ನಾರ್ಸಿಸಿಸ್ಟ್ ತಲೆಯಲ್ಲಿ ಏನು ಓಡುತ್ತಿರುತ್ತದೆ?

ಒಬ್ಬ ನಾರ್ಸಿಸಿಸ್ಟ್ ನ ತಲೆಯಲ್ಲಿ ಏನು ಓಡುತ್ತಿರುತ್ತದೆ? ಅವರು ತಮ್ಮ ಒಳ ತಿರುಳಲ್ಲಿ ಅಪಾರ ಖಾಲೀತನವನ್ನು , ಡಿಫೆಕ್ಟಿವ್ ನೆಸ್ ನ, ತಮಗೆ ಯಾವ ಬೆಲೆಯಿಲ್ಲದ ಭಾವವನ್ನ ಅನುಭವಿಸುತ್ತಿರುತ್ತಾರೆ. ಒಳಗೊಳಗೆ ಈ ನೋವು ಅವರಿಗೆ ಎಷ್ಟು ಅಸಹನೀಯವಾಗಿರುತ್ತದೆ ಎಂದರೆ, ಅವರ ಬುದ್ಧಿ ಇದನ್ನು ಅನುಭವಿಸಲು ನಿರಾಕರಿಸಿಬಿಡುತ್ತದೆ… । ಸಂಗ್ರಹ – ಅನುವಾದ : ಚಿದಂಬರ ನರೇಂದ್ರ


ನಾರ್ಸಿಸಿಸ್ಟ್ ಎನ್ನುವ ಪದ ಕೇಳಿದಾಗಲೆಲ್ಲ ನಮ್ಮ ಮನಸ್ಸಿನಲ್ಲಿ ತನ್ನನ್ನು ತಾನು ಅತಿಯಾಗಿ ಪ್ರೀತಿಸಿಕೊಳ್ಳುವ ವ್ಯಕ್ತಿಯೊಬ್ಬನ ಚಿತ್ರ ಮೂಡುತ್ತದೆ. ತನ್ನನ್ನು ತಾನು ಕನ್ನಡಿಯಲ್ಲಿ ನೋಡಿಕೊಂಡಾಗಲೆಲ್ಲ ಆ ವ್ಯಕ್ತಿಗೆ ತಾನೇ ಭಗವಂತ ಎನ್ನುವ ಭಾವ ಮೂಡುತ್ತಿರಬಹುದು. ಆದರೆ ಸೈಕೋ ಅನ್ಯಾಲಿಸಿಸ್ ಅವರ ಕುರಿತಾದ ಒಂದು ಭಯಾನಕ ಸತ್ಯವನ್ನು ತೆರೆದಿಡುತ್ತದೆ.

ವಾಸ್ತವದಲ್ಲಿ ನಾರ್ಸಿಸಿಸ್ಟ್ ಜನ ತಮ್ಮನ್ನು ತಾವು ಪ್ರೀತಿಸಿಕೊಳ್ಳುತ್ತಿರುವುದಿಲ್ಲ. ಬದಲಾಗಿ ಅವರು ಸುಪ್ತ ಪ್ರಜ್ಞೆಯಲ್ಲಿ ತಮ್ಮನ್ನು ತಾವು ದ್ವೇಷ ಮಾಡಿಕೊಳ್ಳುತ್ತಿರುತ್ತಾರೆ. ಅವರ ಮನಸ್ಸು ಹೇಗೆ ಕೆಲಸ ಮಾಡುತ್ತದೆ ಎನ್ನುವುದು ನಿಮಗೆ ಗೊತ್ತಿರದಿದ್ದರೆ ಅವರು ನಿಮ್ಮ ಇಡೀ ಬದುಕನ್ನೇ ನಾಶ ಮಾಡಿಬಿಡಬಲ್ಲರು.

