ಮಾತೃತ್ವ: ಮನಮೋಹಕ ಸುಳ್ಳು?

ಸಂಗ್ರಹ – ಅನುವಾದ: ಚಿದಂಬರ ನರೇಂದ್ರ

ಮಾತೃತ್ವ ಹೆಣ್ಣು ಅನುಭವಿಸಬಹುದಾದ  ಅತ್ಯಂತ ಸಹಜ, ಮತ್ತು ಪವಿತ್ರ ಸಂಗತಿಯೆಂದು  ನಮಗೆ ಮೊದಲಿನಿಂದಲೂ ಹೇಳಿಕೊಡಲಾಗಿದೆ. ಆದರೆ ಫೆಮಿನಿಸ್ಟ ಕವಿ, ಮತ್ತು ತತ್ವಜ್ಞಾನಿ Adrienne Rich ಇದನ್ನ ಅತ್ಯಂತ ಮನಮೋಹಕವಾದ ಸುಳ್ಳು ಎಂದು ವರ್ಣಿಸುತ್ತಾರೆ. ರಿಚ್ ತಮ್ಮ ಅದ್ಭುತ ಪುಸ್ತಕ Of woman born ನಲ್ಲಿ ಈ ಬಗ್ಗೆ ಅನುಭವ (experience) ಮತ್ತು ಸಂಸ್ಥೆ (institution) ಎನ್ನುವ ಎರಡು ಕ್ರಿಟಿಕಲ್ ಆದ ವಿಂಗಡಣೆಯನ್ನು ಮಾಡುತ್ತಾರೆ.  ಈ ಅನುಭವ ಎನ್ನುವುದು ತಾಯಿ ಮತ್ತು ಮಗುವಿನ ನಡುವಿನ ಬೈಯೊಲಾಜಿಕಲ್ ಮತ್ತು ಭಾವನಾತ್ಮಕ ಸಂಪರ್ಕದ ಕುರಿತಾದದ್ದು. ಈ ಸಂಗತಿ ಬಹಳ ಸುಂದರ ಮತ್ತು ಘನವಾದದ್ದು.  ಆದರೆ ಈ ಸಂಸ್ಥೆ ಎನ್ನುವ ಸಂಗತಿ,  ಸಮಾಜ ತಾಯಿಯ ಮೇಲೆ ಹೇರಲಾಗುವ ಕಟ್ಟುನಿಟ್ಟಾದ ನಿಯಮಗಳ ಕುರಿತಾದದ್ದು.

ಒಮ್ಮೆ ಈ ಸಂಸ್ಥೆಯ ನಿಯಮಗಳನ್ನು ಗಮನಿಸಿ. ಇಲ್ಲಿ ಒಬ್ಬ ಒಳ್ಳೆಯ ತಾಯಿ ತನ್ನ ವೈಯಕ್ತಿಕ ಆಕಾಂಕ್ಷೆಗಳನ್ನು ತ್ಯಾಗ ಮಾಡಬೇಕು.  ತಾಯಿ, ಯಾವ ಪ್ರತಿಫಲವಿಲ್ಲದ ಎಲ್ಲ ಗೃಹಕೃತ್ಯಗಳ ಜವಾಬ್ದಾರಿ ಹೊರಬೇಕು (Unpaid domestic labour). ಮಗು ಏನಾದರೂ ತಪ್ಪು ಮಾಡಿದರೆ, ಅದು ಕೇವಲ ತಾಯಿಯ ತಪ್ಪು ಬೆಳೆಸುವಿಕೆಯಿಂದ ಆದದ್ದು ಇದರಲ್ಲಿ ತಂದೆಯ ಯಾವ ಜವಾಬ್ದಾರಿ ಇಲ್ಲ. ರಿಚ್ ಅವರ ಪ್ರಕಾರ ತಾಯಿ, ಮಾತೃತ್ವದ ಸಂಸ್ಥೆಯನ್ನು ನಿಯಂತ್ರಣ ಮಾಡುವುದು ಸಾಧ್ಯವಿಲ್ಲ. ಇದನ್ನ ಗಂಡಸರು ಮಾಡುತ್ತಾರೆ. ಪುರುಷ ಪ್ರಧಾನ ವ್ಯವಸ್ಥೆಯ ಗಂಡು ಡಾಕ್ಟರ್ ಗಳು, ಗಂಡು ರಾಜಕಾರಣಿಗಳು, ಗಂಡು ಪುರೋಹಿತಶಾಹಿ ಎಲ್ಲರೂ ಸೇರಿ, ಒಬ್ಬ ತಾಯಿ ಮಗುವಿಗೆ ಜನ್ಮ ನೀಡಿದ ನಂತರ ಹೇಗೆ ವರ್ತಿಸಬೇಕು, ಹೇಗೆ ಬದುಕಬೇಕು ಎನ್ನುವ ನಿಯಮಗಳನ್ನು ರೂಪಿಸಿದ್ದಾರೆ. ಇದು ಮೂಲಭೂತವಾದದ್ದು ಆದರೆ ಇಂದಿನ ಸಮಸ್ಯೆ ಇನ್ನೂ ಜಟಿಲವಾದದ್ದು.

