ಮನುಷ್ಯರನ್ನು ಸನ್ಮಾರ್ಗದಲ್ಲಿ ನಡೆಸಲು ದಾನ – ದಂಡ ಮಾರ್ಗ ಹಿಡಿದ ಪೂರ್ವಜರು ವಿವಿಧ ಬಗೆಯ ನರಕಗಳನ್ನೂ ಅಲ್ಲಿ ವಿಧಿಸುವ ಶಿಕ್ಷೆಗಳನ್ನೂ ಭಯಹುಟ್ಟಿಸುವಂತೆ ವಿವರಿಸಿದ್ದಾರೆ. ಅದರಂತೆ, ಭಾಗವತ ಪುರಾಣ & ದೇವಿ ಪುರಾಣ, ವಿಷ್ಣು ಪುರಾಣ, ಮನುಸ್ಮೃತಿ ಮತ್ತು ಬೌದ್ಧ ಧರ್ಮದ ಅಭಿದಮ್ಮ ಕೋಶ ಹೇಳುವ ವಿವಿಧ ಬಗೆಯ ನರಕಗಳ ಪಟ್ಟಿ ಇಲ್ಲಿ ನೀಡಲಾಗಿದೆ.
ಪ್ರತಿಯೊಂದು ಧರ್ಮವು ತಪ್ಪಿಗೆ ಶಿಕ್ಷೆಯನ್ನೂ ಒಳಿತಿಗೆ ಬಹುಮಾನವನ್ನೂ ಪ್ರೋತ್ಸಾಹಿಸುತ್ತದೆ. ಮನುಷ್ಯರು ತಪ್ಪು ಮಾಡಲು ಹೆದರಲೆಂದು ನರಕಗಳ ಕಲ್ಪನೆಯನ್ನೂ ಒಳಿತನ್ನು ಪ್ರೋತ್ಸಾಹಿಸಲು ಸ್ವರ್ಗದ ಕಲ್ಪನೆಯನ್ನೂ ಸೃಷ್ಟಿ ಮಾಡಿದೆ. ಹಿಂದೂಗಳಲ್ಲಿ ನರಕ ಇದ್ದ ಹಾಗೆ, ಕ್ರಿಶ್ಚಿಯನ್ನರಲ್ಲಿ (ಬಹುತೇಕ ಪಾಶ್ಚಾತ್ಯರಲ್ಲಿ) ಹೆಲ್ ಮತ್ತು ಇಸ್ಲಾಮಿನಲ್ಲಿ ಜಹನ್ನುಮ್’ಗಳಿವೆ. ಬೌದ್ಧ ಧರ್ಮದಲ್ಲೂ ನರಕವಿದೆ. ಜೈನಾದಿಯಾಗಿ ಎಲ್ಲ ಅಲ್ಪಸಂಖ್ಯಾತ – ಬಹುಸಂಖ್ಯಾತ ಮತಗಳೂ ನರಕವನ್ನು ಕುರಿತು ಹೇಳುತ್ತವೆ.
ನರಕ, ಕರ್ಮಸಿದ್ಧಾಂತದ ಫಲಶ್ರುತಿ. ತಪ್ಪು ಮಾಡಿದರೆ, ಪಾಪ ಮಾಡಿದರೆ ಶಿಕ್ಷೆ ಕಾದಿದೆ ಎಂಬ ಎಚ್ಚರಿಕೆ. ಮನುಷ್ಯರನ್ನು ಸನ್ಮಾರ್ಗದಲ್ಲಿ ನಡೆಸಲು ದಾನ – ದಂಡ ಮಾರ್ಗ ಹಿಡಿದ ಪೂರ್ವಜರು ವಿವಿಧ ಬಗೆಯ ನರಕಗಳನ್ನೂ ಅಲ್ಲಿ ವಿಧಿಸುವ ಶಿಕ್ಷೆಗಳನ್ನೂ ಭಯಹುಟ್ಟಿಸುವಂತೆ ವಿವರಿಸಿದ್ದಾರೆ.
ನರಕ ಅಂದ ಕೂಡಲೆ ನಮ್ಮ ಮನಸ್ಸಿನಲ್ಲಿ ಭಯ ಹುಟ್ಟಿಸುವ ಚಿತ್ರಣಗಳು ಹಾದುಹೋಗುತ್ತವೆ. ಅಕರಾಳ ವಿಕರಾಳ ಯಮದೂತರು ನಮ್ಮನ್ನು ದೊಡ್ಡ ಬಾಣಲೆಯಲ್ಲಿ ನಮ್ಮನ್ನು ಹುರಿಯುತ್ತಿರುವ; ಕ್ರೂರ ಪ್ರಾಣಿಗಳು ನಮ್ಮನ್ನು ಜೀವಂತ ತಿನ್ನುತ್ತಿರುವ, ರಕ್ತಸಿಕ್ತ ನೆಲವನ್ನು ತುಳಿದುಕೊಂಡು ಹೋಗುವ; ಮಲಮೂತ್ರಗಳಿಂದ ತುಂಬಿದ ಹೊಲಸಿನ ನದಿ ಈಜುವ; ಕರ್ಣಕಠೋರ ಕೂಗು ಮೊಳಗುತ್ತಿರುವ, ಬೆಂಕಿಯಲ್ಲಿ ಸಜೀವ ಸುಡುತ್ತಿರುವ, ನೆಲದ ಮೇಲೆ ಮುಳ್ಳು – ತಲೆ ಮೇಲೆ ಕತ್ತಿ ತೂಗುವ; ನಾವು ಕಥೆಗಳಲ್ಲಿ ಕೇಳಿರಬಹುದಾದ, ಸಿನೆಮಾಗಳಲ್ಲಿ ನೊಡಿರಬಹುದಾದ ಚಿತ್ರವಿಚಿತ್ರ ಚಿತ್ರಣಗಳೆಲ್ಲ ಮೆರವಣಿಗೆ ಮಾಡಿ ಹೆದರಿಸುತ್ತವೆ. ಈ ಪ್ರಿಯೊಂದು ಬಗೆಯ ಶಿಕ್ಷೆಗೂ ಒಂದು ಹೆಸರಿದೆ ಮತ್ತು ಆಯಾ ಶಿಕ್ಷೆ ನೀಡುವ ನರಕಗಳು ಪ್ರತ್ಯೇಕವಾಗಿದ್ದು, ಅವಕ್ಕೆ ಹೆಸರೂ ಇವೆ.
