ತೀವ್ರವಾದಿ (extreme) ಚಿಂತನೆಗಳ ಆಕರ್ಷಣೆ

ಯಾಕೆ ಕೆಲವರು ತೀವ್ರವಾದಿ (extreme) ಚಿಂತನೆಗಳಿಂದ ಆಕರ್ಷಿತರಾಗುತ್ತಾರೆ? ಯಾಕೆ ಕೆಲವರು ಇತರರಿಗಿಂತ ಹೆಚ್ಚು ಸುಲಭವಾಗಿ ತೀವ್ರಗಾಮಿತ್ವಕ್ಕೆ (radicalisation) ಒಳಗಾಗುತ್ತಾರೆ?… । ಸಂಗ್ರಹ – ಅನುವಾದ : ಚಿದಂಬರ ನರೇಂದ್ರ

ಲೇಖಕಿ Hannah Arendt ತಮ್ಮ ಪುಸ್ತಕ The Origins of Totalitarianism ನಲ್ಲಿ ಹೇಳುವಂತೆ, ಇದರ ಪ್ರಮುಖ ಕಾರಣ, ಸಮಾಜದಲ್ಲಿ ಹೆಚ್ಚುತ್ತಿರುವ ಪ್ರತ್ಯೇಕತಾ ಭಾವ (isolation) ಮತ್ತು ಒಂಟಿತನ (loneliness). ಅರೆಂಡ್ ಅವರು ಹೇಳುವಂತೆ, ಒಂಟಿತನ (loneliness) ಮತ್ತು ಒಬ್ಬರೇ ಇರುವುದು (being alone) ಎರಡೂ ಒಂದೇ ಅಲ್ಲ. ಫಿಲಾಸೊಫರ್ ಗಳು ಬಹುಕಾಲದಿಂದ ಹೇಳುತ್ತಲೇ ಬಂದಿರುವಂತೆ, ಏಕಾಂತದಲ್ಲಿ ಇರುವುದು ಮತ್ತು ಒಬ್ಬರೇ ಇರುವುದು , ಒಂಟಿತನಕ್ಕಿಂತ ಭಿನ್ನವಾದವುಗಳು.

ಒಂಟಿತನ ಎನ್ನುವುದು ನೋವು ಮತ್ತು ಅಸಂತೋಷದಿಂದ ಕೂಡಿದ ಒಂದು ಮನಸ್ಥಿತಿ. ಇದರಲ್ಲಿ ಅಶಕ್ತತೆಯ ಭಾವನೆ ಮತ್ತು ನಾವು ಅಪ್ರಸ್ತುತ ಎನ್ನುವ ಭಾವನೆ ಇರುತ್ತದೆ. ನಾವು ಸಮಾಜದಿಂದ ಹೊರತುಪಡಿಸಲ್ಪಟ್ಟಿದ್ದೇವೆ ಎನ್ನುವ ಅನುಭವ, ನಮ್ಮ ಮಾತನ್ನು ಯಾರೂ ಕೇಳಿಸಿಕೊಳ್ಳದಿರುವ ಭಾವನೆ, ಮತ್ತು ನಮಗೆ ಸ್ವಂತ ಧ್ವನಿಯೇ ಇಲ್ಲ ಎಂಬ ಅನಿಸಿಕೆ — ಇವೆಲ್ಲವೂ ಒಂಟಿತನದ ಲಕ್ಷಣಗಳಾಗಿವೆ. Hannah Arendt ಅವರ ಪ್ರಕಾರ, ಇಂತಹ ವಿಭಜಿತ (atomised) ಸಮಾಜದಲ್ಲಿ ಜನರು ತೀವ್ರವಾದಿ ಚಿಂತನೆಗಳ ಕಡೆಗೆ ತಿರುಗುತ್ತಾರೆ. ಏಕೆಂದರೆ ಅವು ಅವರಿಗೆ ಆಪ್ತ ಭಾವನೆ (belonging), ಗುರುತಿಸುವಿಕೆ (recognition) ಮತ್ತು ಜೀವನದ ಅರ್ಥವನ್ನು (meaning) ಒದಗಿಸುವ ಭಾವವನ್ನು ನೀಡುತ್ತವೆ.

