ಅಳುವುದು ದೌರ್ಬಲ್ಯದ ಸಂಕೇತವಲ್ಲ!

ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ

ಸೈಕಾಲೊಜಿಯ ಪ್ರಕಾರ ಯಾರು ಸಣ್ಣ ಸಣ್ಣ ಸಂಗತಿಗಳ ಸಲುವಾಗಿ ಕೂಡ ಕಣ್ಣೀರು ಹಾಕಿಬಿಡಬಲ್ಲರೋ , ಉದಾಹರಣೆಗೆ ವಾದಗಳ ನಡುವೆ, ಇನ್ನೊಬ್ಬರ ಕತೆ ಕೇಳಿ, ಅಥವಾ ಒಂದು ಭಾವನಾತ್ಮಕ ಸಿನೇಮಾ ನೋಡಿ ; ಅವರು ದುರ್ಬಲ ವ್ಯಕ್ತಿಗಳಲ್ಲ ಬದಲಾಗಿ ಮಾನಸಿಕವಾಗಿ ಬಹಳ ಶಕ್ತಿಶಾಲಿಗಳು. ವಿಚಿತ್ರ ಅನಿಸುತ್ತದೆ ಅಲ್ಲವೆ? ಅಳುವುದು ದುರ್ಬಲರ ಸಂಕೇತ ಎಂದು ಜಗತ್ತಿಗೆ ಅನಿಸುತ್ತದೆ. ಯಾರು ಬಹಳ ಬೇಗ ಅತ್ತುಬಿಡುತ್ತಾರೋ ಅವರು ಭಾವನಾತ್ಮಕ ಮತ್ತು ದುರ್ಬಲ ಎಂದು ಜನ ತಿಳಿದುಕೊಳ್ಳುತ್ತಾರೆ. ಆದರೆ ಸೈಕಾಲೊಜಿಯ ಅಭಿಪ್ರಾಯ ನಮ್ಮ ಅನಿಸಿಕೆಗಳ ವಿರುದ್ಧವಾಗಿದೆ.

ಯಾರು ಬಹಳ ಬೇಗ ಅತ್ತುಬಿಡುತ್ತಾರೋ ಅವರ ಬಳಿ ಬಹಳ ಮುಖ್ಯವಾದ ಅಪರೂಪದ ಸೈಕಾಲೊಜಿಕಲ್ ಗುಣ ಲಕ್ಷಣ ಇರುತ್ತದೆ. ಇದನ್ನ high emotional awareness ಎಂದು ಗುರುತಿಸಲಾಗುತ್ತದೆ. ಇವರ ಮೆದುಳು, ಒಂದು ಭಾವನಾತ್ಮಕ ದೃಶ್ಯ ಅಥವಾ ಕತೆಯನ್ನು ಸುಮ್ಮನೇ ನೋಡುವುದಿಲ್ಲ, ಅದು ಪ್ರತಿಯೊಂದು ಭಾವನೆಯನ್ನು ಆಳವಾಗಿ ಅನುಭವಿಸುತ್ತದೆ, ಅದು ತನ್ನ ಭಾವನೆಗಳನ್ನು ಹತ್ತಿಕ್ಕುವ ಬದಲಿಗೆ ಹೊರಗೆ ಹರಿಯಲು ಬಿಡುತ್ತದೆ. ಹೀಗೆ ಮಾಡಲು ಬಹಳ ಸಾಮರ್ಥ್ಯ ಬೇಕಾಗುತ್ತದೆ.

ಹೆಚ್ಚಿನ ಸಲ ಮಕ್ಕಳಿಗೆ ತಮ್ಮ ದುಃಖವನ್ನ, ಭಾವನೆಗಳನ್ನ ಅಡಗಿಸಿಟ್ಟುಕೊಳ್ಳುವುದನ್ನ ಹೇಳಿಕೊಡಲಾಗುತ್ತದೆ. ಆದರೆ ಯಾರು ಆಳವಾಗಿ ಭಾವನೆಗಳನ್ನು ಅನುಭವಿಸಬಲ್ಲರೋ ಅವರು ತಮ್ಮ ಆಘಾತಗಳನ್ನು ಇತರರಿಗಿಂತ ಬೇಗ ಮತ್ತು ಚೆನ್ನಾಗಿ ಪ್ರೊಸೆಸ್ ಮಾಡಬಲ್ಲರು. ಅವರು ತಮ್ಮೊಳಗಿನ ಒತ್ತಡಗಳನ್ನು ವರ್ಷಗಟ್ಟಲೆ ಹಿಡಿದಿಟ್ಟುಕೊಳ್ಳುವುದಿಲ್ಲ. ಅವರು ತಮ್ಮಲ್ಲಿಯ ಸ್ಟ್ರೆಸ್ ನ ಸ್ವಾಭಾವಿಕವಾಗಿ ಹೊರಹಾಕುತ್ತಾರೆ.

ಅಧ್ಯಯನಗಳ ಪ್ರಕಾರ ಯಾರು ತಮ್ಮ ಭಾವನೆಗಳನ್ನ ಸಶಕ್ತವಾಗಿ ಅಭಿವ್ಯಕ್ತಿಸಬಲ್ಲರೋ, ಅವರು ಒತ್ತಡಗಳ ನಡುವೆ ಬಹಳ ಸಹನಶೀಲರಾಗಿರುತ್ತಾರೆ, ಗಟ್ಟಿಯಾಗಿರುತ್ತಾರೆ. ಆದ್ದರಿಂದ ಅಳುವುದು ದುರ್ಬಲತೆ ಅಲ್ಲ. ನಿಜವಾದ ಸಾಮರ್ಥ್ಯ ಭಾವನೆಗಳನ್ನು ಅಡಗಿಸಿಡುವುದಲ್ಲ, ಅವನ್ನು ಅನುಭವಿಸುವುದು ಮತ್ತು ಅವುಗಳನ್ನು ಅನುಭವಿಸುವ ಧೈರ್ಯವನ್ನು ಹೊಂದುವುದು

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.