ಒಬ್ಬ ನಾರ್ಸಿಸಿಸ್ಟ್ ನ ತಲೆಯಲ್ಲಿ ಏನು ಓಡುತ್ತಿರುತ್ತದೆ? ಅವರು ತಮ್ಮ ಒಳ ತಿರುಳಲ್ಲಿ ಅಪಾರ ಖಾಲೀತನವನ್ನು , ಡಿಫೆಕ್ಟಿವ್ ನೆಸ್ ನ, ತಮಗೆ ಯಾವ ಬೆಲೆಯಿಲ್ಲದ ಭಾವವನ್ನ ಅನುಭವಿಸುತ್ತಿರುತ್ತಾರೆ. ಒಳಗೊಳಗೆ ಈ ನೋವು ಅವರಿಗೆ ಎಷ್ಟು ಅಸಹನೀಯವಾಗಿರುತ್ತದೆ ಎಂದರೆ, ಅವರ ಬುದ್ಧಿ ಇದನ್ನು ಅನುಭವಿಸಲು ನಿರಾಕರಿಸಿಬಿಡುತ್ತದೆ. ಆದ್ದರಿಂದ ಇದರಿಂದ ತಪ್ಪಿಸಿಕೊಳ್ಳಲು, ಬದುಕಲು, ಅವರ ಬುದ್ದಿ ತನ್ನ ಸುತ್ತ ಒಂದು ಶೀಲ್ಡ್ ನಿರ್ಮಿಸಿಕೊಳ್ಳುತ್ತದೆ. ಇದು ಅವರ ಫೇಕ್ ವ್ಯಕ್ತಿತ್ವವನ್ನು, ಪರಿಪೂರ್ಣ, ಅಜೇಯ ವ್ಯಕ್ತಿತ್ವದಂತೆ ಬಹಿರಂಗವಾಗಿ ತೋರಿಸಲು ಶುರು ಮಾಡುತ್ತದೆ. ಸುತ್ತಲಿನ ಜನರಿಗಿಂತ ಸುಪೀರಿಯರ್ ಆದ ಅವತಾರವನ್ನು ಅವರು ಧರಿಸಲು ಶುರು ಮಾಡುತ್ತಾರೆ.

ಆದರೆ ಇಲ್ಲೊಂದು ಸಮಸ್ಯೆಯಿದೆ, ಏಕೆಂದರೆ ಇದೊಂದು ಸುಳ್ಳು ಅವತಾರ. ಈ ಅವತಾರದ ಬಳಿ ತನ್ನದೇ ಆದ ಬ್ಯಾಟರೀ ಇಲ್ಲ, ಆದ್ದರಿಂದ ಅದು ತನ್ನನ್ನು ತಾನು ಜೀವಂತವಾಗಿಟ್ಟುಕೊಳ್ಳಲು ಇಡೀ ಜಗತ್ತು ತನ್ನನ್ನು ಪೂಜಿಸಬೇಕೆಂದು ಇಚ್ಛಿಸುತ್ತದೆ. ಆದ್ದರಿಂದ ನಾರ್ಸಿಸಿಸ್ಟ್ ವ್ಯಕ್ತಿಗೆ ತನ್ನ ಅವತಾರ ನಿಜ ಎಂದು ತೋರಿಸಿಕೊಳ್ಳಲು ನಿರಂತರವಾಗಿ ಇತರರಿಂದ ಅಪ್ರೂವಲ್, ಭಯ, ಗಮನ, ಹೊಗಳಿಕೆ ಬೇಕು. ಆದ್ದರಿಂದಲೇ ಒಬ್ಬ ನಾರ್ಸಿಸಿಸ್ಟ್ ವ್ಯಕ್ತಿ ನಿಮ್ಮೊಂದಿಗೆ ಕೆಟ್ಟದಾಗಿ ವ್ಯವಹರಿಸುವುದು. ನಾರ್ಸಿಸಿಸ್ಟ್ ವ್ಯಕ್ತಿಗೆ ನೀವು ಸ್ವಂತ ಭಾವನಗಳ, ಸ್ವತಂತ್ರ ಮನುಷ್ಯ ಅಲ್ಲ. ಅವರಿಗೆ ನೀವು ಕೇವಲ ಒಂದು ಕನ್ನಡಿಯ ಹಾಗೆ. ನಿಮ್ಮ ಕೆಲಸ ಅವರ ಪರಿಪೂರ್ಣ ಅವತಾರವನ್ನು ಪ್ರತಿಬಿಂಬಿಸುವುದು ಮಾತ್ರ. ಎಲ್ಲಿಯವರೆಗೆ ನೀವು ಅವರನ್ನು ಹೊಗಳುತ್ತಿರುತ್ತೀರೋ, ಅವರಿಗೆ ಶರಣಾಗಿರುತ್ತೀರೋ ಅಲ್ಲಿಯವರೆಗೆ ಆ ಕನ್ನಡಿ ಸ್ವಚ್ಛವಾಗಿದೆ ಎನ್ನುವುದು ಅವರ ಭಾವನೆ.

