ಭಾವನಾತ್ಮಕ ಸೋಂಕು

ನಿಮ್ಮ ಮೆದುಳು ಆ ಇನ್ನೊಬ್ಬ ವ್ಯಕ್ತಿಯಿಂದ ಹೊರಬರುತ್ತಿರುವ ಸೂಕ್ಷ್ಮ ಸಂಕೇತಗಳನ್ನು ಗ್ರಹಿಸುತ್ತಿದೆ, ತನ್ನದಾಗಿಸಿಕೊಳ್ಳುತ್ತಿದೆ. ಅವರ ಮುಖಭಾವ, ಅವರ ಮಾತಿನ ಶೈಲಿ, ಅವರ ದೇಹ ಭಾಷೆ ನಿಮ್ಮ ಮೇಲೆ ಪ್ರಭಾವ ಬೀರುತ್ತಿದೆ ಮತ್ತು ನೀವು ಕೂಡ ಅವರನ್ನು ಇಮಿಟೇಟ್ ಮಾಡಲು ಶುರು ಮಾಡುತ್ತೀರಿ… । ಸಂಗ್ರಹ ಅನುವಾದ: ಚಿದಂಬರ ನರೇಂದ್ರ

ಸೈಕಾಲೊಜಿಯಲ್ಲಿ Emotional Contagion (ಭಾವನಾತ್ಮಕ ಸೋಂಕು) ಎನ್ನುವ ಪರಿಕಲ್ಪನೆಯೊಂದಿದೆ. ಬಹುತೇಕ ನಿಮ್ಮ ಭಾವನೆಗಳು ನಿಮ್ಮೊಳಗೇ ಸೃಷ್ಟಿಯಾದವುಗಳಲ್ಲ, ಅವುಗಳನ್ನ ನೀವು ನಿಮಗೂ ಗೊತ್ತಿರದಂತೆ ನಿಮ್ಮ ಸುತ್ತಲಿನ ಜನರಿಂದ ಆವಾಹಿಸಿಕೊಂಡಿರುತ್ತೀರಿ. ಉದಾಹರಣೆಗೆ, ನೀವು ತುಂಬ ಒತ್ತಡದಲ್ಲಿರುವ, ಕಿರಿಕಿರಿಯಲ್ಲಿರುವ ವ್ಯಕ್ತಿಯ ಕೋಣೆಯೊಳಗೆ ಪ್ರವೇಶ ಮಾಡುತ್ತೀರಾದರೆ, ಥಟ್ಟನೇ ನಿಮ್ಮ ಭಾವನಾತ್ಮಕ ಸ್ಥಿತಿಯಲ್ಲೂ ಬದಲಾವಣೆಗಳಾಗುವುದನ್ನ ನೀವು ಗಮನಿಸಬಹುದು. ಅಂಥ ಭಾವನೆಗಳನ್ನು ನೀವು ಅನುಭವಿಸುವ ಯಾವ ನೇರ ಕಾರಣಗಳೂ ಇಲ್ಲ ಆದರೆ, ನಿಮ್ಮ ದೇಹ ಹಾಗೆ ಪ್ರತಿಕ್ರಯಿಸುತ್ತಿದೆ. ನೀವು ಒಬ್ಬ ಪ್ರಶಾಂತ, ಸ್ಥಿರ ವ್ಯಕ್ತಿತ್ವದ ವ್ಯಕ್ತಿಯೊಡನೆ ಸಮಯ ಕಳೆಯುತ್ತೀರಾದರೆ, ನೀವು ನಿಮ್ಮಲ್ಲೂ ಆ ಪ್ರಶಾಂತತೆಯನ್ನ, ಭಾರರಹಿತತೆಯನ್ನ ಸ್ಥಿರತೆಯನ್ನ ನಿಧಾನವಾಗಿ ಕಾಣಲು ಶುರು ಮಾಡುತ್ತೀರಿ, ಆದರೆ ಇದ್ಯಾವುದೂ ಕಾಕತಾಳೀಯವಲ್ಲ.

ನಿಮ್ಮ ಮೆದುಳು ಆ ಇನ್ನೊಬ್ಬ ವ್ಯಕ್ತಿಯಿಂದ ಹೊರಬರುತ್ತಿರುವ ಸೂಕ್ಷ್ಮ ಸಂಕೇತಗಳನ್ನು ಗ್ರಹಿಸುತ್ತಿದೆ, ತನ್ನದಾಗಿಸಿಕೊಳ್ಳುತ್ತಿದೆ. ಅವರ ಮುಖಭಾವ, ಅವರ ಮಾತಿನ ಶೈಲಿ, ಅವರ ದೇಹ ಭಾಷೆ ನಿಮ್ಮ ಮೇಲೆ ಪ್ರಭಾವ ಬೀರುತ್ತಿದೆ ಮತ್ತು ನೀವು ಕೂಡ ಅವರನ್ನು ಇಮಿಟೇಟ್ ಮಾಡಲು ಶುರು ಮಾಡುತ್ತೀರಿ. ನಿಮ್ಮ ಈ ಪ್ರತಿಕ್ರಿಯೆ ಪ್ರಜ್ಞಾಪೂರ್ವಕ ಅಲ್ಲದಿದ್ದರೂ ಕೆಲವೊಮ್ಮೆ ಅಟೋಮ್ಯಾಟಿಕ್ ಆಗಿರುತ್ತದೆ. ಏಕೆಂದರೆ ಜೀವಶಾಸ್ತ್ರೀಯವಾಗಿ ನಿಮ್ಮ ಸುತ್ತಲಿನ ವಾತಾವರಣದೊಂದಿಗೆ sync ಆಗುವುದು ನಿಮ್ಮ survival ಗೆ ಬಹಳ ಅಗತ್ಯ.

