ಜ್ಞಾನೋದಯವಾಗಿದೆ ಎಂದು ಗೊತ್ತಾಗೋದು ಹೇಗೆ?

ಮುಲ್ಲಾ ನಸ್ರುದ್ದೀನ್ ಊರಿನ ಮುಖ್ಯ ಬೀದಿಯಲ್ಲಿ ನಡೆದು ಹೋಗುತ್ತಿದ್ದ. ಅವನನ್ನು ಒಂದು ಪುಟ್ಟ ಹಿಂಡು ಹಿಂಬಾಲಿಸುತ್ತಿತ್ತು. ಆ ಹಿಂಡಿನಲ್ಲಿದ್ದ ಜನರು ನಸ್ರುದ್ದೀನ್ ಏನೆಲ್ಲ ಮಾಡುವನೋ ಅವನ್ನು ಹಾಹಾಗೇ ಅನುಕರಿಸುತ್ತಿದ್ದರು. ಅವನು ಒಂದು ಹೆಜ್ಜೆ ಮುಂದಿಟ್ಟರೆ ತಾವೂ ಮುಂದಿಡುವರು. ನಿಂತರೆ ತಾವೂ ನಿಲ್ಲುವರು. ನಸ್ರುದ್ದೀನ್ ಎರಡೂ ಕೈ ಎತ್ತಿ ‘ಹಹಹಾ…’ ಎಂದು ಗಹಗಹಿಸಿ ನಗಾಡಿದ. ಅವನನ್ನು ಅನುಕರಿಸುತ್ತಿದ್ದ ಹಿಂಡೂ ಹಾಗೆಯೇ ಮಾಡಿತು. ಮುಖ್ಯ ಬೀದಿಯ ಅಂಗಡಿ ಸಾಲಿನಲ್ಲಿ ನಸ್ರುದ್ದೀನನ ಒಬ್ಬ ಗೆಳೆಯನಿದ್ದ. ನಸ್ರುದ್ದೀನನನ್ನೂ ಅವನನ್ನು ಹಿಂಬಾಲಿಸುತ್ತಿದ್ದ ಹಿಂಡಿನ ವರ್ತನೆಯನ್ನೂ […]

ಭಗವಂತ ಮೋಹಗೊಂಡು ಮುತ್ತಿಟ್ಟರೇನು ಮಾಡುವೆ? : ಸೂಫಿ ಕಾವ್ಯ

ಮೂಲ: ನಜತ್ ಒಝ್ಕಾಯಾ (ಸೂಫಿ ಸಂತಕವಿ) | ಕನ್ನಡಕ್ಕೆ: ಚಿದಂಬರ ನರೇಂದ್ರ ಭಗವಂತನ ಬಗ್ಗೆ ತೀವ್ರವಾಗಿ ಉದ್ವೇಗಗೊಂಡಿದ್ದ ಒಬ್ಬ ಸಾಧಕ ನನ್ನಂಥ ಅನುಭವಿ ದರ್ವೇಶಿಯಿಂದ ಸಲಹೆ ಪಡೆಯಲು ನಿನ್ನೆ ನನ್ನ ಮನೆಗೆ ಬಂದಿದ್ದ. “ಚುಂಬನ ಇಷ್ಟಾನಾ?” ನಾನು ಕೇಳಿದ್ದೇ ತಡ ಆತ, ಅಲ್ಲಿದ್ದ ಖುರ್ಚಿ ಎತ್ತಿ ನನ್ನ ಮೇಲೆ ಎಸೆದ; “ನಿಮ್ಮಂಥವರ ಬಗ್ಗೆ ಕೇಳಿದ್ದೆ, ಇವತ್ತು ನೋಡಿದೆ” ಆತ ಸಿಟ್ಟಿನಿಂದ ಕಂಪಿಸುತ್ತಿದ್ದ… ಸುತ್ತಿ ಬಳಸಿ ಕೇಳಿ ಪ್ರಯೋಜನವಿಲ್ಲವೆಂದು ನೇರವಾಗಿ ಮಾತಿಗಿಳಿದೆ; “ಭಗವಂತ ಮೋಹಗೊಂಡು ನಿನ್ನ ಕುತ್ತಿಗೆಯಿಂದ ಪಾದದವರೆಗೆ […]

