ಎಲ್ಲರಿಗೂ ಗೊತ್ತಿರಬೇಕಾದ ಮನಶಾಸ್ತ್ರದ ಐದು ಪರಿಕಲ್ಪನೆಗಳು

ಸಂಗ್ರಹ – ಅನುವಾದ : ಚಿದಂಬರ ನರೇಂದ್ರ

  1. Dunning – Kruger effect :

ಒಂದು ಸಂಗತಿಯ ಬಗ್ಗೆ ನಿಮಗೆ ಕಡಿಮೆ ಗೊತ್ತಿದ್ದಾಗ ಅದರ ಬಗ್ಗೆ ನೀವು ಹೆಚ್ಚು ಕಾನ್ಫಿಡೆಂಟ್ ಆಗಿ ಫೀಲ್ ಮಾಡುತ್ತೀರಿ. ಈ ಸಂಗತಿಯ ಬಗ್ಗೆ ನೀವು ಹೆಚ್ಚು ಕಲಿಯುತ್ತ ಹೋದಂತೆಲ್ಲ, ಈ ಬಗ್ಗೆ ನಿಮಗೆ ಎಷ್ಟು ಕಡಿಮೆ ಗೊತ್ತಿದೆ ಎನ್ನುವುದು ಗೊತ್ತಾಗುತ್ತ ಹೋಗುತ್ತದೆ. ಕೋಣೆಯೊಳಗೆ ಎಲ್ಲರಿಗಿಂತಲೂ ಹೆಚ್ಚು ಕಾನ್ಫಿಡೆಂಟ್ ಆಗಿ ಮಾತನಾಡುತ್ತಿರುವ ವ್ಯಕ್ತಿಗೆ ಬಹುಶಃ ಆ ಸಂಗತಿಯ ಬಗ್ಗೆ ಅತ್ಯಂತ ಕಡಿಮೆ ಮಾಹಿತಿ ಇರುವ ಸಾಧ್ಯತೆ ಹೆಚ್ಚು. ಬದುಕಿನ ಯಾವುದೋ ಒಂದು ಹಂತದಲ್ಲಾದರೂ ನಾವು ಇಂಥ ವ್ಯಕ್ತಿಗಳಂತೆ ವರ್ತಿಸಿರುತ್ತೇವೆ.

  1. Sunk Cost Fallacy:

ನೀವು ಕಳೆದು ಮೂರು ವರ್ಷಗಳಿಂದ ಒಂದು ಬ್ಯಾಡ್ ರಿಲೇಶನ್ ಶಿಪ್ ಲ್ಲಿ ಇದ್ದೀರಿ, ಅಥವಾ ಒಂದು ಎರಡು ವರ್ಷಗಳಿಂದ ವ್ಯಾಪಾರದಲ್ಲಿ ನಷ್ಟ ಅನುಭವಿಸುತ್ತಿದ್ದೀರಿ ಅಥವಾ ನಾಲ್ಕು ವರ್ಷಗಳಿಂದ ನಿಮಗೆ ಇಷ್ಟ ಇರದ ಕೋರ್ಸ್ ಓದುತ್ತಿದ್ದೀರಿ. ನೀವು ಹೀಗೆ ಇರುವುದು ಇದು ನಿಮ್ಮ ಪರವಾಗಿ ವರ್ಕ್ ಆಗುತ್ತಿದೆ ಎಂದಲ್ಲ ಬದಲಾಗಿ, ಇದರಲ್ಲಿ ಈಗಾಗಲೇ ನೀವು ಬಹಳಷ್ಟು ಇನ್ವೆಸ್ಟ್ ಮಾಡಿಬಿಟ್ಟಿದ್ದೀರಿ, ಈಗ ವಾಪಸ್ ಆಗುವುದು ಸಾಧ್ಯವಿಲ್ಲ ಎನ್ನುವ ಭಾವ ನಿಮ್ಮನ್ನು ತುಂಬಿಕೊಂಡಿರುವುದರಿಂದ. ಇದುವೇ Sunk Cost Fallacy. ಮತ್ತು ಇದು ಬೇರೆ ಎಲ್ಲಕ್ಕಿಂತ ಜನರನ್ನು ಹೆಚ್ಚು ಟ್ರ್ಯಾಪ್ ಮಾಡುತ್ತದೆ.

  1. Cognitive Dissonance:

ಸ್ಮೋಕಿಂಗ್ ಕೆಟ್ಟದ್ದು ಎನ್ನುವುದು ನಿಮಗೆ ಗೊತ್ತಿದೆ ಆದರೂ ನೀವು ಸ್ಮೋಕ್ ಮಾಡುತ್ತೀರಿ. ವ್ಯಾಯಾಮ ಮಾಡಬೇಕು ಎನ್ನುವುದು ನಿಮಗೆ ಗೊತ್ತಿದೆ ಆದರೂ ನೀವು ಮಾಡುವುದಿಲ್ಲ. ಹಣ ಕೂಡಿಡಬೇಕು ಎನ್ನುವುದು ನಿಮಗೆ ಗೊತ್ತು ಆದರೂ ನೀವು ಖರ್ಚು ಮಾಡಿಬಿಡುತ್ತೀರಿ. Cognitive Dissonance ಎಂದರೆ, ನಿಮಗೆ ಗೊತ್ತಿರುವುದು ಮತ್ತು ನೀವು ಮಾಡುವುದರ ನಡುವೆ ಇರುವ uncomfortable ಫೀಲಿಂಗ್ . ಮತ್ತು ನಿಮ್ಮ ಮೆದುಳು ಈ discomfort ನ ಹೋಗಲಾಡಿಸಲು ಎಲ್ಲ ಪ್ರಯತ್ನವನ್ನೂ ಮಾಡುತ್ತದೆ, ನಿಮಗೆ ನೀವೇ ಸುಳ್ಳು ಹೇಳುವಂತೆ ಕೂಡ ಮಾಡುತ್ತದೆ.

