ಚಿಕ್ಕಂದಿನಿಂದ ನಮ್ಮ ತಲೆಯಲ್ಲಿ ಪ್ರೀತಿ ಪ್ರೇಮದ ಕುರಿತು ತುಂಬಲಾಗಿರುವ ಬಹುತೇಕ ಮಾಹಿತಿಗಳು ತಪ್ಪಾಗಿರುವಂಥದು. ಸಮಾಜ ನಮಗೆ ಹೇಳುವುದೇನೆಂದರೆ, ಪ್ರೀತಿ ಒಂದು ಮಾಂತ್ರಿಕ ಅನುಭವ, ಇದು ಸುಮ್ಮನೇ ನಮ್ಮ ಜೊತೆ ಸಂಭವಿಸುವಂಥದು, it just happens. ಆದರೆ ಬೆಲ್ ಹುಕ್ಸ್ ಅವರ ಪ್ರಕಾರ ಈ ತಿಳುವಳಿಕೆ ಬಹಳ ಅಪಾಯಕಾರಿಯಾದಂಥದು… । ಸಂಗ್ರಹ – ಅನುವಾದ : ಚಿದಂಬರ ನರೇಂದ್ರ
ಪ್ರೇಮದ ಕುರಿತಾದ ಈ ಕೆಳಗಿನ ಚರ್ಚೆಯನ್ನು ನೀವು ಗಮನಿಸಿದರೆ, ನಿಮ್ಮ ಸಂಗಾತಿಯ ಜೊತೆಗಿನ ನಿಮ್ಮ ಸಂಬಂಧ ಮುರಿದು ಹೋಗಬಹುದು ಅಥವಾ ಇನ್ನೂ ಗಾಢವಾಗಬಹುದು. ಒಂದು ವೇಳೆ ನೀವು ಸಿಂಗಲ್ ಆದಿದ್ದರೆ ನಿಮಗೆ ಈಗ ಗೊತ್ತಾಗುತ್ತದೆ ಒಬ್ಬ ಒಳ್ಳೆಯ ಸಂಗಾತಿ ಹೇಗಿರಬೇಕು ಎನ್ನುವುದು. ಫೆಮಿನಿಸ್ಟ್ ಫಿಲಾಸೊಫರ್ ಮತ್ತು ಲೇಖಕಿ ಬೆಲ್ ಹುಕ್ಸ್ ಅವರ ಒಂದು ಅದ್ಭುತ ಪುಸ್ತಕ ಇದೆ All about Love. ಈ ಪುಸ್ತಕದಲ್ಲಿ ಅವರು ರೋಮಾನ್ಸ ಕುರಿತಾದ ನಮ್ಮ ಹಲವಾರು ನಂಬಿಕೆಗಳಿಗೆ ಸವಾಲು ಹಾಕುತ್ತಾರೆ. ಬೆಲ್ ಹುಕ್ಸ್ ಅವರ ಪ್ರಕಾರ There can be no love without justice. ನ್ಯಾಯ, ಸಮಾನತೆಯ ಹೊರತಾಗಿ ಯಾವ ಪ್ರೇಮವೂ ಸಾಧ್ಯವಿಲ್ಲ. ನಿಮ್ಮ ಸಂಬಂಧದಲ್ಲಿ ಅಧಿಕಾರದ ಅಸಮಾನತೆ (power imbalance) ಇದೆಯಾದರೆ, ಒಬ್ಬ ವ್ಯಕ್ತಿ ಇನ್ನೊಬ್ಬರನ್ನು ಡಾಮಿನೇಟ್ ಮಾಡುತ್ತಾರಾದರೆ, ಕಂಟ್ರೋಲ್ ಮಾಡುತ್ತಾರಾದರೆ, ಅಥವಾ ಸುಮ್ಮನಾಗಿಸುತ್ತಾರೆಯಾದರೆ, ನೀವು ಅನುಭವಿಸುತ್ತಿರುವುದು ಪ್ರೇಮವಲ್ಲ. ಇದು ಕೇವಲ ಪ್ರೇಮ ಮತ್ತು ರೋಮಾನ್ಸ್ ಹೆಸರಿನ ಒಂದು ಅಟ್ಯಾಚ್ಮೆಂಟ್ ಮಾತ್ರ.
