ಶಮ್ಸ್ ಹೇಳಿದ ಪ್ರೇಮದ ನಲವತ್ತು ನಿಯಮಗಳು : ನಿಯಮ #22

ಮೂಲ : ಶಮ್ಸ್ ಎ ತಬ್ರೀಝ್ | ಕನ್ನಡಕ್ಕೆ : ಚಿದಂಬರ ನರೇಂದ್ರ

ವಿರೋಧಿಗಳು,
ತನ್ನ ಮೇಲೆ ಅನ್ಯಾಯವಾಗಿ
ಎಲ್ಲ ದಿಕ್ಕುಗಳಿಂದ
ಆರೋಪ, ಆಕ್ರಮಣ, ಖಂಡನೆ ಮಾಡಿದಾಗಲೂ,
ನಿಜದ ಸೂಫೀ
ಎಲ್ಲವನ್ನೂ ಸಮಾಧಾನದಿಂದ ಸಹಿಸುತ್ತಾನೆ.

ಸೂಫೀ, ನಿಂದನೆಗಳನ್ನು
ಎಂದೂ ಪಾಲುಮಾಡಿ ಹಂಚುವುದಿಲ್ಲ.

‘ಸ್ವ’ ಎನ್ನುವುದೇ ಇಲ್ಲದಿರುವಾಗ
ವಿರೋಧಿಗಳು, ಪ್ರತಿಸ್ಪರ್ಧಿಗಳು ಇರುವುದು
ಹೇಗೆ ಸಾಧ್ಯ ?

ಇರುವವ ‘ಒಬ್ಬನೇ’ ಆಗಿರುವಾಗ
ನಿಂದಿಸಲು ಆ ‘ಇನ್ನೊಬ್ಬ’ ಎಲ್ಲಿಂದ ಬರುತ್ತಾನೆ?

20ನೇ ನಿಯಮ ಇಲ್ಲಿ ನೋಡಿ: https://aralimara.com/2020/01/16/sufi-72/

1 Comment

Leave a Reply