ಭಾರತದಲ್ಲಿ ಧರ್ಮ ಮತ್ತು ಜಾತ್ಯತೀತತೆ

ಇಲ್ಲಿ ಪಶ್ಚಿಮದಂತೆ ಸರ್ಕಾರ, ಧರ್ಮವನ್ನೂ ಪೂರ್ತಿಯಾಗಿ ನಿರ್ಲಕ್ಷ ಮಾಡುವುದಿಲ್ಲ. ಬದಲಾಗಿ ಅದು ಎಲ್ಲ ಧರ್ಮಗಳೊಂದಿಗೆ ಸಮಾನ ದೂರವನ್ನು ಕಾಯ್ದುಕೊಳ್ಳುತ್ತದೆ. ಇಲ್ಲಿ ಸರ್ಕಾರ ಎಲ್ಲ ಧರ್ಮಗಳನ್ನೂ ಗೌರವಿಸುತ್ತದೆ ಆದರೆ ಯಾವುದೇ ಧಾರ್ಮಿಕ ಆಚರಣೆ ಮೂಲ ಮಾನವ ಹಕ್ಕುಗಳಿಗೆ ವಿರುದ್ಧವಾಗಿದ್ದರೆ, ಆಗ ಸರ್ಕಾರ ಕಾನೂನನ್ನು ಬಳಸಿ ಮಧ್ಯಪ್ರವೇಶ ಮಾಡುತ್ತದೆ… । ಸಂಗ್ರಹ – ಅನುವಾದ : ಚಿದಂಬರ ನರೇಂದ್ರ

ಗಮನಿಸಿದ್ದೀರಾ? ಭಾರತದಲ್ಲಿ ಯಾರಾದರೊಬ್ಬರು ತಾವು ಸೆಕ್ಯುಲರ್ ಎಂದು ಹೇಳಿಕೊಂಡರೆ, ಜನ ಅವರನ್ನು ಬ್ರೇನ್ ವಾಶ್ಡ್, ಪಶ್ಚಿಮ ಪ್ರೇರಿತ, ಫೇಕ್ ಎಂದಲ್ಲ ದೂಷಿಸುತ್ತಾರೆ. ಯಾಕೆ ಹೀಗೆ?

ಮೊದಲು ಸೆಕ್ಯುಲರಿಸಂ ನ ಅರ್ಥ ಏನು ಎನ್ನುವುದನ್ನ ತಿಳಿದುಕೊಳ್ಳೋಣ. ಮೂಲದಲ್ಲಿ ಸೆಕ್ಯುಲರಿಸಂ ಎನ್ನುವುದು ಪ್ರತೀ ನಾಗರೀಕನಿಗೂ ಸ್ವಾತಂತ್ರ್ಯ ಮತ್ತು ಸಮಾನತೆ ಲಭ್ಯವಾಗಬೇಕೆಂದು, ಧರ್ಮ (ರಿಲೀಜನ್) ಮತ್ತು ಸರ್ಕಾರ (ಸ್ಟೇಟ್) ಎರಡೂ ಪ್ರತ್ಯೇಕವಾಗಿ ಕಾರ್ಯ ನಿರ್ವಹಿಸುವ ಐಡಿಯಾ. ಪಶ್ಚಿಮ ದೇಶಗಳಲ್ಲಿ ಸೆಕ್ಯುಲರಿಸಂ ಎಂದರೆ, strict absolute separation. ಇಲ್ಲಿ ರಿಲೀಜನ್ ಎನ್ನುವುದು ತೀರ ವೈಯಕ್ತಿಕ ಮತ್ತು ಸರ್ಕಾರ ಇದನ್ನು ಪೂರ್ಣವಾಗಿ ನಿರ್ಲಕ್ಷ ಮಾಡುತ್ತದೆ.

