ಸತ್ಯವೊಂದನ್ನು ಅನಾವರಣಗೊಳಿಸುತ್ತಾರೆ.

ನೀವು ರಾಜಕಾರಣದಲ್ಲಿ ಭಾಗವಹಿಸದಿರುವುದರ ಹಿಂದಿನ ಕಾರಣ ನೀವು ದೊಡ್ಡ ಜ್ಞಾನಿಗಳಾಗಿರುವುದಲ್ಲ, ಇದರ ಕಾರಣ ನೀವು ಪ್ರಿವಿಲೇಜ್ಡ್ ( ಅಪಾರ ಸವಲತ್ತುಗಳನ್ನ ಹೊಂದಿರುವವರು) ಆಗಿರುವುದು. ಒಮ್ಮೆ ಈ ವ್ಯವಸ್ಥೆಯ ಹಿಂದಿನ ಲಾಜಿಕ್ ಗಮನಿಸಿ, ನೀವು ರಾಜಕೀಯವನ್ನು ಯಾಕೆ ಕೇರ್ ಮಾಡುವುದಿಲ್ಲ ಎಂದರೆ, ರಾಜಕೀಯ ಸಧ್ಯಕ್ಕೆ ನಿಮಗೆ ವೈಯಕ್ತಿಕವಾಗಿ ಯಾವ ಹಾನಿಯನ್ನೂ ಮಾಡುತ್ತಿಲ್ಲ.

ನೀವು ಭಾರತದ ಯಾವುದೇ ಒಂದನೇಯ ಅಥವಾ ಎರಡನೇಯ ದರ್ಜೆಯ ಮಹಾನಗರಗಳಲ್ಲಿ ಯಾವುದಾದರೂ ಅತ್ಯುತ್ತಮ ಗೇಟೆಡ್ ಕಮ್ಯುನಿಟಿಯಲ್ಲಿ ವಾಸಿಸುತ್ತಿರುವಿರಾದರೆ, ರಾಜಕೀಯದಿಂದ ದೂರ ಉಳಿಯುವುದನ್ನ ನೀವು afford ಮಾಡಬಹುದು. ಸರಕಾರಿ ಶಾಲೆಗಳು ಕುಸಿದು ಬಿದ್ದರೆ ಅದರಿಂದ ನಿಮಗೆ ವ್ಯತ್ಯಾಸವಾಗುವುದಿಲ್ಲ, ಏಕೆಂದರೆ ನಿಮ್ಮ ಮಕ್ಕಳು ಶ್ರೀಮಂತ ಖಾಸಗಿ ಶಾಲೆಗಳಲ್ಲಿ ಓದುತ್ತಿದ್ದಾರೆ. ಯಾವುದೇ ಸರಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ನ ಕೊರತೆಯಾದರೆ ನಿಮಗೆ ಇದರಿಂದಲೂ ಯಾವ ತೊಂದರೆಯೂ ಆಗುವುದಿಲ್ಲ, ಏಕೆಂದರೆ ನಿಮ್ಮ ಹತ್ತಿರ ಆರೋಗ್ಯ ವಿಮೆ ಇದೆ. ಪೋಲಿಸರು ಯಾವ ಗುಂಪಿನ ಮೇಲಾದರೂ ದಬ್ಬಾಳಿಕೆ ಮಾಡಿದರೆ ನಿಮಗೆ ಯಾವ ಹಾನಿ ಇಲ್ಲ, ಏಕೆಂದರೆ ಇದೇ ಪೋಲಿಸರು ನಿಮ್ಮ ಗೇಟ್ ಬಳಿ ಬಂದು ನಿಮಗೆ ಸೆಲ್ಯೂಟ್ ಮಾಡುತ್ತಾರೆ. ಒಬ್ಬ ಪ್ರಿವಿಲೇಜ್ಡ್ ಭಾರತೀಯನಿಗೆ ಈ ವ್ಯವಸ್ಥೆ ಪರಫೆಕ್ಟಾಗಿದೆ.

ಒಮ್ನೆ ಆರ್ಚ್ ಬಿಷಪ್ ಡೆಸ್ಮಂಡ್ ಟುಟೋ ಹೇಳಿದ್ದರು, “ If you are neutral in the situation of injustice, you have chosen the side of the oppressor”. ನಾವು ರಾಜಕೀಯದಿಂದ ದೂರ ಎಂದು ಹೇಳುವ ಮೂಲಕ ಈ ವ್ಯವಸ್ಥೆ ಹೀಗೆ ಮುಂದುವರಿಯಲು ನೀವು ವೋಟ್ ಮಾಡುತ್ತಿದ್ದೀರಿ. ನಿಮಗೆ ನಿಮಗಿಂತ ಕಡಿಮೆ ಪ್ರಿವಿಲೇಜ್ಡ್ ಜನರನ್ನು ಈ ವ್ಯವಸ್ಥೆ ತುಳಿದು ಹಾಕಿದರೂ ಯಾವ ವ್ಯತ್ಯಾಸವಾಗುವುದಿಲ್ಲ.

