ಸೆಕ್ಯುಲರಿಸಂ ನ ಅರ್ಥ ಏನು? : ಜಾವೇದ್ ಅಖ್ತರ್ ವಿವರಣೆ

ಸಾಮಾನ್ಯವಾಗಿ ಸೆಕ್ಯುಲರಿಸಂ ಎಂದರೇನು ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಈ ಸೆಕ್ಯುಲರಿಸಂ ನ ಒಪ್ಪಲಿಕ್ಕೆ ನೀವು ಸಿದ್ಧ ಇಲ್ಲದಿರುವಾಗ, ನೀವು ಬೇರೆ ಬೇರೆ ಪ್ರಶ್ನೆಗಳನ್ನೆತ್ತಲು ಶುರು ಮಾಡುತ್ತೀರಿ… । ಜಾವೇದ್ ಅಖ್ತರ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಪ್ರಶ್ನೆ : ಸೆಕ್ಯುಲರಿಸಂ ನ ಅರ್ಥ ಏನು? ಒಬ್ಬ ಹಿಂದೂ ಕವಿ ಅಲ್ಲಾಹ್ ನ ಬಗ್ಗೆ, ಮತ್ತು ಒಬ್ಬ ಉರ್ದೂ ಶಾಯರ್ ಹಿಂದೂ ದೇವತೆಗಳ ಬಗ್ಗೆ ಬರೆದರೆ, ಅಥವಾ ಪರಸ್ಪರ ಆತ್ಮೀಯತೆಯ ಬಗ್ಗೆ, ಭ್ರಾತೃತ್ವದ ಬಗ್ಗೆ ಬರೆದರೆ ಅದನ್ನೇ ಸೆಕ್ಯುಲರಿಸಂ ಎನ್ನಬಹುದಾ?

ಜಾವೇದ್ ಅಖ್ತರ್ : ನಿಮ್ಮ ಈ ಪ್ರಶ್ನೆಗೆ ಉತ್ತರವನ್ನ ಒಂದು ಜೋಕ್ ಮೂಲಕ ಕೊಡಲಿಕ್ಕೆ ಪ್ರಯತ್ನ ಮಾಡ್ತೀನಿ. ಒಬ್ಬನಿಗೆ ಯಾರೋ ಪ್ರಶ್ನೆ ಮಾಡಿದರು…

ನಿನ್ನ ಜಾಬ್ ನಿನಗೆ ಖುಶಿ ಕೊಡತ್ತಾ?
ಹೌದು ಕೊಡತ್ತೆ.

ನಿನ್ನ ಗೆಳೆಯರು ನಿನಗೆ ಖುಶಿ ಕೊಡ್ತಾರಾ?
ಹೌದು ಖುಶಿ ಕೊಡ್ತಾರೆ

ನಿನ್ನ ಹೊಸ ಮನೆ ಬಗ್ಗೆ ನಿನಗೆ ಖುಶಿ ಇದೆಯಾ?
ಖಂಡಿತ ಖುಶಿ ಇದೆ

ನಿನ್ನ ಮಕ್ಕಳ ಬಗ್ಗೆ ನಿನಗೆ ಖುಶಿ ಇದೆಯಾ?
ಹೌದು ೧೦೦% ಖುಶಿ ಇದೆ

ನಿನ್ನ ಹೆಂಡತಿಯ ಬಗ್ಗೆ ನಿನಗೆ ಖುಶಿ ಇದೆಯಾ?
(ಇಲ್ಲಿಯವರೆಗೆ ಸರಾಗವಾಗಿ ಉತ್ತರಿಸುತ್ತಿದ್ದ ಆ ವ್ಯಕ್ತಿ ಈಗ ಕೊಂಚ ಯೋಚನೆ ಮಾಡಿ ಉತ್ತರಿಸಿದ)

“ನೋಡಿ, ಖುಶಿ ಎಂದರೇನು?, ಯಾವುದನ್ನ ನಾವು ಖುಶಿ ಅಂತ ಅಂದ್ಕೊತೀವಿ? …. “ ಇತ್ಯಾದಿಯಾಗಿ.