ಭಾರತಿಯ ಪಾಲಿಟಿಕಲ್ ಥಿಯರಿಸ್ಟ್ ರಾಜೀವ್ ಭಾರ್ಗವ್ ಅವರ ಪ್ರಕಾರ, ಇಂಡಿಯಾದಂಥ ಆಳ ಧಾರ್ಮಿಕ ಸಮಾಜದಲ್ಲಿ, ಇಂಥ strict separation ಸಾಧ್ಯವೇ ಇಲ್ಲ. ಭಾರತದ ಸಂದರ್ಭದಲ್ಲಿ ಭಾರ್ಗವ ಅವರು principled distance ಎನ್ನುವ ಪರಿಕಲ್ಪನೆಯೊಂದನ್ನು ನಮ್ಮ ಮುಂದೆ ಇಡುತ್ತಾರೆ. ಇಲ್ಲಿ ಪಶ್ಚಿಮದಂತೆ ಸರ್ಕಾರ, ಧರ್ಮವನ್ನೂ ಪೂರ್ತಿಯಾಗಿ ನಿರ್ಲಕ್ಷ ಮಾಡುವುದಿಲ್ಲ. ಬದಲಾಗಿ ಅದು ಎಲ್ಲ ಧರ್ಮಗಳೊಂದಿಗೆ ಸಮಾನ ದೂರವನ್ನು ಕಾಯ್ದುಕೊಳ್ಳುತ್ತದೆ. ಇಲ್ಲಿ ಸರ್ಕಾರ ಎಲ್ಲ ಧರ್ಮಗಳನ್ನೂ ಗೌರವಿಸುತ್ತದೆ ಆದರೆ ಯಾವುದೇ ಧಾರ್ಮಿಕ ಆಚರಣೆ ಮೂಲ ಮಾನವ ಹಕ್ಕುಗಳಿಗೆ ವಿರುದ್ಧವಾಗಿದ್ದರೆ, ಆಗ ಸರ್ಕಾರ ಕಾನೂನನ್ನು ಬಳಸಿ ಮಧ್ಯಪ್ರವೇಶ ಮಾಡುತ್ತದೆ. ಆದ್ದರಿಂದಲೇ, ಸಾಂಪ್ರದಾಯಿಕ ಧಾರ್ಮಿಕ ಶಾಸ್ತ್ರ ಗ್ರಂಥಗಳು ಸಪೋರ್ಟ್ ಮಾಡುತ್ತಿದ್ದಾಗಲೂ,
ಭಾರತದ ಸರ್ಕಾರಗಳು ಅಸ್ಪ್ರಶ್ಯತೆಯನ್ನು ನಿಷೇಧಿಸಿದವು , ಆಸ್ತಿ ಹಕ್ಕುಗಳಲ್ಲಿ ಸುಧಾರಣೆಯನ್ನು ತಂದವು. ಭಾರತದ ನೈಜ ಸೆಕ್ಯುಲರಿಸಂ ಧರ್ಮವನ್ನು ನಿರಾಕರಿಸುವುದಕ್ಕೆ ಹುಟ್ಟಿಕೊಂಡಂಥದಲ್ಲ. ಇದು ಹುಟ್ಟಿಕೊಂಡದ್ದು ಜನರನ್ನು ಧಾರ್ಮಿಕ ತೀವ್ರವಾದದಿಂದ ರಕ್ಷಿಸುವುದಕ್ಕಾಗಿ. ಹಾಗಾದರೆ ತಾವು ಸೆಕ್ಯುಲರ್ ಎಂದು ಹೇಳಿಕೊಳ್ಳುವ ಜನರನ್ನ ಬ್ರೇನ್ ವಾಶ್ಡ್, ಫೇಕ್ ಎಂದು ಯಾಕೆ ದೂಷಿಸಲಾಗುತ್ತದೆ?

ಇದರ ಮೊದಲ ಕಾರಣ ಇತಿಹಾಸದ ಕುರಿತಾದ ಅಜ್ಞಾನ (historical ignorance). ಇಲ್ಲಿ ಜನ ಸೆಕ್ಯುಲರಿಸಂ ನ ಭಾರತದ ಮಾದರಿಯಾದ principled distance ನ, ಪಾಶ್ಚಿಮಾತ್ಯ ದೇಶಗಳ ಮಾದರಿ strict separation ನೊಂದಿಗೆ ಮಿಕ್ಸ್ ಮಾಡುತ್ತ ಗೊಂದಲ ಸೃಷ್ಟಿ ಮಾಡಿಕೊಂಡಿರುವಂಥದು. ಆದ್ದರಿಂದ ಅವರಿಗೆ ಸೆಕ್ಯುಲರ್ ಆಗುವುದೆಂದರೆ ಭಾರತದ ಸಂಸ್ಕೃತಿಯನ್ನು ನಾಶ ಮಾಡುವುದು ಎಂದನಿಸುತ್ತದೆ.

