ಸಂಗ್ರಹ – ಅನುವಾದ : ಚಿದಂಬರ ನರೇಂದ್ರ
ಸೈಕಾಲೊಜಿಯ ಪ್ರಕಾರ ಯಾರಲ್ಲಿ ಭಾವನಾತ್ಮಕ ಬುದ್ಧಿಮತ್ತೆ ( Emotional Intelligence) ಹೆಚ್ಚಾಗಿ ಇರುತ್ತದೆಯೋ ಅವರು ಬಹುತೇಕ ಹೆಚ್ಚು ಹೆಚ್ಚು ಒಂಟಿತನವನ್ನು ಅನುಭವಿಸುತ್ತಾರೆ. ಇದು ಅವರು ಇತರರೊಂದಿಗೆ ಹೆಚ್ಚು ಕನೆಕ್ಟ್ ಆಗದಿರುವ ಕಾರಣಕ್ಕಲ್ಲ, ಇದು ಅವರಲ್ಲಿ ಅತ್ಯಂತ ಹೆಚ್ಚು ಅರಿವು ಇರುವ ಕಾರಣವಾಗಿ.
ಇವರ ಸಮಸ್ಯೆಯೆಂದರೆ, ಇವರು ಇನ್ನೊಬ್ಬರು ಆಡದಿರುವ ಮಾತುಗಳನ್ನೂ ತಿಳಿದುಕೊಳ್ಳಬಲ್ಲರು. ಒಬ್ಬರ ದನಿಯ ಟೋನ್ ಬದಲಾಗುವುದು, ಒಬ್ಬರು ಎರಡು ಗಂಟೆಯ ನಂತರ ಟೆಕ್ಸ್ಟ್ ಗೆ ಉತ್ತರ ನೀಡುವುದು, ಒಬ್ಬರ ನಿಮ್ಮನ್ನು ನೋಡುವ ನೋಟ ಬದಲಾಗುವುದು ಇವರಿಗೆ ಎಲ್ಲವೂ ಕಾಣಿಸುತ್ತದೆ, ಎಲ್ಲವೂ ಇವರಿಗೆ ಅರ್ಥವಾಗುತ್ತದೆ. ಸೈಕಾಲೊಜಿಯಲ್ಲಿ ಇದನ್ನ ಅತೀ ಜಾಗರೂಕತೆ ( Hyper Vigilance) ಎಂದು ಗುರುತಿಸುತ್ತಾರೆ. ಇದು ಸೂಪರ್ ಪಾವರ್ ಅಲ್ಲ ಇದು ಅಸ್ತಿತ್ವಕ್ಕಾಗಿ ಹೋರಾಡುವ ಸ್ಥಿತಿ ( Survival mode).
ಬಹಳ ಚಿಕ್ಕ ವಯಸ್ಸಿನಲ್ಲಿಯೇ ಇವರು ತಾವು ಸುರಕ್ಷಿತವಾಗಿರಲು, ಸುತ್ತಲಿನ ವಾತಾವರಣವನ್ನು ಸ್ಕ್ಯಾನ್ ಮಾಡುವುದನ್ನ ಕಲಿತುಕೊಂಡುಬಿಟ್ಟಿದ್ದಾರೆ. ಜನರ ಸ್ಥಿತಿ- ವರ್ತನೆಗಳನ್ನು ಮೊದಲೇ ಅರ್ಥ ಮಾಡಿಕೊಂಡುಬಿಟ್ಟರೆ, ತಾವು ಹರ್ಟ್ ಆಗುವ ಅಪಾಯದಿಂದ ತಪ್ಪಿಸಿಕೊಳ್ಳಬಹುದು ಎನ್ನುವುದನ್ನ ಇವರು ಬಾಲ್ಯದಿಂದಲೇ ಕಲಿತುಕೊಂಡು ಬಂದಿದ್ದಾರೆ. ಈಗ ಇವರು ದೊಡ್ಡವರಾಗಿದ್ದರೂ ಬಾಲ್ಯದ ಜನರನ್ನು ಸ್ಕ್ಯಾನ್ ಮಾಡುವ ಹವ್ಯಾಸ ಇವರನ್ನು ಇನ್ನೂ ಬಿಟ್ಟು ಹೋಗಿಲ್ಲ. ಇವರು ಒಂಟಿತನ ಅನುಭವಿಸುವುದು ಸುತ್ತ ಮುತ್ತ ಯಾರೂ ಇಲ್ಲವೆಂದೆಲ್ಲ, ಬದಲಾಗಿ ಇವರು ಒಂಟಿತನವನ್ನು ಅನುಭವಿಸುವುದು ಇವರ ಮನಸ್ಸು ಯಾವತ್ತೂ ಶಾಂತವಾಗಿ ಇರದ ಕಾರಣವಾಗಿ.
ಇಂಥವರು ನೀವಾಗಿದ್ದರೆ, ನೀವು too much ಅಲ್ಲ, ಇತರರನ್ನು ಸಂಭಾಳಿಸುತ್ತ ನೀವು ದಣಿದು ಬಿಟ್ಟಿದ್ದೀರಿ. ದೀರ್ಘವಾಗಿ ಉಸಿರೆಳೆದುಕೊಂಡು, ಭರವಸೆಯನ್ನು ಬೆಳೆಸಿಕೊಳ್ಳಿ, ನೀವು ಸುರಕ್ಷಿತವಾಗಿದ್ದೀರಿ, ನಿಮಗೆ ಯಾರಿಂದಲೂ ತೊಂದರೆ ಇಲ್ಲ. ಅನಾವಶ್ಯಕವಾಗಿ ಗಾಬರಿಗೊಳ್ಳುವುದನ್ನ ಕಡಿಮೆ ಮಾಡಿಕೊಳ್ಳಿರಿ.

