ಬುದ್ಧನೊಬ್ಬನೇ ಅಲ್ಲ : ರ್ಯೋಟಾನ ಹಾಯ್ಕು, ಓಶೋ ವಿವರಣೆ

oshoಬಹುಶಃ ಭಾರತೀಯ ಆಧ್ಯಾತ್ಮಿಕ ಸಾಹಿತ್ಯಕ್ಕೆ ಬುದ್ಧ, ಝೆನ್ ಮತ್ತು ಸೂಫಿ, ಹಸೀದ್ ಇತ್ಯಾದಿ ಪಂಥಗಳನ್ನು ಓಶೋ ಅವರಷ್ಟು ಸ್ವಾರಸ್ಯಕರವಾಗಿ ಪರಿಚಯಿಸಿದವರು ಮತ್ತೊಬ್ಬರಿಲ್ಲ. ಝೆನ್ ಮತ್ತು ಬುದ್ಧನನ್ನು ಓಶೋರಷ್ಟು ಸುಂದರವಾಗಿ ವ್ಯಾಖ್ಯಾನ ಮಾಡಿದವರೂ ಬಹುಶಃ ಮತ್ತೊಬ್ಬರಿಲ್ಲ! ಓಶೋ ಝೆನ್ ಹಾಯ್ಕುಗಳಿಗೆ ನೀಡಿದ ವ್ಯಾಖ್ಯಾನಗಳ ಸರಣಿಯಲ್ಲಿ ಕೆಲವನ್ನು ಆಯ್ದು. ಇಂಗ್ಲೀಶ್’ನಿಂದ ಅನುವಾದಿಸಿ ಅರಳಿಬಳಗವು ಪ್ರಕಟಿಸಲಿದೆ. 

: ಸಂಗ್ರಹ ಮತ್ತು ಅನುವಾದ ~ ಅಲಾವಿಕಾ

THAT THERE IS ONLY ONE
IS UNBELIEVABLE TONIGHT.
THIS HARVEST MOON!
~ Ryota

ಒಬ್ಬನೇ ಬುದ್ಧನಿದ್ದಾನೆ ಎಂದು ನಂಬೋದು
ಈ ಹುಣ್ಣಿಮೆಯ ರಾತ್ರಿಯಲ್ಲಂತೂ
ಅಸಾಧ್ಯ!
~ ರ್ಯೋಟಾ

ಬ್ಬ ಬುದ್ಧ ಮಾತ್ರ ಜಗತ್ತನ್ನು ರಕ್ಷಿಸಬಲ್ಲ ಎಂದು ಬುದ್ಧಾನುಯಾಯಿಗಳು ನಂಬುತ್ತಾರೆ. ಈ ವಿಶಾಲ ಜಗತ್ತಿನಲ್ಲಿ, ಈ ಅಗಣಿತ ತಾರಾಮಂಡಲದಲ್ಲಿ ಕೇವಲ ಒಬ್ಬ ಬುದ್ಧ ಮಾತ್ರಘಟಿಸಬಲ್ಲನೆ?

