ನಾನು ನಾಸ್ತಿಕ ಎಂದು ನೀವು ಯಾರಾದರೂ ಧಾರ್ಮಿಕ ವ್ಯಕ್ತಿಗೆ ಹೇಳಿದರೆ ಅವರು ನಿಮ್ಮನ್ನು ವಿಚಿತ್ರವಾಗಿ ನೋಡುತ್ತಾರೆ. ಆದರೆ ಯಾಕೆ ಹೀಗೆ? ನಮ್ಮ ಸಮಾಜದಲ್ಲಿ ನಾಸ್ತಿಕನಾಗಿರುವುದು taboo ಆಗಿದೆ… । ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ
ನಾನು ನಾಸ್ತಿಕ ಎಂದು ನೀವು ಯಾರಾದರೂ ಧಾರ್ಮಿಕ ವ್ಯಕ್ತಿಗೆ ಹೇಳಿದರೆ ಅವರು ನಿಮ್ಮನ್ನು ವಿಚಿತ್ರವಾಗಿ ನೋಡುತ್ತಾರೆ. ಆದರೆ ಯಾಕೆ ಹೀಗೆ? ನಮ್ಮ ಸಮಾಜದಲ್ಲಿ ನಾಸ್ತಿಕನಾಗಿರುವುದು taboo ಆಗಿದೆ, ಬಹಳಷ್ಟು ಜನ ಇದನ್ನು ಒಂದು ಕಾಯಿಲೆ ಎಂದುಕೊಳ್ಳುತ್ತಾರೆ. ನಾಸ್ತಿಕರ ಬಳಿ ನೈತಿಕತೆ ಇರುವುದಿಲ್ಲ ಎನ್ನುವುದು ಧಾರ್ಮಿಕರ ವಾದ. ಆದರೆ ಈ ವಾದ ನಿಜ ಅಲ್ಲ. ಫ್ರೆಂಚ್ ತತ್ವಜ್ಞಾನಿ ಆಲ್ಬರ್ಟ್ ಕಾಮೂ ಯಾಕೆ ಸಮಾಜ ನಾಸ್ತಿಕರನ್ನು ದ್ವೇಷ ಮಾಡುತ್ತದೆ ಎನ್ನುವುದರ ನಿಜವಾದ ಕಾರಣವನ್ನು ತೆರೆದಿಟ್ಟ.
ಕಾಮೂ ನ ಒಂದು ಪ್ರಸಿದ್ಧ ಪ್ರಬಂಧ ಇದೆ, The myth of Sisyphus. ಈ ಪ್ರಬಂಧದಲ್ಲಿ ಕಾಮೂ ಮನುಷ್ಯರ ಅಸ್ತಿತ್ವವನ್ನು ಅಸಂಗತ ಎಂದು ಗುರುತಿಸುತ್ತಾನೆ. ಈ ಅಸಂಗತ ಎನ್ನುವುದು ಎಂಥ ಕಹಿ ಸತ್ಯ ಎಂದರೆ, ಮನುಷ್ಯ ತನ್ನ ಅಸ್ತಿತ್ವಕ್ಕೆ ಅತ್ಯಂತ ಆಳವಾದ ಮತ್ತು ಮಾಂತ್ರಿಕವಾದ ಅರ್ಥ ಇದೆ ಎಂದುಕೊಂಡಿರುತ್ತಾನೆ. ಆದರೆ ಇಂಥ ಯಾವ ಅರ್ಥವೂ ಇಲ್ಲ. ಯಾವಾಗ ಜನ ಈ ಭಯಾನಕ ಸತ್ಯವನ್ನು ಎದುರುಗೊಳ್ಳುತ್ತಾರೋ ಆಗ ಅವರು ಪ್ಯಾನಿಕ್ ಆಗುತ್ತಾರೆ. ಈ ಪ್ಯಾನಿಕ್, ಈ ಆತಂಕದಿಂದ ತಪ್ಪಿಸಿಕೊಳ್ಳಲು ಅವರು ಯಾವುದೋ ಒಂದು ಧರ್ಮಕ್ಕೆ, ಒಂದು ಸಿದ್ಧಾಂತಕ್ಕೆ, ಅಥವಾ ಕರ್ಮ, ಪುನರ್ಜನ್ಮದಂಥ ಯಾವುದೋ ಅನುಕೂಲಕರ ಸ್ಟೋರಿಗೆ ತಮ್ಮನ್ನು ತಾವು ಒಪ್ಪಿಸಿಕೊಳ್ಳುತ್ತಾರೆ. ಇಂಥ ಸಂಗತಿಯನ್ನೇ ಕಾಮೂ ಫಿಲಾಸೊಫಿಕಲ್ ಆತ್ಮಹತ್ಯೆ ಎಂದು ಕರೆದ. ಏಕೆಂದರೆ ಇಲ್ಲಿ ಮನುಷ್ಯ ತನ್ನ ಅಹಂ ನ ರಕ್ಷಿಸಿಕೊಳ್ಳಲು ತನ್ನ ವಿವೇಕವನ್ನ, ತನ್ನ ತರ್ಕವನ್ನ ನಾಶ ಮಾಡಿಕೊಂಡಿದ್ದಾನೆ. ಅವನಿಗೆ ಈ ಅನಾನುಕೂಲದ ಸತ್ಯವನ್ನು ಒಪ್ಪಿಕೊಳ್ಳುವುದು ಕಷ್ಟವಾದ್ದರಿಂದ, ಅವನು ಬಹಳ ಸುಲಭವಾಗಿ ಸುಳ್ಳನ್ನು ಒಪ್ಪಿಕೊಂಡು ಬಿಡುತ್ತಾನೆ. ಹೀಗೆ ನಮ್ಮ ಬಹುತೇಕ ಜನರು ಸಾಮೂಹಿಕ ಆತ್ಮಹತ್ಯೆಗೆ ಒಳಗಾಗುತ್ತಾರೆ.
