ಅಸಂಗತ ಅತಿ ಅಂದಾಜು…

ಫಿಲಾಸೊಫರ್ Mary Midgley ಅವರು ಹೇಳುವಂತೆ, ವೈಜ್ಞಾನಿಕತೆ ಕೂಡ ಒಂದು ನಂಬಿಕೆಯೇ… ~ ಸಂಗ್ರಹಾನುವಾದ : ಚಿದಂಬರ ನರೇಂದ್ರ

ಸತ್ಯದ ಮೇಲೆ ವಿಜ್ಞಾನದ ಏಕಸ್ವಾಮ್ಯ ಏಕೆ?  ಯಾಕೆ, ಪ್ರಯೋಗಗಳು, ಪುನರಾವರ್ತನೆಗಳು, (replication), ಮತ್ತು ಸಾಕ್ಷ್ಯಗಳು ಮಾತ್ರ ಸತ್ಯವನ್ನು ತಿಳಿದುಕೊಳ್ಳುವ ದಾರಿಗಳು? ಆಧುನಿಕ ವೈಜ್ಞಾನಿಕ ವಿಧಾನಗಳು ಕೆಲವು ನೂರು ವರ್ಷಗಳಿಂದ ಚಾಲ್ತಿಯಲ್ಲಿವೆಯಾದರೆ, ಮನುಷ್ಯ ಸಾವಿರಾರು ವರ್ಷಗಳಿಂದ ತತ್ವಚಿಂತನೆ, ಆರಾಧನೆಗಳಲ್ಲಿ ತನ್ನನ್ನು ತಾನು ಕೊಡಗಿಸಿಕೊಂಡಿದ್ದಾನೆ.  ಮನುಷ್ಯ ತಿಳಿದುಕೊಳ್ಳಬೇಕಾದ ವಿಷಯಗಳು ಬಹಳಷ್ಟು ಇವೆಯಾದ್ದರಿಂದ, ತಿಳಿದುಕೊಳ್ಳಬೇಕಾದ ವಿಧಾನಗಳೂ ಬಹಳಷ್ಟು ಇರಬೇಕಾಗುತ್ತದೆ.

ಫಿಲಾಸೊಫರ್ Mary Midgley ಅವರು ಹೇಳುವಂತೆ, ವೈಜ್ಞಾನಿಕತೆ ಕೂಡ ಒಂದು ನಂಬಿಕೆಯೇ , ಎಂಥ ನಂಬಿಕೆಯೆಂದರೆ, ಕೇವಲ ವಿಜ್ಞಾನ ಮಾತ್ರ ಮನುಷ್ಯ ತಿಳುವಳಿಕೆಗೆ ಕೊಡುಗೆ ನೀಡಬಲ್ಲದು ಎನ್ನುವ ನಂಬಿಕೆ. ಅವರ ಪ್ರಕಾರ ಇದು ಒಂದು ‘ಅಸಂಗತ ಅತಿ ಅಂದಾಜು’ (absurd overestimation). ಮೇರಿ ವಿಜ್ಞಾನದ ವಿರುದ್ಧ ಇಲ್ಲ. ವಿಜ್ಞಾನ,  ಹಿಂದೆ ಇಂದು ಮತ್ತು ಮುಂದೆ ಕೂಡ ಜಗತ್ತಿಗೆ ಅಪಾರ ಕೊಡುಗೆಗಳನ್ನು ನೀಡಲಿದೆ, ಆದರೆ ಸತ್ಯದ ಮೇಲೆ ವಿಜ್ಞಾನದ ಏಕಸ್ವಾಮ್ಯ ಇಲ್ಲ.

ತತ್ವಜ್ಞಾನಿ Blaise Pascal ಒಮ್ಮೆ ಹೇಳಿದ್ದರು, ಹೃದಯಕ್ಕೆ ತನ್ನದೇ ಆದ ತಾರ್ಕಿಕ ಕಾರಣಗಳಿವೆ (reasons), ಮತ್ತು ಈ ಬಗ್ಗೆ ಕಾರಣಗಳಿಗೆ ಏನ್ನೂ ಹೊತ್ತಿಲ್ಲ…. ಸತ್ಯ ನಮಗೆ ಗೊತ್ತಾಗುವುದು ಕೇವಲ ರೀಸನ್ ನಿಂದಲ್ಲ, ಹೃದಯದಿಂದ ಕೂಡ.

ನಾವು ತಿಳುವಳಿಕೆಯನ್ನ (knowledge) ಹೇಗೆ ವ್ಯಾಖ್ಯಾನ ಮಾಡುತ್ತೇವೆ ಎನ್ನುವುದರ ಮೇಲೆ ಎಲ್ಲ ಅವಲಂಬಿತವಾಗಿದೆ. ನಾವು ತಿಳುವಳಿಕೆಯನ್ನ ಕೇವಲ ಸಾಕ್ಷ್ಯಾಧಾರಗಳಿಗೆ ಸೀಮಿತಗೊಳಿಸುತ್ತೇವೆಯಾದರೆ, ಹೌದು ಆಗ ನಮಗೆ ವಿಜ್ಞಾನ ಮಾತ್ರ ಸಹಾಯ ಮಾಡಬಲ್ಲದು. ಆದರೆ ನಮಗೆ ಪ್ರೇಮ, ಚೆಲುವು, ಸರಿ-ತಪ್ಪು, ಅಥವಾ ದೇವರು ಗಳ ಬಗ್ಗೆಯೂ ತಿಳುವಳಿಕೆ ಸಾಧ್ಯವಾಗಬೇಕು ಎಂದರೆ, ಆಗ ಈ ಎಲ್ಲ ತಿಳುವಳಿಕೆಗೆ ಹಲವಾರು ದಾರಿಗಳಿವೆ.

ಕೆಲವು ತತ್ವಜ್ಞಾನಿಗಳು ನಾವು ಅನುಭವಿಸಬಹುದಾದ, ಸಾಕ್ಷ್ಯಗಳನ್ನು ಕೊಡಬಹುದಾದ ಸಂಗತಿಗಳು ಮಾತ್ರ ಸತ್ಯ ಎನ್ನುವುದಾದರೆ, ನಾವು ಜಗತ್ತನ್ನು ತುಂಬ ಸೀಮಿತಗೊಳಿಸುತ್ತಿದ್ದೇವೆ?  ಶೆಕ್ಸಪಿಯರ್ ನ ಹ್ಯಾಮ್ಲೇಟ್ ನಾಟಕದ ಮಾತುಗಳನ್ನ ಬಳಸಿಕೊಂಡು ಹೇಳುವುದಾದರೆ, “ಫಿಲಾಸೋಫಿ ತನ್ನ ಕನಸಿನಲ್ಲಿ ಕಾಣುವ ಸಂಗತಿಗಳಿಂತ ಹೆಚ್ಚು ಸಂಗತಿಗಳು ಆಕಾಶ ಮತ್ತು ಭೂಮಿಯ ಮೇಲೆ ಇವೆ”.

********************************

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.