ಇವರು ಸಿದ್ಧ ಮಾದರಿಗಳನ್ನು ಮುರಿಯುವ ಜನ. ಇವರ ಬಳಿ ಈ ವಾತಾವರಣಕ್ಕೆ ಒಗ್ಗದ ಒಂದು ಪ್ರಾಮಾಣಿಕ ಹೃದಯವಿದೆ… | ಸಂಗ್ರಹಾನುವಾದ : ಚಿದಂಬರ ನರೇಂದ್ರ
ಪ್ರತೀ ಕುಟುಂಬದಲ್ಲಿ ಇಂಥ ಒಬ್ಬ ವ್ಯಕ್ತಿಯಾದರೂ ಇದ್ದೇ ಇರುತ್ತಾರೆ, ಆ ಕುಟುಂಬದ ಪರಿಪೂರ್ಣ ಚಿತ್ರದಲ್ಲಿ ಸರಿಯಾಗಿ ಫಿಟ್ ಆಗದಂಥವರು. ಇದಕ್ಕೆ ಕಾರಣ ಈ ವ್ಯಕ್ತಿಯಲ್ಲಿ ಯಾವುದೋ ಸಮಸ್ಯೆ ಇದೆಯಂತಲ್ಲ, ಬದಲಾಗಿ ಇವರು ಆ ಕುಟುಂಬದ ಮುಚ್ಚಿಡಲಾದ ಸತ್ಯಗಳನ್ನು ನಿಖರವಾಗಿ ನೋಡಬಲ್ಲವರಾಗಿರುತ್ತಾರೆ. ಸೈಕಾಲೊಜಿಯಲ್ಲಿ ಇಂಥವರನ್ನು Black Sheep ಎಂದು ಗುರುತಿಸಲಾಗುತ್ತದೆ. ಬಾಕಿ ಎಲ್ಲರೂ ಸುಮ್ಮನೇ ಒಪ್ಪಿಕೊಳ್ಳುವ ಸಂಗತಿಗಳ ಬಗ್ಗೆಯೂ ಇವರು ಪ್ರಶ್ನೆ ಎತ್ತುತ್ತಾರೆ. ಕುರುಡು ಸಂಪ್ರದಾಯಗಳನ್ನು ಫಾಲೋ ಮಾಡಲು ಇವರು ಸುತರಾಂ ಒಪ್ಪುವುದಿಲ್ಲ. ಪ್ರತಿಯೊಂದನ್ನೂ ಇವರು ಆಳವಾಗಿ ಅನುಭವಿಸುತ್ತಾರೆಯಾದ್ದರಿಂದ, ಕುಟುಂಬದ ಜನ ಇವರಿಗೆ ನೌಟಂಕಿ, ಜಿದ್ದಿ, ಮತ್ತು ಬಂಡಾಯಗಾರರು ಎಂದು ಹೆಸರಿಡುತ್ತಾರೆ.
ಆದರೆ ಸತ್ಯ ಏನೆಂದರೆ ಆ ಕುಟುಂಬದಲ್ಲಿ ಇವರಿಗೆ ಮಾತ್ರ ಕುಟುಂಬದ ಟಾಕ್ಸಿಕ್ ಸೈಕಲ್ ನ ಮೀರುವ ಧೈರ್ಯ ಸಾಧ್ಯವಾಗಿರುತ್ತದೆ. ಬಾಕಿ ಎಲ್ಲರೂ ಇಗ್ನೋರ್ ಮಾಡುವ ಸಂಗತಿಗಳನ್ನು ನೋಡುತ್ತಲೇ ಬೆಳೆದಿದೆ ಈ ಮಗು. ಈ ಮಗು ಕೋಣೆಯೊಳಗಿನ ನೀರವದಲ್ಲಿ ಅಡಗಿಕೊಂಡಿರುವ ಟೆನ್ಷನ್ ನ ಸುಮ್ಮನೇ ಯಾವ ಮಾತನ್ನೂ ಆಡದೇ ಸೆನ್ಸ್ ಮಾಡಿತ್ತು. ಕುಟುಂಬದ ಜನರ ಮಧ್ಯೆ ಇರುತ್ತಿರುವಾಗಲೂ ಏಕಾಂಗಿಯಾಗಿ ಬದುಕುವ ಕಲೆಯನ್ನು ಕಲಿತುಕೊಂಡು ಬಿಟ್ಟಿದ್ದೆ ಈ ಮಗು.
ಇವರು ಯೋಚನೆ ಮಾಡುವ, ಪ್ರೀತಿಸುವ, ಕನಸು ಕಾಣುವ ರೀತಿ ಭಿನ್ನವಾಗಿರುವುದರಿಂದ ಕುಟುಂಬ ಇವರನ್ನು ಒಂದು ಸಮಸ್ಯೆ ಎಂದು ಗುರುತಿಸುತ್ತದೆ. ಆದರೆ ಇದು ಸತ್ಯ ಅಲ್ಲ ಎನ್ನುವುದನ್ನ ಕುಟುಂಬಕ್ಕೆ ಯಾರೂ ಹೇಳುವುದಿಲ್ಲ. ಇವರು ಸಿದ್ಧ ಮಾದರಿಗಳನ್ನು ಮುರಿಯುವ ಜನ. ಇವರ ಬಳಿ ಈ ವಾತಾವರಣಕ್ಕೆ ಒಗ್ಗದ ಒಂದು ಪ್ರಾಮಾಣಿಕ ಹೃದಯವಿದೆ. ನಿಮಗೂ ನಿಮ್ಮ ಕುಟುಂಬದಲ್ಲಿ ಒಬ್ಬ ಅನ್ಯರಂತೆ ಅನುಭವವಾಗುತ್ತದೆಯಾದರೆ, ನೀವು ಕಳೆದುಕೊಂಡವರು, lost ಅಲ್ಲ. ಬದಲಾಗಿ ನಿಮ್ಮ ಕುಟುಂಬ ಒಪ್ಪಿಕೊಳ್ಳಲು ಸಿದ್ಧವಾಗಿರದ ವ್ಯಕ್ತಿಯಾಗಿ ನೀವು ರೂಪಗೊಳ್ಳುತ್ತಿದ್ದೀರಿ.
********************************

