ಹೆಣ್ಣಾಗಿ ಹೊತ್ತ ಹರಕೆಯನ್ನು ಗಂಡಾಗಿ ತೀರಿಸಿದ ಐಫಿಸ್ : ಗ್ರೀಕ್ ಪುರಾಣ ಕಥೆಗಳು  ~ 34

ಇದೊಂದು ವಿಚಿತ್ರ ಕಥೆ. ಹೆಣ್ಣಾಗಿ ಹುಟ್ಟಿದ ಐಫಿಸ್, ಮದುವೆಯ ಹಿಂದಿನ ಗಂಡಾಗಿ ಮಾರ್ಪಾಟುಹೊಂದಿದ ಕಥೆ. ಇದೆಲ್ಲ ನಡೆದಿದ್ದು ಹೀಗೆ… ಸಂಗ್ರಹ ಮತ್ತು ಅನುವಾದ: ಚೇತನಾ ತೀರ್ಥಹಳ್ಳಿ ಕ್ರೀಟ್ ದ್ವೀಪದ ಫೀಸ್ಟಸ್ ಎಂಬಲ್ಲಿ ಜೀವಿಸಿದ್ದ ಲಿಗ್ಡಸ್, ಕಡು ಬಡವನಾಗಿದ್ದ. ಟೆಲಿಥೂಸ ಅವನ ಹೆಂಡತಿ. ಅವಳು ತುಂಬು ಗರ್ಭಿಣಿಯಾಗಿದ್ದಾಗ ಲಿಗ್ಡಸ್ ಚಿಂತಾಕ್ರಾಂತನಾಗಿ ತಲೆ ಮೇಲೆ ಕೈಹೊತ್ತು ಕುಳಿತುಬಿಡುತ್ತಿದ್ದ. ಯಾಕೆ ಹೀಗೆ ಯೋಚನೆಯಲ್ಲಿ ಮುಳುಗಿದ್ದೀಯ ಎಂದು ಹೆಂಡತಿ ಕೇಳಿದರೆ ಏನಿಲ್ಲವೆಂದು ತಲೆಯಾಡಿಸುತ್ತಿದ್ದ. ಗಂಡನ ಅನ್ಯಮನಸ್ಕತೆಯಿಂದ ಬೇಸರಗೊಂಡ ಟೆಲಿಥೂಸ ಒಂದು ದಿನ ಅವನನ್ನು […]

ಮೈದಾಸನ ಸ್ಪರ್ಶ ತಂದಿತ್ತ ಫಜೀತಿ  :  ಗ್ರೀಕ್ ಪುರಾಣ ಕಥೆಗಳು  ~ 22

“ಮೈದಾಸ್ ಟಚ್ – ಮೈದಾಸನ ಸ್ಪರ್ಶ” ಅನ್ನುವ ನುಡಿಗಟ್ಟನ್ನು ಕೇಳಿಯೇ ಇರುತ್ತೀರಿ. ಯಾರಾದರೂ ಏನನ್ನಾದರೂ ಮುಟ್ಟಿದರೆ ಚಿನ್ನದಂಥ ಫಲಿತಾಂಶ ಬರುತ್ತದೆ ಎಂದು ಸೂಚಿಸುವುದಕ್ಕೆ ಈ ನುಡಿಗಟ್ಟು ಬಳಕೆಯಾಗುತ್ತದೆ. ಇದರ ಮೂಲ ಗ್ರೀಕ್ ಪುರಾಣದಲ್ಲಿದೆ. ಸಂಗ್ರಹ ಮತ್ತು ಅನುವಾದ : ಚೇತನಾ ತೀರ್ಥಹಳ್ಳಿ ಮೈದಾಸ್, ಫ್ರಿಜಿಯ ದೇಶದ ದೊರೆ. ಅವನಿಗೆ ಗುಲಾಬಿ ಹೂವುಗಳೆದರೆ ಪಂಚಪ್ರಾಣ. ತನ್ನ ರಾಜ್ಯದ ತುಂಬೆಲ್ಲ ಗುಲಾಬಿಗಳನ್ನೆ ಬೆಳೆಸಿ, ಅದರಲ್ಲಿ ನಿತ್ಯವೂ ಹೂವರಳುವಂತೆ ವ್ಯವಸ್ಥೆ ಮಾಡಿದ್ದ ಮೈದಾಸ್. ಯಾರಾದರೂ ಅವನ ಗುಲಾಬಿ ತೋಟಗಳಿಗೆ ನುಗ್ಗಿದರೆ ಅವರಿಗೆ […]