ಪ್ರೇಮವೇ ಭಗವಂತನೆಂದ ಸೂಫಿ : ರಾಬಿಯಾ

ರಾಬಿಯಾ ಯಾವಾಗಲೂ ಒಂದು ಕೈಲಿ ಕೊಳ್ಳಿ, ಒಂದು ಕೈಲಿ ಹೂಜಿ ಹೊತ್ತುಕೊಂಡು ಅಲೆಯುತ್ತಿದ್ದಳು. ಯಾಕೆ ಅಂತ ಕೇಳಿದರೆ, “ನರಕದ ಭಯದಿಂದ ದೇವರನ್ನ ಪ್ರೇಮಿಸೋದಾದರೆ ಅಂಥಾ ನರಕದ ಬೆಂಕಿ ನಂದಿಸಲಿಕ್ಕೆ; ಮತ್ತು ಸ್ವರ್ಗದ ಆಸೆಯಿಂದ ದೇವರನ್ನ ಪ್ರೇಮಿಸೋದಾದರೆ ಅಂಥಾ ಸ್ವರ್ಗವನ್ನ ಸುಟ್ಟುಹಾಕಲಿಕ್ಕೆ ಅನ್ನುತ್ತಿದ್ದಳು! ~ ಚೇತನಾ  ರಾಬಿಯಾ ಅಲ್ ಬಸ್ರಿ, ಇರಾಕ್ ದೇಶದ ಬಸ್ರ್ ಪಟ್ಟಣದಲ್ಲಿ ಹುಟ್ಟಿ ಬೆಳೆದ ಹೆಣ್ಣುಮಗಳು. ಚಿಕ್ಕವಳಿರುವಾಗಲೇ ಅವಳಪ್ಪ ಅಮ್ಮ ಸತ್ತುಹೋಗ್ತಾರೆ. ರಾಬಿಯಾ ಶ್ರೀಮಂತನ ಮನೆಯೊಂದರಲ್ಲಿ ಗುಲಾಮಳಾಗಿ ಬೆಳೆದುಕೊಳ್ತಾಳೆ. ದೇಹಕ್ಕೆ ಗುಲಾಮಗಿರಿ ಕಟ್ಟಬಹುದು, ಮನಸಿಗೆ […]

ಈ ಕನಸಿನ ವ್ಯಾಖ್ಯಾನವೇನು?

ಕುರಾನ್ ಬಗ್ಗೆ ತನಗಿರುವಷ್ಟು ಅಗಾಧ ಪಾಂಡಿತ್ಯವನ್ನು ಬೇರಾರಿಗೂ ಇಲ್ಲ ಎಂಬ ಅಹಂಕಾರದಿಂದ ಮೆರೆಯುತ್ತಿದ್ದ ವ್ಯಕ್ತಿಯೊಬ್ಬನಿದ್ದ. ಚಿಸ್ತಿ ಪೀರ್ ನ ಸೂಫಿಯನ್ನು ವಾದಕ್ಕೆಳೆದು ತನ್ನ ಪಾಂಡಿತ್ಯವನ್ನು ಪ್ರದರ್ಶಿಸಬೇಕು ಮತ್ತು ಅವನನ್ನು ವಾದದಲ್ಲಿ ಸೋಲಿಸಬೇಕೆಂದು ಆತ ಬಯಸಿದ್ದ. ಹಾಗೆಂದೇ ಒಂದು ದಿನ ಅವನು ಸೂಫಿಯಲ್ಲಿಗೆ ಬಂದ. ಆ ಅಹಂಕಾರಿಯ ಆಲೋಚನೆಯನ್ನು ನೋಟದಲ್ಲೇ ಗ್ರಹಿಸಿದ ಸೂಫಿಯು, ಕುರಾನಿನಲ್ಲಿ ಯೂಸಫ಼ನಿಗೆ ಬಿದ್ದಿತೆಂದು ಹೇಳಲಾಗದ ಕನಸನ್ನು ಪ್ರಸ್ತಾಪಿವುದರೊಂದಿಗೆ ತಾನಾಗಿಯೇ ಸಂಭಾಷಣೆಯನ್ನು ಪ್ರಾರಂಭಿಸಿದ. ನಂತರ ಆ ವ್ಯಕ್ತಿಯನ್ನು ಕುರಿತು, “ನನಗೂ ಹಾಗೆಯೇ ಒಂದು ಕನಸು ಬಿದ್ದಿತ್ತು. […]