ಆದರೆ ಈವತ್ತಿನ ಜಗತ್ತಿನಲ್ಲಿ ನಿಮ್ಮ ಇಂಥ ವರ್ತನೆ ನಿಮ್ಮ ವಿರುದ್ಧವೇ ಕೆಲಸ ಮಾಡುವ ಸಾಧ್ಯತೆಗಳು ಜಾಸ್ತಿಯಾಗಿವೆ. ಏಕೆಂದರೆ ಈ ಕುರಿತು ನಿಮಗೆ ಮಾಹಿತಿ ಇಲ್ಲದಿದ್ದರೆ, ನೀವು ನಿಮ್ಮದಲ್ಲದ ಭಾವನೆಗಳನ್ನು ಅನಾವಶ್ಯಕವಾಗಿ ಕ್ಯಾರಿ ಮಾಡುತ್ತ ನಿಮ್ಮ ಸುತ್ತಲಿನವರ ಕಿರಿಕಿರಿಗೆ ಕಾರಣರಾಗುತ್ತೀರಿ. ನೀವು ಇಂಥ ಭಾವನೆಗಳಿಗೆ ಮತ್ತೆ ಮತ್ತೆ ತೆರೆದುಕೊಂಡಿರುವುದು ನಿಮಗೆ ಗೊತ್ತಾಗದೆಯೇ ಕೆಲ ಸಮಯದ ನಂತರ ಇವು ನಿಮ್ಮದೇ ಭಾವನೆಗಳೆಂದು ನೀವು ತಪ್ಪು ತಿಳಿಯುತ್ತೀರಿ. ಆದ್ಧರಿಂದ ಸಂಶೋಧನೆಗಳ ಪ್ರಕಾರ ನೀವು ತಿಳಿದುಕೊಂಡಿರುವುದಕ್ಕಿಂತ ಹೆಚ್ಚು ನಿಮ್ಮ ವಾತಾವರಣ ನಿಮ್ಮ ಮೇಲೆ ಪ್ರಭಾವ ಬೀರುತ್ತಿರುತ್ತದೆ, ಕೇವಲ ಭೌತಿಕವಾಗಿ ಅಲ್ಲ, ಭಾವನಾತ್ಮಕವಾಗಿ ಕೂಡ.

ನಿಮ್ಮ ಸುತ್ತಲಿನ ಜನರು, ನೀವು ತೊಡಗಿಸಿಕೊಂಡ ಮಾತುಕತೆಗಳು, ನಿಮ್ಮ ಸ್ಪೇಸ್ ಗೆ ಬರಲು ನೀವು ಅವಕಾಶ ಮಾಡಿಕೊಟ್ಟ ಎನರ್ಜಿ, ಈ ಎಲ್ಲವೂ ನಿಮ್ಮ ಒಳಗಿನ ಭಾವನಾತ್ಮಕ ಸ್ಥಿತಿಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹಾಗೆಂದು ನೀವು, ನಿಮ್ಮ ಸುತ್ತಲಿನ ಜನರಿಂದ ದೂರವಾಗಬೇಕಿಲ್ಲ, ಆದರೆ ಅವರಿಂದ ನೀವು ಏನು ತೆಗೆದುಕೊಳ್ಳುತ್ತಿದ್ದೀರಿ ಎನ್ನುವ ಕುರಿತು ಅರಿವು ಮೂಡಿಸಿಕೊಳ್ಳಬೇಕಾಗುತ್ತದೆ. ಏಕೆಂದರೆ ನಿಮ್ಮ ಭಾವನಾತ್ಮಕ ಸ್ಥಿತಿ ಕೇವಲ ನಿಮ್ಮ ಆಲೋಚನೆಗಳಿಂದ ಪ್ರಭಾವಿತವಾಗಿಲ್ಲ, ಅದು ನಿಮ್ಮ ಸುತ್ತಲಿನ ಜನರಿಂದ, ವಾತಾವರಣದಿಂದ ಕೂಡ ಪ್ರಭಾವಿತವಾಗಿದೆ, ನಿಮಗೆ ಗೊತ್ತಿರುವುದಕ್ಕಿಂತ ಹೆಚ್ಚು

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.