ನಿಮ್ಮ ಇಂಥ ದೃಷ್ಟಿಕೋನವನ್ನು ಒಮ್ನೆ ಸೂಕ್ಷ್ಮವಾಗಿ ಅವಲೋಕನ ಮಾಡಿ. ಯಾವುದೇ ದಲಿತರಿಗೆ, ಆದಿವಾಸಿಗಳಿಗೆ, ಕೂಲಿ ಕಾರ್ಮಿಕರಿಗೆ ಅಥವಾ ಧಾರ್ಮಿಕ ಅಲ್ಪಸಂಖ್ಯಾತರಿಗೆ ರಾಜಕೀಯದಿಂದ ದೂರ ಉಳಿಯುವುದು ( apolitical ಆಗುವುದು) ನೈಸರ್ಗಿಕವಾಗಿ ಅಸಾಧ್ಯದ ವಿಷಯ. ಅವರಿಗೆ ರಾಜಕೀಯ ಎಂದರೆ ಟಿವಿಯಲ್ಲಿ ನಡೆಯುತ್ತಿರುವ ವಾದವಿವಾದ ಅಲ್ಲ. ಅವರಿಗೆ ರಾಜಕೀಯ, ಅವರು ಕುಡಿಯುವ ನೀರು. ಅವರಿಗೆ ರಾಜಕೀಯ ಎಂದರೆ, ಅವರು ನಿಮ್ಮ ಬಡಾವಣೆಯಲ್ಲಿ ಮನೆ ಬಾಡಿಗೆ ಪಡೆಯಬಹುದೋ ಇಲ್ಲವೋ ಎನ್ನುವುದು. ಅವರಿಗೆ ರಾಜಕೀಯ ಎಂದರೆ ಯಾವ ಗಲಾಟೆಯಿಲ್ವದೇ ಅವರು ಯಾರನ್ನಾದರೂ ಪ್ರೀತಿಸಬಹುದಾ ಎನ್ನುವುದು. ಅಂಚಿನಲ್ಲಿರುವ ಭಾರತೀಯರಿಗೆ, ಸುಮ್ಮನೇ ಬದುಕುವುದು ಮತ್ತು ಮೂಲಭೂತ ಮಾನವ ಘನತೆಯನ್ನು ಡಿಮಾಂಡ್ ಮಾಡುವುದು ಕ್ರಾಂತಿಕಾರಕ ರಾಜಕೀಯ ಪ್ರಕ್ರಿಯೆ.

ಬಾಬಾ ಸಾಹೇಬ ಅಂಬೇಡ್ಕರ್ ಅವರು ಈ ಸತ್ಯವನ್ನು ಬಹಳ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದರು. ಆದ್ದರಿಂದಲೇ ಅವರು ಹೇಳಿದರು, Educate, Agitate & Organise ಎಂದು. ಹಾಗೆಂದರೆ ಶಿಕ್ಷಿತರಾಗಿ, ಆಂದೋಲನಕ್ಕೆ ಸಿದ್ಧರಾಗಿ ಮತ್ತು ಸಂಘಟಿತರಾಗಿ. ರಾಜಕಾರಣ ಬಹಳ ಕೊಳಕು, ಇದರಿಂದ ಬಹಳ ದೂರ ಇರಿ ಎಂದು ನಿಮಗೆ ಬೋಧನೆ ಮಾಡುವ ಜನ, ಎಲ್ಲ ರಾಜಕೀಯ ಅಧಿಕಾರ ಮತ್ತು ಸವಲತ್ತುಗಳನ್ನು ತಮ್ಮ ಮುಷ್ಟಿಯಲ್ಲಿ ಇಟ್ಟುಕೊಂಡವರು. ಆದ್ದರಿಂದ ನಿಮ್ಮ ಈ ಅಜ್ಞಾನದ ಬಗ್ಗೆ ಹೆಮ್ಮೆಪಡುವುದನ್ನ ನಿಲ್ಲಿಸಿ. ರಾಜಕೀಯದಿಂದ ದೂರ ಇರುತ್ತೇನೆ ಎಂದು ಹೇಳುವುದು ನಿಮ್ಮನ್ನು ಸಂತನನ್ನಾಗಿಸುವುದಿಲ್ಲ, ಬದಲಾಗಿ ನಿಮ್ಮನ್ನು ಹೇಡಿ ನಾಗರೀಕನನ್ನಾಗಿಸುತ್ತದೆ. ನಿಮಗೆ ಪ್ರಜಾಪ್ರಭುತ್ವದ ಎಲ್ಲ ಲಾಭಗಳು ಬೇಕು ಆದರೆ ಭಾಗವಹಿಸುವಿಕೆಯ ಟ್ಯಾಕ್ಸ್ ನೀಡಲು ನಿಮಗೆ ಒಪ್ಪಿಗೆ ಇಲ್ಲ.

ಒಮ್ಮೆ ಗ್ರೀಕ್ ತತ್ವಜ್ಞಾನಿ ಪೆರಿಕ್ಲಸ್ ಹೇಳಿದ್ದ, Just because you do not take interest in politics, doesn’t mean politics won’t take interest in you.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.