ನಾನಂತೂ ಬುದ್ಧನ ಕುರಿತು ರ್ಯೋಟಾನ ಮಾತನ್ನು ಅನುಮೋದಿಸುತ್ತೇನೆ. ವಿಶ್ವದ ವಿವಿಧೆಡೆಯಲ್ಲಿ, ಭಿನ್ನ ಸಮುದಾಯಗಳಲ್ಲಿ ಹಲವು ಬುದ್ಧರು ಆಗಿಹೋಗಿದ್ದಾರೆ. ಹಾಗೆಂದು ಅವರೆಲ್ಲರನ್ನೂ ‘ಬುದ್ಧ’ರೆಂದು ಗುರುತಿಸಲಾಗಿಲ್ಲ. ಏಕೆಂದರೆ ಅವರೆಲ್ಲರೂ ಬೇರೆಬೇರೆ ಭಾಷೆಯಲ್ಲಿ ಮಾತಾಡಿದ್ದಾರೆ, ಬೇರೆ ಬೇರೆ ರೀತಿಯಲ್ಲಿ ಮಾತಾಡಿದ್ದಾರೆ. ಕೆಲವರು ಏನನ್ನೂ ಹೇಳದೆ ಮೌನವಾಗಿ ಬದುಕಿ ಹೋಗಿದ್ದಾರೆ. ಅವರು ಬೇರೆಬೇರೆಯಾಗಿದ್ದರೂ ಬೇರೆಬೇರೆ ಹೆಸರುಗಳಿಂದ ಕರೆದರೂ ಅವರೆಲ್ಲರೂ ಬೋಧಿಯನ್ನು ಪಡೆದ ಬುದ್ಧರೇ ಆಗಿದ್ದಾರೆ. ಅವರುಗಳ ಜೀವನ ದಾಖಲಾಗದೆ ಹೋಗಿರಬಹುದು. ಅವರ ಬಗ್ಗೆ ಮಾಹಿತಿ ಇಲ್ಲದೆ ಇರಬಹುದು. ಆದರೆ ಭೂಮಿಯಲ್ಲಿ ಸಾವಿರಾರು ಬುದ್ಧರು ಆಗಿಹೋಗಿರುವುದಂತೂ ನಿಜ. ಯುಗಾಂತರಗಳಲ್ಲಿ ಕೇವಲ ಒಬ್ಬನೇ ಒಬ್ಬ ವ್ಯಕ್ತಿ ಪ್ರಜ್ಞೆಯ ಉತ್ತುಂಗವನ್ನು ತಲುಪಿದ್ದಾನೆ ಅಂದರೆ ನಂಬಲು ಸಾಧ್ಯವೇ?

ಹಾಗೆಂದು ಜಪಾನಿನಲ್ಲೊಬ್ಬ ಸ್ವಯಂಬುದ್ಧ ತನ್ನ ಮಿತಿಯನ್ನು ಸೊಗಸಾಗಿ ವಿವರಿಸಿಕೊಂಡಿದ್ದಾನೆ. ಭವಿಷ್ಯ ಹೇಳಲು ಬಳಸುವ 10 ಟ್ಯಾರೋ ಕಾರ್ಡ್’ಗಳಲ್ಲಿ ಬುದ್ಧತ್ವದ ಹತ್ತು ಹಂತಗಳ ವಿವರಣೆಯಿದೆ. ಈ ಚಿತ್ರ ಸರಣಿಯನ್ನು ‘ಹತ್ತು ಝೆನ್ ಹೋರಿಗಳ ಸರಣಿ’ ಎಂದು ಕರೆಯಲಾಗುತ್ತದೆ.

