ಟ್ರಾಲಿ ಸಮಸ್ಯೆ

ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ

ನಿಮಗೆ ಫಿಲಾಸೊಫಿಯಲ್ಲಿ ಕೊಂಚವಾದರೂ ಆಸಕ್ತಿಯಿದ್ದರೆ, ನೀವು Trolley Problem ಬಗ್ಗೆ ಕೇಳೇ ಕೇಳಿರುತ್ತೀರಿ. ಅಕಸ್ಮಾತ್ ಕೇಳಿಲ್ಲವಾದರೆ, ಅದು ಹೀಗಿದೆ. ರೈಲು, ಒಂದು ಹಳಿಯ ಮೇಲೆ ಧಾವಿಸುತ್ತಿದೆ. ಆ ಹಳಿಯ ಮೇಲೆ ಐದು ಜನರನ್ನು ಕಟ್ಟಿಹಾಕಲಾಗಿದೆ. ನೀವು ಒಂದು ಲೀವರ್ ಬಳಿ ನಿಂತಿದ್ದೀರಿ. ಆ ಲೀವರ್ ನ ನೀವು ಎಳೆದರೆ,  ರೈಲು ಇನ್ನೊಂದು ಹಳಿಗೆ ಮೂವ್ ಆಗುತ್ತದೆ. ಮತ್ತು ಆ ಹಳಿಯ ಮೇಲೆ ಒಬ್ಬ ವ್ಯಕ್ತಿಯನ್ನು ಕಟ್ಟಿಹಾಕಲಾಗಿದೆ. ನೀವು ಲೀವರ್ ಎಳೆದರೆ ಆ ಒಬ್ಬ ವ್ಯಕ್ತಿ ಸತ್ತು ಹೋಗುತ್ತಾನೆ ಆದರೆ ಐದು ಜನರ ಜೀವ ಉಳಿಯುತ್ತದೆ.

ಈಗ ನಿಮಗೆ ಪ್ರಶ್ನೆಯೆಂದರೆ, ನೀವು ಆ ಲೀವರ್ ನ ಎಳೆಯುತ್ತೀರಾ? ಬಹುತೇಕರು ಹೂಂ ಅನ್ನಬಹುದು, ಏಕೆಂದರೆ ಒಬ್ಬ ವ್ಯಕ್ತಿಯ ಜೀವ ಉಳಿಸುವುದಕ್ಕಿಂತ ಐದು ಜನರ ಜೀವ ಉಳಿಸೋದು ಒಳ್ಳೆಯದು.  ಆದರೆ ಆ ಇನ್ನೊಂದು ಹಳಿಯ ಮೇಲೆ ಕಟ್ಟಿಹಾಕಲಾಗಿರುವ ವ್ಯಕ್ತಿ ನಿಮ್ಮ ತಾಯಿಯಾಗಿದ್ದರೆ ಆಗ ಏನು ಮಾಡುತ್ತೀರಿ? ಆಗಲೂ ಲೀವರ್ ಎಳೆಯುತ್ತೀರ?

ಈ ಪ್ರಶ್ನೆ Utilitarianism ಫಿಲಾಸೊಫಿಯನ್ನು ಚೆನ್ನಾಗಿ ವಿವರಿಸುತ್ತದೆ. ಈ ಫಿಲಾಸೊಫಿಯನ್ನು ಹುಟ್ಟುಹಾಕಿದವ ಇಂಗ್ಲೀಷ್ ತತ್ವಜ್ಞಾನಿ Jeremy Bentham. ಈ ಫಿಲಾಸೊಫಿಯ ಪ್ರಕಾರ, ಅತೀ ಹೆಚ್ಚು ಜನರಿಗೆ ಅತಿ ಹೆಚ್ಚು ಖುಶಿಯನ್ನು ನೀಡುವುದು ಮಾತ್ರ ನಿಜವಾದ ಒಳ್ಳೆಯತನ ( True good). ವಸ್ತುನಿಷ್ಠವಾಗಿ ನೋಡಿದಾಗ, ಐದು ಜನರ ಜೀವ, ಒಬ್ಬರ ಜೀವಕ್ಕಿಂತ ಹೆಚ್ಚು ಮಹತ್ವದ್ದು. ಆ ಒಬ್ಬ ವ್ಯಕ್ತಿಯೊಂದಿಗೆ ನೀವು ನಿಮ್ಮ DNA ಹಂಚಿಕೊಂಡಿದ್ದರೂ, ಈ ಗಣಿತ ಮಾತ್ರ ಯಾವತ್ತೂ ಬದಲಾಗುವುದಿಲ್ಲ. ಆದರೆ ನಿಮ್ಮ ತಾಯಿಯನ್ನು ಉಳಿಸಿಕೊಳ್ಳಲು ನೀವು ಐದು ಜನರನ್ನು ಬಲಿಕೊಡಲು ಒಪ್ಪುವಿರಾದರೆ, Utilitarianism ನಿಮ್ಮನ್ನು ಮಹಾ ಸ್ವಾರ್ಥಿಗಳು ಎಂದು ಗುರುತಿಸುತ್ತದೆ. ನೀವು ಶುದ್ಧ ಭಾವನಾತ್ಮಕ ಸ್ವಾರ್ಥದ ಕೈಗೊಂಬೆಯಾಗಿದ್ದೀರಿ.