ಹೀರಾದೇವಿಯ ಎದೆಯಿಂದ ಚಿಮ್ಮಿ ಹರಿದ ಹಾಲೇ ‘ಕ್ಷೀರಪಥ’ : ಗ್ರೀಕ್ ಪುರಾಣ ಕಥೆಗಳು ~ 15

ಆಂಫಿಟ್ರಿಯೋನ್, ಆಲ್ಕ್ ಮೀನಿ, ಟಾಫಿಯನ್ನರ ಮೇಲಿನ ಯುದ್ಧ, ಸ್ಯೂಸ್ ದೇವನ ಪ್ರಣಯ, ಹೆರಾಕ್ಲೀಸ್ (ಹರ್ಕ್ಯುಲಸ್) ಹುಟ್ಟು ಮತ್ತು ಹೀರಾ ದೇವಿಯ ಸಿಟ್ಟು…. ಸಂಗ್ರಹ ಮತ್ತು ಅನುವಾದ: ಚೇತನಾ ತೀರ್ಥಹಳ್ಳಿ ಆಂಫಿಟ್ರಿಯೋನ್ ಟ್ರೋಜನ್ ನಗರದಲ್ಲಿ ಆಳ್ವಿಕೆ ಮಾಡಿಕೊಂಡಿದ್ದ ರಾಜ. ಅವನ ಹೆಂಡತಿ ಅಲ್ಕ್ ಮೀನಿ ಭೂಮಿಯಲ್ಲೇ ಅತ್ಯಂತ ಚೆಲುವೆ. ಅವಳ ಎಂಟು ಮಂದಿ ಸಹೋದರರನ್ನು ಟಾಫಿಯನ್ನರು ಕೊಂದು ಹಾಕಿದ್ದರು. ಅವರ ಮೇಲೆ ಸೇಡು ತೀರಿಸಿಕೊಳ್ಳದ ಹೊರತು ನಾನು ನಿನ್ನೊಂದಿಗೆ ಸಂಸಾರ ಮಾಡುವುದಿಲ್ಲ ಎಂದು ಅಲ್ಕ್ ಮೀನಿ ಹಠ ತೊಟ್ಟಿದ್ದಳು. […]

ಸ್ಯೂಸ್ ದೇವ ಸೃಷ್ಟಿಸಿದ ಪ್ರಳಯ ಮತ್ತು ಜೀವಜಂತುಗಳ ಪುನರ್ ಸೃಷ್ಟಿ : ಗ್ರೀಕ್ ಪುರಾಣ ಕಥೆಗಳು ~ 11

ಸ್ಯೂಸ್ ಸಂಕಲ್ಪಿಸಿದಂತೆ ಕಾರ್ಮೋಡ ಕವಿದು ಭಾರೀ ಪ್ರಮಾಣದ ಸಿಡಿಲು ಗುಡುಗು ಶುರುವಾಯಿತು. ಧೋ ಎಂದು ಧಾರಾಕಾರ ಮಳೆ ಸುರಿಯತೊಡಗಿತು. ಮಳೆ ಬೀಳುವ ಹೊಡೆತಕ್ಕೆ ಮನೆಗಳು ಉರುಳಿಬಿದ್ದವು. ಕೆಲವೇ ಗಂಟೆಗಳ ಒಳಗೆ ಇಡಿಯ ಭೂಮಿ ನೀರಿನಿಂದ ತುಂಬಿಹೋಯ್ತು. ಜಲಪ್ರಳಯ ಉಂಟಾಗಿ ಭೂಮಿಯ ಮೇಲಿನ ಜೀವಸಂಕುಲಗಳು ಕೊಚ್ಚಿಹೋದವು. ಒಂಭತ್ತು ಹಗಲು, ಒಂಬತ್ತು ರಾತ್ರಿ ಎಡೆಬಿಡದೆ ಸುರಿದ ಮಳೆಗೆ ಭೂಮಿ ಸಂಪೂರ್ಣ ನಾಶವೇ ಆಗಿಹೋಯಿತು…. ಸಂಗ್ರಹ ಮತ್ತು ಅನುವಾದ : ಚೇತನಾ ತೀರ್ಥಹಳ್ಳಿ ಒಮ್ಮೆ ಸ್ಯೂಸ್ ಮಹಾದೇವನಿಗೆ ಭೂಲೋಕದಲ್ಲಿ ಮನುಷ್ಯರು ಸತ್ಯವಂತರಾಗಿ […]

ಸೂರ್ಯಕಾಂತಿ ಹೂವಾದ ಕ್ಲೈಟೀ : ಗ್ರೀಕ್ ಪುರಾಣ ಕಥೆಗಳು ~5

ಸದಾ ಸೂರ್ಯಧ್ಯಾನದಲ್ಲೇ ಇರುತ್ತಾ ಮೈಮರೆತ ಕ್ಲೈಟಿ ಊಟ – ನಿದ್ರೆಗಳನ್ನು ಮರೆತಳು. ಸಿಂಗಾರವನ್ನು ಬಿಟ್ಟಳು. ಕಣ್ಣೀರೇ ಕುಡಿಯುವ ನೀರಾಯಿತು. ಅವನು ತನ್ನತ್ತ ತಿರುಗಿ ನೋಡದೆ ಇದ್ದರೂ ಅವನಿಂದ ಕಣ್ಣುಕೀಳದೆ ಕುಳಿತುಕೊಂಡಳು…. ಸಂಗ್ರಹ ಮತ್ತು ಅನುವಾದ : ಚೇತನಾ ತೀರ್ಥಹಳ್ಳಿ ಕ್ಲೈಟೀ ಒಬ್ಬ ಜಲಕನ್ಯೆ. ಸೂರ್ಯದೇವ ಹೀಲಿಯಸ್’ನ ಮೇಲೆ ಅವಳಿಗೆ ಅತಿಶಯ ಪ್ರೇಮ. ಅವನು ಆಗಸದಲ್ಲಿ ಚಲಿಸೋದನ್ನು ಪ್ರತಿನಿತ್ಯವೂ ಕುತೂಹಲದಿಂದ ನೋಡುತ್ತಿದ್ದಳು. ಅವನು ಪೂರ್ವ ದಿಕ್ಕಿನಲ್ಲಿ ಹುಟ್ಟಿ, ನಡು ನೆತ್ತಿಗೇರಿ, ಪಶ್ಚಿಮದಲ್ಲಿ ಮುಳುಗುವವರೆಗೂ ತನ್ನ ಮುಖವನ್ನು ಅವನತ್ತಲೇ ತಿರುಗಿಸಿಕೊಂಡು. […]