ಮೋಸಗಾರರಿಂದ ದೂರವಿರಿ

ಸಂಗ್ರಹ – ಅನುವಾದ: ಚಿದಂಬರ ನರೇಂದ್ರ

ಇನ್ನೊಬ್ಬರಿಗೆ ಮೋಸ ಮಾಡುವ ಯಾವ ವ್ಯಕ್ತಿಯನ್ನೂ ನಂಬಬೇಡಿ, ಆ ಮೋಸವನ್ನು ಅವರು ನಿಮ್ಮ ಸಲುವಾಗಿಯೇ ಮಾಡಿದ್ದರೂ. ಇದು ನಿಮಗೆ ಆ ವ್ಯಕ್ತಿಯ ನಿಮ್ಮ ಕುರಿತಾದ ನಿಷ್ಠೆ ಅನಿಸಬಹುದು ಆದರೆ, ದ್ರೋಹ ಯಾವತ್ತೂ ನಿಜವಾದ ನಿಷ್ಠೆಯನ್ನು ಒಳಗೊಂಡಿರುವುದಿಲ್ಲ. ಇದು ಅವರ ಚಟ, ಅವರ ಒಂದು ಮನಸ್ಥಿತಿ. ಸೈಕಾಲೊಜಿಯ ಪ್ರಕಾರ, ಅವರು ನಿಮ್ಮ ಲಾಭಕ್ಕಾಗಿ ಇನ್ನೊಬ್ಬರ ಬೆನ್ನಲ್ಲಿ ಚೂರಿ ಹಾಕಬಹುದಾದರೆ, ಅವಶ್ಯಕತೆ ಇದ್ದಾಗ ನಿಮಗೂ ಅಷ್ಟೇ ಸುಲಭವಾಗಿ ದ್ರೋಹ ಮಾಡಬಲ್ಲರು.

ಅವರು ಯಾರ ಜೊತೆ ಕೆಟ್ಟದಾಗಿ ವರ್ತಿಸಿದರು ಎನ್ನುವುದು ಮುಖ್ಯವಲ್ಲ, ಅವರ ಸ್ವಭಾವಕ್ಕೆ ಏನು ಮಾಡುವ ಸಾಧ್ಯತೆ ಇದೆ ಎನ್ನುವುದು ಮುಖ್ಯ. ನಿಜವಾದ ನಿಷ್ಠೆಯನ್ನ, ಇಂದು ನಿಮ್ಮ ಸುತ್ತ ಯಾರ್ಯಾರು ಓಡಾಡುತ್ತಿದ್ದಾರೆ ಎನ್ನುವುದು ತೀರ್ಮಾನ ಮಾಡುವುದಿಲ್ಲ, ನಿಜವಾದ ನಿಷ್ಠೆಯ ತೀರ್ಮಾನ ಯಾರೂ ನಿಮ್ಮನ್ನು ಗಮನಿಸುತ್ತಿಲ್ಲದಿರುವಾಗ ನಿಮ್ಮ character ಹೇಗಿರುತ್ತದೆ ಎನ್ನುವುದು ನಿರ್ಧರಿಸುತ್ತದೆ.

ನಿಷ್ಠೆ integrity (ಸಮಗ್ರತೆ) ಯ ಮೇಲೆ ಅವಲಂಬಿತವಾಗಿರುತ್ತದೆಯೇ ಹೊರತು ಅನುಕೂಲತೆಯ ಮೇಲೆ ಅಲ್ಲ. ಮುಂದಿನ ಬಾರಿ ಯಾರಾದರೂ ಇನ್ನೊಬ್ಬರಿಗೆ ಮೋಸ ಮಾಡಿ ನಿಮ್ಮ ಒಲವು ಗಳಿಸಲು ಪ್ರಯತ್ನ ಮಾಡುತ್ತಾರಾದರೆ, ನೀವು ನಿಮ್ಮನ್ನು ಸ್ಪೇಷಲ್ ಮತ್ತು ಅದೃಷ್ಟಶಾಲಿ ಎಂದು ಫೀಲ್ ಮಾಡಿಕೊಳ್ಳಬೇಡಿ. ನಿಮಗೆ ಇಂಥವರ ಬಗ್ಗೆ ಹೆದರಿಕೆ ಮತ್ತು ಸಂಶಯ ಇರಲಿ, ಏಕೆಂದರೆ ಇಂಥ ಮೋಸಗಾರರ ನಿಷ್ಠೆ ನಿಮಗೆ ಅವರು ಇನ್ನೊಬ್ಬರಿಗೆ ಮಾಡುವ ದ್ರೋಹದಷ್ಟೇ ಅಪಾಯಕಾರಿ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.