ಕಾರ್ಡ್ 1 : ಹೋರಿ ಕೊಟ್ಟಿಗೆಯಿಂದ ತಪ್ಪಿಸಿಕೊಳ್ಳುತ್ತಿದೆ
ಕಾರ್ಡ್ 2 : ಹೋರಿಯ ಒಡೆಯ ತನ್ನ ಹೋರಿಯನ್ನು ಹುಡುಕಿಕೊಂಡು ಕಾಡುಮೇಡುಗಳಲ್ಲಿ ಅಲೆದಾಡುತ್ತಿದ್ದಾನೆ.
ಕಾರ್ಡ್ 3 : ಹೋರಿಯ ಹೆಜ್ಜೆ ಗುರುತುಗಳು ಕಾಣಿಸುತ್ತಿವೆ
ಕಾರ್ಡ್ 4 : ಹೆಜ್ಜೆ ಗುರುತನ್ನು ಅನುಸರಿಸಿ ಹೊರಟ ಅವನಿಗೆ ಮರದ ಮರೆಯಲ್ಲಿ ನಿಂತ ಹೋರಿಯ ಹಿಂಭಾಗ ಕಾಣಿಸುತ್ತಿದೆ.
ಕಾರ್ಡ್ 5 : ಹೋರಿಯ ಇಡೀ ಶರೀರ ಗೋಚರವಾಗುತ್ತದೆ
ಕಾರ್ಡ್ 6 : ಹೋರಿ ಅವನ ಜೊತೆ ಹೋಗಲೊಪ್ಪದೆ ಪ್ರತಿಭಟಿಸುತ್ತಿದೆ, ಅವನು ಮಣಿಸುತ್ತಿದ್ದಾನೆ
ಕಾರ್ಡ್ 7 : ಅವನು ಹೋರಿಯನ್ನು ಕೊಟ್ಟಿಗೆ ಕಡೆಗೆ ಎಳೆದೊಯ್ಯುತ್ತಿದ್ದಾನೆ
ಕಾರ್ಡ್ 8 : ಕೊಟ್ಟಿಗೆಯಲ್ಲಿ ಹೋರಿಯನ್ನು ಕಟ್ಟಿಹಾಕುತ್ತಿದ್ದಾನೆ
ಕಾರ್ಡ್ 9 : ಹೋರಿಯನ್ನು ಕಟ್ಟಿಹಾಕಿ ಕೊಳಲು ನುಡಿಸುತ್ತಿದ್ದಾನೆ
ಕಾರ್ಡ್ 10 : ಆ ಒಡೆಯ ಗಂಡಗಿನ ಕಡೆ ಹೆಜ್ಜೆ ಹಾಕುತ್ತಿದ್ದಾನೆ

ಬುದ್ಧನಾದವನು ಒಂದು ಹಂತದಲ್ಲಿ ತನ್ನ ಬೋಧಿಯನ್ನೂ ಮರೆಯುವ ಸ್ಥಿತಿಗೆ ಬಂದು ತಲುಪುತ್ತಾನಂದು ಸ್ವತಃ ಬುದ್ಧನೇ ಹೇಳಿದ್ದಾನೆ. ಬುದ್ಧತ್ವ ಅವನಲ್ಲಿ ಅದೆಷ್ಟು ಸ್ವಭಾವಗತವಾಗಿಬಿಡುತ್ತದೆ ಎಂದರೆ, ಅದನ್ನು ನೆನಪಿನಲ್ಲಿ ಇರಿಸಿಕೊಳ್ಳುವ ಗೋಜಿಗೆ ಅವನು ಹೋಗುವುದಿಲ್ಲ. ಈ ಸರಣಿಯಲ್ಲಿ ಹತ್ತನೆ ಚಿತ್ರವು ಅವನು ಬುದ್ಧತ್ವವನ್ನು ಅತಿಕ್ರಮಿಸುವುದನ್ನು ಸೂಚಿಸುತ್ತದೆ.
ಆದರೆ ಮಡಿವಂತಿಕೆಯ ಬುದ್ಧ ಅನುಯಾಯಿಗಳು ಈ ಹತ್ತನೆ ಚಿತ್ರವನ್ನು ಬಿಟ್ಟುಬಿಡುತ್ತಾರೆ. ಬುದ್ಧನು ಮದ್ಯವನ್ನು ಕುಡಿಯುವುದೆಂದರೇನು!? ಇದು ಅವರ ಆಲೋಚನೆ. ಆದರೆ ಮದ್ಯಪಾನವನ್ನು ಮದ್ಯಪಾನದಂತೆಯೇ ಭಾವಿಸಬೇಕಿಲ್ಲ. ಅದರ ಸಂಕೇತವನ್ನು ಗ್ರಹಿಸಬೇಕು. ಅಥವಾ, ಮದ್ಯಪಾನ ಮಾಡುತ್ತಿರುವಂತೆಯೇ ಗ್ರಹಿಸಿದರೂ ಅದರಲ್ಲಿ ತಪ್ಪೇನಿದೆ? ಬುದ್ಧತ್ವ, ಪ್ರಜ್ಞಾವಂತಿಕೆಯ ಹಂತದಲ್ಲಿ ಎಲ್ಲವನ್ನೂ ಮೀರಿದ್ದಾಗಿದೆ.  

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.