ಇದಕ್ಕೆ ಇರುವ ಇನ್ನೊಂದು ಆಳವಾದ ಸಮಾಜಶಾಸ್ತ್ರೀಯ ಕಾರಣವನ್ನು tribalism ಎಂದು ಕರೆಯಲಾಗುತ್ತದೆ. ಯಾವಾಗ ಸಮಾಜ ಛಿದ್ರವಾಗಿರುತ್ತದೆಯೋ ಆಗ ಯೋಚನೆ ಮಾಡುವ ವಿಧಾನ ಬಹಳ ನೇರವಾಗಿರುತ್ತದೆ. ನೀವು ನಮ್ಮ ಜೊತೆಗಿದ್ದೀರಿ ಅಥವಾ ನಮ್ಮ ವಿರುದ್ಧವಾಗಿದ್ದೀರಿ ಎನ್ನುವ ತಿಳುವಳಿಕೆ. ಇಂಥ ವಾತಾವರಣದಲ್ಲಿ ರಾಜಕಾರಣಿಗಳು ಮತ್ತು ಧಾರ್ಮಿಕ ಮುಖಂಡರುಗಳು ಅಧಿಕಾರವನ್ನು ತಮ್ಮ ವಶದಲ್ಲಿಟ್ಟುಕೊಳ್ಳಲು, ತಮ್ಮ ಗುಂಪನ್ನು ಯಾವಾಗಲೂ ಒಂದು ಭಯದಲ್ಲಿ ಇಟ್ಟುಕೊಳ್ಳುತ್ತಾರೆ. ಇದಕ್ಕಾಗಿ ಅವರು ನಮ್ಮ ಧರ್ಮ ಅಪಾಯದಲ್ಲಿದೆ ಮತ್ತು ಇದರ ರಕ್ಷಣೆಗಾಗಿ ನಿಮ್ಮ ಸಂಪೂರ್ಣ ವಿಧೇಯತೆ ಬೇಕು ಎಂದು ಜನರನ್ನು ನಂಬಿಸುವ ಪ್ರಯತ್ನ ಮಾಡುತ್ತಾರೆ. ಇಂಥ ವಾತಾವರಣದಲ್ಲಿ ಒಬ್ಬ ಸೆಕ್ಯುಲರ್ ವ್ಯಕ್ತಿ ಅವರಿಗೆ ಅಪಾಯಕಾರಿಯಾಗಿ ಕಾಣಿಸತೊಡಗುತ್ತಾನೆ. ಏಕೆಂದರೆ, ಅವನು ಯಾವ ಧಾರ್ಮಿಕ ಗುಂಪುಗಳನ್ನೂ ಸೇರಿಕೊಳ್ಳುವುದಿಲ್ಲ, ಅವನು ಸಾರ್ವತ್ರಿಕ ಮಾನವ ಹಕ್ಕುಗಳನ್ನು, ಯಾವುದೋ ಗುಂಪಿನ ಕುರಿತಾದ ವಿಧೇಯತೆಗಿಂತ ಮೇಲೆ ಎಂದು ನಂಬಿರುತ್ತಾನೆ.

ಆಗ ಬಹುಸಂಖ್ಯಾತರನ್ನು ಟೀಕೆ ಮಾಡುತ್ತೀರಾದರೆ ನೀವು ದೇಶ ದ್ರೋಹಿಗಳು, ಅಲ್ಪಸಂಖ್ಯಾತರನ್ನು ಟೀಕೆ ಮಾಡುತ್ತೀರಾದರೆ hypocrite ಗಳು. ಯಾವಾಗ ಸಮಾಜ ಬುಡಕಟ್ಟು (tribal) ಸ್ಥಿತಿಯನ್ನು ತಲುಪುತ್ತದೆಯೋ ಆಗ ಒಬ್ಬ ತಟಸ್ಥ ವ್ಯಕ್ತಿ ಅವರಿಗೆ ವೈರಿಯಂತೆ ಕಾಣಿಸತೊಡಗುತ್ತಾನೆ. ಏಕೆಂದರೆ ಇಂಥ ವ್ಯಕ್ತಿ ಅವರ ಗೆಲುವಿಗೆ ಯಾವ ಸಹಾಯವನ್ನೂ ಮಾಡುವುದಿಲ್ಲ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.