ಬಹುತೇಕ ನಾವು ಕ್ಷಮೆಯನ್ನ, ಕೋಪಕ್ಕೆ ವಿರುದ್ಧ ಎಂದು ತಿಳಿದುಕೊಳ್ಳುತ್ತೇವೆ. ಆದರೆ ಅದ್ವೈತದ ಪ್ರಕಾರ ಕೋಪ ಮತ್ತು ಕ್ಷಮೆಯ ಐಡೆಂಟಿಟಿ ಒಂದೇ ಆಗಿದೆ । ಸಂಗ್ರಹ – ಅನುವಾದ : ಚಿದಂಬರ ನರೇಂದ್ರ
ನಾವು ಯಾರನ್ನಾದರೂ ಕ್ಷಮಿಸಿದಾಗ, ಒಳಗಿನಿಂದ ಒಂದಿಷ್ಟು ಶ್ರೇಷ್ಠತೆಯನ್ನ (superiority) ಫೀಲ್ ಮಾಡಿಕೊಳ್ಳುತ್ತೇವೆ. ಉದಾಹರಣೆಗೆ ನಾನು ಇವರಿಗಿಂತ ಉತ್ತಮ, ಪ್ರಬುದ್ಧ, ಅಧ್ಯಾತ್ಮಿಕವಾಗಿ ಔನತ್ಯ ಸಾಧಿಸಿರುವವ ಇತ್ಯಾದಿಯಾಗಿ. ಈಗ ನೀವು ನಿಮಗೆ ಒಂದು ಅನಾನುಕೂಲಕರವಾದ ಪ್ರಶ್ನೆ ಕೇಳಿಕೊಳ್ಳಿ. ಕ್ಷಮೆ ಕೂಡ ಒಮ್ಮೊಮ್ಮೆ ನಿಮ್ಮ ಅಹಂ ನ ತೃಪ್ತಿಗೊಳಿಸುವ ಸಾಧನವಾಗಿರಬಹುದೆ? ಈ ಸಂಗತಿಯನ್ನ ಅದ್ವೈತ ವೇದಾಂತ ವಿವರವಾಗಿ ಪರಿಶೀಲಿಸುತ್ತದೆ.
ಬಹುತೇಕ ನಾವು ಕ್ಷಮೆಯನ್ನ, ಕೋಪಕ್ಕೆ ವಿರುದ್ಧ ಎಂದು ತಿಳಿದುಕೊಳ್ಳುತ್ತೇವೆ. ಆದರೆ ಅದ್ವೈತದ ಪ್ರಕಾರ ಕೋಪ ಮತ್ತು ಕ್ಷಮೆಯ ಐಡೆಂಟಿಟಿ ಒಂದೇ ಆಗಿದೆ. ಮತ್ತು ಆ ಐಡೆಂಟಿಟಿ ಏನೆಂದರೆ, “ನನ್ನೊಂದಿಗೆ ತಪ್ಪು ನಡೆದಿದೆ” ಎನ್ನುವುದು. ಕೋಪ ನಾನು ಈ ತಪ್ಪನ್ನು ಶಿಕ್ಷಿಸುತ್ತೇನೆ ಎನ್ನುತ್ತದೆಯಾದರೆ, ಕ್ಷಮೆ ನಾನು ಈ ತಪ್ಪನ್ನು ಕ್ಷಮಿಸುತ್ತೇನೆ ಎನ್ನುತ್ತದೆ. ಆದರೆ ಈ ಎರಡೂ ಸ್ಟೇಟಮೆಂಟ್ ಗಳಲ್ಲಿ, ಎರಡೂ ಅನಿಸಿಕೆಗಳಲ್ಲಿ ಒಂದು ವಿಷಯ ಮಾತ್ರ ಕಾಮನ್ ಆಗಿದೆ, ಅದು “ನಾನು”. ಮತ್ತು ಈ “ನಾನು” ಎನ್ನುವುದು ಅಹಂ ಅಲ್ಲದೇ ಬೇರೇನೂ ಅಲ್ಲ. ಅದ್ವೈತ ಈ “ನಾನು” ಎನ್ನುವ ಸಂಗತಿಯನ್ನೇ ಪ್ರಶ್ನೆ ಮಾಡುತ್ತದೆ. ನಾನು ನಿನ್ನನ್ನು ಕ್ಷಮಿಸುತ್ತೇನೆ ಎಂದು ನೀವು ಹೇಳುವಾಗ ಅಲ್ಲೊಂದು ತ್ರಿಕೋನ ಸೃಷ್ಟಿಯಾಗಿದೆ, ಒಬ್ಬ victim, ಒಬ್ಬ offender ಮತ್ತು ಒಬ್ಬ forgiver ರ ನಡುವೆ. ಹಾಗೆಂದರೆ ಇವುಗಳ ನಡುವೆ ವ್ಯತ್ಯಾಸ, ದ್ವಂದ್ವ, ಸೆಪರೇಷನ್ ಈಗಲೂ ಇದೆ. ಕೇವಲ ಅಹಂ ತನ್ನ ಪಾತ್ರವನ್ನು ಬದಲಾಯಿಸಿಕೊಂಡಿದೆ.
