ಶಮ್ಸ್ ಹೇಳಿದ ಪ್ರೇಮದ ನಲವತ್ತು ನಿಯಮಗಳು : ನಿಯಮ #7

ಮೂಲ : ಶಮ್ಸ್ ಎ ತಬ್ರೀಝ್ | ಕನ್ನಡಕ್ಕೆ : ಚಿದಂಬರ ನರೇಂದ್ರ

ಸಹನೆಯ ಅರ್ಥ
ತುಟಿ ಕಚ್ಚಿಹಿಡಿದು, ಉಸಿರು ಬಿಗಿಹಿಡಿದು
ಅಥವಾ ಅನಾಸಕ್ತರಾಗಿ
ನಡೆಯುತ್ತಿರುವುದನ್ನ ನೋಡುತ್ತ ಕೂಡುವುದಲ್ಲ.
ಬದಲಾಗಿ ಸಹನೆಯೆಂದರೆ,
ನಡೆಯುತ್ತಿರುವ ಘಟನೆಯ, ಕ್ರೀಯೆಯ
ಕೊನೆಯನ್ನು ಸೂಕ್ಷ್ಮವಾಗಿ ಗಮನಿಸುವುದು.

ಸಹನೆಯೆಂದರೆ,
ಮುಳ್ಳನ್ನು ನೋಡುತ್ತ, ಗುಲಾಬಿಯನ್ನು ಕಾಣುವುದು.
ರಾತ್ರಿಯನ್ನು ನೋಡುತ್ತ, ಪ್ರಭಾತವನ್ನು ಕಾಣುವುದು.

ಅಸಹನೆಗೆ ಸಮೀಪ ದೃಷ್ಟಿ ದೋಷ,
ದೂರದ್ದನ್ನು ಗಮನಿಸುವ ಸಾಮರ್ಥ್ಯವಿಲ್ಲ.

ನಿಜದ ಪ್ರೇಮಿಗಳಿಗೆ ಮಾತ್ರ ಅಪಾರ ಸಹನೆ;
ಅವರಿಗೆ ಗೊತ್ತು
ಬಿದಿಗೆ ಚಂದ್ರ ಪೂರ್ಣನಾಗಲು
ಕಾಯಬೇಕೆಂದು.

6ನೇ ನಿಯಮ ಇಲ್ಲಿ ನೋಡಿ : https://aralimara.wordpress.com/2019/11/27/sufi-53/

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