ಯಾವಾಗ ನೀವು ಅವರನ್ನು ಟೀಕಿಸಲು ಶುರು ಮಾಡುತ್ತೀರೋ, ಅವರ ಮಿತಿಗಳನ್ನು ಗುರುತಿಸುತ್ತೀರೋ, ಅವರ ತಪ್ಪುಗಳನ್ನು ಹುಡುಕಲು ಶುರು ಮಾಡುತ್ತೀರೋ ಆಗ ನೀವು ಆ ಕನ್ನಡಿಯನ್ನು ಒಡೆದುಬಿಡುತ್ತೀರಿ. ಯಾವಾಗ ಕನ್ನಡಿ ಒಡೆದುಹೋಗುತ್ತದೆಯೋ ಆಗ ನಾರ್ಸಿಸಿಸ್ಟ್ ವ್ಯಕ್ತಿಗೆ ತನ್ನ ವ್ಯರ್ಥ ಬದುಕು ಸ್ಪಷ್ಟವಾಗಿ ಕಾಣಲು ಶುರುವಾಗುತ್ತದೆ. ಈ ಕಾರಣವಾಗಿಯೇ ಅವರು ತಮ್ಮ ಇಡೀ ಬದುಕಿನಿಂದ ತಪ್ಪಿಸಿಕೊಂಡು ಓಡುತ್ತಿದ್ದರು. ಆಗ ಅವರ ಕ್ರೋಧ ದ್ವಿಗುಣಗೊಳ್ಳುತ್ತದೆ. ಅವರು ನಿಮ್ಮ ಮೇಲೆ ಚೀರಾಡುತ್ತಾರೆ, ನಿಮ್ಮ ವಿರುದ್ಧ ಪತ್ತೆದಾರಿಕೆ ಶುರು ಮಾಡುತ್ತಾರೆ. ಅವರು ಹೀಗೆ ಮಾಡುವುದು ನೀವು ತಪ್ಪು ಮಾಡಿದ್ದೀರಿ ಎಂದಲ್ಲ, ಅವರಿಗೆ ತಾವು ಮಾನಸಿಕವಾಗಿ ಬದುಕಿ ಉಳಿದುಕೊಳ್ಳಬೇಕಾಗಿದೆ.

ಅಕಸ್ಮಾತ್ ನೀವು ನಾರ್ಸಿಸಿಸ್ಟ್ ವ್ಯಕ್ತಿಯೊಂದಿಗೆ ಸಂಬಂಧದಲ್ಲಿ ಸಿಕ್ಕಿಹಾಕಿಕೊಂಡಿರುವಿರಾದರೆ, ನೀವು ಈ ಕಹಿ ಸತ್ಯವನ್ನು ಒಪ್ಪಿಕೊಳ್ಳಲೇ ಬೇಕು, ಅದು ಏನೆಂದರೆ ನಿಮ್ಮ ಪ್ರೀತಿ ಅವರನ್ನು ಸರಿ ಮಾಡುವುದು ಅಸಾಧ್ಯ. ಏಕೆಂದರೆ ನೀವು ಯಾರನ್ನು ಪ್ರೀತಿಸಲು ಪ್ರಯತ್ನ ಮಾಡುತ್ತಿದ್ದೀರೋ ಆ ವ್ಯಕ್ತಿ ವಾಸ್ತವದಲ್ಲಿ ಇಲ್ಲವೇ ಇಲ್ಲ. ನಿಜದಲ್ಲಿ ನೀವು ಒಬ್ಬ ವ್ಯಕ್ತಿಯ ಜೊತೆಗೆ ಅಲ್ಲ, ಒಂದು defence mechanism ನ ಜೊತೆ ಸಂಬಂಧದಲ್ಲಿ ಇದ್ದೀರಿ. ಹೀಗೇನಾದರೂ ಇದ್ದರೆ, ನೀವು ಆ ಕನ್ನಡಿಯನ್ನು ಸರಿ ಮಾಡುವ ಪ್ರಯತ್ನ ಮಾಡಬೇಡಿ, ಸಾಧ್ಯವಾದಷ್ಟು ಬೇಗ ಅಲ್ಲಿಂದ ದೂರ ಹೋಗಿಬಿಡಿ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.