ಚಿಕ್ಕಂದಿನಿಂದ ನಮ್ಮ ತಲೆಯಲ್ಲಿ ಪ್ರೀತಿ ಪ್ರೇಮದ ಕುರಿತು ತುಂಬಲಾಗಿರುವ ಬಹುತೇಕ ಮಾಹಿತಿಗಳು ತಪ್ಪಾಗಿರುವಂಥದು. ಸಮಾಜ ನಮಗೆ ಹೇಳುವುದೇನೆಂದರೆ, ಪ್ರೀತಿ ಒಂದು ಮಾಂತ್ರಿಕ ಅನುಭವ, ಇದು ಸುಮ್ಮನೇ ನಮ್ಮ ಜೊತೆ ಸಂಭವಿಸುವಂಥದು, it just happens. ಆದರೆ ಬೆಲ್ ಹುಕ್ಸ್ ಅವರ ಪ್ರಕಾರ ಈ ತಿಳುವಳಿಕೆ ಬಹಳ ಅಪಾಯಕಾರಿಯಾದಂಥದು. ಏಕೆಂದರೆ ಇದು ಜನ ಭಯಾನಕ ವರ್ತನೆಗಳನ್ನು ಸಹಿಸುವಂತೆ ಮಾಡುತ್ತದೆ. ಕೊನೆಗೂ ಒಬ್ಬ ನಿಂದಿಸುವ (abusing) ಮತ್ತು ನಿಯಂತ್ರಣವಾಗಿ (controlling) ಸಂಗಾತಿ ಹೇಳುತ್ತಾನೆಯಾದರೂ ಏನು? ನಾನು ಹೀಗೆ ಮಾಡುತ್ತಿರುವುದು ನಿನ್ನ ಮೇಲಿನ ಪ್ರೀತಿಯ ಕಾರಣದಿಂದ ಎಂದು. ಆಗ ನೀವು ಅವನ ಮಾತನ್ನು ಒಪ್ಪಲೇಬೇಕಾಗುತ್ತದೆ.
ಆದ್ದರಿಂದ ಬೆಲ್ ಹುಕ್ಸ್ ಅವರು ಪ್ರೇಮವನ್ನು ಮರುವ್ಯಾಖ್ಯಾನಕ್ಕೆ ಗುರಿಪಡಿಸಿದರು. ಅವರು ಹೇಳಿದ್ದು Love is as loved us. ಅವರ ಪ್ರಕಾರ ಪ್ರೇಮ ಒಂದು ನಾಮಪದವಲ್ಲ ಅದು ಒಂದು ಕ್ರಿಯಾಪದ. ಪ್ರೇಮ ಒಂದು ಕ್ರಿಯೆ, ಅದು ಒಂದು ಆ್ಯಕ್ಷನ್. ಪ್ರೇಮವೆಂದರೆ ಅದು ನಿಮ್ಮ ಮತ್ತು ನಿಮ್ಮ ಸಂಗಾತಿಯ ಭಾವನಾತ್ಮಕ ಮತ್ತು ಅಧ್ಯಾತ್ಮಿಕ ಬೆಳವಣಿಗೆಗೆ ನೀವು ಪರಸ್ಪರ ಪೂರಕವಾಗೋದು. ಆದರೆ ನಿಮ್ಮ ಸಂಗಾತಿ ನಿಮ್ಮ ಸ್ವಾತಂತ್ರ್ಯವನ್ನು ನಿಬಂಧನೆಗಳಿಗೆ ಒಳಪಡಿಸುತ್ತಾರಾದರೆ, ನಿಮ್ಮಿಂದ ವಿಧೇಯತೆಯನ್ನು ಬಯಸುತ್ತಾರೆಯಾದರೆ, ಅಥವಾ ನಿಮ್ಮ ಆತ್ಮವಿಶ್ವಾಸವನ್ನು ಕಡೆಗಣನೆ ಮಾಡುತ್ತಾರೆಯಾದರೆ, ಅವರು ಪ್ರೇಮದ ಆ್ಯಕ್ಷನ್ ನ ಕಾರ್ಯರೂಪಕ್ಕೆ ತರುತ್ತಿಲ್ಲ. ಅವರು ನಿಮ್ಮ ಜೊತೆ ಅಟ್ಯಾಚ್ಮೆಂಟ್ ಫೀಲ್ ಮಾಡುತ್ತಿರಬಹುದು, ಅವಲಂಬನೆಯನ್ನು ಫೀಲ್ ಮಾಡುತ್ತಿರಬಹುದು, ಆದರೆ ಅವರು ನಿಮ್ಮನ್ನು ಲವ್ ಮಾಡುತ್ತಿಲ್ಲ. ಏಕೆಂದರೆ ಲವ್ ಮಾಡುತ್ತಿರುವ ವ್ಯಕ್ತಿ ಯಾವ ಥರದ ಶೋಷಣೆಗೂ ಮುಂದಾಗುವುದಿಲ್ಲ.
