ಜಗತ್ತು ಕೇವಲ ಗುಲಾಬಿಗಳಿಂದ ತುಂಬಿಕೊಂಡಿಲ್ಲ, ಕೇವಲ ಮುಳ್ಳುಗಳಿಂದಲೂ!

ನಾವು ವಾಸಿಸುತ್ತಿರುವ ಜಗತ್ತು ಪೂರ್ಣವಾಗಿ ಗುಲಾಬಿಗಳಿಂದ ಕೂಡಿದ ಸ್ವರ್ಗವಲ್ಲ. ಹಾಗೆಯೇ ಪೂರ್ಣವಾಗಿ ಮುಳ್ಳುಗಳಿಂದ ಆವೃತವಾದ ನರಕವೂ ಅಲ್ಲ. ಗುಲಾಬಿಯು ಮೃದು, ಸುಂದರ ಮತ್ತು ಪರಿಮಳಭರಿತ. ಆದರೆ ಕಾಂಡವು ಮುಳ್ಳುಭರಿತ. ಗುಲಾಬಿಯ ಕಾರಣಕ್ಕಾಗಿ ಒಬ್ಬನು ಮುಳ್ಳುಗಳನ್ನು ಸಹಿಸುತ್ತಾನೆ. ಹಾಗಿರುವಾಗಲು ಮುಳ್ಳುಗಳು ಇದೆ ಎಂದು ಗುಲಾಬಿಗಳನ್ನು ತಿರಸ್ಕೃತ ಮಾಡುವ ಹಾಗಿಲ್ಲ Dr K Sri Dhammananda thero | ಕನ್ನಡಕ್ಕೆ : ಅನೀಶ್ ಬೋಧ್

ಅನಿತ್ಯದ, ಅತೃಪ್ತಿಯ (ದುಃಖದ), ಅನಾತ್ಮದ (ನಿಜವಲ್ಲದ/ಹುರುಳಿಲ್ಲದ) ಅರಿವನ್ನು ಹೊಂದಿದಾಗ ಜೀವನದ ಲಕ್ಷಣಗಳನ್ನು, ಜೀವನದ ನಿಜ ಸ್ವರೂಪವನ್ನು ಅರ್ಥಮಾಡಿಕೊಳ್ಳುವುದು. ಆಗ ಮಾತ್ರ ನಾವು ಜೀವನದಲ್ಲಿ ಹೆಚ್ಚು ಉದ್ದೇಶಯುತವಾಗಿ ಕಾರ್ಯನಿರ್ವಹಿಸಬಹುದು. ಇಲ್ಲದೆ ಹೋದರೆ ನಾವು ಸದಾ ನಂಬಿಕೆ ಇಡುವ ಜಗತ್ತಿನಲ್ಲಿಯೇ ಚಿಂತೆಯಿಂದ ದುಃಖಿಸುತ್ತಾ, ಪರಮಾರ್ಥದ ಕರ್ತವ್ಯಗಳನ್ನು ಮುಂದೂಡುತ್ತಾ ಹೋಗುವಷ್ಟರಲ್ಲಿ ಕಾಲ ಮಿಂಚಿ ಹೋಗಿರುತ್ತದೆ.

ಈ ವಿಷಯವನ್ನು ವಿವರಿಸುವ ಸಾಮತಿಯೊಂದು ಹೀಗಿದೆ.
ಒಮ್ಮೆ ಒಂದು ಜೇನುನೊಣವು ಮಧುವನ್ನು ಸಂಗ್ರಹಿಸಲು ಕಮಲದ ಹೂವಿನಲ್ಲಿ ಕುಳಿತಿತ್ತು. ಅದು ಮಕರಂದ ಹೀರುತ್ತಾ ಮೈಮರೆಯಿತು. ಕಮಲದ ದಳಗಳು ನಿಧಾನವಾಗಿ ಮುಚ್ಚುತ್ತಿರುವುದನ್ನು ಅದು ಗಮನಿಸಲಿಲ್ಲ, ಆಗ ಅದು ಕಮಲದಲ್ಲಿಯೇ ಬಂಧಿಯಾಯಿತು. ಅದು ಅನುಚಿತವಾಗಿ ಚಿಂತೆ ಮಾಡಲಿಲ್ಲ, ತಡವರಿಸದೆ ಅದು ಹೀಗೆ ಹೇಳಿತು, ನಾನು ರಾತ್ರಿ ಇಲ್ಲೇ ಕಳೆಯುವೆನು ಮತ್ತು ಕಮಲವು ಮತ್ತೆ ಅರಳುವುದು. ಹೀಗಾಗಿ ಮುಂಜಾನೆ ನಾನು ಸ್ವತಂತ್ರನಾಗುವೆನು. ಹೀಗೆ ಅದು ಚಿಂತಿಸುತ್ತಿರುವಾಗಲೇ ಆನೆಯೊಂದು ಅಲ್ಲಿಗೆ ಬಂದಿತು. ಅದು ಕಮಲವನ್ನು ಕಿತ್ತು ತಿಂದಿತು. ಹೀಗೆ ಜೇನುಹುಳುವಿನ ಅಂತ್ಯವಾಯಿತು.

