ನೀವು ಯಾವ ಹಂತದಲ್ಲಿ ಇದ್ದೀರಿ?

ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ

ನಿಮಗೆ ಗೊತ್ತಾ ಮನುಷ್ಯನ ಭಾವನಾತ್ಮಕ ಬುದ್ಧಿಮತ್ತೆ(Emotional Intelligence) ಯಲ್ಲಿ ಆರು ಹಂತಗಳಿವೆ ಎನ್ನುವುದು? ಮತ್ತು 90% ಜನರಿಗೆ ಮೂರನೇಯ ಹಂತ ದಾಟುವುದು ಸಾಧ್ಯವಾಗುವುದೇ ಇಲ್ಲ. ಬಹುತೇಕರು ಭಾವೆಗಳನ್ನ ಕೇವಲ feel ಅಂದುಕೊಳ್ಳುತ್ತಾರೆ. ಆದರೆ ನಿಮ್ಮ ಇಡೀ ಬದುಕು ಈ ಭಾವನಾತ್ಮಕ ಹಂತಗಳ ಮೇಲೆಯೇ ನಿರ್ಧರಿತವಾಗಿರುತ್ತದೆ. ಮತ್ತು ಈ ಹಂತಗಳ ಮೇಲೆ ನಿಂತೇ ನೀವು ಕಾರ್ಯನಿರ್ವಹಿಸುವುದು.

ಹಂತ ೧ : Reaction mode : ಇಲ್ಲಿ ಮನುಷ್ಯ ಭಾವನೆಗಳ ಗುಲಾಮನಾಗಿರುತ್ತಾನೆ. ಕೋಪ ಬಂದಾಗ ಸಿಡಿಯುತ್ತಾನೆ, ಒತ್ತಡ ಇದ್ದಾಗ ಒಡೆದು ಹೋಗುತ್ತಾನೆ. ಪರಿಸ್ಥಿತಿಯ ಬಗ್ಗೆ ಸಾವ ಅರಿವು, ಯಾವ ನಿಯಂತ್ರಣವೂ ಇಲ್ಲ. ಕೇವಲ ರಿಯಾಕ್ಷನ್.

ಹಂತ ೨ : Emotional Awareness : ಈಗ ಮನುಷ್ಯನಿಗೆ ತಾನು ಫೀಲ್ ಮಾಡಿಕೊಳ್ಳುತ್ತಿರುವುದು ಏನು ಎನ್ನುವುದು ಗೊತ್ತಾಗುತ್ತಿದೆ. ಆದರೆ ಈ ಕುರಿತು ನಿಯಂತ್ರಣ ಇನ್ನೂ ಸಾಧ್ಯವಾಗಿಲ್ಲ. ಆಗುತ್ತಿರುವುದು (pattern) ಕಾಣಿಸುತ್ತದೆ ಆದರೆ ಅದನ್ನು ಬೇಧಿಸುವುದು ಸಾಧ್ಯವಾಗುವುದಿಲ್ಲ.

ಹಂತ ೩ : Self Control : ಹೆಚ್ಚಿನ ಜನರು ಸಿಕ್ಕಿಹಾಕಿಕೊಳ್ಳುವುದು ಇಲ್ಲಿಯೇ. ಇಲ್ಲಿಂದಲೇ ನಿಜವಾದ ಬೆಳವಣಿಗೆ ಶುರುವಾಗೋದು. ಜನ, ಸಿಟ್ಟಿನಿಂದ ರಿಯಾಕ್ಟ್ ಮಾಡುವ ಬದಲು ಸುಮ್ಮನಾಗಿಬಿಡುತ್ತಾರೆ (Pause). ಮತ್ತು ನಿರ್ಧಾರಗಳನ್ನು ಭಾವನೆಗಳ ಬದಲಿಗೆ ಅರಿವಿನ ಆಧಾರದ ಮೇಲೆ ತೆಗೆದುಕೊಳ್ಳಲು ಶುರು ಮಾಡುತ್ತಾರೆ.