  1. Gaslighting:

ಯಾವುದೋ ಒಂದು ಸಂಗತಿಗೆ ನೀವು ನೀಡುವ ಅತ್ಯಂತ ಸೂಕ್ತ ಪ್ರತಿಕ್ರಿಯೆಗಾಗಿ ಕೂಡ ನೀವು ನಿಮ್ಮನ್ನು ಕ್ರೇಝಿ ಫೀಲ್ ಮಾಡಿಕೊಳ್ಳುವಂತೆ ಮಾಡಲಾಗುತ್ತದೆ. ಅವರು ನಿಮ್ಮ ಮಾತನ್ನು ತಿರಚುತ್ತಾರೆ, ತಾವು ಹೇಳಿದ ಮಾತುಗಳನ್ನು ನಿರಾಕರಿಸುತ್ತಾರೆ, ನಿಮ್ಮ ನೆನಪನ್ನು ನೀವೇ ಪ್ರಶ್ನಿಸಿಕೊಳ್ಳುವಂತೆ ಮಾಡುತ್ತಾರೆ. ಇದು ಎಲ್ಲಿಯವರೆಗೆ ಮುಂದುವರೆಯುತ್ತದೆ ಎಂದರೆ, ನಿಮಗೆ ನಿಮ್ಮ ಮೇಲಿನ ನಂಬಿಕೆ ಕಡಿಮೆಯಾಗಿ ಕೊನೆಗೆ ನೀವು ಅವರನ್ನು ನಂಬಲು ಶುರು ಮಾಡುತ್ತೀರಿ. ಇದು ರಿಲೇಶನ್ ಶಿಪ್ ಗಳಲ್ಲಿ, ಕೆಲಸದ ಜಾಗಗಳಲ್ಲಿ, ರಾಜಕಾರಣದಲ್ಲಿ ಕೂಡ ನಡೆಯುವಂಥ ಸಂಗತಿ.

  1. Negative Bias :

ಹತ್ತು ಒಳ್ಳೆಯ ವಿಮರ್ಶೆಗಳಿರುವಾಗಲೂ, ಒಂದು ಕೆಟ್ಟ ವಿಮರ್ಶೆ ನಿಮ್ಮನ್ನು ಹೆಚ್ಚು ಹರ್ಟ್ ಮಾಡುತ್ತದೆ. ಹಲವು ಹೊಗಳಿಕೆಗಳ ನಡುವೆಯೂ ಒಂದು ತೆಗಳಿಕೆ ಹೆಚ್ಚು ನೋವನ್ನು ಉಂಟು ಮಾಡುತ್ತದೆ. ಇದು ದುರ್ಬಲತೆ ಅಲ್ಲ, ಬಯಾಲೊಜಿ. ನಿಮ್ಮ ಮೆದುಳು ಧನಾತ್ಮಕ ಅನುಭವಗಳಿಗಿಂತ, ಋಣಾತ್ಮಕ ಅನುಭವಗಳಿಗೆ ಹೆಚ್ಚು ಸ್ಪಂದಿಸುವಂತೆ ಸೃಷ್ಟಿಸಲ್ಪಟ್ಟಿದೆ. ಇದು ನಮ್ಮ ಪೂರ್ವಜರನ್ನು ಜೀವಂತವಾಗಿ ಇಟ್ಟಿತ್ತು, ಈಗ ನಮ್ಮನ್ನು ಆತಂಕದಲ್ಲಿ ಇಟ್ಟಿದೆ.

ನಿಮ್ಮ ಮೆದುಳು ಯಾವಾಗಲೂ ನಿಮ್ಮ ಪರವಾಗಿ ಕೆಲಸ ಮಾಡುತ್ತಿರುವುದಿಲ್ಲ. ಕೆಲವೊಮ್ಮೆ ಅದು ನಿಮ್ಮ ವಿರುದ್ಧವಾಗಿ ಕೆಲಸ ಮಾಡುತ್ತಿರುತ್ತದೆ. ಮತ್ತು ಈ ಪಕ್ಷಪಾತವನ್ನು ಎದುರಿಸುವ ಒಂದೇ ದಾರಿ ಎಂದರೆ, ಇಂಥದೊಂದು ಇದೆ ಎನ್ನುವುದನ್ನು ಒಪ್ಪಿಕೊಳ್ಳುವುದು. ನಿಮ್ಮೊಳಗೆ ಈ ಐದರಲ್ಲಿ ನೀವು ಯಾವುದನ್ನು ಗುರುತಿಸುತ್ತೀರಿ?

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.