ಪ್ರೀತಿಯಲ್ಲೂ ಒಂಟಿತನ ಕಾಡೋದ್ಯಾಕೆ?

ಪ್ರೀತಿ ಯಾವತ್ತೂ ಅನ್ ಕಂಡೀಷನಲ್ ಅಲ್ಲ, ಅದು ನಮ್ಮನ್ನು ಬಿಟ್ಟು ಹೋಗಲೆಂದೇ ಬಂದಿರುವುದು ಎನ್ನುವ ಅವಸರದ ತಿಳುವಳಿಕೆ… । ಸಂಗ್ರಹ – ಅನುವಾದ : ಚಿದಂಬರ ನರೇಂದ್ರ

ನಿಮ್ಮನ್ನು ಒಬ್ಬರು ಆಳವಾಗಿ ಪ್ರೀತಿಸುತ್ತಿರುವಾಗಲೂ ಒಮ್ನೊಮ್ಮೆ ಯಾಕೆ ನೀವು ಒಂಟಿತನವನ್ನು ಅನುಭವಿಸುತ್ತೀರಿ? ಇದು ಕೆಲವರು ಅನುಭವಿಸುವಂಥ ಅತ್ಯಂತ ನೋವಿನ ಸಂಗತಿ. ನಿಮ್ಮ ಸುತ್ತಲೂ ನಿಮ್ಮನ್ನು ಪ್ರೀತಿಸುವ ಜನರಿದ್ದಾರೆ, ನಿಮ್ಮ ಬಗ್ಗೆ ಕಾಳಜಿ ಮಾಡುವ ಸಂಗಾತಿ, ನಿಮಗಾಗಿ ಸದಾ ಸಿದ್ಧರಿರುವ ಗೆಳೆಯರು, ಮತ್ತು ನಿಮಗಾಗಿ ಸದಾ ಪ್ರಯತ್ನ ಮಾಡುತ್ತಿರುವ ನಿಮ್ಮ ಫ್ಯಾಮಿಲಿ ಇತ್ಯಾದಿಯಾಗಿ. ಆದರೂ ನೀವು ಈ ಯಾವುದೂ ನಿಮ್ಮನ್ನು ಮುಟ್ಟಿಯೇ ಇಲ್ಲ ಎನ್ನುವುಂತೆ ಇರುತ್ತೀರಿ.

ನೀವು ಬೌದ್ಧಿಕವಾಗಿ ನಿಮ್ಮತ್ತ ಹರಿದು ಬರುತ್ತಿರುವ ಈ ಪ್ರೀತಿಯನ್ನು ಗಮನಿಸಬಲ್ಲಿರಿ, ಹೌದು ಎಷ್ಟೊಂದು ನನ್ನ ಬಗ್ಗೆ ಕಾಳಜಿ ಮಾಡುತ್ತಿದ್ದಾರೆ, ನನ್ನ ಪ್ರೀತಿಸುತ್ತಿದ್ದಾರೆ ಮುಂತಾಗಿ, ಆದರೆ ಇದನ್ನು ಪೂರ್ತಿಯಾಗಿ ಅನುಭವಿಸುವುದು ನಿಮಗೆ ಸಾಧ್ಯವಾಗುತ್ತಿಲ್ಲ. ಇದು ಹೇಗೆಂದರೆ ತಳ ಬಿರುಕು ಬಿಟ್ಟಿರುವ ಗ್ಲಾಸ್ ನ ನೀವು ನೀರಿನಿಂದ ತುಂಬಲು ಪ್ರಯತ್ನಿಸುತ್ತಿರುವ ಹಾಗೆ. ಇದರ ಕಾರಣ ಯಾವತ್ತೂ ನಿಮ್ಮತ್ತ ಸಾಗಿ ಬರುತ್ತಿರುವ ಪ್ರೀತಿಯಲ್ಲ, ಇದರ ಮುಖ್ಯ ಕಾರಣ ನೀವು ಹಿಂದೆ ಅನುಭವಿಸಿದ ನೋವು, ಪ್ರೀತಿ ಶಾಶ್ವತವಲ್ಲ, ಅದು ತಾತ್ಕಾಲಿಕ ಎಂದು ನಿಮಗೆ ಕಲಿಸಿದ ಪಾಠ.

ಮತ್ತು ಪ್ರೀತಿ ಯಾವತ್ತೂ ಅನ್ ಕಂಡೀಷನಲ್ ಅಲ್ಲ, ಅದು ನಮ್ಮನ್ನು ಬಿಟ್ಟು ಹೋಗಲೆಂದೇ ಬಂದಿರುವುದು ಎನ್ನುವ ಅವಸರದ ತಿಳುವಳಿಕೆ. ಆದ್ದರಿಂದ ನಿಮ್ಮ ನರ್ವಸ್ ಸಿಸ್ಟಂ ನಿಮ್ಮನ್ನು ಮತ್ತೊಂದು ಆಘಾತದಿಂದ ರಕ್ಷಿಸಲು ಪ್ರಯತ್ನ ಮಾಡುತ್ತದೆ. ಅದು ನಿಮಗೆ ಹೇಳಿಕೊಡುತ್ತದೆ ಯಾವುದನ್ನೂ ಪೂರ್ತಿಯಾಗಿ ಸ್ವೀಕರಿಸಬೇಡ. ಪೂರ್ತಿಯಾಗಿ ಸ್ವೀಕರಿಸುವುದಕ್ಕೆ ನೀವು ತೆರಬೇಕಾದ ಬೆಲೆ, ನಂಬಿಕೆಯನ್ನು ಬೆಳೆಸಿಕೊಳ್ಳುವುದು. ಮತ್ತು ನಂಬಿಕೆ ಎನ್ನುವುದು ಕೆಲವರಿಗೆ ಕೇವಲ ಕಳೆದುಕೊಳ್ಳುವ ವಿಧಾನ ಮತ್ತು ಅವರು ನೋವಿಗೆ ತೆರೆದುಕೊಳ್ಳುವ ಮತ್ತೊಂದು ರೀತಿ.

ಆದ್ದರಿಂದ ಅವರು ಯಾವಾಗಲೂ ಅರ್ಧ ತೆರೆದುಕೊಂಡಿರುತ್ತಾರೆ. ಅವರು ಹೀಗೆ ಮಾಡುವುದು ಅವರಿಗೆ ಪ್ರೀತಿ ಬೇಡ ಎಂದಲ್ಲ, ಬದಲಾಗಿ ಎಲ್ಲೋ ಆಳದಲ್ಲಿ ಹೀಗೆ ಸ್ವೀಕರಿಸಲು ತಾವು ಸುರಕ್ಷಿತ ಅಲ್ಲ ಎನ್ನುವ ಭಾವ ಅವರನ್ನು ಕಾಡುತ್ತಿರುತ್ತದೆ. ಪ್ರೀತಿಯನ್ನು ಸ್ವೀಕರಿಸಲು ಬೇಕಾದ ಸಾಮರ್ಥ್ಯ, ನಂಬಿಕೆಯನ್ನು ಬೆಳೆಸಿಕೊಳ್ಳಲು ಬೇಕಾದ ಸಾಮರ್ಥ್ಯದಂತೆಯೇ ಕಟ್ಟಲ್ಪಟ್ಟಿದೆ, ನಿಧಾನವಾಗಿ, ಸುರಕ್ಷಿತವಾಗಿ ಮತ್ತು ಅಪಾರ ಸಹನೆಯಿಂದ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.