ಕಾಲಿಗೆ ಸೋರೆಕಾಯಿ ಕಟ್ಟಿಕೊಂಡ ಮೂರ್ಖ ~ ಜಾಮಿ ಹೇಳಿದ ಕಥೆ

ಅಬ್ದುರ್ ರೆಹಮಾನ್ ಒಬ್ಬ ಸೂಫಿ ಸಂತ.  ಒಮ್ಮೆ ಮೂರ್ಖಶಿಖಾಮಣಿಯೊಬ್ಬ ಒಂದು ದೊಡ್ಡ ನಗರಕ್ಕೆ ಬಂದ. ನಗರದ ಯಾವ ಬೀದಿಯಲ್ಲಿ ನೋಡಿದರೂ ಜನ ತುಂಬಿ ತುಳುಕಾಡುತ್ತಿತ್ತು. ಜನಸಾಗರವೋ ಅನ್ನುವಂತೆ ಇದ್ದ ಆ ನಗರವನ್ನು ಕಂಡು ಅವನು ಗಾಬರಿಯಾದ. ಈ ನಗರದಲ್ಲಿ ನಿದ್ದೆ ಮಾಡುವುದಾದರೂ ಹೇಗಪ್ಪಾ ಎಂದು ಅವನಿಗೆ ಚಿಂತೆಯಾಯಿತು. ಬೆಳಗ್ಗೆ ಎದ್ದಾಗ ತನ್ನ ಗುರುತೇ ನನಗೆ ಸಿಗದಂತಾಗಿಬಿಟ್ಟರೆ ಹೇಗೆ ಅನ್ನುವ ಭಯ ಅವನನ್ನು ಕಾಡತೊಡಗಿತು. ಆದ್ದರಿಂದ ಅವನು ತನ್ನ ಗುರುತು ಕಳೆದುಹೋಗದಿರಲಿ ಎಂದುಕೊಂಡು ಕಾಲಿಗೆ ಒಂದು ಸೋರೆಕಾಯಿ ಕಟ್ಟುಕೊಂಡು […]

ಪ್ರಾರ್ಥನೆ ಮಾಡುವುದು ಅಂದರೆ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವುದು ಎಂದಲ್ಲ!

ನಮ್ಮ ಜವಾಬ್ದಾರಿಗಳನ್ನು ದೇವರೆಂದು ನಂಬಿಕೊಂಡು ಅತೀತ ಶಕ್ತಿಯ ಮೇಲೆ ಹೊರೆಸುತ್ತೇವೆ. ಜವಾಬ್ದಾರಿ ನಿಭಾಯಿಸುವ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ತೇವೆ. ಹಾಗೆ ದೇವರು ಹೊಣೆ ಹೊರಲೆಂದು ಪೂಜೆ ಪ್ರಾರ್ಥನೆಗಳ ದೇಣಿಗೆಯನ್ನೂ ಕೊಟ್ಟು ‘ನಾವು ಕೊಟ್ಟೆವು, ನಾವು ಬೇಡಿದೆವು’ ಎಂದು ಲೆಕ್ಕ ಕೊಡುತ್ತೇವೆ. ಒಂಟೆಯನ್ನು ಸಾಕಿದ್ದ ವ್ಯಾಪಾರಿಯೊಬ್ಬ ಒಂದು ದಿನ ಬಾಜಾರಿನಲ್ಲಿ ವ್ಯಾಪಾರ ಮುಗಿಸಿ ಊರಿಗೆ ವಾಪಸಾಗುತ್ತಿದ್ದ. ಅವತ್ತು ಭರ್ಜರಿ ಲಾಭ ಸಿಕ್ಕ ಖುಷಿಯಲ್ಲಿ ಆತ ಹಾಡು ಗುನುಗುತ್ತ ಒಂಟೆಯ ಮೇಲೆ ಸಾಗುತ್ತಿದ್ದ. ಅವನು ಸಾಗುತ್ತಿದ್ದ ರಸ್ತೆಯ ಒಂದು ಬದಿಯಲ್ಲಿ ಮಸೀದಿ ಕಾಣಿಸಿತು. […]