ಆದ್ದರಿಂದ ಅಷ್ಟಾವಕ್ರ ಗೀತಾ ದಲ್ಲಿ ಒಂದು ಆಳವಾದ ಪ್ರಶ್ನೆಯನ್ನು ಕೇಳಲಾಗಿದೆ. ಯಾರಿಗೆ ನೋವಾಗಿದೆ? ( who is hurt?) ಯಾರಾದರೂ ನಿಮಗೆ ದುಃಖ ನೀಡುತ್ತಿದ್ದಾರಾದರೆ, ಯಾರಿಗೆ ನೋವಾಗಿದೆ? ದೇಹಕ್ಕೆ ನೋವಾಗಿದೆಯಾ? ಮೈಂಡ್ ಗೆ ನೋವಾಗಿದೆಯಾ? ಅಥವಾ ಆ ಅರಿವು, ಯಾವುದು ಕೇವಲ ಸಾಕ್ಷಿಯಾಗಿದೆಯೋ ಅದಕ್ಕೆ ನೋವಾಗಿದೆಯಾ? ನಿಮ್ಮ ನಿಜವಾದ ಐಡೆಂಟಿಟಿ ಆ ಅರಿವು ಮಾತ್ರ ಆಗಿದೆಯಾದರೆ ಆ ನೋವನ್ನು ಅನುಭವಿಸಿದವರು ಯಾರು? ಇದು ಸ್ಪಷ್ಟವಾಗಿದೆಯಾದರೆ ಕ್ಷಮೆಗೆ ಇಲ್ಲಿ ಜಾಗವೇ ಇಲ್ಲ. ಅದು ಸಹಜವಾಗಿ ಕರಗಿ ಹೋಗಿ ಬಿಡುತ್ತದೆ.
ಇದರ ಅರ್ಥ ನಾವು ಅನ್ಯಾಯವನ್ನು ಸಹಿಸಬೇಕು ಅಂತಲ್ಲ. ಸರಿಯಾದ ಆ್ಯಕ್ಷನ್ ತೆಗೆದುಕೊಳ್ಳಿ, ಮಿತಿಗಳನ್ನು ಗುರುತಿಸಿಕೊಳ್ಳಿ , ಮತ್ತು ನೀವು ನಿಜವಾಗಿಯೂ ಮಾಡಬೇಕಾದ್ದು ಏನೆಂದರೆ ಒಳಗೆ ಒಂದು self inquiry. ನಾನು ನಿಜವಾಗಿ ಯಾರು? ಯಾರನ್ನು ರತ್ಷಿಸುತ್ತಿದ್ದೇನೆ? ನನ್ನ ಸಮಾಧಾನವನ್ನು ರಕ್ಷಿಸಿಕೊಳ್ಳುತ್ತಿದ್ದೇನೆಯಾ? ಅಥವಾ ನನ್ನ ಅಹಂ ನ ರಕ್ಷಿಸಿಕೊಳ್ಳುತ್ತಿದ್ದೇನೆಯಾ? ಅಧ್ಯಾತ್ಮಿಕತೆಯ ತುತ್ತ ತುದಿ ಕ್ಷಮೆ ಅಲ್ಲ, ಅದು self inquiry.