ಇಂದು ಕೇವಲ ಪುರುಷರು ಮಾತ್ರ ಅಲ್ಲ ಪುರುಷಪ್ರಧಾನ ವ್ಯವಸ್ಥೆಯಿಂದ ಪ್ರೇರಿತರಾದ ಹೆಂಗಸರು ಕೂಡ ತಾಯಿಯ ಶೋಷಣೆಯಲ್ಲಿ ಭಾಗವಹಿಸುತ್ತಾರೆ. ಆದರೆ ಯಾಕೆ ಇಂಥ ಮಾತೃತ್ವದ ಸಂಸ್ಥೆಯ ಬಗ್ಗೆ ಪ್ರಬಲವಾದ ವಿರೋಧಗಳು ಹುಟ್ಟಿಕೊಳ್ಳಲಿಲ್ಲ? ಯಾಕೆ ಇವನ್ನೆಲ್ಲ ಬಹಳ ಸುಲಭವಾಗಿ ಒಪ್ಪಿಕೊಳ್ಳಲಾಯಿತು? ಏಕೆಂದರೆ ಈ ಬಗ್ಗೆ ಸಮಾಜ ಒಂದು ವಿಶೇಷವಾದ ಪದ ಬಳಸುತ್ತಿರುವುದು. ಈ ಕುರಿತು ಹುಟ್ಟಿಕೊಳ್ಳುವ ಎಲ್ಲ ವಿರೋಧಗಳನ್ನು ಎದುರಿಸಲು ಮತ್ತು ಮಣಿಸಲು ಈ ಒಂದು ಪದ ಮಾತ್ರ ಸಾಕು. ಆ ಪದ ಯಾವುದೆಂದರೆ ‘Natural’ ( ಸ್ವಾಭಾವಿಕ, ಪ್ರಾಕೃತಿಕ). ರಿಚ್ ಅವರ ವಾದ ಏನೆಂದರೆ, ಯಾವಾಗ Power,  ಯಾವುದೇ ಒಂದು ಗುಂಪನ್ನು, ಆ ಗುಂಪಿನ ಗಮನಕ್ಕೆ ಬರದಂತೆ ಪೂರ್ತಿಯಾಗಿ ಕಂಟ್ರೋಲ್ ಮಾಡಲು ಬಯಸುತ್ತದೆಯೋ ಆಗ ಅದು ಆ ಶೋಷಣೆಗೆ, Natural ನ ಹಣೆಪಟ್ಟಿ ಅಂಟಿಸಿಬಿಡುತ್ತದೆ. ಏಕೆಂದರೆ ಒಂದು ಸಂಗತಿಯನ್ನು ನಾವು natural ಎಂದು ಒಪ್ಪಿಕೊಂಡುಬಿಟ್ಟರೆ, ಆಗ ನಾವು ಅದರ ವಿರುದ್ಧ ವಾದ ಮಾಡುವುದು ಅಸಾಧ್ಯ. ನೀವು ಬಯಾಲಜಿಯ ವಿರುದ್ಧ ಪ್ರತಿಭಟನೆ ಮಾಡುವುದು ಸಾಧ್ಯವಾಗುವುದಿಲ್ಲ.

ಮಹಿಳೆಯರಿಗೆ ಈ ಮಾತೃತ್ವ ಎನ್ನುವುದು ಒಂದು  ಜೈವಿಕ ವಿಧಿ ( biological destiny) ಎಂದು ಒಪ್ಪಿಸಿಬಿಟ್ಟರೆ, ನಂತರ ಅವರು ತಮ್ಮ ಐಡೆಂಟಿಟಿ ಮತ್ತು ಮಹತ್ವಾಕಾಂಕ್ಷೆಗಳನ್ನು ಮೂಲೆಯಲ್ಲಿಟ್ಚು domestic unpaid labour ಆಗಿ ಬಹಳ ಸಹಜವಾಗಿ ಉಳಿದುಕೊಂಡುಬಿಡುತ್ತಾರೆ. ಹೀಗಾಗಿ ಜಗತ್ತಿನ ಅರ್ಧದಷ್ಟು  ಜನ ಪ್ರೀತಿ ಮತ್ತು ಕರ್ತವ್ಯದ  ಹೆಸರಿನಲ್ಲಿ ಪುಕ್ಕಟೆ ಮನೆಕೆಲಸಗಳನ್ನು ಮಾಡುತ್ತ ಬಹಳ ಭ್ರಮಾತ್ಮಕ ಖುಶಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ.  ನೀವು ಒಬ್ಬ ತಾಯಿಯಾಗಿದ್ದರೆ, ಅಥವಾ ಭವಿಷ್ಯದಲ್ಲಿ ತಾಯಿ ಆಗುವವರಿದ್ದರೆ, ನೀವು ನಿಮ್ಮ ಮಗುವಿನ ಕುರಿತಾದ ಪ್ರೇಮವನ್ನು ಪುರುಷ ಪ್ರಧಾನ ವ್ಯವಸ್ಥೆಯ ನಿಯಮಗಳಿಂದ ದೂರ ಇಡಿ. ಮಾತೃತ್ವ ಎನ್ನುವುದು ಸಮಾಜ ನಿಮಗಾಗಿ ಕಟ್ಟಿದ ಪಂಜರವಲ್ಲ. ಅದು ಅದನ್ನು ಬದುಕುತ್ತಿರುವ ತಾಯಿಯ ಸ್ವಂತ ವ್ಯಾಖ್ಯಾನದ ಆಯ್ಕೆಯಾಗಿರಬೇಕು.

********************************

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.