ರಾಲ್ಸ್ ಪ್ರಕಾರ ನ್ಯಾಯ ಯಾವಾಗ ಸಾಧ್ಯವಾಗುತ್ತದೆಯೆಂದರೆ, ನೀವು ಯಾವ ಬದಿಯಲ್ಲಿ ಇದ್ದೀರಿ ಎನ್ನುವುದು ನಿಮಗೆ ಗೊತ್ತೇ ಇರದಿದ್ದಾಗ, ಸಮಾಜದಲ್ಲಿ ನಿಮ್ಮ ಸ್ಥಾನಮಾನ ಏನು ಎನ್ನುವುದು ನಿಮಗೆ ಗೊತ್ತೇ ಇರದಿದ್ದಾಗ । ಸಂಗ್ರಹ – ಅನುವಾದ : ಚಿದಂಬರ ನರೇಂದ್ರ
ನ್ಯಾಯದ (justice ) ಬಗ್ಗೆ ಬಹಳ ಮಾತನಾಡುವ ನಮಗೆ ಅದರ ಬಗ್ಗೆ ಬಹಳ ಕಡಿಮೆ ಗೊತ್ತಿರುತ್ತದೆ. ಹಿಂದಿನ ಶತಮಾನದ ಬಹಳ ದೊಡ್ಡ ರಾಜಕೀಯ ತತ್ವಶಾಸ್ತ್ರಜ್ಞನಾದ John Rawls ಒಂದು ಚಿಂತನಾ ಪ್ರಯೋಗವನ್ನು ( Thought experiment) ಮಂಡಿಸುತ್ತಾರೆ. ಕಲ್ಪಿಸಿಕೊಳ್ಳಿ ನಿಮಗೆ ಶುರುವಾತಿನಿಂದ ಒಂದು ಹೊಸ ಸಮಾಜವನ್ನು ಡಿಸೈನ್ ಮಾಡುವುದಿದೆ. ಆ ಸಮಾಜದ ನೀತಿ ನಿಯಮಗಳು, ಯಾರಿಗೆ ಏನು ಸಿಗಬೇಕು ಎಲ್ಲವನ್ನೂ ನಿರ್ಧರಿಸುವುದಿದೆ. ಆದರೆ ಒಂದೇ ಕಂಡೀಷನ್ ಏನೆಂದರೆ ನೀವು ಡಿಸೈನ್ ಮಾಡಲಿರುವ ಆ ಸಮಾಜದಲ್ಲಿ, ನೀವು ಏನು ಆಗಿರುತ್ತೀರೆನ್ನುವುದು ನಿಮಗೆ ಗೊತ್ತಿರಲ್ಲ. ನೀವು ಏನೂ ಆಗಿರಬಹುದು. ನೀವು ಬಡವ ಆಗಿರುಬಹುದು ಅಥವಾ ಶ್ರೀಮಂತರಾಗಿರಬಹುದು. ಪಾವರಫುಲ್ ಅಥವಾ ಪಾವರ್ ಲೆಸ್. ಮೊಜಾರಿಟಿ ಅಥವಾ ಮೈನಾರಿಟಿ. ಈ ಬಗ್ಗೆ ನಿಮಗೆ ಏನೂ ಗೊತ್ತಿಲ್ಲ.
John Rawls ಅವರು ತಮ್ಮ ಈ ಪ್ರಯೋಗಕ್ಕೆ Veil of Ignorance ( ಅಜ್ಞಾನದ ಪರದೆ ) ಎನ್ನುವ ಹೆಸರು ಕೊಟ್ಟರು. ಅವರ ವಾದ ಏನಾಗಿತ್ತು ಎಂದರೆ, ನಾವು ಬಹಳಷ್ಟು ಜನ ವ್ಯವಸ್ಥೆಯನ್ನ ಎಲ್ಲರಿಗೂ ಹೊಂದಿಕೊಳ್ಳುವ ಹಾಗೆ ಡಿಸೈನ್ ಮಾಡುವುದಿಲ್ಲ. ನಾವು ವ್ಯವಸ್ಥೆಯನ್ನ ನಮ್ಮ ಥರದ ಜನರಿಗಾಗಿ ಡಿಸೈನ್ ಮಾಡುತ್ತೇವೆ. Rawls ಅವರ ಪ್ರಕಾರ ನ್ಯಾಯ ಯಾವಾಗ ಸಾಧ್ಯವಾಗುತ್ತದೆಯೆಂದರೆ, ನೀವು ಯಾವ ಬದಿಯಲ್ಲಿ ಇದ್ದೀರಿ ಎನ್ನುವುದು ನಿಮಗೆ ಗೊತ್ತೇ ಇರದಿದ್ದಾಗ, ಸಮಾಜದಲ್ಲಿ ನಿಮ್ಮ ಸ್ಥಾನಮಾನ ಏನು ಎನ್ನುವುದು ನಿಮಗೆ ಗೊತ್ತೇ ಇರದಿದ್ದಾಗ.