ಒಬ್ಬ ನಾಸ್ತಿಕನೂ ಬದುಕಿನ ಖಾಲೀತನವನ್ನು ನೋಡುತ್ತಾನೆ ಆದರೆ ಅವನು ತನ್ನ ಕಣ್ಣಿಗೆ ಪಟ್ಟಿಕಟ್ಟಿಕೊಳ್ಳಲು ನಿರಾಕರಿಸುತ್ತಾನೆ. ಮತ್ತು ಧಾರ್ಮಿಕರಿಗೆ ನಾಸ್ತಿಕರ ಮೇಲೆ ಕೋಪ ಏಕೆಂದರೆ, ಈ ನಾಸ್ತಿಕರು ಓಡಾಡುವ ಕನ್ನಡಿಗಳಿದ್ದಂತೆ. ಒಬ್ಬ ನಾಸ್ತಿಕ ಸ್ವರ್ಗ ನರಕಗಳ ಭಯ ಇಲ್ಲದೇ ನೈತಿಕವಾದ, ಸುಖಕರವಾದ, ಮತ್ತು ಒಂದು ಒಳ್ಳೆಯ ಬದುಕನ್ನು ಹೊಂದಬಲ್ಲನಾದರೆ, ಧರ್ಮ ಒಂದು absolute ಅಗತ್ಯ ಅಲ್ಲ ಎನ್ನುವುದು ಗೊತ್ತಾಗುತ್ತದೆ. ಅದು ಕೇವಲ ಒಂದು ಮನಶಾಸ್ತ್ರೀಯವಾದ ಊರುಗೋಲು (Psychological crutch) .
ಆದರೆ ನಾಸ್ತಿಕ ಯಾವ ಛತ್ರಿಯ ಕೆಳಗೆ ಎಲ್ಲ ಆಸ್ತಿಕರು ನಿಂತಿದ್ದಾರೋ ಆ ಛತ್ರಿಗೆ ತೂತು ಮಾಡಿ ಬಿಡುತ್ತಾನೆ. ಒಂದು ವೇಳೆ ನೀವು, ಏಥಿಯಿಸ್ಟ, ಅಗ್ನೊಸ್ಟಿಕ್, ಅಥವಾ rationalist ಆಗಿದ್ದರೆ, ತಿಳಿದುಕೊಳ್ಳಿ ನಿಮ್ಮ ಅವಿಶ್ವಾಸ, ಅಹಂಕಾರವಲ್ಲ. ಅದು ಒಂದು ಘನವಾದ ಧೈರ್ಯ . ಮಂದೆಯಲ್ಲಿ ಒಂದಾದುವುದು ಮತ್ತು ನಮ್ಮ ಪೂರ್ವಜರ ಮಾತುಗಳನ್ನು ಪುನರುಚ್ಚರಿಸುವುದು ಬಹಳ ಸುಲಭ. ಆದರೆ ಏಕಾಂಗಿಯಾಗಿ ಅಸಂಗತವನ್ನು ಎದುರಿಸುವುದು, ಮತ್ತು ತಮಗೆ ತಾವೇ ಸುಳ್ಳು ಹೇಳಿಕೊಳ್ಳುವುದನ್ನ ನಿರಾಕರಿಸುವ ಸಾಮರ್ಥವನ್ನು ಹೊಂದವುದನ್ನ ಆಸ್ತಿಕರು ಯಾವತ್ತೂ ಮೆಚ್ಚುವುದಿಲ್ಲ