ಹೀಗೆ ಅವನು ಖುಶಿಯ ಬಗ್ಗೆ ಹಲವಾರು ವ್ಯಾಖ್ಯಾನ ಮಾಡಿದನೇ ಹೊರತು, ಹೆಂಡತಿಯ ಬಗ್ಗೆ ಅವನಿಗೆ ಖುಶಿ ಇದೆಯಾ ಅಥವಾ ಇಲ್ವಾ ಅನ್ನೊದನ್ನ ಬಾಯಿ ಬಿಟ್ಟು ಹೇಳಲೇ ಇಲ್ಲ. ಇಂಥ ಫಿಲಾಸೊಫಿಗಳು, ಇಂಥ ತರ್ಕಗಳು ಯಾವಾಗ ಶುರು ಆಗ್ತಾವೆ ಅಂದ್ರೆ, ಯಾವಾಗ ನೀವು ಉತ್ತರಗಳನ್ನು ಒಪ್ಪಲಿಕ್ಕೆ ತಯಾರಾಗಿರುವುದಿಲ್ಸವೋ ಆವಾಗ.

ಸಾಮಾನ್ಯವಾಗಿ ಸೆಕ್ಯುಲರಿಸಂ ಎಂದರೇನು ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಈ ಸೆಕ್ಯುಲರಿಸಂ ನ ಒಪ್ಪಲಿಕ್ಕೆ ನೀವು ಸಿದ್ಧ ಇಲ್ಲದಿರುವಾಗ, ನೀವು ಸೆಕ್ಯುಲರಿಸಂ ಎಂದರೇನು? ಇದರ ಡೆಫನೀಷನ್ ಏನು? ಪಶ್ಚಿಮದಲ್ಲಿ ಇದರ ಅರ್ಥ ಏನು? ಪೂರ್ವದಲ್ಲಿನ ಅರ್ಥ ಏನು? ಯಾವ ಧರ್ಮದಲ್ಲಿ ಇದರ ಬಗ್ಗೆ ಏನು ಹೇಳಿದಾರೆ…. ಇಂಥ ಪ್ರಶ್ನೆಗಳನ್ನೆಲ್ಲ ಎತ್ತಲು ಶುರು ಮಾಡುತ್ತೀರಿ.

ಸೆಕ್ಯುಲರಿಸಂ ಕೇವಲ ಧರ್ಮಗಳಿಗೆ ಸಂಬಂಧಿಸಿದ್ದಲ್ಲ. ಅದು ಜಾತಿಗಳಿಗೂ ಸಂಬಂಧಿಸಿದ್ದು, ಅದು ಭಾಷೆಗಳಿಗೂ ಸಂಬಂಧಿಸಿದ್ದು, ಅದು ಲಿಂಗತ್ವಕ್ಕೂ ಸಂಬಂಧಿಸಿದ್ದು. ನೀವು ಯಾವುದೇ ಒಂದರಲ್ಲಿ regressive (ಪ್ರತಿಗಾಮಿ) ಆಗಿದ್ದರೂ ನೀವು ಸೆಕ್ಯುಲರಿಸಂ ನ ವಿರುದ್ಧವೇ. ನೀವು ಕೋಮುವಾದವನ್ನು ಪ್ರಬಲವಾಗಿ ವಿರೋಧಿಸುತ್ತಿರಬಹುದು ಆದರೆ ನೀವು ಭಾಷೆಯ ವಿಷಯದಲ್ಲಿ, ಜೆಂಡರ್ ವಿಷಯದಲ್ಲಿ ರಿಗ್ರೆಸ್ಸಿವ್ ಆಗಿದ್ದರೆ, ನೀವು ಸೆಕ್ಯುಲರಿಸಂ ಗೆ ವಿರುದ್ಧವೇ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.