ಈಗ ನೀಷೆಯ ಸೀದಾ ಎದೆಗೆ ಬಂದು ತಟ್ಟುವ ಮಾತುಗಳನ್ನ ಗಮನಿಸಿ. ಅವನು ಹೇಳುತ್ತಾನೆ ; ನಿಜದಲ್ಲಿ ಮನುಷ್ಯ ನ್ಯಾಯವನ್ನು ಕೇಳುತ್ತಲೇ ಇಲ್ಲದಿರಬಹುದು, ಅವನು ಸೇಡು ಕೇಳುತ್ತಿರಬಹುದು ಮತ್ತು ಅದಕ್ಕೆ ಅವನು ನ್ಯಾಯದ ಹೆಸರು ಇಟ್ಟಿರಬಹುದು. ಏಕೆಂದರೆ ಇದು ತುಂಬ ಸುಂದರವಾಗಿ ಕೇಳಿಸುತ್ತದೆ. ಒಬ್ಬ ವ್ಯಕ್ತಿ ಶಿಕ್ಷೆಗೆ, ಸಂಕಟಕ್ಕೆ ಯೋಗ್ಯ ಎಂದು ನಾವು ಹೇಳುವಾಗ, ನಾವು ನಿಜದಲ್ಲಿ ಹೇಳುತ್ತಿರುವುದೇನೆಂದರೆ, ನಾನು ಅನುಭವಿಸಿದಷ್ಟೇ ನೋವನ್ನು ಅವನು ಅನುಭವಿಸಬೇಕು ಎಂದು. ಈ ಎರಡೂ ಮಾತು ಒಂದೇ ಎಂದು ನಮಗೆ ಅನಿಸಬಹುದು. ಆದರೆ, ಇವು ಒಂದೇ ಅಲ್ಲ. ಗಮನಿಸಿ, ನ್ಯಾಯ, fair response ( ನ್ಯಾಯೋಚಿತ ಪ್ರತಿಕ್ರಿಯೆ) ಏನು ಎಂದು ಯೋಚಿಸುತ್ತದೆಯಾದರೆ, ಸೇಡು ಯಾವ ಶಿಕ್ಷೆ ನನ್ನ ನೋವನ್ನು ತೃಪ್ತಿಪಡಿಸಬಹುದು ಎಂದು ಯೋಚಿಸುತ್ತದೆ. ಹೊರಗಿನಿಂದ ನೋಡಿದಾಗ ಈ ಎರಡೂ ಒಂದೇ ಅನಿಸಬಹುದು ಆದರೆ ಒಳಗಿನಿಂದ ನೋಡಿದರೆ ಇವೆರಡೂ ಬೇರೆ ಬೇರೆ.
ಈ ಕಾರಣವಾಗಿಯೇ ನ್ಯಾಯದ ಕುರಿತಾದ ಆರ್ಗ್ಯುಮೆಂಟ್ಸ್ ಯಾವುತ್ತೂ ಮುಗಿಯುವುದೇ ಇಲ್ಲ. ಏಕೆಂದರೆ ಪ್ರತಿಯೊಬ್ಬರೂ ನ್ಯಾಯವನ್ನು ತಮ್ಮದೇ ಆದ ದೃಷ್ಟಿಕೋನದಿಂದ ನೋಡುತ್ತಾರೆ. Victim ಗೆ ನ್ಯಾಯದ ಅರ್ಥ ಬೇರೆಯಾಗಿದ್ದರೆ, Accused ಗೆ ನ್ಯಾಯದ ಅರ್ಥ ಬೇರೆ. ಹಾಗಾದರೆ ನ್ಯಾಯದ ನಿಜವಾದ ಅರ್ಥ ಏನು? ನ್ಯಾಯದ ಅರ್ಥ, ಜನ ಯಾವುದಕ್ಕೆ ಯೋಗ್ಯರಾಗಿರುತ್ತಾರೋ ಅವರಿಗೆ ಅದನ್ನು ಕೊಡುವುದಲ್ಲ. ಜನ ಯಾವುದನ್ನ ಡಿಸರ್ವ ಮಾಡುತ್ತಾರೆ ಎನ್ನುವ ಕುರಿತು ಶತಮಾನಗಳಿಂದ ವಾಗ್ವಾದ ನಡೆದಿದೆ. ಮತ್ತು ಇದು ಇನ್ನೂ ಕೊನೆಯನ್ನು ಮುಟ್ಟಿಯೇ ಇಲ್ಲ. ಆದ್ದರಿಂದ ಜಸ್ಟಿಸ್ ಎಂದರೆ ಅಂಥ ನಿಯಮವನ್ನು ರೂಪಿಸುವುದು, ಅದು ನಿಮ್ಮ ವಿರುದ್ಧವಾಗಿದ್ದರೂ ನೀವು ಅದನ್ನು ಬೆಂಬಲಿಸಲೇ ಬೇಕಾಗುವಂಥದು. ನ್ಯಾಯ, ಎಂಥ ನಿಯಮವೆಂದರೆ ಅದು ಕೇವಲ ನಿಮ್ಮನ್ನು ಮಾತ್ರ ರಕ್ಷಿಸುವಂತಿರಬಾರದು ಎಲ್ಲರಿಗೂ fair ಆಗಿರಬೇಕು. ಜಸ್ಟಿಸ್ ಕುರಿತು ನಿಮ್ಮ ಅನಿಸಿಕೆ ಏನು? ಈಗ ಇನ್ನೊಮ್ಮೆ ವಿಚಾರ ಮಾಡಿ.