ಈಗ ಬೆಲ್ ಹುಕ್ಸ್ ಅವರ ಒಂದು ಅಪರೂಪದ ತಿಳುವಳಿಕೆಯನ್ನು ಗಮನಿಸೋಣ. ಪುರುಷಪ್ರಧಾನ ವ್ಯವಸ್ಥೆ ನಿಜವಾದ ಪ್ರೇಮಕ್ಕೆ ಆಸ್ಪದ ನೀಡುವುದಿಲ್ಲ, Patriarchy makes true love impossible. ಒಂದು ಬಾರಿ ಸಾಂಪ್ರದಾಯಿಕ ಸಂಬಂಧಗಳ ಡೈನಾಮಿಕ್ಸ್ ಬಗ್ಗೆ ಯೋಚಿಸಿ. ಗಂಡು ಮನೆಯ ಮುಖ್ಯಸ್ಥ, ಮನೆಯ ಸಲುವಾಗಿ ಹಣ ಗಳಿಸುವ ಮುಖ್ಯ ವ್ಯಕ್ತಿ, ಮತ್ತು ಮನೆಯ ಎಲ್ಲ ಕೊನೆಯ ನಿರ್ಧಾರಗಳ ಕಾರಣಕರ್ತ, ultimate decision maker. ಮತ್ತು ಹೆಣ್ಣು ಅವನ ವರ್ತನೆಗಳನ್ನು ಸಹಿಸಿಕೊಂಡು ಅವನ ಜೊತೆಗೆ ಹೊಂದಿಕೊಂಡು ಹೋಗಬೇಕಾದವಳು. ಬೆಲ್ ಹುಕ್ಸ್ ಅವರ ಪ್ರಕಾರ ಇದೊಂದು ಖೆಡ್ಡಾ. ನೀವು ಅವರಿಗಿಂತ inferior ಎಂದು ಭಾವಿಸುವವರನ್ನ ಮತ್ತು ಯಾರ ಬಳಿ absolute power ಇದೆಯೋ ಅಂಥವರನ್ನ ಪ್ರೀತಿಸುವುದು ನಿಮಗೆ ಸಾಧ್ಯವಾಗುವುದಿಲ್ಲ. ಸಂಬಂಧಗಳಲ್ಲಿ ದುರ್ಬಲರು ಪ್ರೀತಿಯ ಕಾರಣದಿಂದ ಸಂಬಂಧದಲ್ಲಿ ಉಳಿದುಕೊಳ್ಳುವುದಿಲ್ಲ ಬದಲಾಗಿ ಅವರು ತಮ್ಮ survival ಕಾರಣವಾಗಿ ಹಾಗೆ ಮಾಡುತ್ತಾರೆ. ಮತ್ತು ಸಂಬಂಧದಲ್ಲಿ ಹೆಚ್ಚು ಸಾಮರ್ಥ್ಯಶಾಲಿಗಳಾದವರೂ ಪ್ರೀತಿಸುವುದಿಲ್ಲ ಅವರಿಗೆ ಒಡೆತನದ ಅನುಭವ ಮಜಾ ಕೊಡುತ್ತದೆ. Without absolute equality, without justice, the romance is just a scam. ಸಂಪೂರ್ಣ ಸಮಾನತೆಯ ಹೊರತಾಗಿ, ಪರಿಪೂರ್ಣ ನ್ಯಾಯದ ಹೊರತಾಗಿ ಇರುವ ಎಲ್ಲ ಪ್ರಣಯವೂ ಒಂದು ದೊಡ್ಡ ಹಗರಣ ಮಾತ್ರ.