ಅದರಂತೆ, ಭಾಗವತ ಪುರಾಣ & ದೇವಿ ಪುರಾಣ, ವಿಷ್ಣು ಪುರಾಣ, ಮನುಸ್ಮೃತಿ ಮತ್ತು ಬೌದ್ಧ ಧರ್ಮದ ಅಭಿದಮ್ಮ ಕೋಶ ಹೇಳುವ ವಿವಿಧ ಬಗೆಯ ನರಕಗಳ ಪಟ್ಟಿ ಇಲ್ಲಿ ನೀಡಲಾಗಿದೆ.
ಭಾಗವತ ಪುರಾಣ, ದೇವೀ ಪುರಾಣ ಹೇಳುವ 28 ನರಕಗಳು
- ತಮಿಶ್ರ,
- ಅಂಧ
- ತಮಿಶ್ರ,
- ಮಹಾ ರೌರವ,
- ರೌರವ,
- ಕುಂಭೀಪಾಕ,
- ಕಾಲಸೂತ್ರ,
- ಅಸಿಪತ್ರವನ,
- ಸೂಕರಮುಖ,
- ಅಂಧಕೂಪ,
- ಕ್ರಿಮಿಭೋಜನ,
- ಸಂದಂಶ,
- ತಪ್ತಸುರ್ಮಿ,
- ವಜ್ರಕಂಟಕ ಶಾಲ್ಮಲಿ,
- ವೈತರಣಿ,
- ಪುಯೋದ,
- ಪ್ರಾಣರೋಧ,
- ವಿಷಾಸನ,
- ಲಾಲಭಕ್ಷ,
- ಸಾರಮೇಯದಾನ,
- ಅವೀಚಿ,
- ಅಯಃಪನ,
- ಕ್ಷಾರಕರ್ದಮ,
- ರಕ್ಷೋಗಣ ಭೋಜನ,
- ಶೂಲಪ್ರೋತ,
- ದಂಡಸುಖ,
- ಅವತನಿರೋಧನ,
- ಸೂಚಿಮುಖ
ವಿಷ್ಣು ಪುರಾಣ ಹೇಳುವ 28 ನರಕಗಳು
- ರೌರವ
- ಶೂಕರ,
- ರೋಧ,
- ತಾಲ,
- ವಿಷಾಸನ,
- ಮಹಾಜ್ವಾಲಾ,
- ತಪ್ತಕುಂಭ,
- ಲವಣ,
- ವಿಮೋಹನ,
- ರುಧಿರಾಂಧ,
- ವೈತರಣಿ,
- ಕ್ರಿಮಿಶಾ,
- ಕ್ರಿಮಿಭೋಜನ,
- ಅಸಿಪತ್ರವನ,
- ಕೃಷ್ಣ,
- ಲಾಲಭಕ್ಷ,
- ದಾರುಣ,
- ಪೂಯವಾಹ,
- ಪಾಪಾ,
- ವಹ್ನಿಜ್ವಾಲ
- ಅಧೋಶಿರಸ್,
- ಸಂದಂಶ,
- ಕಾಳಸೂತ್ರ,
- ತಮಸ್,
- ಅವೀಚಿ,
- ಸ್ವಭೋಜನ,
- ಅಪ್ರತಿಷ್ಠ,
- ಅವೀಚಿ
ಮನುಸ್ಮೃತಿ ಹೇಳುವ 21 ನರಕಗಳು
- ತಮಿಶ್ರ,
- ಅಂಧ ತಮಿಶ್ರ,
- ಮಹಾ ರೌರವ,
- ರೌರವ,
- ಕಾಳಸೂತ್ರ,
- ಮಹಾ ನರಕ,
- ಸಂಜೀವನ,
- ಮಹಾವೀಚಿ,
- ತಾಪನ,
- ಸಂಪ್ರತಾಪನ,
- ಸಂಹತ,
- ಸಕಾಕೋಲ,
- ಕುದ್ಮಲ,
- ಪುತಿಮೃತ್ತಿಕ,
- ಲೋಹಶಂಕು,
- ರಿಜೀಶ,
- ಪಾಠನ,
- ವೈತರಣಿ,
- ಶಾಲ್ಮಲಿ,
- ಅಸಿಪತ್ರವನ,
- ಲೋಹದಾರಕ
(ಬೌದ್ಧ) ಅಭಿದಮ್ಮ ಕೋಶ ಹೇಳುವ 16 ನರಕಗಳು
- ಅರ್ಬುದ
- ನಿರರ್ಬುಸ
- ಅಟಾಟ
- ಹಾಹವ
- ಹೂಹುವ
- ಉತ್ಪಲ
- ಪದ್ಮ
- ಮಹಾಪದ್ಮ
- ಸಂಜೀವ
- ಕಾಳಸೂತ್ರ
- ಸಂಘಾತ
- ರೌರವ
- ಮಹಾರೌರವ
- ತಾಪನ
- ಪ್ರತಾಪನ
- ಅವೀಚಿ