ಆ ಜೇನು ಹುಳುವಿನಂತೆ ನಾವು ಸಹಾ ಭವಿಷ್ಯದ ಬಗ್ಗೆ ಹಗಲುಗನಸು ಗಳನ್ನು ಕಾಣುತ್ತಿರುವೆವು. ಆ ಕನಸುಗಳ ನಿಜವಾಗುವಿಕೆಗಾಗಿ ಕಾರ್ಯ ಮಾಡುತ್ತಿದ್ದೇವೆ. ಆದರೆ ಇಲ್ಲಿ ನಾವು ಜೀವನದ ಬಗ್ಗೆ ಒಂದು ಅಂಶವನ್ನು ಬಹಳಷ್ಟು ಬಾರಿ ಅರ್ಥ ಮಾಡಿಕೊಂಡಿಲ್ಲ. ಅದು ಏಕೆಂದರೆ ಜೀವನ ಯಾವ ನಿಯಮಗಳಿಂದ ಸಾಗುತ್ತಿದೆಯೋ, ಅದೆಲ್ಲವೂ ಪೂರ್ಣವಾಗಿ ನಮ್ಮಿಂದ ನಿರ್ಧರಿತವಾಗಿಲ್ಲ ಮತ್ತು ನಮ್ಮ ಶ್ರಮಗಳಿಂದ ಅರಿವಾಗುವುದು ಏನೆಂದರೆ ನಮ್ಮ ಕನಸುಗಳು ಬಹುಶಃ ಕೊನೆಗೊಳ್ಳಬಹುದು. ಇಂತಹ ವಿಷಯಗಳು ವಿಶೇಷತಃವಾಗಿ ನಮ್ಮ ಪರಮಾರ್ಥದ ವಿಕಾಸದ ಮುಂದೂಡಿಕೆಯಿಂದಾಗಿ ಸಂಭವಿಸುತ್ತದೆ ಹೊರತು ವರ್ತಮಾನದಲ್ಲಿ ಶ್ರಮಿಸುವುದರಿಂದಾಗಿ ಅಲ್ಲ.
ನಾವು ವಿಮುಕ್ತಿಗಾಗಿ ಪ್ರಯತ್ನಿಸುವಾಗ ಹಲವು ಬಗೆಯ ಅಡ್ಡಿ ಆತಂಕಗಳನ್ನು ಅನುಭವಿಸುತ್ತೇವೆ.

