ಬಿಡುಗಡೆಯ ಮಾತಿಗೆ ಮೊದಲು ಬಂಧನದ ಮೂಲ ಅರಿಯಿರಿ : ಸ್ವಾಮಿ ರಾಮತೀರ್ಥ ವಿಚಾರ ಧಾರೆ

ಈ ಭವ್ಯವೂ ಸಮೃದ್ಧವೂ ಆದ ಇಡೀ ವಿಶ್ವವೆಂಬ ಮಹಾರಣ್ಯದಲ್ಲಿ ಇಕ್ಕಟ್ಟಾದ ಕಂಠವುಳ್ಳ ಒಂದು ಹೂಜಿ ಇದೆ. ನಿಮ್ಮ ಪುಟ್ಟ ಮೆದುಳೇ ಆ ಸಂಕುಚಿತ ಕಂಠದ ಹೂಜಿ. ಇವು ನಮಗೆ ಇಷ್ಟವಾದವು, ಇವು ನಮ್ಮಮೆಚ್ಚಿನವು ಎಂದು ನೀವು ಅಕಾರಣವಾಗಿ ಕಲ್ಪಿಸಿಕೊಂಡ ಕೆಲವು ವಿಷಯಗಳೇ ನಿಮ್ಮ ಮೆದುಳೆಂಬ ಹೂಜಿಯಲ್ಲಿ ನೀವು ಹಾಕಿಟ್ಟುಕೊಂಡಿರುವ ತಿನಿಸುಗಳು. ನಿಮ್ಮ ಮನಸ್ಸೆಂಬ ಮಂಗ ಇವು ನನಗೆ ಬೇಕು, ಇವು ನನ್ನವು ಎಂದು ನಿಮ್ಮ ಮೆದುಳಿನಲ್ಲಿ ನೀವೇ ಇಟ್ಟುಕೊಂಡಿರುವ ಮೆಚ್ಚಿನ ತಿಂಡಿಗಳನ್ನು ಬಿಗಿಯಾಗಿ ಹಿಡಿದುಕೊಳ್ಳುತ್ತದೆ.