2025ರಲ್ಲಿ, ಇಬ್ಬರು ಫಿಲಾಸೋಫರ್ ಗಳಾದ — Tirkkonen ಮತ್ತು Tietjen ಅವರುಗಳು Hannah Arendt ಅವರ ವಾದವನ್ನು ಪರೀಕ್ಷಿಸಲು ಒಂದು ಅನುಭವಾಧಾರಿತ (empirical) ಅಧ್ಯಯನ ನಡೆಸಿದರು. ಅವರು ಗುರುತಿಸಿದಂತೆ , Hannah Arendt ಅವರ ವಾದ ಬಹುಪಾಲು ಸತ್ಯವಾಗಿತ್ತು.

ಇತ್ತೀಚಿನ ಹಲವಾರು ತೀವ್ರವಾದಿತ್ವದ (radicalisation) ಪ್ರಕರಣಗಳನ್ನು ವಿಶ್ಲೇಷಿಸಿ, ಆ ತಂಡ ಕಂಡುಕೊಂಡದ್ದು ಏನೆಂದರೆ — ಒಂಟಿತನ ಬಹುತೇಕವಾಗಿ ಒಂದು overwhelming sense of threat ಗೆ ಸಂಬಂಧಿಸಿದ್ದಾಗಿದೆ . ಈ ರೀತಿ ಒಂಟಿ ಮನುಷ್ಯನಿಗೆ ಅನುಭವವಾಗುವ ಅಸ್ತಿತ್ವವಾದಿ ಅಪಾಯ (existential threat), ನಂತರದ ಹಿಂಸೆಯನ್ನು (violence) ಸ್ವರಕ್ಷಣೆಯ ಹೆಸರಿನಲ್ಲಿ ಸಮರ್ಥಿಸಿಕೊಳ್ಳಲು ಕಾರಣವಾಗುತ್ತದೆ.

ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ನಾವು ಒಂಟಿಯಾಗಿದ್ದಾಗ ಮತ್ತು ನಾವು ತಿರಸ್ಕೃತರಾಗಿದ್ದೇವೆ (adrift) ಎಂದು ನಮಗೆ ಅನಿಸಿದಾಗ, ಜಗತ್ತು ನಮ್ಮ ವಿರುದ್ಧವೇ ಇದೆ ಎಂಬ ಭಾವನೆ ನಮ್ಮಲ್ಲಿ ಒಡಮೂಡುತ್ತದೆ. ನಮ್ಮ ಬೆನ್ನು ಗೋಡೆಗೆ ತಳ್ಳಲ್ಪಟ್ಟಂತಾಗಿದ್ದು, ನಮಗೆ ಸಹಾಯ ಮಾಡಲು ಬೇರೆ ಯಾರೂ ಇಲ್ಲ ಎನ್ನುವ ಭಾವ ನಮ್ಮಲ್ಲಿ ಮೂಡಿದಾಗ, ನಾವು ಎಲ್ಲದಕ್ಕೂ ತೀವ್ರವಾಗಿ ಪ್ರತಿಕ್ರಿಯಿಸುತ್ತೇವೆ, ಮತ್ತು ಕಲ್ಪಿತ ಶತ್ರುಗಳ ವಿರುದ್ಧ ಹೋರಾಡಲು , ತೀವ್ರವಾದಿ ಕರೆಗೆ ಓಗೊಡುತ್ತೇವೆ. ಒಂಟಿತನವು ಕೇವಲ ದುಃಖಕರ ಮತ್ತು ಅಸಂತೋಷದ ಸ್ಥಿತಿಯಷ್ಟೇ ಅಲ್ಲ — ಅದು ನಮ್ಮೆಲ್ಲರಿಗೂ ಅಪಾಯಕಾರಿ ಕೂಡ

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.