ಸಂಗ್ರಹ – ಅನುವಾದ : ಚಿದಂಬರ ನರೇಂದ್ರ
ಗಂಡು ಮತ್ತು ಹೆಣ್ಣಿನ, ಆಕರ್ಷಣೆಯ ಮನಃಶಾಸ್ತ್ರ (Psychology of Attraction) ಸಂಪೂರ್ಣವಾಗಿ ವಿಭಿನ್ನವಾಗಿರುತ್ತದೆ. ಒಮ್ಮೆ ಇದನ್ನು ನೀವು ತಿಳಿದುಕೊಂಡರೆ ಸಂಬಂಧಗಳು ನಿಮಗೆ ಇನ್ನೂ ಹೆಚ್ಚು ಅರ್ಥವತ್ತಾಗಿರುತ್ತವೆ. ಇಲ್ಲಿ ಲಿಸ್ಟ ಮಾಡಲಾಗಿರುವ ಸಂಗತಿಗಳು ಗಂಡು ಮತ್ತು ಹೆಣ್ಣು ಇಬ್ಬರೂ ಬಯಸುವಂಥವಾಗಿದ್ದರೂ, ಯಾರು ಯಾವುದನ್ನ ಹೆಚ್ಚು ಬಯಸುತ್ತಾರೆ ಎನ್ನುವುದು ಈ ಕ್ಲಾಸಿಫಿಕೇಷನ್ ಗೆ ಕಾರಣ.
- ಗಂಡು ತಾನು ಕಂಡದ್ದಕ್ಕೆ ಮನಸೋಲುತ್ತಾನಾದರೆ, ಹೆಣ್ಣು ತನ್ನ ಭಾವನೆಗಳ ಕಾರಣವಾಗಿ ಪ್ರೇಮಕ್ಕೆ ಮುಂದಾಗುತ್ತಾಳೆ.
- ಗಂಡು, ತನಗೆ ಗೌರವ ಸಿಕ್ಕಾಗ ಪ್ರೀತಿಯ ಅನುಭವವನ್ನು ಹೊಂದುತ್ತಾನಾದರೆ, ಹೆಣ್ಣು ತನ್ನನ್ನು ಅರ್ಥಮಾಡಿಕೊಂಡುವರನ್ನು ಪ್ರೀತಿಸತೊಡಗುತ್ತಾಳೆ.
- ಗಂಡು ಸಮಾಧಾನದ ಮೂಲಕ ಅಟ್ಯಾಚ್ ಆಗುತ್ತಾನಾದರೆ, ಹೆಣ್ಣು ಕಾಳಜಿಯ ಮೂಲಕ ಬೆಸೆದುಕೊಳ್ಳುತ್ತಾಳೆ.
- ಗಂಡಿಗೆ, ಮಾತಿಗಿಂತ ವಿಧೇಯತೆಯ ಬಗ್ಗೆ ಹೆಚ್ಚು ಆಸ್ಥೆ, ಆದರೆ ಹೆಣ್ಣು ಪ್ರಾಮಿಸ್ ಗಳಿಗಿಂತ ಪ್ರಯತ್ನಗಳ ಬಗ್ಗೆ ಆಸಕ್ತಿ ಹೊಂದಿರುತ್ತಾಳೆ.
- ಗಂಡು, ನಿರಂತರತೆಗೆ (consistency) ಫಿದಾ ಆಗುತ್ತಾನಾದರೆ, ಹೆಣ್ಣು ಭಾವನಾತ್ಮಕ ಸಂಗಾತಕ್ಕೆ (Emotional connect) ಮನಸೋಲುತ್ತಾಳೆ.
- ಗಂಡು, ಕ್ರಿಯೆಯ ಮೂಲಕ ಪ್ರೇಮವನ್ನು ವ್ಯಕ್ತ ಮಾಡುತ್ತಾನಾದರೆ, ಹೆಣ್ಣು ಸಂಹವನ (communication) ಕಾರಣವಾಗಿ ಪ್ರೇಮವನ್ನು ಅನುಭವಿಸುತ್ತಾಳೆ.
- ಗಂಡಿಗೆ, ಮನ್ನಣೆ, ಮೆಚ್ಚುಗೆ ( appreciation) ಬೇಕು, ಆದರೆ ಹೆಣ್ಣಿಗೆ ಬೇಕಾಗಿರುವುದು ಮತ್ತೆ ಮತ್ತೆ ಭರವಸೆಗಳು ( reassurances)
- ಗಂಡು ಪ್ರೇಮದಲ್ಲಿ ಬೀಳುವುದು ನಿಧಾನವಾಗಿ ಆದರೆ ಆಳವಾಗಿ. ಆದರೆ ಹೆಣ್ಣು ಪ್ರೇಮಕ್ಕೆ ಮುಂದಾಗುವುದು ಭಾವನಾತ್ಮಕವಾಗಿ ಆದರೆ ಗಟ್ಟಿಯಾಗಿ.