ಹಂತ ೪ : Emphatic Intelligence: ಈಗ ಜನ ತಮ್ಮನ್ನು ಮಾತ್ರ ಅಲ್ಲ ಇನ್ನೊಬ್ಬರನ್ನೂ ಅರ್ಥ ಮಾಡಿಕೊಳ್ಳಲು ಶುರು ಮಾಡುತ್ತಾರೆ. ಅವರ ಮಾತುಗಳನ್ನಲ್ಲ ಅವರ ಎನರ್ಜಿಯನ್ನ ಗಮನಿಸಲು ಶುರು ಮಾಡುತ್ತಾರೆ. ಏಕೆಂದರೆ ಈಗ ಇವರು ತಮ್ಮ ಬಗ್ಗೆ ಹೆಚ್ಚು ಅರಿವು ಹೊಂದಿದ್ದಾರೆ.

ಹಂತ ೫ : Emotional Influence : ಇದು ಜಗತ್ತಿನಲ್ಲಿ ಅತ್ಯಂತ ಸಾಮರ್ಥ್ಯಶಾಲಿ ಜನರನ್ನ ಹುಟ್ಟು ಹಾಕುತ್ತದೆ. ಈ ಹಂತದಲ್ಲಿ ಮನುಷ್ಯ ಕೋಣೆಯ ಎನರ್ಜಿಯನ್ನ ಬದಲಾಯಿಸಬಲ್ಲವನಾಗಿರುತ್ತಾನೆ. ಬಿಕ್ಕಟ್ಟುಗಳನ್ನು ಪರಿಹರಿಸಬಲ್ಲವನಾಗಿರುತ್ತಾನೆ. ಅವನ ಹಾಜರಾತಿ ಬೇರೆಯವರ ಭಾವನೆಗಳನ್ನು ಶಿಫ್ಟ ಮಾಡಬಲ್ಲದು. ಜಗತ್ತಿನ ಅತ್ಯಂತ ಪ್ರಭಾವಶಾಲಿ ಜನರು ಈ ಹಂತದವರು.

ಹಂತ ೬ : Emotional Sovereignty: ಇದು ಬಹಳ ಅಪರೂಪದ ಹಂತ. ಹೊರಗೆ  ಅವ್ಯವಸ್ಥೆ (chaos) ಇರುವಾಗಲೂ ಬಿರುಗಾಳಿ ಒಳಗೆ ಪ್ರವೇಶಿಸುವುದಿಲ್ಲ. ಹೊರಗಿನ ಯಾವ ಪರಿಸ್ಥಿತಿಯೂ ಅವರ ಒಳಗಿನ ಸ್ಥಿತಿಯನ್ನು ಕಂಟ್ರೋಲ್ ಮಾಡುವುದಿಲ್ಲ. ಅವರು ಭಾವನಗಳ ನಿಯಂತ್ರಣದಲ್ಲಿ ಯಾವತ್ತೂ ಇರುವುದಿಲ್ಲ, ಬದಲಿಗೆ ಭಾವನೆಗಳು ಇವರ ಪ್ರಜ್ಞಾಪೂರ್ವಕ ನಿಯಂತ್ರಣದಲ್ಲಿರುತ್ತವೆ. 

ಜನ ಯಾವಾಗಲೂ ತಾವು  ೫ ನೇಯ ಹಂತದಲ್ಲಿದ್ದೇವೆ ಎಂದು ತಿಳಿದುಕೊಂಡಿರುತ್ತಾರೆ, ಆದರೆ ವಾಸ್ತವದಲ್ಲಿ ಅವರು ಇನ್ನೂ ಎರಡನೇಯ ಹಂತದಲ್ಲಿಯೇ ಸಿಕ್ಕಿಹಾಕಿಕೊಂಡಿರುತ್ತಾರೆ. ನೀವು ಯಾವ ಹಂತದಲ್ಲಿದ್ದೀರಿ? ಒಮ್ಮೆ ಯೋಚನೆ ಮಾಡಿನೋಡಿ.

********************************

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.