ಫಿಲಾಸೊಫಿಯನ್ನು ಒತ್ತಟ್ಟಿಗೆ ಇಟ್ಟು ಪ್ರಾಮಾಣಿಕವಾಗಿ ಯೋಚಿಸಿದಾಗ ಕೂಡ ನಮ್ಮಲ್ಲಿಯ 99% ಜನರು ಆ ಐದು ಜನರನ್ನು ಬಲಿಕೊಟ್ಟು ತಮ್ಮ ತಾಯಿಯನ್ನು ಉಳಿಸಿಕೊಳ್ಳುತ್ತಾರೆ, ಒಂದು ನಿಮಿಷವೂ ಹೆಚ್ಚು ಯೋಚನೆ ಮಾಡದೇ. ಇದರಿಂದ ಸಾಬೀತಾಗುವುದು ಏನೆಂದರೆ ಮನುಷ್ಯರು rational moral agents ( ತರ್ಕವಾದಿ ನೈತಿಕತೆಯ ವಕ್ತಾರ) ಅಲ್ಲ. ನಾವು ತಾರ್ಕಿಕ ನೈತಿಕತೆಯ ಬಗ್ಗೆ ಹೆಚ್ಚು ಹೆಮ್ಮೆಪಟ್ಟುಕೊಳ್ಳುತ್ತೇವೆ, ನಾವು ಭಯ ಮತ್ತು ಸಮಾನತೆಯ ಆಧಾರದ ಮೇಲೆ ನ್ಯಾಯ ವ್ಯವಸ್ಥೆಯನ್ನು ಕಟ್ಟಿಕೊಳ್ಳುತ್ತೇವೆ. ಆದರೆ ಸಮಸ್ಯೆ ವೈಯಕ್ತಿಕ (personal) ಆಗುತ್ತಿದ್ದಂತೆಯೇ, ನಮ್ಮ ವಸ್ತುನಿಷ್ಠ ತಾರ್ಕಿಕತೆ ಮಾಯವಾಗಿ ಹೋಗುತ್ತದೆ. ನಾವು ನಮ್ಮ ಹಿಂದಿನ tribal biology ಗೆ ಮತ್ತೆ ವಾಪಸ್ ಆಗುತ್ತೇವೆ.

ಭಾರತದಲ್ಲಂತೂ ನಾವು ಇದನ್ನು ದಿನ ನಿತ್ಯ ಗಮನಿಸಬಹುದು. ನಾವು ಫೇವರೇಟಿಸಂ, caste bias, ಭ್ರಷ್ಟಾಚಾರ, ಅನ್ಯಾಯ ಈ ಎಲ್ಲವನ್ನೂ ಸಾರ್ವಜನಿಕವಾಗಿ ಖಂಡಿಸುತ್ತೇವೆ. ಆದರೆ ವಿಷಯ, ನಮ್ಮ ಮಕ್ಕಳು, ನಮ್ಮ ಜಾತಿ, ನಮ್ಮ ಜಾಗದ್ದಾಗಿದ್ದರೆ ಆಗ ಎಲ್ಲ ನಿಯಮಗಳನ್ನು ಗಾಳಿಗೆ ತೂರಲಾಗುತ್ತದೆ. ನಮ್ಮ ನೈತಿಕತೆಯಲ್ಲಿ ವಿನಾಯತಿಗಳು ಹುಟ್ಚಿಕೊಳ್ಳುತ್ತವೆ. ನಾವು ನೈತಿಕತೆ ಎಂದು ಹೇಳಿಕೊಳ್ಳುವ ಸಂಗತಿಗಳು ಕೇವಲ ಅಪರಿಚಿತರಿಗೆ ಮಾತ್ರ ಸಂಬಂಧಿಸಿದ್ದಾಗಿದೆ. ಆದರೆ ವಿಷಯ ನಮ್ಮ ಪ್ರೀತಿಪಾತ್ರರದಾಗಿದ್ದಿದ್ದರೆ ನಾವು  greater good  ಬಗ್ಗೆ ಕಾಳಜಿಯನ್ನೇ ಮಾಡುವುದಿಲ್ಲ. ನಾವು ಕಾಳಜಿ ಮಾಡುವುದು our good ಬಗ್ಗೆ ಮಾತ್ರ. ನಿಮ್ಮ ಸರಿ ತಪ್ಪುಗಳ ವ್ಯಾಖ್ಯಾನ ಹಳಿಯ ಮೇಲೆ ಯಾರನ್ನು ಕಟ್ಟಿಹಾಕಲಾಗಿದೆ ಎನ್ನುವುದರ ಮೇಲೆ ಡಿಪೆಂಡ್ ಆಗಿದ್ದರೆ, ನಿಮಗೆ ನೈತಿಕತೆ ಎನ್ನುವುದು ಇದೆಯಾ, ಅಥವಾ ನೀವು ಕೇವಲ ನಿಮ್ಮ ರಕ್ತ ಸಂಬಂಧದ ರಕ್ಷಕರು ಮಾತ್ರವಾ?

********************************

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.