ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ
“Straw man” ಯಾರು ಎಂದರೆ, ವ್ಯಕ್ತಿಯೊಬ್ಬರ ವಾದವನ್ನು ಅತಿಯಾಗಿ ಸರಳೀಕರಿಸುವವರು ಅಥವಾ ಅತಿಶಯೋಕ್ತಿಯಿಂದ ಬಣ್ಣಿಸುವವರು — ಆಗ ಆ ವಾದ, ಸುಲಭವಾಗಿ ದಾಳಿ ಮಾಡಲು ಅನುಕೂಲಕರ ಗುರಿಯಾಗುತ್ತದೆ. ಉದಾಹರಣೆಗೆ, ನಾಸ್ತಿಕನೊಬ್ಬನು ಕ್ರಿಶ್ಚಿಯಾನಿಟಿ ಎಂದರೆ ಕೇವಲ ಆಕಾಶದಲ್ಲಿ ಇರುವ ಗಡ್ಡದ ಮನುಷ್ಯನನ್ನು ಪೂಜಿಸುವುದಷ್ಟೇ ಎಂದು ಹೇಳಿದರೆ, ಅದು straw man ನ ಮಾತಾಗುತ್ತದೆ. ಏಕೆಂದರೆ ಬಹುತೇಕ ಕ್ರೈಸ್ತರು ತಮ್ಮ ಧರ್ಮದ ಆ ರೀತಿಯ ಚಿತ್ರಣವನ್ನು ಒಪ್ಪುವುದಿಲ್ಲ. ಆದರೆ straw man ಗೆ ವಿರುದ್ಧವಾದುದು “steel man.”
ಮತ್ತು Daniel Dennett ಅವರ ಪ್ರಕಾರ, ಇದು ಒಳ್ಳೆಯ ತಾತ್ವಿಕ (philosophical) ಚರ್ಚೆಗೆ ಅಗತ್ಯವಾದ ಪ್ರಮುಖ ಅಂಶಗಳಲ್ಲಿ ಒಂದಾಗಿದೆ.
2013ರಲ್ಲಿ, Daniel Dennett ಅತ್ಯುತ್ತಮ ತಾತ್ವಿಕ ಚರ್ಚೆಗೆ ಸಹಾಯಕಾರಿಯಾಗುವಂಥ ನಾಲ್ಕು ಪ್ರಮುಖ ನಿಯಮಗಳನ್ನು ಮಂಡಿಸಿದರು.
ಮೊದಲನೆಯದು, ಮತ್ತು ಅತ್ಯಂತ ಮುಖ್ಯವಾದುದು, ನೀವು ನಿಮ್ಮ ಎದುರಾಳಿಯ (target) ನಿಲುವನ್ನು ಸ್ಪಷ್ಟವಾಗಿ, ಜೀವಂತಿಕೆಯಿಂದ ಮತ್ತು ನ್ಯಾಯಯುತವಾಗಿ ವಿವರಿಸಬೇಕು — ಅದನ್ನು ಕೇಳಿದ ನಿಮ್ಮ ಎದುರಾಳಿಯೇ “ನಾನು ಈ ಮಾತುಗಳನ್ನ ಹೀಗೆ ಯೋಚಿಸಿದ್ದರೆ ಚೆನ್ನಾಗಿರುತ್ತಿತ್ತು” ಎಂದು ಅಂದುಕೊಳ್ಳುವಂತೆ.
ಎರಡನೆಯದು, ನೀವು ಮತ್ತು ನಿಮ್ಮ ಚರ್ಚೆಯ ಎದುರಾಳಿ ಯಾವ ಯಾವ ವಿಷಯಗಳಲ್ಲಿ ಒಮ್ಮತ ಹೊಂದಿದ್ದೀರಿ ಎನ್ನುವುದನ್ನು ಪಟ್ಟಿ ಮಾಡುವುದು.
ಮೂರನೆಯದು, ನಿಮ್ಮ ಎದುರಾಳಿ ನಿಮಗೆ ಯಾವ ಹೊಸ ವಿಷಯವನ್ನು ಕಲಿಸಿದ್ದಾರೆ ಎನ್ನುವುದನ್ನು ಒಪ್ಪಿಕೊಳ್ಳುವುದು.
ನಾಲ್ಕನೆಯದು, ಈ ಎಲ್ಲದರ ನಂತರ ಮಾತ್ರ ನೀವು ಅವರ ನಿಲುವನ್ನು ಖಂಡಿಸಬಹುದು ಅಥವಾ ಟೀಕಿಸಬಹುದು.
ಈ ಎಲ್ಲದರ ಮುಖ್ಯ ಉದ್ದೇಶ, ನಿಮ್ಮ ಪ್ರತಿಸ್ಪರ್ಧಿಯನ್ನೂ ಅವರ ನಿಲುವನ್ನೂ ಗೌರವದಿಂದ ನಡೆಸಿಕೊಳ್ಳುವುದು. ನೀವು Plato ನ Dialogues ಓದಿದರೆ, ಅಲ್ಲಿ ಸಾಕ್ರೆಟಿಸ್ ಯಾವಾಗಲೂ ತನ್ನ ಪ್ರತಿಸ್ಪರ್ಧಿಗಳ ವಾದವನ್ನು steel man ರೂಪದಲ್ಲಿ ಮಂಡಿಸುತ್ತಾನೆ ಎನ್ನುವುದನ್ನು ಗಮನಿಸುತ್ತೀರಿ. Dialogues ನ ಬಹು ದೊಡ್ಡ ಭಾಗ, ಸಾಕ್ರೆಟಿಸ್ ಎದುರಾಳಿಯ ನಿಲುವನ್ನು ಸ್ಪಷ್ಟಪಡಿಸುವುದು, ಅದನ್ನು ವಿವರವಾಗಿ ಮಂಡಿಸುವುದು, ಮತ್ತು ಕೆಲವೊಮ್ಮೆ ಅದನ್ನು ಇನ್ನಷ್ಟು ಬಲಪಡಿಸುವುದೇ ಆಗಿದೆ.
ಪ್ಲೇಟೋ ಮತ್ತು Daniel Dennett ಇಬ್ಬರಿಗೂ ಗೊತ್ತಿತ್ತು, ನಮ್ಮ ನಂಬಿಕೆಗಳಲ್ಲಿ ನಾವು ನಿಜವಾಗಿಯೂ ಬೆಳೆಯಬೇಕಾದರೆ, ಚರ್ಚೆಯನ್ನು ನಾವು ರಚನಾತ್ಮಕ ಕ್ರಿಯೆಯಾಗಿ, ಮತ್ತು ಒಳ್ಳೆಯ ಉದ್ದೇಶದೊಂದಿಗೆ ಪರಿಗಣಿಸಬೇಕು. ಚರ್ಚೆಗಳು ಎದುರಾಳಿಯನ್ನು ಮೂರ್ಖನಂತೆ ತೋರಿಸಲು ಇರುವ ವಿರುದ್ಧ ಕಾರ್ಯಾಚರಣೆಯ ಅವಕಾಶಗಳಲ್ಲ. ಅವು ನಾವು ಎಲ್ಲರೂ ಕೂಡಿ ಉತ್ತಮರಾಗಲು, ಬೆಳೆಯಲು ಸಾಧ್ಯವಾಗುವ ಅವಕಾಶಗಳು.
********************************