ಒಂದು ದಿನ ಬುದ್ಧ ಭಗವಾನರು ಗಂಗಾನದಿಯಲ್ಲಿ ಮರದ ದೊಡ್ಡ ದಿಮ್ಮಿ ತೇಲುತ್ತಿರುವುದನ್ನು ಕಂಡರು. ಆಗ ಅವರು ಜೊತೆಯಲ್ಲಿದ್ದ ಬಿಕ್ಖುಗಳಿಗೆ ಹೇಳಿದರು, “ಆ ಮರದ ದಿಮ್ಮಿಯಂತೆ ದುಃಖ ವಿಮುಕ್ತನಾಗಲು ಶ್ರಮಿಸುತ್ತಿರುವ ವ್ಯಕ್ತಿಯೂ ಸಹಾ. ಆ ದಿಮ್ಮಿಯು ಸಾಗರವನ್ನು ತಲುಪುವುದು ಹೇಗೆ ಅನಿಶ್ಚಿತತೆಯೋ ನೀವೇ ನೋಡಿ. ಅದು ದಡದಲ್ಲಿಯೇ ಸಿಕ್ಕಿಕೊಳ್ಳಬಹುದು ಅಥವಾ ಮಾನವನೊಬ್ಬ ತೆಗೆದುಕೊಂಡು ಹೋಗಬಹುದು ಅಥವಾ ಕೊಳೆಯಬಹುದು ಅಥವಾ ಸುಳಿಗೆ ಸಿಲುಕಿ ಮುಳುಗಬಹುದು.”
“ದುಃಖವಿಮುಕ್ತನಾಗಲು ಅನ್ವೇಷಿಸುತ್ತಿರುವವನು ಮರದ ದಿಮ್ಮಿಯಂತೆ, ಆತನ ಗುರಿಯೆಡೆಗಿನ ಪ್ರಯಾಣವು ಹಲವಾರು ವಿಧದಲ್ಲಿ ತಡೆಗೊಳ್ಳಬಹುದು. ಆತನು ಇಂದ್ರೀಯ ಭೋಗಗಳಲ್ಲಿ ಸಿಕ್ಕಿಕೊಳ್ಳಬಹುದು ಅಥವಾ ಭೌತಿಕ ಮತ್ತು ಮಾನಸಿಕ ಪ್ರಕ್ರಿಯೆಗಳಲ್ಲಿ ಅಂಟಿಕೊಳ್ಳಬಹುದು. ಅಹಂಕಾರಿಯಾಗಿ, ದರ್ಪದಿಂದ ಉನ್ಮತ್ತನಾಗಿ, ಅದಕ್ಕೆ ಪುಷ್ಟಿ ನೀಡುವ ಜನರೊಂದಿಗೆ ಸೇರಿ ಹಾದಿ ತಪ್ಪಬಹುದು. ಮತ್ತೆ ಕಾಮಲೋಕದಲ್ಲಿ ಜನಿಸಬಹುದು ಮತ್ತು ಇಂದ್ರೀಯಗಳಲ್ಲಿ ನಿಯಂತ್ರಣ ತಪ್ಪಬಹುದು” ಎಂದು ಬುದ್ಧ ಭಗವಾನರ ಮಾತಿನ ಅರ್ಥ.

ಒಬ್ಬನು ನಿಜವಾಗಿ ಸಾಗರವನ್ನು ತಲುಪಲು ಇಚ್ಛಿಸುವವನಾದರೆ ಆತನು ಮಧ್ಯದ ಪ್ರವಾಹದಲ್ಲಿ ಸ್ಥಿರವಾಗಿರುವಂತೆ ನೋಡಿಕೊಳ್ಳಬೇಕು. ಅಂದರೆ ಉದಾತ್ತ ಚಾರಿತ್ರ್ಯದ ನಿಯಮಗಳನ್ನು ಪಾಲಿಸುತ್ತ ಶೀಲವನ್ನು, ಸಮಾಧಿಯನ್ನು ಮತ್ತು ಪ್ರಜ್ಞಾವನ್ನು ವಿಕಸಿಸಬೇಕು. ಯಾವುದೇ ಉದಾತ್ತ ಮಾನವನು, ಮಾನವನ ನಿಜಸ್ವರೂಪವನ್ನು ಸ್ಪಷ್ಟವಾಗಿ ಅರಿತಾಗ ವಿಮುಕ್ತನಾಗಲು ಸಾಧ್ಯವಾಗುತ್ತದೆ ಮತ್ತು ಯಾವ ದಿಕ್ಕಿನಲ್ಲಿ, ಮಾರ್ಗದರ್ಶನದಲ್ಲಿ ಆತನ ವಿಮುಕ್ತಿಯು ಅಡಗಿದೆ ಎಂದು ಅರಿತುಕೊಳ್ಳಬೇಕು.

ಉಪನಿಷತ್ತು ಇದನ್ನು ಹೀಗೆ ಹೇಳುತ್ತದೆ:

