ನಿಜವಾದ ಜ್ಞಾನ ಇರೋದು ಕಣ್ಣಿಗೆ ರಾಚುವ ಮಾಹಿತಿಗಳಲ್ಲಿ ಅಲ್ಲ, ಅದು ಇರೋದು ಕಣ್ಣಿಗೆ ಕಾಣದ ಸತ್ಯದ ಅರಿವಿನಲ್ಲಿ. ನಿಜವಾದ ಬದುಕು ಇರೋದು ಭೌತಿಕ ಸುಖಗಳು ಅಥವಾ ಐಹಿಕ ವಸ್ತುಗಳಲ್ಲಿ ಅಲ್ಲ. ಅದು ಇರೋದು ಕಣ್ಣಿಗೆ ಕಾಣದ ಶಾಂತಿ ಮತ್ತು ಸಂತೋಷದಲ್ಲಿ. ಉದ್ಧಾಲಕ ಆರುಣಿ ಹೇಳಿದ್ದೂ ಇದನ್ನೇ. ಲಾವೋ ಜಿ ಹೇಳಿದ್ದು ಇದನ್ನೇ. ಆಧುನಿಕ ವಿಜ್ಞಾನಿಗಳ ಕಾಣ್ಕೆಯಿಂದ ನಾವು ಕಲಿಯಬೇಕಿರುವುದೂ ಇದನ್ನೇ… ಇದನ್ನು ಮನದಟ್ಟು ಮಾಡಿಸುವ ಛಾಂದೋಗ್ಯ ಉಪನಿಷತ್ತಿನ ಒಂದು ಕತೆ ನೋಡೋಣ । ಚೇತನಾ ತೀರ್ಥಹಳ್ಳಿ
ಇಂಥಾ ಇನ್ನಷ್ಟು ವಿಡಿಯೋಗಳಿಗಾಗಿ https://www.youtube.com/@chethespirit ಗೆ subscribe ಮಾಡಿ