ಅಸತ್ಯದಿಂದ ಸತ್ಯದೆಡೆಗೆ,
ತಮಸ್ಸಿನಿಂದ ಹೊಂಬೆಳಕಿನೆಡೆಗೆ,
ಮೃತ್ಯುವಿನಿಂದ ಅಮರತ್ವದೆಡೆಗೆ ಸಾಗೋಣ

ನಾವು ವಾಸಿಸುತ್ತಿರುವ ಜಗತ್ತು ಪೂರ್ಣವಾಗಿ ಗುಲಾಬಿಗಳಿಂದ ಕೂಡಿದ ಸ್ವರ್ಗವಲ್ಲ. ಹಾಗೆಯೇ ಪೂರ್ಣವಾಗಿ ಮುಳ್ಳುಗಳಿಂದ ಆವೃತವಾದ ನರಕವೂ ಅಲ್ಲ. ಗುಲಾಬಿಯು ಮೃದು, ಸುಂದರ ಮತ್ತು ಪರಿಮಳಭರಿತ. ಆದರೆ ಕಾಂಡವು ಮುಳ್ಳುಭರಿತ. ಗುಲಾಬಿಯ ಕಾರಣಕ್ಕಾಗಿ ಒಬ್ಬನು ಮುಳ್ಳುಗಳನ್ನು ಸಹಿಸುತ್ತಾನೆ. ಹಾಗಿರುವಾಗಲು ಮುಳ್ಳುಗಳು ಇದೆ ಎಂದು ಗುಲಾಬಿಗಳನ್ನು ತಿರಸ್ಕೃತ ಮಾಡುವ ಹಾಗಿಲ್ಲ.

ಆಶಾವಾದಿಗೆ ಜಗತ್ತು ಪೂರ್ಣವಾಗಿ ಗುಲಾಬಿಯೇ. ಹಾಗೆಯೇ ನಿರಾಶಾವಾದಿಗೆ ಜಗತ್ತು ಪೂರ್ಣವಾಗಿ ಮುಳ್ಳುಭರಿತವೇ. ಆದರೆ ವಾಸ್ತವವಾದಿಗೆ ಈ ಜಗತ್ತು ಪೂರ್ಣವಾಗಿ ಗುಲಾಬಿಯೂ ಅಲ್ಲ, ಹಾಗೆಯೇ ಪೂರ್ಣವಾಗಿ ಮುಳ್ಳುಭರಿತವೂ ಅಲ್ಲ. ಅದು ಸುಂದರವಾದ ಗುಲಾಬಿಗಳಿಂದ ಮತ್ತು ಚುಚ್ಚುವ ಮುಳ್ಳುಗಳಿಂದ ತುಂಬಿದೆ.
ಪ್ರಾಜ್ಞನಾದ ವ್ಯಕ್ತಿಯು ಗುಲಾಬಿಯ ಸೌಂದರ್ಯಕ್ಕೆ ಮರುಳಾಗುವುದಿಲ್ಲ. ಬದಲಾಗಿ ಅದು ಹೇಗಿದೆಯೋ ಹಾಗೆ ಕಾಣುತ್ತಾನೆ. ಅವುಗಳಲ್ಲಿ ಮುಳ್ಳುಗಳು ಇರುವುದನ್ನು ಚೆನ್ನಾಗಿ ಅರಿತು ಅವುಗಳನ್ನು ಯಥಾರ್ಥವಾಗಿ ಹಾಗೇ ಅರಿತು, ಗಾಯವಾಗದಂತೆ ಮುನ್ನೆಚ್ಚರಿಕೆ ವಹಿಸುತ್ತಾನೆ.

ಹೇಗೆ ಲೋಲಕವು ನಿರಂತರವಾಗಿ ತೂಗಾಡುತ್ತಿರುತ್ತದೋ, ಹಾಗೆಯೇ ಲಾಭ-ನಷ್ಟ, ಜಯ-ಪರಾಜಯ, ಸ್ತುತಿ-ನಿಂದೆ ಮತ್ತು ಸುಖ-ದುಃಖಗಳೆಂಬ ತಲಾ ನಾಲ್ಕು ಪ್ರಿಯವಾದ ಮತ್ತು ಅಪ್ರಿಯವಾದ ಸನ್ನಿವೇಶಗಳು ಸೃಷ್ಟಿಯಲ್ಲಿ ಸದಾ ಇರುತ್ತದೆ. ಪ್ರತಿಯೊಬ್ಬರೂ ಯಾವ ವಿನಾಯಿತಿಯೂ ಇಲ್ಲದೆ ಇವುಗಳನ್ನು ಜೀವನವಿಡೀ ಎದುರಿಸಲೇಬೇಕಾಗಿದೆ.

ಆದ್ದರಿಂದ, ಹಾಮಿಲ್ಟನ್ ಮೇಬಿ ಹೇಳುವಂತೆ, “ವೈರುಧ್ಯಗಳಿಗೆ ಹೆದರದಿರಿ! ನೆನಪಿಡಿ… ಗಾಳಿಪಟವು ಸದಾ ಎದುರಿಂದ ಬೀಸುವ ಗಾಳಿಯಲ್ಲಿ ಮುನ್ನುಗ್ಗಿ  ಹಾರುತ್ತ ಮೇಲೇರುತ್ತದೆಯೇ ಹೊರತು, ಗಾಳಿಯ ಜೊತೆಗಲ್ಲ.”

 

Leave a Reply